HOME » NEWS » District » NAVY HELICOPTERS ARE USED TO RESCUE BOTE WHICH STUCK IN MID OF THE OCEAN KKM KVD

ಸಾಗರದ ಮಧ್ಯೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ನೌಕಾ ಸೇನೆಯ ಹೆಲಿಕಾಪ್ಟರ್​​ಗಳ ಬಳಕೆಗೆ ಸಿದ್ಧತೆ

ರಾಜ್ಯ ಸರ್ಕಾರದ ಮನವಿಯಂತೆ ಕಾರವಾರದಿಂದ ನೌಕಾ ಸೇನೆಯ ಹೆಲಿಕಾಪ್ಟರ್ ಗಳು ಮಂಗಳೂರಿನ ಕಡಲ ತೀರಕ್ಕೆ ಬರಲಿವೆ. ಹವಾಮಾನ ತಿಳಿಯಾದ ತಕ್ಷಣ ಹೆಲಿಕಾಪ್ಟರ್ ಮೂಲಕ ಕಾರ್ಮಿಕರ ರಕ್ಷಣೆ ಮಾಡಲಿದೆ.

news18-kannada
Updated:May 16, 2021, 9:20 PM IST
ಸಾಗರದ ಮಧ್ಯೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ನೌಕಾ ಸೇನೆಯ ಹೆಲಿಕಾಪ್ಟರ್​​ಗಳ ಬಳಕೆಗೆ ಸಿದ್ಧತೆ
ಕಾರ್ಮಿಕರ ರಕ್ಷಣೆಗೆ ಸಿದ್ಧತೆ
  • Share this:
ಕಾರವಾರ: ಅರಬ್ಬೀ ಸಮುದ್ರದಲ್ಲಿ ಚಂಡಮಾರತಕ್ಕೆ ಸಿಲುಕಿ ನಾಪತ್ತೆಯಾಗಿರುವ 9 ಮಂದಿ ಕಾರ್ಮಿಕರ ರಕ್ಷಣೆಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಭಾರೀ ಅಲೆಗಳ ಕಾರಣದಿಂದ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ವಿಳಂಬವಾಗುತ್ತಿದ್ದು, ನೌಕಾ ಸೇನೆಯ ಹೆಲಿಕಾಪ್ಟರ್ ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಲು ರಾಜ್ಯ ಸರ್ಕಾರ ಚಿಂತನೆ ಮಾಡಿದೆ. ಕಾರವಾರದ ಕದಂಬ ನೌಕಾ ನೆಲೆಯಿಂದ ಮಂಗಳೂರಿನ ಕಡಲ ತೀರಕ್ಕೆ ಹೆಲಿಕಾಪ್ಟರ್ ಗಳು ಹಾರಲಿದ್ದು, ಕಡಲ ಅಬ್ಬರದ ನಡುವೆಯೇ ಕಾರ್ಮಿಕರ ರಕ್ಷಣೆಗೆ ಸಿದ್ಧತೆ ಪೂರ್ಣಗೊಂಡಿದೆ.

ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡಮಾರುತಕ್ಕೆ ತುತ್ತಾದ ಒಂಭತ್ತು ಕಾರ್ಮಿಕರ ರಕ್ಷಣೆಗೆ ನೌಕಾ ಸೇನೆ ಮುಂದಾಗಿದೆ. ರಾಜ್ಯ ಸರ್ಕಾರದ ಮನವಿಯಂತೆ ಕಾರವಾರದಿಂದ ನೌಕಾ ಸೇನೆಯ ಹೆಲಿಕಾಪ್ಟರ್ ಗಳು ಮಂಗಳೂರಿನ ಕಡಲ ತೀರಕ್ಕೆ ಬರಲಿವೆ. ಹವಾಮಾನ ತಿಳಿಯಾದ ತಕ್ಷಣ ಹೆಲಿಕಾಪ್ಟರ್ ಮೂಲಕ ಕಾರ್ಮಿಕರ ರಕ್ಷಣೆ ಮಾಡಲಿದೆ. ಕಾಪು ಕಡಲ ಕಿನಾರೆಯಿಂದ 15 ನಾಟಿಕಲ್ ಮೈಲ್ ದೂರದಲ್ಲಿ ಕೋರಮಂಡಲ್ ಎಂಬ ಟಗ್ ನಲ್ಲಿ ಒಂಭತ್ತು ಕಾರ್ಮಿಕರು ಸಿಲುಕಿದ್ದು ಕಲ್ಲಿನ ನಡುವೆ ಸ್ಟಗ್ ನಿಂತಿದೆ. ಟಗ್ ನಲ್ಲಿ ಒಂಭತ್ತು ಮಂದಿ ಕಾರ್ಮಿಕರು ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಕೋಸ್ಟ್ ಗಾರ್ಡ್ ನೌಕೆ IGS ವರಾಹ ರಕ್ಷಣಾ ಕಾರ್ಯಾಚರಣೆಗೆ ಮುಂದಾದರೂ ಕಡಲ ಅಬ್ಬರ ತಡೆಯುಂಟು ಮಾಡುತ್ತಿದೆ.ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕಾರ್ಮಿಕರ ರಕ್ಷಣೆಗೆ ನೌಕಾ ಸೇನೆಯನ್ನು ಬಳಸಲು ತೀರ್ಮಾನಿಸಿದ್ದು, ಹೆಲಿಕಾಪ್ಟರ್ ಮೂಲಕ ಕಾರ್ಮಿಕರ ರಕ್ಷಣೆಗೆ ಯೋಜನೆ ಸಿದ್ಧಪಡಿಸಿದೆ..

ಕೋರಮಂಡಲ್ ಸ್ಟಗ್ ನಲ್ಲಿ ಒಂಭತ್ತು ಮಂದಿ ಕಾರ್ಮಿಕರಿದ್ದು, ಅಟ್ಲಾಂಟಿಕ್ ಶಿಫ್ಟಿಂಗ್ ಕಂಪೆನಿ ಮಾಲಿಕತ್ವದ ಟಗ್ ಇದಾಗಿದೆ. ಎಂ.ಆರ್.ಪಿ.ಎಲ್ ಈ ಟಗ್ ಗೆ ನೀಡಿದ ಗುತ್ತಿಗೆಯ ಅವಧಿ ಮುಗಿದಿದ್ದು ಆದರೂ ಸಮುದ್ರದಲ್ಲೇ ಲಂಗರು ಹಾಕಿದ್ದವು. ಚಂಡಮಾರುತದ ಸೂಚನೆಯ ಬಳಿಕವೂ ಕಾರ್ಮಿಕರು ಸಮುದ್ರದಲ್ಲೇ ಇದ್ದ ಬಗ್ಗೆ ಎಂ.ಆರ್.ಪಿ.ಎಲ್ ಮತ್ತು ಎನ್ .ಎಂ.ಪಿ.ಟಿ ಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ವರದಿ ನೀಡಲು ಸೂಚನೆ ನೀಡಿದ್ದಾರೆ.

ಅಲಾಯನ್ಸ್ ಎಂಬ ಇನ್ನೊಂದು ಟಗ್ ಈಗಾಗಲೇ ಕಡಲಿನಲ್ಲಿ ಮುಳಗಿದ್ದು,ಟಗ್ ಅವಶೇಷಗಳು ಪಡುಬಿದ್ರೆ ಕಡಲ ಕಿನಾರೆಯಲ್ಲಿ ಗೋಚರವಾಗಿದೆ. ಈ ಟಗ್ ನಲ್ಲಿ ಎಂಟು ಮಂದಿ ಕಾರ್ಮಿಕರಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ಮೂರು ಮಂದಿ ಈಜಿಕೊಂಡೇ ದಡ ಸೇರಿದ್ದು, ಮೂವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಯನ್ನು ಕೋಸ್ಟ್ ಗಾರ್ಡ್ ಮತ್ತು ತಟರಕ್ಷಣಾ ಪಡೆ ಮಾಡುತ್ತಿದ್ದು,ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕಡಿಮೆ ಅಂತಾ ಹೇಳಲಾಗಿದೆ.

ಒಟ್ಟಿನ್ನಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಅರಬ್ಬೀ ಸಮುದ್ರದಲ್ಲಿ ನಡೆದ ಸ್ಟಗ್ ದುರಂತಕ್ಕೆ ಕಂಪೆನಿಗಳ ನಿರ್ಲಕ್ಷ್ಯ ವೇ ಕಾರಣ ಅಂತಾ ಹೇಳಲಾಗಿದೆ. ಆದರೆ ಅಮಾಯಕ ಕಾರ್ಮಿಕರು ಮಾತ್ರ ಚಂಡಮಾರತದ ಭೀಕರತೆಗೆ ಸಾಕ್ಷಿಯಾಗಿರೋದು ಮಾತ್ರ ದುರಂತವಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 380 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 28 ಪ್ರದೇಶಗಳಿಗೆ ಹಾನಿ ಉಂಟಾಗಿದೆ. ಮಳೆ ಹಾಗೂ ಗಾಳಿಯಿಂದಾಗಿ 84  ಕುಟುಂಬಗಳಿಗೆ  ತೊಂದರೆಯಾಗಿದ್ದು ,14 ಮನೆಗಳು ಸಂಪೂರ್ಣ ಹಾಳಾಗಿದೆ. 108 ಮನೆಗಳು ಭಾಗಶಃ ಹಾನಿಗೊಳಗಾಗಿದೆ. ಕೃಷಿಯೇತರ ಚಟುವಟಿಕೆ ಹಾಗೂ ಪ್ರಾಣಿಗಳಿಗೆ ಯಾವುದೇ ಹಾನಿಯಾಗಿಲ್ಲ.
Published by: Kavya V
First published: May 16, 2021, 9:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories