• Home
  • »
  • News
  • »
  • district
  • »
  • Mysuru Dasara 2020: ಅರಮನೆ ಒಳಗೆ ದರ್ಬಾರ್‌ಗೆ ಸಿದ್ದತೆ : ಹೊರಗೆ ಗಜಪಡೆಯ ತಾಲೀಮು

Mysuru Dasara 2020: ಅರಮನೆ ಒಳಗೆ ದರ್ಬಾರ್‌ಗೆ ಸಿದ್ದತೆ : ಹೊರಗೆ ಗಜಪಡೆಯ ತಾಲೀಮು

ಗಜಪಡೆಯ ತಾಲೀಮು

ಗಜಪಡೆಯ ತಾಲೀಮು

ಅಭಿಮನ್ಯು ನೇತೃತ್ವದ 5 ಆನೆಗಳಿಗೆ ಜಂಬೂ ಸವಾರಿ ತಾಲೀಮು ಆರಂಭಿಸಿದ್ದು‌ ನಿನ್ನೆಯಿಂದ ಮರಳು ಮೂಟೆಗಳನ್ನ ಹೊರಿಸಿ ತಾಲೀಮು ಶುರು ಮಾಡಿದ್ದು ಇಂದು ವಿಕ್ರಮ ಆನೆಗೆ 400 ಕೆ.ಜಿ ತೂಕವನ್ನ ಹೊರಿಸಿ ತಾಲೀಮು ಮಾಡಿಸಲಾಗಿದೆ

  • Share this:

ಮೈಸೂರು(ಅಕ್ಟೋಬರ್​. 09): ದಿನೇ ದಿನೇ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ಕಳೆಗಟ್ಟುತ್ತಿದ್ದು, ದಸರಾಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಅರಮನೆ ಆಗಮಿಸಿರುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ನಿನ್ನೆಯಿಂದ ಮರಳು ಮೂಟೆಯ ತಾಲೀಮು ಆರಂಭಿಸಿದ್ದು, ಅರಮನೆ ಆವರಣದಲ್ಲಿ ಗಜಪಡೆಗಳು ಇಂದು ಸಹ ಗಾಂಭೀರ್ಯದ ಹೆಜ್ಜೆ ಹಾಕಿವೆ. ಇತ್ತ ಅರಮನೆಯಲ್ಲಿ ಸಾಂಪ್ರದಾಯಿಕ ದಸರಾ ಕಾರ್ಯಕ್ರಮದ ಪಟ್ಟಿಯೂ ಬಿಡುಗಡೆಯಾಗಿದ್ದು, ಅರಮನೆಯಲ್ಲು ಈ ಬಾರಿ ಸರಳ ದಸರಾಗೆ ಆದ್ಯತೆ ನೀಡಲಾಗಿದೆ. ವಿಶ್ವ ವಿಖ್ಯಾತ ಮೈಸೂರು ದಸರಾಗೆ ಕೇವಲ 8 ದಿನಗಳಷ್ಟೇ ಬಾಕಿ ಉಳಿದಿದೆ. ಈ ಭಾರಿ ಸರಳವಾಗಿ ಹಾಗೂ ಸಾಂಪ್ರದಾಯಕವಾಗಿ ದಸರಾ ಆಚರಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದ್ದು, ಕೇವಲ 5 ಆನೆಗಳನ್ನ ಬಳಸಿಕೊಂಡು ದಸರಾ ಜಂಬೂ ಸವಾರಿ ನಡೆಸಲು‌ ಈಗಾಗಲೇ ನಿರ್ಧರಿಸಲಾಗಿದೆ. ಈ ಹಿನ್ನೆಯಲ್ಲಿ ಅಭಿಮನ್ಯು ನೇತೃತ್ವದ 5 ಆನೆಗಳಿಗೆ ಜಂಬೂ ಸವಾರಿ ತಾಲೀಮು ಆರಂಭಿಸಿದ್ದು‌ ನಿನ್ನೆಯಿಂದ ಮರಳು ಮೂಟೆಗಳನ್ನ ಹೊರಿಸಿ ತಾಲೀಮು ಶುರು ಮಾಡಿದ್ದು ಇಂದು ವಿಕ್ರಮ ಆನೆಗೆ 400 ಕೆ.ಜಿ ತೂಕವನ್ನ ಹೊರಿಸಿ ತಾಲೀಮು ಮಾಡಿಸಲಾಗಿದೆ.


ಇನ್ನು ನಿನ್ನೆ ಅಭಿಮನ್ಯು ಇಂದು ವಿಕ್ರಮ ನಾಳೆ ಗೋಪಿ ಹೀಗೆ ರೋಟಿನ್‌ ಮೂಲಕ ದಿನ ಒಂದೊಂದು ಆನೆಗೆ ಮರಳು ಮೂಟೆ ಹೊರಿಸಿ ತಾಲೀಮು ಮಾಡಿಸಲಾಗುತ್ತಿದ್ದು, ಪ್ರತಿ ನಿತ್ಯ ಮರಳು ಮೂಟೆಯ ತೂಕವು ಸಹ ಹೆಚ್ಚಳ ಮಾಡಲಾಗುತ್ತೆ ಎನ್ನುವುದು ಆನೆ ವೈದ್ಯ ನಾಗರಾಜು ಅವರ ಅಭಿಪ್ರಾಯ.


ಕೊರೋನಾ ನಡುವೆ ಮೈಸೂರಿಗೆ ಕೋವಿಡ್ ತಾಂತ್ರಿಕಾ ಸಲಹಾ ಸಮಿತಿ ಭೇಟಿ ನೀಡಿದ್ದು. ದಸರಾ ಹೇಗೆ ನಡೆಸಬೇಕು, ಎಷ್ಟು ಮಂದಿ ಭಾಗಿಯಾಗಬೇಕು ಎನ್ನುವುದನ್ನು ಈ ಕಮಿಟಿ ನಿರ್ಧಾರ ಮಾಡಲಿದೆ. ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ ತಂಡ 24 ಗಂಟೆಯೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.


ಈ ಬಾರಿ ಕೊರೋನಾ ಕಾರಣದಿಂದ ಸರಳ ಹಾಗೂ ಸಾಂಪ್ರದಾಯಕವಾಗಿ ನಡೆಯುತ್ತಿರುವ ಮೈಸೂರು ದಸರಾಗೆ ಆರಂಭದಲ್ಲೇ ಸಾಕಷ್ಟು ಅಪಸ್ವರಗಳು ಕೇಳಿ ಬರುತ್ತಿವೆ. ಸರಳ ದಸರಾ ಹೆಸರಿನಲ್ಲಿ 15 ಕೋಟಿ ಬಿಡುಗಡೆ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ಷೇಪ ವ್ಯಕ್ತವಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಹೆಚ್ಚು ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಾಂತ್ರಿಕ ಸಲಹ ತಂಡವನ್ನ ಕಳುಹಿಸಿ ಸರಳ ದಸರಾ ಸಾಧಕ ಬಾದಕಗಳ ಬಗ್ಗೆ ವರದಿ ಕೇಳಿದೆ.


ಈ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ ಡಾ.ಸುದರ್ಶನ್ ನೇತೃತ್ವದ ಮೂವರ ತಂಡ ಜಿಲ್ಲಾಧಿಕಾರಿ ಕಛೇರಿ, ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ಭೇಟಿ ಕೊಟ್ಟಿತ್ತು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಟೆಕ್ನಿಕಲ್ ಟೀಂ ದಸರಾ ಉದ್ಘಾಟನೆಗೆ ವೇದಿಕೆ ಯಾವ ರೀತಿ ಇರಬೇಕು. ಎಷ್ಟು ಜನರು ಸೇರುತ್ತಾರೆ ಎಂಬುದರ ಬಗ್ಗೆ ಮಾಹಿತಿಯನ್ನ ಕಲೆ ಹಾಕಿತ್ತು. ನಂತರ ಅರಮನೆ ಆವರಣಕ್ಕೆ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಜಂಬೂ ಸವಾರಿಗೆ ಪುಷ್ಪಾರ್ಚಾನೆ ಮಾಡುವ ಸ್ಥಳವನ್ನ ಪರಿಶೀಲನೆ ನಡೆಸಿತ್ತು. ಈ ವೇಳೆ ಅರಮನೆ ಆಡಳಿತ ಮಂಡಳಿಯ ನಿರ್ದೇಶಕ ಸುಬ್ರಮಣ್ಯ ಟಿಕ್ನಿಕಲ್ ಟೀಂಗೆ ಮಾಹಿತಿ ನೀಡಿದರು.


ಇದನ್ನೂ ಓದಿ : Elephant: ತಾಯಿಯಿಂದ ಬೇರ್ಪಟ್ಟ ಕಾಡಾನೆ ಮರಿಗೆ ಸಕ್ರೆಬೈಲ್ ಬಿಡಾರದಲ್ಲಿ ಚಿಕಿತ್ಸೆ


ಕೊರೋನಾ ಅಟ್ಟಹಾಸದ ನಡುವೆಯೂ ದಸರಾ ಆಚರಣೆಗ ಮುಂದಾಗಿರುವ ಜಿಲ್ಲಾಡಳಿತಕ್ಕೆ ಪಕ್ಕದ ರಾಜ್ಯ ಕೇರಳದಲ್ಲಿ ನಡೆದ ಓಣಂ ಹಬ್ಬ ಒಂದು ಪಾಠವಾಗಿದೆ. ಕೊರೋನಾ ನಿಯಂತ್ರಣದಲ್ಲಿದ್ದ ಕೇರಳದಲ್ಲಿ ಓಣಂ ಹಬ್ಬದ ನಂತರ ಕೊರೋನಾ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಯಿತ್ತು. ಈ ಕಾರಣಕ್ಕೆ ಬಂದಿರುವ ಟೆಕ್ನಿಕಲ್ ಟೀಂ ಸದಸ್ಯರು ಕೂಡ ತಮ್ಮ ವರದಿಯಲ್ಲಿ ಓಣಂ ಹಬ್ಬವನ್ನ ಉಲ್ಲೇಖಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ದಸರಾ ಜಂಬೂ ಸವಾರಿಯ ದಿನ ಎಷ್ಟು ಜನರು ಇರಬೇಕು. ಹೆಚ್ಚು ಜನರು ಸೇರಿದರೆ ಮುಂದಾಗುವ ಅನಾಹುತದ ಬಗ್ಗೆ ಸರ್ಕಾರಕ್ಕೆ ನಾಳೆಯೆ ವರದಿ ಸಲ್ಲಿಸಲಿದೆ.


ಒಟ್ಟಾರೆ ಗಜಪಡೆಗೆ ಭಾರ ಹೊರುವ ತಾಲೀಮು ಶುರುವಾಗಿದ್ದು, ಆನೆಗಳು ಜಂಬೂಸವಾರಿಗೆ ಸಿದ್ದವಾದ್ರೆ ಅರಮನೆಯಲ್ಲಿ ಸಾಂಪ್ರದಾಯಿಕ ದಸರಾಗೆ ಸಿದ್ದತೆ‌‌ ನಡೆದಿದೆ.ಗೊಂದಲದ ನಡುವೆಯೇ ದಸರಾ ಸಿದ್ದತೆಗಳು ಜೋರಾಗಿದ್ದು, ಈ ಬಾರಿ ಅರಮನೆ ಒಳಗೆ ಮಾತ್ರ ಸಂಭ್ರಮ ಇರಲಿದೆ.

Published by:G Hareeshkumar
First published: