Mysuru Dasara 2020: ಸೆ.18ಕ್ಕೆ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಪ್ರಕ್ರಿಯೆಗೆ ಚಾಲನೆ

ನಾಳೆ ಬೆಳ್ಳಿಗ್ಗೆ 8.30 ರಿಂದ 12.30ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣ ಕಾರ್ಯ ನಡೆಯಲಿದ್ದು, ಮುಂಜಾನೆಯಿಂದಲೇ ಧಾರ್ಮಿಕ ವಿಧಿವಿದಾನ ಕಾರ್ಯಕ್ರಮಗಳು ಸಹ ನಡೆಯಲಿವೆ.‌ ಇನ್ನು ಕೊರೋನಾ ಹಿನ್ನೆಲೆಯಲ್ಲಿ ಕೆಲವೇ ಸಿಬಂದಿಗಳು ಮಾತ್ರ ಭಾಗಿಯಾಗುತ್ತಿದ್ದು, ಅರಮನೆ ಪಂಚಾಂಗದಂತೆ ಮುಹೂರ್ತ ನಿಗಧಿಯಾಗಿದೆ.

ಮೈಸೂರಿನ ರತ್ನ ಖಚಿತ ಸಿಂಹಾಸನ.

ಮೈಸೂರಿನ ರತ್ನ ಖಚಿತ ಸಿಂಹಾಸನ.

  • Share this:
ಮೈಸೂರು (ಸೆಪ್ಟೆಂಬರ್‌ 16); ವಿಶ್ವವಿಖ್ಯಾತ ನಾಡಹಬ್ಬ ದಸರಾ ಸರಳವಾದ್ರು ಸಂಭ್ರಮದಿಂದ‌ ಮಾಡಲು ಸರ್ಕಾರ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಇತ್ತ ರಾಜವಂಶಸ್ಥರು ಸಹ ತಮ್ಮ ಖಾಸಗಿ ದರ್ಬಾರ್ ಸಿದ್ದತೆಯನ್ನು ಭರ್ಜರಿಯಾಗಿಯೇ ಮಾಡಿಕೊಳ್ಳುತ್ತಿದ್ದಾರೆ. ಸೆ.18 ರಂದು ದರ್ಬಾರ್ ಹಾಲ್‌ನಲ್ಲಿ ಸಿಂಹಾಸನ ಜೋಡಣೆ ಕಾರ್ಯ ಇದ್ದು, ಕೊರೋನಾ ವೈರಸ್‌ ಮುನ್ನೆಚ್ಚರಿಕಾ ಕ್ರಮವಾಗಿ ಈ‌ ಬಾರಿಯ ಖಾಸಗಿ ದರ್ಬಾರ್‌ನಲ್ಲಿ ಕೇವಲ ರಾಜಪರಿವಾರಕ್ಕೆ ಮಾತ್ರ ಎಂಟ್ರಿ ಸಿಗಲಿದೆ. ಖಾಸಗಿ ದರ್ಬಾರ್‌ಗೆ ಅರಮನೆ ಆಡಳಿತ ಕೂಡ ಸಕಲ ರೀತಿಯ ಸಹಕಾರ ನೀಡುತ್ತಿದ್ದು, ಈ‌ ಮೂಲಕ ದಸರೆಯ ಕಳೆ ಮೈಸೂರಿನಲ್ಲಿ ಶುರುವಾಗ್ತಿದೆ. ವಿಶ್ವವಿಖ್ಯಾತ ನಾಡಹಬ್ಬ ದಸರಾ ಎಷ್ಟು ಕಲರ್‌ಫುಲೋ ಅದೇ ರೀತಿ ಖಾಸಗಿ ದರ್ಬಾರ್ ಕೂಡ ಕಣ್ಣು ಪೂರೈಸೂವಷ್ಟು ಸಂಭ್ರಮದ ಕ್ಷಣ.‌ ಈ ಕ್ಷಣಕ್ಕೆ ಸಾಕ್ಷಿಯಾಗೋಕೆ ಅರಮನೆ ಅಂಗಳ ಸಿದ್ದವಾಗುತ್ತಿದ್ದು, ಸೆ.18ರಂದು ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಸಿಂಹಾಸನದ ಜೋಡಣೆ ಕಾರ್ಯ ನಡೆಯಲಿದೆ.

ಹೌದು, ನಾಳೆ ಬೆಳ್ಳಿಗ್ಗೆ 8.30 ರಿಂದ 12.30ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣ ಕಾರ್ಯ ನಡೆಯಲಿದ್ದು, ಮುಂಜಾನೆಯಿಂದಲೇ ಧಾರ್ಮಿಕ ವಿಧಿವಿದಾನ ಕಾರ್ಯಕ್ರಮಗಳು ಸಹ ನಡೆಯಲಿವೆ.‌ ಇನ್ನು ಕೊರೋನಾ ಹಿನ್ನೆಲೆಯಲ್ಲಿ ಕೆಲವೇ ಸಿಬಂದಿಗಳು ಮಾತ್ರ ಭಾಗಿಯಾಗುತ್ತಿದ್ದು, ಅರಮನೆ ಪಂಚಾಂಗದಂತೆ ಮುಹೂರ್ತ ನಿಗಧಿಯಾಗಿದೆ. ಅಲ್ಲದೆ ರಾಜವಂಶಸ್ಥರಿಗೆ ನಾವು ಎಲ್ಲ‌ ರೀತಿಯ ಸಹಕಾರ ನೀಡುವುದಾಗಿ ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಇನ್ನು ಅರಮನೆ ಆಡಳಿತ ಮಂಡಳಿಗೆ ಖಾಸಗಿ ದರ್ಬಾರ್‌ನ ಇಂವೆಂಟ್ಸ್ ಆಫ್ ಚಾಟ್' ಅಂದ್ರೆ ಕಾರ್ಯಕ್ರಮದ ಪಟ್ಟಿ ರವಾನಿಸುತ್ತಾರೆ. ಈ ಪಟ್ಟಿಯ ಅನ್ವಯ ಲಗ್ನ ಕಟ್ಟಿಸುವ ದಿನಾಂಕ' ಸಿಂಹಾಸನದ ಸಮಯದ ವೇಳೆ‌ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿಷೇಧ ಮಾಡಲಾಗುತ್ತೆ. ಈ ವೇಳೆ ಈ ಎಲ್ಲ ಕಾರ್ಯಕ್ರಮದ ಪಟ್ಟಿಯನ್ನ ಸರ್ಕಾರಕ್ಕೆ ಅರಮನೆ ಆಡಳಿತ ಮಂಡಳಿ ಕಳುಹಿಸಿ ಅನುಮತಿ ಪಡೆಯಲಿದೆ.

ಇದನ್ನೂ ಓದಿ : Sanjjanaa Galrani: ಸಂಜನಾಗೆ ಸೆ‌.18ರ ವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿದ ಕೋರ್ಟ್‌; ನಟಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌

ಬಳಿಕ ರಾಜವಂಶಸ್ಥರ ಖಾಸಗಿ ದರ್ಬಾರ್‌ನ ಯಾವ ಸಮಸ್ಯೆ ಬಾರದಂತೆ ಅವರಿಗೆ ಸಹಕಾರ ನೀಡುವ ಜವಬ್ದಾರಿ ಅರಮನೆ ಆಡಳಿತ ಮಂಡಳಿ ಜವಬ್ದಾರಿಯಾಗಿದೆ. ಇದನ್ನ ನಾವು ಸರಿಯಾಗಿ ವ್ಯವಸ್ಥೆ ಮಾಡಿಕೊಡ್ತಿವಿ ಅಂತ ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಭರವಸೆ ನೀಡಿದ್ದಾರೆ.

ಒಟ್ಟಾರೆ, ಕೊರೋನಾದಿಂದ ದಸರಾ ಸರಳವಾಗ್ತಿದ್ರು. ರಾಜವಂಶಸ್ಥರು ಮಾತ್ರ ಖಾಸಗಿ ದರ್ಬಾರ್‌ಗೆ ಯಾವುದೇ ಕೊರತೆ ಬಾರದಂತೆ ತಮ್ಮ ಪೂಜಾ ವಿದಿವಿಧಾನ ಮುಂದುವರೆಸಲಿದ್ದಾರೆ. ಈ ಮೂಲಕ ದಸರೆಯ ಮುನ್ನ ಖಾಸಗಿ ದರ್ಬಾರ್‌ ಸಿದ್ದತೆ ಶುರು ಆಗ್ತಿರೋದು ದಸರೆಗೆ ಒಂದು ರೀತಿಯ ಕಳೆ ಬಂದಂತಾಗಿರೋದಂತು ಸುಳ್ಳಲ್ಲ.
Published by:MAshok Kumar
First published: