ಮಂಗಳೂರು(ಜುಲೈ.19): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಷಾಢ ಅಮವಾಸೆಗೆ ಕೊರೋನಾ ಬ್ರೇಕ್ ಕೊಟ್ಟಿದೆ. ಕೊರೋನಾ ಮತ್ತು ಲಾಕ್ ಡೌನ್ ನಿಂದ ಆಷಾಢ ಅಮವಾಸ್ಯೆ ಈ ಬಾರಿ ಭಕ್ತರಿಲ್ಲದೆ ನಡೆಯಲಿದೆ. ಪ್ರತಿ ವರ್ಷ ಆಷಾಢ ಅಮವಾಸ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಶಿವ ದೇವಸ್ಧಾನಗಳಲ್ಲಿ ಅತ್ಯಂತ ವೈಭವದಿಂದ ನಡೆಯುತಿತ್ತು. ಆದರೆ, ಆ ಬಾರಿ ಮಾತ್ರ ಆಷಾಢ ಭಕ್ತರಿಲ್ಲದೆ ನಡೆಯುತ್ತಿದೆ. ಸರ್ಕಾರದ ನಿಯಮದ ಪ್ರಕಾರ ಲಾಕ್ ಡೌನ್ ಹಿನ್ನಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರಿಗೆ ಸೇರುವುದಕ್ಕೆ ಅವಕಾಶ ನೀಡಿಲ್ಲ. ಹಾಗಾಗಿ ಜಿಲ್ಲೆಯ ಯಾವುದೇ ದೇವಸ್ಥಾನಗಳಲ್ಲಿ ನಾಳೆ ಹರಕೆ ಪೂಜೆ ನಡೆಯುವುದಿಲ್ಲ.
ಆಷಾಢ ಅಮವಾಸ್ಯೆ ಪ್ರಮುಖವಾಗಿ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನದಲ್ಲಿ ವೈಭವದಿಂದ ನಡೆಯುತ್ತಿತ್ತು. ಇಲ್ಲಿಗೆ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ನೆರೆಯ ಕಾಸರಗೋಡು, ಉಡುಪಿ ಜಿಲ್ಲೆಗಳಿಂದಲ್ಲೂ ಪ್ರತಿವರ್ಷ ಭಕ್ತರು ಬರುತ್ತಾರೆ. ಭಕ್ತರು ಕಾರಿಂಜದ ಪುಪ್ಕರಿಣಿಯಲ್ಲಿ ಮಿಂದು ಶಿವ ಪಾರ್ವತಿಯ ದರ್ಶನ ಮಾಡುತ್ತಿದ್ದರು. ಮುಂಜಾನೆ 4 ಗಂಟೆಯಿಂದ ಭಕ್ತರು ಬರಲು ಆರಂಭಿಸಿ ದಿನವಿಡೀ ಭಕ್ತರೇ ದಂಡೇ ಬರುತಿತ್ತು. ಆದರೆ, ಇದೇ ಮೊದಲ ಭಾರಿಗೆ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಷಾಢ ಅಮವಾಸ್ಯೆಯ ವೈಭವ ನಡೆಯುವುದಿಲ್ಲ. ಸರ್ಕಾರದ ನಿಯಮ ಪ್ರಕಾರ ದೇವಸ್ಥಾನದ ಮುಂಭಾಗ ಬೋರ್ಡ್ ಅಳವಡಿಸಲಾಗಿದ್ದು, ಈ ಭಾರಿ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ ಅಂತಾ ಸೂಚನೆ ಹಾಕಲಾಗಿದೆ. ಸಹಸ್ರಾರು ಸೇರುತ್ತಿದ್ದ ಭಕ್ತರು ಸೇರುತ್ತಿದ್ದ ದೇವಸ್ಥಾನ ಈ ಬಾರಿ ಭಕ್ತರಿಲ್ಲದೆ ಭಣಗುಣಡಲಿದೆ.
ಕಾರಿಂಜೇಶ್ವರ ದೇವಸ್ಥಾನ ಮಾತ್ರವಲ್ಲದೆ ಜಿಲ್ಲೆಯ ಇತರ ದೇವಸ್ಥಾನಗಳಲ್ಲೂ ಆಷಾಢ ಅಮವಾಸ್ಯೆಯ ಪೂಜೆ ತೀರ್ಥ, ಸ್ನಾನಗಳು ನಡೆಯುವುದಿಲ್ಲ. ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಪ್ರತಿ ವರ್ಷ ಇಲ್ಲಿನ ಸಪ್ತ ಕೆರೆಗಳಲ್ಲೂ ತೀರ್ಥಸ್ನಾನ ಮಾಡಿ ಪುಣ್ಯ ಗಳಿಸುತ್ತಿದ್ದ ಭಕ್ತರಿಗೆ ಈ ಬಾರಿ ಪ್ರವೇಶ ನಿರಾಕರಿಸಲಾಗಿದೆ.
ಇನ್ನುಳಿದಂತೆ ನರಹರಿ ಪವರ್ತ ದೇವಸ್ಥಾನದಲ್ಲೂ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ನಾಳೆ ಯಾವುದೇ ದೇವಸ್ಥಾನಗಳಲ್ಲೂ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ಕೊರೋನಾ ದಿಂದ ಹಿನ್ನಲೆಯಲ್ಲಿ ಸರ್ಕಾರ ಮತ್ತು ಮುಜರಾಯಿ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಜನರು ಸೇರುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಆಟಿ ಅಮಾವಾಸ್ಯೆ ಮಾತ್ರವಲ್ಲದೆ ನಾಗರಪಂಚಮಿ ಉತ್ಸವಕ್ಕೂ ಕೊರೋನಾ ಬ್ರೇಕ್ ಹಾಕಿದೆ. ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಾಗರ ಪಂಚಮಿ ಉತ್ಸವಕ್ಕೆ ತಡೆ ನೀಡಲಾಗಿದೆ.
ಇದನ್ನೂ ಓದಿ : ಕೇವಲ ಒಂದು ಎಸ್ಎಂಎಸ್ ಗೆ ಸ್ಪಂದಿಸಿ ಮಾನವೀಯತೆ ಮೆರೆದ ಚಾಮರಾಜನಗರ ಎಸ್ಪಿ
ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ ಹೇರಲಾಗಿದೆ. ಜುಲೈ 25 ರ ಶನಿವಾರ ನಾಗರಪಂಚಮಿ ದಿನ ಭಕ್ತರ ಪ್ರವೇಶ ಸಂಪೂರ್ಣ ಬಂದ್ ಆಗಲಿದೆ. ಪ್ರತೀ ವರ್ಷ ನಾಗರಪಂಚಮಿ ಹಿನ್ನೆಲೆ ಲಕ್ಷಾಂತರ ಭಕ್ತರಿಂದ ಪೂಜೆ ಸಲ್ಲಿಕೆಯಾಗುತ್ತಿತ್ತು. ಆದರೆ, ಈಬಾರಿ ನಾಗರ ಪಂಚಮಿಯ ದಿನ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ