ಮೈಸೂರು: ಅರಮನೆ ನಗರಿ ಮೈಸೂರಿನ ಜನ ಶಾಂತಿಪ್ರಿಯರು ಹಾಗೂ ಸಹಬಾಳ್ವೆಗೆ ಹೆಸರಾದವರು ಎಂಬ ಪ್ರತಿತಿ ಇದೆ. ಆದರೆ ಮಾರ್ಚ್ 22ರಂದು ಪೊಲೀಸ್ ತಪಾಸಣೆ ವೇಳೆ ಬೈಕ್ ಸವಾರನೋಬ್ಬ ಸಾವನ್ನಪ್ಪಿದ ಘಟನೆಯಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮೈಸೂರಿನ ಪೊಲೀಸರು ಹಾಗೂ ಸಾರ್ವಜನಿಕರ ನಡುವಿನ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಗ್ಗೆಯೂ ಅನುಮಾನಗಳು ಮೂಡಿದ್ದು, ಪೊಲೀಸರನ್ನು ಜನರು ಆಡಿಕೊಳ್ಳುವ ಸ್ಥಿತಿಗೆ ಬಂದಿದೆ. ಗಲಾಟೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ 13 ಮಂದಿಯನ್ನು ಬಂಧಿಸಿರುವ ಪೊಲೀಸರ ನಡೆಯನ್ನು ಪ್ರಶ್ನಿಸಿ, ಜೊತೆಗೆ ಅಪಘಾತದ ಸಂರ್ಭದಲ್ಲಿ ಜನರ ಆಕ್ರೋಶಕ್ಕೆ ಜಖಂ ಆದ ಪೊಲೀಸ್ ಗರುಡಾ ವಾಹನದ ಇನ್ಶುರೆನ್ಸ್ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಗಲಾಟೆ ವೇಳೆ ಜಖಂಗೊಂಡ ಪೊಲೀಸರ ಗರುಡ ವಾಹನಕ್ಕೆ ಇನ್ಶುರೆನ್ಸ್ ಕಟ್ಟಿಲ್ಲ. ಇವರೆಂತ ಪೊಲೀಸರು. ಇವರಿಗೆ ಫೈನ್ ಯಾರು ಹಾಕ್ತಾರೆ ಅಂತ ಗೇಲಿ ಜನರು ಸಾಮಾಜಿಕ ಜಾಲತಾಣದಲ್ಲಿ ಗೇಲಿ ಮಾಡ್ತಿದ್ದಾರೆ. ಈ ಘಟನೆ ಸಂಬಂಧ ಸ್ವತ: ಮೈಸೂರು ನಗರ ಪೊಲೀಸ್ ಇಲಾಖೆಯೇ ಸ್ಪಷ್ಟನೆ ನೀಡಿದೆ.
ಹೌದು, ಮೈಸೂರಿನಲ್ಲಿ ವಾಹನ ತಪಾಸಣೆ ವೇಳೆ ಬೈಕ್ ಸವಾರ ಸಾವು ಪ್ರಕರಣ ನಂತರ, ಅಂದು ಪೊಲೀಸರು ಹಾಗೂ ಪಬ್ಲಿಕ್ ನಡುವೆ ಗಲಾಟೆ ಆದಾಗ, ಒಂದು ಗರುಡಾ ವಾಹನ ಸಂಪೂರ್ಣ ಜಖಂ ಆಗಿತ್ತು. ಅಂದು ಜಖಂ ಆಗಿದ್ದ ಸರ್ಕಾರಿ ಪೊಲೀಸ್ ವಾಹನಕ್ಕೆ ಇನ್ಶ್ಯುರೆನ್ಸ್ ಇಲ್ಲ ಅನ್ನೋ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ಜಖಂಗೊಂಡ ಗರುಡ ವಾಹನಕ್ಕೆ ಇನ್ಶುರೆನ್ಸ್ ಇರಲಿಲ್ಲವೇ, 2018ರಿಂದಲೂ ಇನ್ಶುರೆನ್ಸ್ ಇಲ್ಲದೆಯೇ ಮೈಸೂರಿನ ಗರುಡ ವಾಹನದ ಪೊಲೀಸರು ವಾಹನ ಚಲಾಯಿಸಿದ್ರಾ ಅನ್ನೋ ಪ್ರಶ್ನೆಗಳನ್ನು ಹಾಕುತ್ತಿರುವ ಮೈಸೂರಿನ ನಾಗರಿಕರು, ಕೇಂದ್ರ ಸರ್ಕಾರದ ಅಧಿಕೃತ ಸಾರಿಗೆ ಇಲಾಖೆಯ ಮೊಬೈಲ್ ಆ್ಯಪ್ ಪರಿವಾಹನ್‌ನಲ್ಲಿ ವಾಹನದ ಮಾಹಿತಿ ಬಯಲು ಮಾಡಿ ಇಲಾಖೆಯನ್ನು ಗೇಲಿ ಮಾಡ್ತಿದ್ದಾರೆ.
ಪರಿವಾಹನ್ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್ ಪ್ರಕಾರ ಗರುಡ ವಾಹನದ ಇನ್ಶುರೆನ್ಸ್, ಜನವರಿ 01, 2018ಕ್ಕೆ ಅಂತ್ಯವಾಗಿದೆ. KA-55-G-0430 ಸಂಖ್ಯೆಯ ಮಾರುತಿ ಎರಿಟಿಗಾ ವಾಹನದ ಇನ್ಶುರೆನ್ಸ್ ಅನ್ನ ಪೊಲೀಸ್ ಇಲಾಖೆ 2018ರಿಂದಲೂ ಕಟ್ಟಿಲ್ಲ. ಗಲಾಟೆಯಲ್ಲಿ ಸಂಪೂರ್ಣ ನಜ್ಜುಗುಜ್ಜಾಗಿರುವ ಗರುಡ ವಾಹನವನ್ನು ಈಗ ಹೇಗೆ ರೀಪೇರಿ ಮಾಡಿಸ್ತಾರೆ ಅಂತ ಟ್ರೋಲ್ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸರನ್ನು ಮುಜುಗರಕ್ಕೀಡು ಮಾಡುತ್ತಿರುವ ವಾಹನದ ಪೋಟೋಗಳು ಹಾಗೂ ಪರಿವಾಹನ್ ವೆಬ್‌ಸೈಟ್ ಮಾಹಿತಿಯಿಂದ ಪೊಲೀಸ್ ಇಲಾಖೆಯೇ ಇದೀಗ ಸಾರ್ವಜನಿಕರ ಗೇಲಿಗೆ ಸಿಲುಕಿದೆ.
ಇದನ್ನು ಓದಿ: 224 ಶಾಸಕರ ಬಗ್ಗೆ ತನಿಖೆಯಾಗಲಿ ಎಂಬ ಹೇಳಿಕೆ ನೀಡಿ ಇದೀಗ ವಿಷಾದ ವ್ಯಕ್ತಪಡಿಸಿದ ಸಚಿವ ಕೆ. ಸುಧಾಕರ್!
ನಿಯಮದ ಪ್ರಕಾರ KGID ಇಲಾಖೆ ಅಡಿಯಲ್ಲಿ ಇನ್ಶುರೆನ್ಸ್ ಕಟ್ಟಬೇಕಿರುವ ಸರ್ಕಾರಿ ವಾಹನಗಳು, ಪ್ರತಿ ವಾಹನದ ಮಾಹಿತಿಯನ್ನ KGID ಎಂದರೆ ಕರ್ನಾಟಕ ಗೌರ್ನಮೆಂಟ್ ಇನ್ಶುರೆನ್ಸ್ ಡಿಪಾರ್ಟ್‌ಮೆಂಟ್ ದಾಖಲು ಮಾಡಿರುತ್ತಾರೆ. ಆದರೆ ಪರಿವಾಹನ್ ಆ್ಯಪ್‌ನಲ್ಲಿ ಇನ್ಶುರೆನ್ಸ್ ಕಟ್ಟಿಲ್ಲ ಎಂದು ಬಿತ್ತರವಾಗಿರೋದು ಇಲಾಖೆಗೆ ಮುಜುಗರ ತಂದಿತ್ತು. ಈ ವಿಚಾರ ಟ್ರೋಲ್ ಆಗುತ್ತಿದ್ದಂತೆ ಸ್ವತಃ ಮೈಸೂರು ನಗರ ಪೊಲೀಸ್ ಇಲಾಖೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ಗಲಾಟೆಯಲ್ಲಿ ನಜ್ಜುಗುಜ್ಜಾದ ಗರುಡ ವಾಹನಕ್ಕೆ ಇನ್ಶುರೆನ್ಸ್ ಇದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ KGID ಇಲಾಖೆ ಮೂಲಕ ಇನ್ಶುರೆನ್ಸ್ ಅನ್ನ ಕಳೆದ ಡಿಸೆಂಬರ್‌ನಲ್ಲೆ ಕಟ್ಟಿದ್ದು, ಅದರ ಅವಧಿ 2021ರ ಡಿಸೆಂಬರ್ ತಿಂಗಳಿನವರೆಗು ಇದೆ. ಇನ್ಶುರೆನ್ಸ್ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಇಲಾಖೆ ತನ್ನೆಲ್ಲ ವಾಹನಗಳಿಗೆ ನಿಯಮದಂತೆ ಇನ್ಶುರೆನ್ಸ್ ಕಟ್ಟಿದೆ ಎಂದು ಸ್ಪಷ್ಟನೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ