ಹಳ್ಳದಲ್ಲಿ ಕೊಚ್ಚಿಹೋದ ರೈತ - ನಾಲ್ಕು ದಿನಗಳಾದರೂ ಪತ್ತೆಯಿಲ್ಲ ; ಮುಂದುವರಿದ ಶೋಧ ಕಾರ್ಯಾಚರಣೆ

ಎನ್.ಡಿ.ಆರ್.ಎಫ್ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ

ಕೊಚ್ಚಿಹೋದ ರೈತನ ಹುಡುಕುತ್ತಿರುವ ಎನ್​​ಡಿಆರ್​ಎಫ್​​​ ತಂಡ

ಕೊಚ್ಚಿಹೋದ ರೈತನ ಹುಡುಕುತ್ತಿರುವ ಎನ್​​ಡಿಆರ್​ಎಫ್​​​ ತಂಡ

  • Share this:
ಧಾರವಾಡ(ಜುಲೈ. 02): ಆಕಳು ಮೇಯಿಸಲೆಂದು ಹೋದ ರೈತನೋರ್ವ ಹಳ್ಳದಲ್ಲಿ ಕೊಚ್ಚಿ ಹೋಗಿ‌ರುವ ಘಟನೆ ನಡೆದು ನಾಲ್ಕು ದಿನಗಳು ಕಳೆದಿವೆ. ಸತತ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಎನ್.ಡಿ.ಆರ್.ಎಫ್ ತಂಡಕ್ಕೆ ರೈತನ ಸುಳಿವು ಸಿಗುತ್ತಿಲ್ಲ.

ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ವ್ಯಕ್ತಿಯೇ ಹಳ್ಳದಲ್ಲಿ ಕೊಚ್ಚಿಹೋದ ರೈತ. ಅದು ಜೂನ್ 29ರಂದು ಮಧ್ಯಾಹ್ನ 2 ಗಂಟೆ ಹಾರೋಬೆಳವಡಿ ಗ್ರಾಮದ ರೈತ ಮಡಿವಾಳಪ್ಪ ಜಕ್ಕಣ್ಣವರ(45) ಆಕಳು ಮೇಯಿಸಲು ಗ್ರಾಮದ ಹೊರವಲಯದ ಹಳ್ಳಕ್ಕೆ‌ ತೆರಳುತ್ತಾನೆ. ಆದರೆ, ಏಕಾಏಕಿ ಮಳೆ‌ ಸುರಿಯಲು ಆರಂಭವಾಗುತ್ತದೆ. ಆಗ ಮಳೆಯಿಂದ‌ ರಕ್ಷಣೆಗಾಗಿ ಬಂಡೆಮ್ಮನ ಹಳ್ಳದ‌ ಸೇತುವೆ ಕೆಳಗೆ ನಿಲ್ಲುತ್ತಾನೆ.

ಆದರೆ, ಸುತ್ತಲಿನ ಗ್ರಾಮಗಳಲ್ಲಿ ಮಳೆ ಹೆಚ್ಚಾಗಿ ಸುರಿದು ಹಳ್ಳದ ನೀರಿನ ಮಟ್ಟ ಹೆಚ್ಚಾಗುತ್ತದೆ. ಸೇತುವೆ ಕೆಳಗೆ ನಿಂತ ರೈತನ ಕುತ್ತಿಗೆ ವರೆಗೆ ನೀರು ಬರುತ್ತೆ. ಆಗ ಅಲ್ಲೇ ಇದ್ದ ಯುವಕರು ರಕ್ಷಣೆ‌ಗೆ ಗ್ರಾಮದ ಯುವಕರನ್ನು ಕರೆಯುತ್ತಾರೆ. ಆ ಸಮಯಧಲ್ಲಿ ಮೊಬೈಲ್ ನಲ್ಲಿ ವಿಡಿಯೋ ಸಹ ಮಾಡಿರುತ್ತಾರೆ. ಆದರೆ, ಕೆಲವೇ ಕ್ಷಣದಲ್ಲಿ ರೈತ ಹಳ್ಳದ‌ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಾನೆ. ಸಂಜೆ ಆಗುತ್ತಿದ್ದಂತೆ ಮಗ ಮನೆಗೆ ಬಂದಿಲ್ಲ‌ ಎಂದು ತಾಯಿ ಕೇಳುವಷ್ಟುರಲ್ಲಿ ಹಳ್ಳದಲ್ಲಿ ಕೊಚ್ಚಿ ಹೋದ ಬಗ್ಗೆ ಜನರು ಹೇಳುತ್ತಾರೆ.ಇದೀಗ ಕಳೆದ ನಾಲ್ಕು ದಿನಗಳಿಂದ ತನ್ನ‌ ಮಗ ಬದುಕಿ‌ ಮರಳಿ‌ ಮನೆಗೆ ಬರಲಿ ಎಂದು ಕಣ್ಣೀರು ಹಾಕುತ್ತಾ ರೈತನ ತಾಯಿ ಗಂಗಮ್ಮ ಕುಳಿತಿದ್ದಾಳೆ .

ಇನ್ನು‌ ಇತ್ತ ಸತತ ನಾಲ್ಕು ದಿನಗಳಿಂದ ಹಗಲಿರುಳು ಎನ್ನದೇ ಎನ್.ಡಿ.ಆರ್.ಎಫ್ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹಳ್ಳದ‌ ನೀರಿನಲ್ಲಿ, ಮುಳ್ಳು ಕಂಟೆಯನ್ನು ಲೆಕ್ಕಿಸದೇ ತುಪ್ಪರಿ ಹಳ್ಳದ ಉಪ ಹಳ್ಳ ಬಂಡೆಮ್ಮನ ಹಳ್ಳದಲ್ಲಿ‌ ಕೊಚ್ಚಿ ಹೋದ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ : ಟೆಲಿ ಕಾರ್ಟ್ ತಂತ್ರಜ್ಞಾನ ಬಳಸಿ ಕೋವಿಡ್ ರೋಗಿಗಳ ಆರೈಕೆ ; ಆರೋಗ್ಯ ಸಚಿವ ಶ್ರೀರಾಮುಲು

ನಾವು ನಿರಂತರವಾಗಿ ಹುಡುತ್ತಿದ್ದೇವೆ. ಹಳ್ಳದಲ್ಲಿ ಮುಳ್ಳು, ಮಣ್ಣಿನಿಂದ ಸ್ವಲ್ಪ‌ ತೊಂದರೆಯಾಗುತ್ತಿದೆ. ಆದರೂ ಸಹ ನಾವು ವ್ಯಕ್ತಿ ಪತ್ತೆ ಹಚ್ಚುತ್ತೇವೆ ಎಂದು ಎನ್.ಡಿ.ಆರ್.ಎಫ್ ತಂಡದ ಮುಖ್ಯಸ್ಥ, ಕುಲಹಾರಿ ಹೇಳುತ್ತಾರೆ.

ಕಳೆದ ವರ್ಷ ಪ್ರವಾಹದಿಂದ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈ ವರ್ಷವಾದರು ಮಳೆರಾಯನ ಅವಾಂತರ ಇರುವುದಿಲ್ಲ ಎಂದುಕೊಂಡಿದ್ದ ಜನರಿಗೆ ಆರಂಭದಲ್ಲಿಯೇ ಶಾಕ್ ಆಗಿದೆ. ನಾಲ್ಕು ದಿನಗಳಿಂದ ಹಳ್ಳದಲ್ಲಿ‌ ರೈತನ ಪತ್ತೆಗಾಗಿ ಹುಡುಕಲಾಗುತ್ತಿದ್ದರೂ ಪತ್ತೆಯಾಗುತ್ತಲೇ ಇಲ್ಲ.
First published: