news18-kannada Updated:October 18, 2020, 11:59 PM IST
ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ
ಮೈಸೂರು(ಅಕ್ಟೋಬರ್. 18): ನಿನ್ನೆ ಸಾಂಪ್ರದಾಯಿಕ ಸರಳ ದಸರಾಕ್ಕೆ ಚಾಲನೆ ಸಿಕ್ಕಿದೆ. ಆದರೆ, ಇದೀಗ ನಂದಿ ಧ್ವಜ ಪೂಜೆ ನೆರವೇರದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸರಳ ದಸರಾ ಆಚರಣೆ ಹೆಸರಲ್ಲಿ ಸಂಪ್ರದಾಯವನ್ನೆ ಜಿಲ್ಲಾಡಳಿತ ಮರೆತಾ ಎನ್ನುವ ಚರ್ಚೆ ಇದೀಗ ಆರಂಭವಾಗಿದೆ. ನಂದಿ ಶಿವನ ವಾಹನ ನಂದಿ ಧ್ವಜ ವಿಜಯದ ಸಂಕೇತ ಇಂತಹ ನಂದಿ ಧ್ವಜ ಪೂಜೆಯನ್ನ ಅಗ್ರಪೂಜೆ ಎಂದೆ ಹೇಳಲಾಗುತ್ತೆ. ಯಾವುದೇ ಪೂಜೆಯ ಮುನ್ನ ನಂದಿಗೆ ಪೂಜೆ ಸಲ್ಲಿಸಿದ್ರೆ ಶುಭವಾಗುತ್ತೆ ಎಂಬ ನಂಬಿಕೆ ಸಹ ಇದೆ. ಇದೇ ನಂಬಿಕೆಯಿಂದ ಸಾಕಷ್ಟು ವರ್ಷಗಳಿಂದ ದಸರಾ ಸಂಧರ್ಭದಲ್ಲಿ ನಂದಿ ಪೂಜೆಗೂ ದೊಡ್ಡ ಮಹತ್ವ ಇದೆ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಮಾಡುವ ಮುನ್ನ ನಂದಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ. ಜೊತೆಗೆ ಜಂಬೂ ಸವಾರಿ ದಿನ ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಾಲಯದ ಬಳಿ ನಾಡಿನ ಮುಖ್ಯಮಂತ್ರಿ ನಂದಿ ಧ್ವಜಕ್ಕೆ ಪೂಜೆ ಬಳಿಕವಷ್ಟೆ ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗುತ್ತದೆ.
ಆದರೆ, ಈ ಬಾರಿ ಜಿಲ್ಲಾಡಳಿತ ದಸರಾ ಉದ್ಘಾಟನೆ ಸಂದರ್ಭದಲ್ಲಿ ನಂದಿ ಧ್ವಜಕ್ಕು ಪೂಜೆ ಸಲ್ಲಿಸಲು ನಂದಿ ಧ್ವಜ ತಂಡವನ್ನು ಆಹ್ವಾನ ಮಾಡಿಲ್ಲ. ಜೊತೆಗೆ ಜಂಬೂ ಸವಾರಿಗು ಈ ವರೆಗು ಯಾವುದೇ ಆಹ್ವಾನ ಮಾಡಿಲ್ಲ. ಇದರಿಂದ ಈ ಬಾರಿ ಸರಳ ದಸರಾ ವಿಚಾರ ಇಟ್ಟುಕೊಂಡು ಸಂಪ್ರದಾಯವನ್ನೆ ಮುರಿದರ ಎಂಬ ಪ್ರಶ್ನೆ ಎದುರಾಗಿದೆ.
ಇನ್ನು ನಂದಿ ಧ್ವಜವನ್ನು ಮೈಸೂರಿನ ಗೌರಿಶಂಕರ ನಗರದ ನಿವಾಸಿಯಾಗಿರುವ ಮಹಾದೇವಪ್ಪ ಕುಟುಂಬದವರು ಮಾಡಿಕೊಂಡು ಬರುತ್ತಿದ್ದಾರೆ. ಇದನ್ನ ಈ ಕುಟುಂಬದವರು ಸಾಕಷ್ಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ನವರಾತ್ರಿ ಸಂಧರ್ಭದಲ್ಲಿ ಕಟ್ಟುನಿಟ್ಟಿನ ವ್ರತ ನಡೆಸಿ ದಿನಕ್ಕೆ ಎರಡು ಬಾರಿ ಪೂಜೆ ಸಹ ಸಲ್ಲಿಸಲಾಗುತ್ತೆ. ಆದರೆ, ಜಿಲ್ಲಾಡಳಿತ ಈ ಬಾರಿ ನಮಗೆ ಆಹ್ವಾನ ನೀಡಿಲ್ಲ ಅಂತಾರೆ.
ಇದನ್ನೂ ಓದಿ :
ದೇವೇಗೌಡರ ಕುಟುಂಬವನ್ನು ಹಣ ಕೊಟ್ಟು ಕೊಂಡುಕೊಳ್ಳಲು ಆಗುವುದಿಲ್ಲ: ಹೆಚ್ ಡಿ ಕುಮಾರಸ್ವಾಮಿ
ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ಸಹ ಪ್ರಾರಂಭವಾಗಿದೆ. ಆಚರಣೆಗಳು ಮಾಡುವಾಗ ಸರಿಯಾಗಿ ಮಾಡಬೇಕು. ಮಾಡಿಕೊಂಡು ಬರುತ್ತಿರುವ ಸಂಪ್ರದಾಯವನ್ನ ನಿಲ್ಲಿಸಬಾರದು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಒಟ್ಟಾರೆ, ಸಂಪ್ರದಾಯವನ್ನು ನಿಲ್ಲಿಸಬಾರದು ಇದಕ್ಕೆ ಸಾಂಪ್ರದಾಯಿಕ ದಸರಾ ಮಾಡುತ್ತಿದ್ದೇವೆ ಎನ್ನುವ ಸರ್ಕಾರ ಇದು ಕೂಡ ಕೂಡ ಸಂಪ್ರದಾಯ ಅಲ್ಲವ ಎಂಬ ಮಾತುಗಳು ಸದ್ಯ ಕೇಳಿ ಬರುತ್ತಿದೆ.
Published by:
G Hareeshkumar
First published:
October 18, 2020, 11:08 PM IST