• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮೈಸೂರಿನಲ್ಲಿ ಹಬ್ಬದ ದಿನವು ಸಿಗಲಿಲ್ಲ ಪಟಾಕಿ; ಹಸಿರು ಪಟಾಕಿ ಗೊಂದಲದಲ್ಲೇ ಮುಗಿದ ದೀಪಾವಳಿ

ಮೈಸೂರಿನಲ್ಲಿ ಹಬ್ಬದ ದಿನವು ಸಿಗಲಿಲ್ಲ ಪಟಾಕಿ; ಹಸಿರು ಪಟಾಕಿ ಗೊಂದಲದಲ್ಲೇ ಮುಗಿದ ದೀಪಾವಳಿ

ಮೈಸೂರಿನ ಜೆಕೆ ಮೈದಾನದಲ್ಲಿ ಮುಚ್ಚಿಸಲಾಗಿರುವ ಪಟಾಕಿ ಅಂಗಡಿಗಳು.

ಮೈಸೂರಿನ ಜೆಕೆ ಮೈದಾನದಲ್ಲಿ ಮುಚ್ಚಿಸಲಾಗಿರುವ ಪಟಾಕಿ ಅಂಗಡಿಗಳು.

ಲಕ್ಷಾಂತರ ರೂ. ಬಂಡವಾಳ ಹಾಕಿದ್ದ ಪಟಾಕಿ ವ್ಯಾಪಾರಸ್ಥರು ಇದೊಂದು ವರ್ಷ ಪಟಾಕಿ ಮಾರಾಟಕ್ಕೆ ಅವಕಾಶ ಕೊಡಿ. ಮುಂದಿನ ವರ್ಷದಿಂದ ಸಂಪೂರ್ಣ ಹಸಿರು ಪಟಾಕಿ ಮಾರುತ್ತೇವೆ ಎಂದು ಮನವಿ ಮಾಡಿಕೊಂಡರು. ಆದ್ರೂ ಪೊಲೀಸ್‌ ಇಲಾಖೆ ಹಾಗೂ ವಾಯು ಮಾಲಿನ್ಯ ನಿಯಂತ್ರ ಮಂಡಳಿ ಅಧಿಕಾರಿಗಳು ವ್ಯಾಪಾರಸ್ಥರ ಮನವಿ ಪುರಸ್ಕರಿಸದೆ ಅಂಗಡಿಗಳನ್ನು ಮುಚ್ಚಿಸಿದರು.

ಮುಂದೆ ಓದಿ ...
  • Share this:

ಮೈಸೂರು; ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಮಾರಾಟದ ಬಗ್ಗೆ ಇದ್ದ ಗೊಂದಲ ಮೈಸೂರಿನಲ್ಲೂ ಮುಂದುವರೆದಿತ್ತು. ಹಬ್ಬದ ದಿನವು ಪಟಾಕಿ ಮಾರಾಟಗಾರರು ಪಟಾಕಿ ಮಾರಬೇಕಾ, ಬೇಡ್ವಾ ಅನ್ನೋ ಗೊಂದಲದಲ್ಲಿ ಇರುವಾಗಲೇ ಅಧಿಕೃತ ಪಟಾಕಿ ಮಾರಾಟದ ಸ್ಥಳಕ್ಕೆ ದಿಢೀರ್ ಭೇಟಿ ಕೊಟ್ಟ ಅಧಿಕಾರಿಗಳು ಪಟಾಕಿ ಮಾರಾಟಕ್ಕೆ ಅವಕಾಶ ನಿರಾಕರಣೆ ಮಾಡಿದರು. ಪೊಲೀಸರು ವಾಯು ನಿಯಂತ್ರಣ ಮಂಡಳಿ ಅಧಿಕಾರಿಗಳ ಭೇಟಿಯಿಂದ ವರ್ಷದಲ್ಲಿ ಒಮ್ಮೆ ವ್ಯಾಪಾರಕ್ಕೆ ಬಂದಿದ್ದ ಪಟಾಕಿ ವ್ಯಾಪಾರಸ್ಥರಲ್ಲಿ ನಿರಾಸೆ ಉಂಟಾಯಿತು.


ಮೈಸೂರಿನ ಜೆ.ಕೆ.ಮೈದಾನದಲ್ಲಿ ಇಂದು ಪಟಾಕಿ ಮಾರಾಟದ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಸರ್ಕಾರ ಹಸಿರು ಪಟಾಕಿ ಮಾರಾಟ ಮಾಡಿ ಅಂತ ಆದೇಶ ನೀಡಿರುವ ಹಿನ್ನೆಯಲ್ಲಿ ಮೈಸೂರಿನಲ್ಲೂ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಆದೇಶ ಉಲ್ಲಂಘಿಸಿದ ಹಲವು ಪಟಾಕಿ ಅಂಗಡಿ ವ್ಯಾಪಾರಸ್ಥರು ಹಸಿರು ಪಟಾಕಿ ಅಲ್ಲದ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಎಲ್ಲ ಅಂಗಡಿಗಳನ್ನು ಪರಿಶೀಲನೆ ಮಾಡಿದರು. ಪಟಾಕಿ ಬಾಕ್ಸ್‌ಗಳ ಮೇಲೆ ಹಸಿರು ಪಟಾಕಿ ಲೋಗೋ ಹಾಗೂ ಲೈಸನ್ಸ್ ನಂಬರ್ ಪರಿಶೀಲಿಸಿ. ಹಸಿರು ಪಟಾಕಿ ಅಲ್ಲದ ಪಟಾಕಿಗಳನ್ನು ಮಾರಾಟ ಮಾಡದಂತೆ ಸೂಚಿಸಿದರು.


ಇದನ್ನು ಓದಿ: ದೀಪಾವಳಿ ಹಬ್ಬ ಬಂದರೂ ಸಾರಿಗೆ ಇಲಾಖೆ ಸಿಬ್ಬಂದಿಗಿಲ್ಲ ಸಂಬಳ; ಜವಾನನಿಂದ ಎಂಡಿ ವರೆಗೂ ವೇತನವಿಲ್ಲ!


ಇನ್ನು ಈ ಬಗ್ಗೆ ಮೊದಲೇ ಸುತ್ತೋಲೆ ಹೊರಡಿಸಿದ್ದ ಮೈಸೂರು ನಗರ ಪೊಲೀಸರು ಪಾಲಿಕೆ ಅಧಿಕಾರಿಗಳು ಹಾಗೂ ಪಟಾಕಿ ವ್ಯಾಪಾರಸ್ಥರಿಗೆ ಸೂಚನೆ ನೀಡಿತ್ತು. ಇಂದು ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಭೇಟಿಯ ನಂತರ ಅವರಿಂದಲೇ ಮಾಹಿತಿ ಪಡೆದು. ಯಾವ ಅಂಗಡಿಯಲ್ಲಿ ಹಸಿರು ಪಟಾಕಿ ಇಲ್ಲವೋ ಅಂತಹ ಅಂಗಡಿಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಖಡಕ್ ಆದೇಶ ನೀಡಿ, ಜೆ.ಕೆ.ಮೈದಾನದಲ್ಲಿದ್ದ ಸಾಮಾನ್ಯ ಪಟಾಕಿ ಅಂಗಡಿಗಳನ್ನು ಮುಚ್ಚಿಸಿದರು. ಅಲ್ಲದೇ ಕೇವಲ ಹಸಿರು ಪಟಾಕಿ ಮಾರಾಟ ಮಾಡಬೇಕು ಎಂದು ಸೂಚಿಸಿದರು.


ಇವೆಲ್ಲದರ ನಡುವೆ ಲಕ್ಷಾಂತರ ರೂ. ಬಂಡವಾಳ ಹಾಕಿದ್ದ ಪಟಾಕಿ ವ್ಯಾಪಾರಸ್ಥರು ಇದೊಂದು ವರ್ಷ ಪಟಾಕಿ ಮಾರಾಟಕ್ಕೆ ಅವಕಾಶ ಕೊಡಿ. ಮುಂದಿನ ವರ್ಷದಿಂದ ಸಂಪೂರ್ಣ ಹಸಿರು ಪಟಾಕಿ ಮಾರುತ್ತೇವೆ ಎಂದು ಮನವಿ ಮಾಡಿಕೊಂಡರು. ಆದ್ರೂ ಪೊಲೀಸ್‌ ಇಲಾಖೆ ಹಾಗೂ ವಾಯು ಮಾಲಿನ್ಯ ನಿಯಂತ್ರ ಮಂಡಳಿ ಅಧಿಕಾರಿಗಳು ವ್ಯಾಪಾರಸ್ಥರ ಮನವಿ ಪುರಸ್ಕರಿಸದೆ ಅಂಗಡಿಗಳನ್ನು ಮುಚ್ಚಿಸಿದರು. ಅಂತಿಮವಾಗಿ ಹಬ್ಬದ ದಿನವು ಮೈಸೂರಿನಲ್ಲಿ ಪಟಾಕಿ ಮಾರಾಟವು ಇಲ್ಲ ಖರೀದಿಯೂ ಇಲ್ಲದಂತಾಯಿತು.

Published by:HR Ramesh
First published: