Kalaburagi: ಹಾಲು ಕುಡಿದ ಕಲ್ಲಿನ ಬಸವ, ನಂದಿ ವಿಗ್ರಹದ ಪವಾಡ ನೋಡಲು ಹರಿದು ಬರ್ತಿದೆ ಜನ ಸಾಗರ

ಕಲಬುರ್ಗಿಯಲ್ಲಿ ಕಲ್ಲಿನ ಬಸವ ಹಾಲು ಕುಡಿದಿದ್ದಾನೆ. ಈ ಪವಾಡ ನೋಡಲು ಜನ ಸಾಗರವೇ ಹರಿದು ಬರ್ತಿದ್ದು, ಹಾಲು ತಂದು ಜನರೇ ಕುಡಿಸಲು ಮುಂದಾಗಿದ್ದಾರೆ.

ಹಾಲು ಕುಡಿದ ನಂದಿ ವಿಗ್ರಹ

ಹಾಲು ಕುಡಿದ ನಂದಿ ವಿಗ್ರಹ

  • Share this:
ಕಲಬುರ್ಗಿ (ಮಾ.6): ನಮ್ಮ ಪ್ರಪಂಚದಲ್ಲಿ ಹಲವು ವಿಸ್ಮಯಗಳು ನಡೀತಾನೆ ಇರುತ್ತೆ. ಕೆಲವು ವಿಸ್ಮಯಗಳು ಜನರಲ್ಲಿ ಭಕ್ತಿ ಹೆಚ್ಚಿಸುತ್ತೆ. ಬಾಬಾ ಕಣ್ಣು ಬಿಟ್ಟಿದ್ದು, ಕಲ್ಲಿನ ದೇವಿ ಕಣ್ಣಲ್ಲಿ ರಕ್ತ ಹೀಗೆ ಹಲವು ದೈವಿ ಪವಾಡಗಳು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. ಇದೀಗ ಕಲಬುರ್ಗಿಯಲ್ಲಿ ಕಲ್ಲಿನ ಬಸವ ಮೂರ್ತಿ (Nandi Statue) ಹಾಲು ಕುಡಿದ ಪವಾಡವೊಂದು ನಡೆದಿದೆ. ಕಲ್ಲಿನ ಬಸವ ಹಾಲು ಕುಡಿದ (Drink Milk,) ದೃಶ್ಯವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಈ ಪವಾಡ ನಡೆದಿರೋದು ಕಲಬುರ್ಗಿಯ (Kalaburagi) ಬ್ಯಾಂಕ್​ ಕಾಲೋನಿಯ ಈಶ್ವರ ದೇವಾಸ್ಥಾನದಲ್ಲಿ. ಇದೀಗ ದೇವಸ್ಥಾನಕ್ಕೆ (Temple) ಜನ ಮರಳೋ ಜಾತ್ರೆ ಮರಳೋ ಎಂಬಂತೆ ಜನ ಸಾಗರವೇ ಹರಿದು ಬರ್ತಿದೆ. ಕಲ್ಲಿನ ಬಸವ ಹಾಲು ಕುಡಿಯುತ್ತಿದೆ ಎಂದು ತಿಳಿಯುತ್ತಿದ್ದಂತೆ ಜನರು ನಾವು ಕಣ್ಣಾರೆ ನೋಡಿ ಹಾಲು ಕುಡಿಸೋದಾಗಿ ದೇವಾಲಯಕ್ಕೆ ಬರ್ತಿದ್ದಾರೆ.

 ರಾತ್ರಿ ಹಾಲು ಕುಡಿದ ಬಸವ, ಬೆಳಗ್ಗೆ ಹಾಲು ಕುಡಿಯಲಿಲ್ಲ!

ಕಲಬುರಗಿಯ ಬ್ಯಾಂಕ್ ಕಾಲೋನಿಯ ಈಶ್ವರ ದೇಗುಲದಲ್ಲಿ ಗುಡಿಯ ಮುಂದೆ ಬಸವಣ್ಣನ ಮೂರ್ತಿಯಿದ್ದು, ಭಕ್ತರೊಬ್ಬರು ಮೂರ್ತಿಗೆ ಹಾಲು ಕುಡಿಸಿದ್ದಾರೆ. ಈ ವೇಳೆ ಬಸವನ ಒಳಗೆ ಹಾಲು ಸೇರಿದ್ದು, ಜನ ಬೆರಗಾಗಿದ್ದಾರೆ. ಬಳಿಕ ಮಹಿಳೆಯರು ಮಕ್ಕಳೆಲ್ಲ ಆಗಮಿಸಿ ಬಸವನ ಮೂರ್ತಿಗೆ ಹಾಲು ಕುಡಿಸಿದ್ದಾರೆ. ಶನಿವಾರ ರಾತ್ರಿ 10:30ರ ಸುಮಾರಿಗೆ ಬಸವಣ್ಣನಿಗೆ ಹಾಲು ಕುಡಿಸಿದ್ದಾರೆ. ಬಸವಣ್ಣ ಹಾಲು ಕುಡಿದ ಎಂದು ಜನ ನಂಬಿದ್ದಾರೆ. ನಾವೇ ನಮ್ಮ ಕೈನಿಂದ ಹಾಲು ಕುಡಿಸಿದ್ದೇವೆ, ಬಸವಣ್ಣ ಹಾಲು ಕುಡಿಯೋದನ್ನ ಕಣ್ಣಾರೆ ನೋಡಿದ್ದೇವೆ ಅಂತಾ ಜನ ಹೇಳಿಕೊಳ್ತಿದ್ದಾರೆ..!

ಬಸವನಿಗೆ ಹಾಲು ಕುಡಿಸಲು ಸಾಲುಗಟ್ಟಿ ನಿಂತ ಜನ

ಕಲ್ಲಿನ ಬಸವ ಹಾಲು ಕುಡಿಯುತ್ತಿದೆ ಎಂಬ ವದಂತಿ ಕಲಬುರಗಿಯಲ್ಲಿ ಹರಡಿದೆ. ಹೀಗಾಗಿ, ಮಹಿಳೆಯರು ಬಸವನಿಗೆ ಹಾಲು ಕುಡಿಸಲು ಸಾಲುಗಟ್ಟಿ ನಿಂತಿದ್ದಾರೆ. ಜನ ಮರುಳೋ, ಜಾತ್ರೆ ಮರುಳೋ ಎಂಬಂತಾಗಿದೆ ಕಲಬುರಗಿಯ ಪರಿಸ್ಥಿತಿ..! ಕಲಬುರಗಿ ನಗರದ ಬ್ಯಾಂಕ್ ಕಾಲೋನಿಯ ಜನರು ಬ್ಯಾಂಕ್ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿನ ಕಲ್ಲಿನ ಬಸವಣ್ಣನಿಗೆ ಹಾಲು ಕುಡಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: Garbage Dumping: ಬಿಬಿಎಂಪಿ ಆಯುಕ್ತರಿಗೆ ಲಾಸ್ಟ್ ವಾರ್ನಿಂಗ್ ಕೊಟ್ಟ ಹೈಕೋರ್ಟ್, ಆದೇಶ ಪಾಲಿಸದಿದ್ದರೆ ಜೈಲು ಶಿಕ್ಷೆ

ಭಾನುವಾರ ಹಾಲು ಕುಡಿಯಲಿಲ್ಲ ಬಸವ

ಕಲ್ಲಿನ ಬಸವ ಹಾಲು ಕುಡಿಯುತ್ತಿದ್ದಾನೆ ಅನ್ನೋ ವಿಚಾರ ಕಲಬುರಗಿಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಸುತ್ತಮುತ್ತಲ ಪ್ರದೇಶಗಳ ಜನರು ದೇವಸ್ಥಾನಕ್ಕೆ ಭೇಟಿ ಕೊಟ್ಟು ನಂದಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿ ಭಜನೆ ಮಾಡೋದಕ್ಕೆ ಮುಂದಾಗಿದ್ದಾರೆ. ಆದರೆ ಭಾನುವಾರ ಬೆಳಗ್ಗೆ ಬಸವಣ್ಣನಿಗೆ ಹಾಲು ಕುಡಿಸೋಕೆ ಹೋದ್ರೆ ಬಸವಣ್ಣ ಕುಡಿದಿಲ್ಲ ಎಂದು ಜನ ಹೇಳ್ತಿದ್ದಾರೆ. ಶನಿವಾರ ರಾತ್ರಿ ನಮ್ಮ ಕೈಯಾರೆ ನಾವು ಹಾಲು ಕುಡಿಸಿದಾಗ ಬಸವಣ್ಣ ಕುಡಿದಿದ್ದಾನೆ ಎಂದು ವಾದಿಸುತ್ತಿರುವ ಜನರು, ಇದು ಪವಾಡವೇ ಸರಿ ಅಂತಾ ಹೇಳ್ತಿದ್ದಾರೆ. ಕಲ್ಲಿನ ಬಸವಣ್ಣ ಹಾಲು ಕುಡಿದ ಹಿನ್ನೆಲೆಯಲ್ಲಿ ನಮಗೆಲ್ಲರಿಗೂ ಒಳ್ಳೆಯದಾಗುತ್ತೆ ಅನ್ನೋದು ಜನರ ನಂಬಿಕೆ.

ಬಾಗಲಕೋಟೆಯಲ್ಲು ಹಾಲು ಕುಡಿದ ಬಸವ

ಹೆಣ್ಮಕ್ಕಳು ಚಮಚದಿಂದ ಕಲ್ಲಿನ ಮೂರ್ತಿಗೆ ಹಾಲು ಕುಡಿಸ್ತಿದ್ದಾರೆ. ಆದ್ರೆ ಇಲ್ಲಿ ಒಂದು ಹನಿಯೂ ಚೆಲ್ಲದಂತೆ ಬಸವ ಹಾಲು ಕುಡಿಯುತ್ತಂತೆ. ಇಂಥಾ ವಿಚಿತ್ರ ಘಟನೆ ನಡೆದಿದ್ದು, ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದ ಗುಗ್ಗರಿ ಓಣಿಯಲ್ಲಿ. ಗುಳೇದಗುಡ್ಡದ ಗುಗ್ಗರಿ ಓಣಿಯ ಅರಳಿಕಟ್ಟಿ ಬಸವಣ್ಣ ಹಾಲು ಕುಡಿದ ಅನ್ನೋ ಸುದ್ದಿ ಹಬ್ಬಿತ್ತು. ಇದನ್ನು ನಂಬಿದ ಭಕ್ತರು, ಬಸವಣ್ಣನ ದೇವಸ್ಥಾನದತ್ತ ಓಡೋದಿ ಬಂದಿದ್ರು. ಹಾಲು ತಂದು ಚಮಚದಿಂದ ಮೂರ್ತಿಗೆ ಕುಡಿಸಿದ ದೃಶ್ಯ ಕಂಡು ಬಂತು.

ಇದನ್ನೂ ಓದಿ: Karnataka Rain: ನಾಳೆಯಿಂದ 3 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ, ಹವಾಮಾನ ಇಲಾಖೆ ಸೂಚನೆ

ಮಹಾರಾಷ್ಟ್ರದ ಲಾಥೂರ್​ನಲ್ಲಿ ನಿನ್ನೆ ಬಸವನ ಮೂರ್ತಿ ಹಾಲು ಕುಡಿದಿದ್ದಂತೆ. ಅಲ್ಲಿಂದ ವಿಷ್ಯ ಕಲಬುರಗಿಗೆ ಹರಡಿದೆ. ನಂತರ, ಇಡೀ ರಾತ್ರಿ ಬಸವನ ಮೂರ್ತಿಗೆ ಹಾಲು ಕುಡಿಸಲು ಜನ ಮುಗಿಬಿದ್ದಿದ್ರು. ಆದ್ರೆ, ಬೆಳಗ್ಗೆ ಚೊಂಬಿನಲ್ಲಿ ಹಾಲು ಹಿಡಿದು ಬಂದವ್ರಿಗೆ ನಿರಾಸೆಯಾಗಿತ್ತು. ಯಾಕಂದ್ರೆ, ಬೆಳಗ್ಗೆ ಬಸವಣ್ಣ ಹಾಲು ಕುಡಿದಿಲ್ಲ.
Published by:Pavana HS
First published: