ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಆರೋಪ; ಕಟೀಲ್ ಒಬ್ಬ ಹುಚ್ಚ ಎಂದ Randeep Surjewala

ಚುನಾವಣೆ ಮುಗಿಲಿ ಅಂತಾ ನಾವು ತಾಳ್ಮೆಯಿಂದ ಇದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಮ್ಮ ಕಾಂಗ್ರೆಸ್ ಸೈನ್ಯ ಇದೆ. ಗಾಂಧಿ ಕುಟುಂಬ ಮಾಡಿದ ತ್ಯಾಗಕ್ಕೆ ಬಿಜೆಪಿಯವರನ್ನ ಒಂದು ಪರ್ಸೆಂಟ್ ಕೂಡ ಹೋಲಿಕೆ ಮಾಡಲು ಆಗೋದಿಲ್ಲ. ನಮ್ಮ ಪಕ್ಷ ಸತ್ತಿಲ್ಲ, ನಮ್ಮ ಪಕ್ಷ ಬದುಕಿದೆ ಎಂದರು.

ಹಾನಗಲ್​ನಲ್ಲಿ ಮಾತನಾಡಿದ ರಣದೀಪ್ ಸುರ್ಜೆವಾಲಾ

ಹಾನಗಲ್​ನಲ್ಲಿ ಮಾತನಾಡಿದ ರಣದೀಪ್ ಸುರ್ಜೆವಾಲಾ

  • Share this:
ಹುಬ್ಬಳ್ಳಿ: ರಾಹುಲ್ ಗಾಂಧಿ ಡ್ರಗ್ಸ್ ಪ್ಲಡರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಕಿಡಿ ಹೊತ್ತಿಸಿದೆ. ಕಟೀಲ್ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತಿತರ ನಾಯಕರು ಹರಿಹಾಯ್ದಿದ್ದಾರೆ. ಕಟೀಲ್ ಹುಚ್ಚನೆಂದು, ಆತನನ್ನು ಮಾದಕ ವ್ಯಸನಿಗಳ ಕೇಂದ್ರ ಇಲ್ಲವೆ ಹುಚ್ಚಾಸ್ಪತ್ರೆಗೆ ಸೇರಿಸಬೇಕೆಂದು ಆಗ್ರಹಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹುಚ್ಚರಂತೆ ವರ್ತಿಸುತ್ತಿದ್ದು ಮಾದಕ ವ್ಯಸನಿಗಳ ಕೇಂದ್ರಕ್ಕೆ ಸೇರಿಸಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ನಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ಕಿಡಿಕಾರಿದ್ದಾರೆ.  

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಟೀಲ್ ಮಾಡಿರುವ ಸಾಧನೆ ಏನೂ ಇಲ್ಲ. ಹೀಗಾಗಿ ಎಲ್ಲರ ಗಮನ ಸೆಳೆಯೋಕೆ ಕಟೀಲ್ ಈ ರೀತಿ ಮಾಡ್ತಿದ್ದಾರೆ. ದಾರಿಯಲ್ಲಿ ಹುಚ್ಚರು ಹೋಗುವಾಗ ಕೈಯಲ್ಲಿ ಕಲ್ಲು ಹಿಡಿದು ಮನಸ್ಸಿಗೆ ಬಂದವರ ಮೇಲೆ ಎಸೆದಂತೆ ಇವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರನ್ನು ಕೂಡಲೇ ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಡ್ರಗ್ ವ್ಯಸನಿಗಳ ಕೇಂದ್ರಕ್ಕೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರೆ ಮಾನಸಿಕ ಸ್ವಾಸ್ಥ್ಯ ಸರಿಹೋಗಬಹುದು ಎಂದು ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.

ಸೋಲಿನ ಭೀತಿಯಿಂದ ಈ ರೀತಿಯ ಹೇಳಿಕೆಯೆಂದ ಡಿಕೆಶಿ

ಬಿಜೆಪಿಗೆ ಸೋಲಿನ ಭಯ ಇರೋದ್ರಿಂದಾಗಿ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ನಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿ ಕುರಿತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಮುಗಿಲಿ ಅಂತಾ ನಾವು ತಾಳ್ಮೆಯಿಂದ ಇದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಮ್ಮ ಕಾಂಗ್ರೆಸ್ ಸೈನ್ಯ ಇದೆ. ಗಾಂಧಿ ಕುಟುಂಬ ಮಾಡಿದ ತ್ಯಾಗಕ್ಕೆ ಬಿಜೆಪಿಯವರನ್ನ ಒಂದು ಪರ್ಸೆಂಟ್ ಕೂಡ ಹೋಲಿಕೆ ಮಾಡಲು ಆಗೋದಿಲ್ಲ. ನಮ್ಮ ಪಕ್ಷ ಸತ್ತಿಲ್ಲ, ನಮ್ಮ ಪಕ್ಷ ಬದುಕಿದೆ ಎಂದರು.

ಚುನಾವಣೆ ಸಮಯದಲ್ಲಿ ಇಂಥ ಹೇಳಿಕೆಗಳನ್ನ ದೊಡ್ಡದು ಮಾಡದೆ ಸೈಲೆಂಟ್ ಆಗಿ ಚುನಾವಣೆ ಎದುರಿಸ್ತೇವೆ. ನಾವು ಕೇಳೋ ಪ್ರಶ್ನೆಗಳಿಗೆ ಉತ್ತರಿಸಿ ಬಿಜೆಪಿ ಚುನಾವಣೆ ಮಾಡಲಿ. ಬಿಜೆಪಿ ಸರ್ಕಾರ ಬಂದ ಮೇಲೆ ಜನರ ಬದುಕು ಬದಲಾಗಿದೆಯಾ ಅನ್ನೋದನ್ನ ಹೇಳಲಿ. ಮತದಾರರು ನೊಂದಿದ್ದೀರಿ. ನಿಮ್ಮ ಮತ ಹಾಕೋ ಮೂಲಕ ಬಿಜೆಪಿಯವರಿಗೆ ಉತ್ತರ ಕೊಡಿ. ಇದು ಸಿಎಂ ಬೊಮ್ಮಾಯಿಯವರ ಕ್ಷೇತ್ರ, ಸೋಲಿನ ಭಯ ಕಾಡ್ತಿದೆ. ಸೋಲಿನ ಭಯವನ್ನ ಮುಚ್ಚಿ ಹಾಕಲು ಈ ರೀತಿಯ ಹೇಳಿಕೆ ನೀಡ್ತಿದ್ದಾರೆ‌. ಆದರೆ ಇದರಿಂದ ಬಿಜೆಪಿಗೆ ಯಾವುದೇ ಪ್ರಯೋಜನವಾಗಲ್ಲ ಎಂದರು.

ರಾಜ್ಯಾಧ್ಯಕ್ಷರ ಬಾಯಿಯಿಂದ ಬರೋ ಮಾತಲ್ಲ

ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಮಾಜಿ ಸಚಿವ ಎಚ್.ಕೆ.ಪಾಟೀಲ ಕಿಡಿಕಾರಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ನಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾದಂಥವರು ಮಾತನಾಡೋ ಮಾತಲ್ಲ. ರಾಹುಲ್ ಗಾಂಧಿ ರಾಷ್ಟ್ರದ ಗೌರವಾನ್ವಿತ ನಾಯಕರು. ಎಐಸಿಸಿ ಅಧ್ಯಕ್ಷ ರಾಗಿಯೂ ಕಾರ್ಯ ನಿರ್ವಹಿಸಿದವರು. ಯೂತ್ ಐಕಾನ್ ಆದಂಥವರು. ಅಂಥವರ ಬಗ್ಗೆ ಈ ರೀತಿಯ ಆರೋಪ ಅಕ್ಷಮ್ಯ ಅಪರಾಧ. ಇದು ಬಿಜೆಪಿಯ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದರು.

ಇದನ್ನು ಓದಿ: Love Breakup: ಎಂಟು ವರ್ಷದಿಂದ ಪ್ರೀತಿಸಿದವಳಿಂದ ಮೋಸ; ಪ್ರಿಯಕರ ಆತ್ಮಹತ್ಯೆ!

ಕಟೀಲ್ ಅವರ ವಿಕೃತ ಮನಸ್ಸನ್ನು ತೋರಿಸುತ್ತದೆ. ಸಾರ್ವಜನಿಕ ಬದುಕಿಗೆ ಅಸಡ್ಡೆಯನ್ನು ತೋರಿಸಿದಂತೆ. ಕಟೀಲ್ ಹೇಳಿಕೆ ಬಿ ಜೆ ಪಿ ನಾಯಕರ ಮೌಲ್ಯ ಸಂಪೂರ್ಣ ಕಡಿಮೆಯಾಗುವಂತೆ ಮಾಡಿದೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ಸರಿಯಲ್ಲ. ಪ್ರಧಾನಿ ಮೋದಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ಕುರಿತು ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಅದು ಈಗ ಮುಗಿದು ಹೋದ ಅಧ್ಯಾಯ. ಆದರೆ ಈಗ ಅದನ್ನೇ ನೆಪಮಾಡಿಕೊಂಡು ಈ ರೀತಿ ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಎಚ್ ಕೆ ಪಾಟೀಲ ತಿಳಿಸಿದ್ದಾರೆ.

ವರದಿ - ಶಿವರಾಮ ಅಸುಂಡಿ
Published by:HR Ramesh
First published: