ಕಾರವಾರದ ನಗೆ ಗ್ರಾಮದ ನಗು ಕಸಿದ ಪ್ರಕೃತಿ; ಭೂ‌ ಕುಸಿತದಿಂದ ಕಂಗಾಲಾದ ಜನರು!

ಹಚ್ಚ ಹಸುರಿನ ಪ್ರಕೃತಿ ಸೌದರ್ಯದ ನಡುವೆ ಭತ್ತದ ಸಸಿ ಭೂ ಕುಸಿತ ಭಯದ ನೆರಳಲ್ಲಿ ಇವೆ. ಈಗ ನಿರಂತರವಾಗಿ ಮಳೆಯಾದರೆ ಮುಂದೆ ಭೂಕುಸಿತದ ತೀವ್ರತೆ ಹೆಚ್ಚಾಗಲಿದೆ. ಜತೆಗೆ ಪಕ್ಕದಲ್ಲಿ ಹರಿಯುವ ನದಿ ಪ್ರವಾಹದ ಸ್ವರೂಪ ಪಡೆದುಕೊಂಡು ದೊಡ್ಡ ಮಟ್ಟದ ಸಮಸ್ಯೆ ತಂದೊಡ್ಡಲಿದೆ.

news18-kannada
Updated:August 8, 2020, 6:58 PM IST
ಕಾರವಾರದ ನಗೆ ಗ್ರಾಮದ ನಗು ಕಸಿದ ಪ್ರಕೃತಿ; ಭೂ‌ ಕುಸಿತದಿಂದ ಕಂಗಾಲಾದ ಜನರು!
ಭೂ ಕುಸಿತದ ಭೀತಿಯಲ್ಲಿ ನಗೆ ಗ್ರಾಮದ ಜನರು.
  • Share this:
ಕಾರವಾರ; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದೆ. ಇಷ್ಟು ದಿನ ಕಾಳಿ ಗಂಗಾವಳಿ ನದಿ ಉಕ್ಕಿ ಹರಿದು ಸಮಸ್ಯೆ ತಂದಿಟ್ಟಿತ್ತು. ಆದರೆ ಈಗ ಭೂ ಕುಸಿತ ಜಿಲ್ಲೆಯನ್ನು ಕಾಡುತ್ತಿದೆ. ಮೂರು ದಿನ ಸುರಿದ ಭಾರೀ ಮಳೆಗೆ ಕಾರವಾರ ಹಿಂದುಳಿದ ಗ್ರಾಮ ನಗೆಯಲ್ಲಿ ಭೂಕುಸಿತ ಉಂಟಾಗಿ ಸಾಕಷ್ಟು ಸಮಸ್ಯೆ ಆಗಿದೆ.

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರ ತಾಲೂಕಿನ ಅತೀ ಹಿಂದುಳಿದ ನಗೆ ಗ್ರಾಮಕ್ಕೆ ಹೊಂದಿಕೊಂಡ ಅರಣ್ಯ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಇಲ್ಲಿನ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಭೂ ಕುಸಿತ ಉಂಟಾದ ಅರಣ್ಯ ಜಾಗಕ್ಕೆ ಹೊಂದಿಕೊಂಡ ನಗೆ ಗ್ರಾಮದ ರೈತರ 25 ಎಕರೆ ಭತ್ತದ ಕೃಷಿ ಭೂಮಿಗೆ ಭೂ ಕುಸಿತದ ಮಣ್ಣು ಮತ್ತು ಕೊಳಕು ನೀರು ಆಕ್ರಮಿಸಿಕೊಂಡು ಕೃಷಿ ಭೂಮಿ ನಾಶವಾಗುವ ಹಂತ ತಲುಪಿದೆ. ಇದರಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದ ಭತ್ತದ ಬೆಳೆ ನಾಶವಾಗಿದೆ. ಸುಮಾರು 6 ಎಕರೆ ಅರಣ್ಯ ಪ್ರದೇಶ ಕುಸಿದಿದೆ. ಬೃಹದಾಕಾರ ಮರಗಳು ಧರಾಶಾಹಿಯಾಗಿವೆ. ಬೃಹತ್ ಕಲ್ಲು ಬಂಡೆಗಳು ಜಾರಿ ಕೃಷಿ ಭೂಮಿಗೆ ಬೀಳುವ ಹಂತ ತಲುಪಿದೆ. ಪಕ್ಕದಲ್ಲೇ ಹರಿಯುತ್ತಿರುವ ನದಿಗೆ ಮಣ್ಣು ಸೇರಿಕೊಂಡು ಕೃಷಿ ಜಮೀನು ನೀರು ನುಗ್ಗಿದೆ. ಮಳೆ ನಿರಂತರವಾಗಿ ಹೀಗೆ ಸುರಿದರೆ ಮಣ್ಣು ಮತ್ತು ಧರಾಶಾಹಿಯಾದ ಮರಗಳು ಜನವಸತಿ ಪ್ರದೇಶಕ್ಕೆ ನುಗ್ಗಲಿದೆ. ಇದರಿಂದ ವಾಸದ ಮನೆಗಳಿಗೆ ಹಾನಿ ಆಗುವುದು ಕಟ್ಟಿಟ್ಟ ಬುತ್ತಿ. ಪ್ರಕೃತಿ ಈಗ ನಗೆ ಗ್ರಾಮದ ಜನರ ನಗು ಕಸಿದುಕೊಂಡಿದೆ.

ಇನ್ನೂ ನಗೆ ಗ್ರಾಮದಲ್ಲಿ ಒಟ್ಟು 60 ಮನೆಗಳಿವೆ. ಇಲ್ಲಿನ ಜನರು ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈ ಬಾರಿ ಇಲ್ಲಿನ ರೈತರ ಜೀವನದಲ್ಲಿ ಪ್ರಕೃತಿ ಆಟವಾಡುತ್ತಿದೆ. ಭತ್ತದ ಬೆಳೆಯನ್ನೇ ಹೆಚ್ಚಾಗಿ ಬೆಳೆಯುವ  ಹಾಲಕ್ಕಿ ಗೌಡ ಸಮುದಾಯದವರೇ ಹೆಚ್ಚಾಗಿ ವಾಸವಾಗಿದ್ದು, ಶಿಕ್ಷಣದಿಂದಲೂ ವಂಚಿತರಾಗಿದ್ದಾರೆ. ಈಗ ಈ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಇಲ್ಲಿನ ಜನರ ಬದುಕು ಕಸಿದುಕೊಳ್ಳಲು ಮುಂದಾಗಿದೆ. ಹಚ್ಚ ಹಸುರಿನ ಪ್ರಕೃತಿ ಸೌದರ್ಯದ ನಡುವೆ ಭತ್ತದ ಸಸಿ ಭೂ ಕುಸಿತ ಭಯದ ನೆರಳಲ್ಲಿ ಇವೆ. ಈಗ ನಿರಂತರವಾಗಿ ಮಳೆಯಾದರೆ ಮುಂದೆ ಭೂಕುಸಿತದ ತೀವ್ರತೆ ಹೆಚ್ಚಾಗಲಿದೆ. ಜತೆಗೆ ಪಕ್ಕದಲ್ಲಿ ಹರಿಯುವ ನದಿ ಪ್ರವಾಹದ ಸ್ವರೂಪ ಪಡೆದುಕೊಂಡು ದೊಡ್ಡ ಮಟ್ಟದ ಸಮಸ್ಯೆ ತಂದೊಡ್ಡಲಿದೆ.

ಇದನ್ನು ಓದಿ: ಕೃಷ್ಣಾ ನದಿಯಲ್ಲಿ ಪ್ರವಾಹ ಬಂದರೂ 230 ಕುರಿ, ಶ್ವಾನ ಬಿಟ್ಟು ಬಾರದೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಯಿ!

ಒಟ್ಟಾರೆ ಎಂದೂ ಕಂಡು ಕೇಳರಿಯದ ಭೂ ಕುಸಿತದ ಭಯ ಈಗ ಕಾರವಾರದ ನಗೆ ಗ್ರಾಮದ ಮುಗ್ಧ ರೈತರಲ್ಲಿ ಕಾಡುತ್ತಿದೆ. ಮತ್ತೆ ಭೂ ಕುಸಿತವಾಗದೆ ರೈತರ ಬಾಳು ಹಸನಾಗಲಿ.
Published by: HR Ramesh
First published: August 8, 2020, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading