ಮೂಲ ಸಿದ್ಧಾಂತವನ್ನೇ ಮರೆತ ಕಾಂಗ್ರೆಸ್​ನಿಂದ ಭಯೋತ್ಪಾದನೆಗೆ ಕುಮ್ಮಕ್ಕು: ನಳಿನ್ ಕುಮಾರ್ ಕಟೀಲ್

ನಿನ್ನೆ ದೆಹಲಿಯಲ್ಲಿ ರೈತರ ಹೆಸರಿನಲ್ಲಿ ದೇಶಘಾತುಕ ಶಕ್ತಿಗಳಿಂದ ದಾಂದಲೆಯಾಗಿದೆ. ಕಾಂಗ್ರೆಸ್ ಪಕ್ಷ ಕೂಡ ತನ್ನ ಮೂಲ ಸಿದ್ಧಾಂತ ಮರೆತು ಭಯೋತ್ಪಾದಕರಿಗೆ ಬೆಂಬಲ ನೀಡಿದೆ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ಧಾರೆ.

ನಳೀನ್ ಕುಮಾರ್ ಕಟೀಲ್

ನಳೀನ್ ಕುಮಾರ್ ಕಟೀಲ್

  • Share this:
ಚಿತ್ರದುರ್ಗ: ಸ್ವಾತಂತ್ರ್ಯ ಸಂಗ್ರಾಮದ ಹೆಸರಲ್ಲಿ ಬಂದಿರುವ ಕಾಂಗ್ರೆಸ್ ಪಕ್ಷ ತನ್ನ ಮೂಲ ವಿಚಾರ, ಸಿದ್ದಾಂತವನ್ನ ಮರೆತಿದೆ. ಅಧಿಕಾರಕ್ಕೋಸ್ಕರ ಭಯೋತ್ಪಾದನಾ ಕೃತ್ಯಕ್ಕೂ ಇಳಿದಿದೆ. ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದು, ಪುಂಡಾಟಿಕೆ ಮಾಡುವುದು ತಪ್ಪು. ಇದ್ಯಾವುದು ರೈತರು ಮಾಡಿದ್ದಲ್ಲ, ರಾಷ್ಟ್ರಘಾತುಕ ಶಕ್ತಿಗಳು ಹೀಗೆ ಮಾಡಿವೆ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಿನ್ನೆ ದೆಹಲಿಯಲ್ಲಿ‌ ನಡೆದ ರೈತರ ಪ್ರತಿಭಟನಾ ಗಲಭೆ ವಿಚಾರದ ಬಗ್ಗೆ ಮಾತನಾಡಿರುವ ಅವರು, ರೈತರ ಹೆಸರಿನಲ್ಲಿ ದಾಂದಲೆ ಮಾಡುತ್ತಿದ್ದಾರೆ. ರಾಷ್ಟ್ರ ಭಕ್ತರು, ರೈತರು ಮಾಡುವ ಕಾರ್ಯ ಅಲ್ಲ ಅದಾಗಿರಲಿಲ್ಲ. ರೈತ ಈ‌ ದೇಶದ ಮಣ್ಣಿನ ಮಗ. ಸಂವಿಧಾನ, ಕಾನೂನು ಗೌರವಿಸುವವನು. ನಾನು ಒಬ್ಬ ಕೃಷಿಕ. ಹಕ್ಕುಗಳಿಗಾಗಿ ಹೋರಾಟ ಮಾಡುವುದು ತಪ್ಪಲ್ಲ. ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದು. ಪುಂಡಾಟಿಕೆ ಮಾಡುವುದು ತಪ್ಪು. ರಾಷ್ಟ್ರಘಾತುಕ ಶಕ್ತಿಗಳು ಹೀಗೆ ಮಾಡಿವೆ ಎಂದು ಆರೋಪಿಸಿದ್ದಾರೆ.

ಕೆಂಪುಕೋಟೆಗೆ ದಾಳಿ‌ಮಾಡಿ ರಾಷ್ಟ್ರ ಧ್ವಜವನ್ನೇ ಅವಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಗೌರವ ಕೊಡುವ ದಿನ ಯಾವುದೇ ಬೇಡಿಕೆಗೆ ಶಾಂತಿಯುತ ಹೋರಾಟ ಮಾಡಿದ್ರೆ ತಪ್ಪಿಲ್ಲ. ಆದರೆ ರೈತರನ್ನ ದಾರಿ ತಪ್ಪಿಸುವ, ಕಳಂಕ ತರುವ ಕೆಲಸ ಆಗಿದೆ. ಕೆಲವು ರಾಜಕೀಯ ಪಕ್ಷಗಳು‌ ಲಾಭ ಪಡೆಯಲು ಹೀಗೆ ಮಾಡುತ್ತಿವೆ. ಕಾನೂನು, ಸಂವಿಧಾನಕ್ಕೆ ಗೌರವ ಕೊಡುವ ಯಾರೂ‌ ಕೂಡ ಈ ಕೆಲಸ ಮಾಡಲ್ಲ. ಹಾಗಾಗಿ ರೈತರ ಹೆಸರಿನಲ್ಲಿ ಅಶಾಂತಿ ನಿರ್ಮಿಸುವ ಉದ್ದೇಶದಿಂದ ಘಾತುಕ ಶಕ್ತಿಗಳು ಈ ಕಾರ್ಯ ಮಾಡಿವೆ. ಇದು ತನಿಖೆ ಆಗಬೇಕು‌, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆ ಮುಂಭಾಗ ಹಾದುಹೋಗಿದ್ದ ವಿದ್ಯುತ್ ತಂತಿ ತಾಗಿ ಬಾಲಕಿಗೆ ಗಂಭೀರ ಗಾಯ

ಇನ್ನು, ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಅಧಿಕಾರ ಇಲ್ಲದಿದ್ದಾಗ ಬೆಂಕಿ ಹಾಕುತ್ತದೆ. ಅಧಿಕಾರ ಇದ್ದಾಗ  ಪ್ರಜಾಪ್ರಭುತ್ವದ ಸರ್ಕಾರಗಳನ್ನ ಮಣಿಸುವುದು, ವಿರೋಧ ಪಕ್ಷಗಳನ್ನ ನಾಶ ಮಾಡುವುದು ಅವರ ಪದ್ದತಿ. ಅಧಿಕಾರ ಹೋದಾಗ ಅಶಾಂತಿ‌ನಿರ್ಮಿಸಿ, ಗಲಭೆ ಸೃಷ್ಠಿಸುವುದು ಅವರ ನೀತಿ, ಹುಟ್ಟುಗುಣ. ನಿನ್ನೆ ಪಿಸ್ತೂಲುಗಳನ್ನ, ತಲವಾರುಗಳನ್ನ ಹಿಡಿದುಕೊಂಡು ಹೋಗಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಪಕ್ಷ ಇದೆ. ಸ್ವಾತಂತ್ರ್ಯ ಸಂಗ್ರಾಮದ ಹೆಸರಲ್ಲಿ ಬಂದಿರುವ ಕಾಂಗ್ರೆಸ್ ದೇಶದ ಹಿತವನ್ನೇ ಮರೆತಿದೆ. ಅಧಿಕಾರಕ್ಕೋಸ್ಕರ ಭಯೋತ್ಪಾದನಾ ಕೃತ್ಯಕ್ಕೂ ಇಳಿದಿದೆ ಎಂದು ನಳಿನ್ ಕುಮಾರ್ ಕಟೀಲ್ ಗಂಭೀರ ಆಪಾದನೆ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ರೈತರ ವಿಶ್ವಾಸ ಗಳಿಸಲು ನಿರಂತರ ಪ್ರಯತ್ನ ಮಾಡುತ್ತಿದೆ. ಇನ್ನೊಂದು ಬಾರಿ ಸಭೆ ಮಾಡಿ ಚರ್ಚೆ ಮಾಡಿ ರೈತರ ಎಲ್ಲ ಬೇಡಿಕೆ ಪಡೆದಿದೆ. ಆದರೆ, ಅರಾಜಕತೆ ಸೃಷ್ಟಿ ಮಾಡಲು, ರಾಜಕೀಯ ಲಾಭ ಪಡೆಯಲು ಘಾತಕ ಶಕ್ತಿಗಳು ಈ ಹೋರಾಟದ ಹಿಂದಿವೆ. ಸಿದ್ದರಾಮಯ್ಯಗೆ ರೈತರ ಪರ ಮಾತನಾಡಲು ನೈತಿಕ ಹಕ್ಕಿಲ್ಲ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಬೆಳಗಾವಿ ವಿಧಾನಸೌಧ ಅಧಿವೇಶನದ ವೇಳೆ ರೈತನ ಆತ್ಮಹತ್ಯೆ ಆಯ್ತು. ಅನ್ನದಾತನ ಮನೆಗೆ ಹೋಗಿ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಸಮಾಜವಾದದ ಹೆಸರಿನಲ್ಲಿ ಮಜಾ ಮಾಡಿದ ಮುಖ್ಯಮಂತ್ರಿ ಆಗಿರುವ ಅವರಿಗೆ ಈಗ ಮಾತನಾಡಲು ಏನು ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಡಿಕೆ ಶಿವಕುಮಾರ್ ಅವರ ರಾಜಕೀಯ ಅಂತ್ಯ ಕಾಣುತ್ತಾರೆ, ಮೊನ್ನೆ ಎಲ್ಲಿಂದ ಬಂದರು (ಜೈಲಿನಿಂದ) ಮೆರವಣಿಗೆ ಮಾಡಿದ್ರು, ಮತ್ತೆ ಅಲ್ಲಿಗೆ (ಜೈಲಿಗೆ) ಹೋಗುತ್ತಾರೆ ಕಟೀಲ್ ಭವಿಷ್ಯ ನುಡಿದಿದ್ದಾರೆ‌.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: