ಚೀನಾ ವಿದ್ಯಾರ್ಥಿಗಳಿಗೆ 10 ದಿನ ಮುಂಚಿತವಾಗಿಯೇ ಪರೀಕ್ಷೆ: ಜೂನ್ 8ಕ್ಕೆ ದೇಶ ಬಿಡಲಿದ್ದಾರೆ ಮೈಸೂರಿನಲ್ಲಿರುವ ಚೀನಿ ವಿದ್ಯಾರ್ಥಿಗಳು

ಚೀನಾ ವಿದ್ಯಾರ್ಥಿಗಳಿಗೆ 10 ದಿನ ಮುಂಚಿತವಾಗಿಯೇ ಪರೀಕ್ಷೆ: ಜೂನ್8ಕ್ಕೆ ದೇಶ ಬಿಡಲಿದ್ದಾರೆ ಮೈಸೂರಿನಲ್ಲಿರುವ ಚೀನಿ ವಿದ್ಯಾರ್ಥಿಗಳು.

news18-kannada
Updated:May 29, 2020, 7:10 AM IST
ಚೀನಾ ವಿದ್ಯಾರ್ಥಿಗಳಿಗೆ 10 ದಿನ ಮುಂಚಿತವಾಗಿಯೇ ಪರೀಕ್ಷೆ: ಜೂನ್ 8ಕ್ಕೆ ದೇಶ ಬಿಡಲಿದ್ದಾರೆ ಮೈಸೂರಿನಲ್ಲಿರುವ ಚೀನಿ ವಿದ್ಯಾರ್ಥಿಗಳು
ಸಾಂದರ್ಭಿಕ ಚಿತ್ರ
  • Share this:
ಮೈಸೂರು: ಜಗತ್ತಿಗೆ ಕೊರೊನಾ ವೈರಸ್  ಅನ್ನೋ ಸಾಂಕ್ರಾಮಿಕ ರೋಗವನ್ನ ಹರಡಿಸಿದ ಚೀನಾ ದೇಶ ಇದೀಗ ತನ್ನ ದೇಶದ ಪ್ರಜೆಗಳನ್ನ ವಿವಿದ ದೇಶಗಳಿಂದ ವಾಪಸ್ಕರೆಸಿಕೊಳ್ಳುತ್ತಿದೆ. ಈ ಸಾಲಿನಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ ವಿವಿಧ ದೇಶಗಳಿಗೆ ಸಂಶೋಧನೆ ಹಾಗೂ ವ್ಯಾಸಂಗಕ್ಕೆ ತೆರಳಿದ್ದ ಎಲ್ಲರನ್ನು ಚೀನಾ ವಾಪಸ್ಕರೆಸಿಕೊಳ್ಳುತ್ತಿದೆ. 

ಈ ಪ್ರಕ್ರಿಯೆಯಲ್ಲಿ ಭಾರತದಲ್ಲಿನ ಚೀನಾ ವಿದ್ಯಾರ್ಥಿಗಳನ್ನ ಜೂನ್ 8ರ ಒಳಗಾಗಿ ವಾಪಸ್ಬರುವಂತೆ ಸೂಚನೆ ನೀಡಿರುವ ಚೀನಾ ರಾಯಭಾರಿ ಭಾರತದಲ್ಲಿ ಎಲ್ಲೆಲ್ಲಿ ಚೀನಾ ವಿದ್ಯಾರ್ಥಿಗಳಿದ್ದಾರೆ ಅಲ್ಲೆಲ್ಲ ಪತ್ರ ಹಾಗೂ ದೂರವಾಣಿ ಮೂಲಕ ವ್ಯವಹರಿಸಿ ಚೀನಾ ವಿದ್ಯಾರ್ಥಿಗಳನ್ನ ಜೂನ್‌ 8ರೋಳಗೆ ವಾಪಸ್‌ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಮೈಸೂರು ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳನ್ನ ಜೂನ್‌ 8ರೊಳಗೆ ವಾಪಸ್ ಕಳುಹಿಸಲು ಸಿದ್ದತೆ ನಡೆಸಿದೆ.

ಚೀನಾ ವಿದ್ಯಾರ್ಥಿಗಳು ಸ್ವದೇಶಕ್ಕೆ ಕಳುಹಿಸಿಲು ಸಿದ್ದತೆ ನಡೆಸಿರುವ ಮೈಸೂರು ವಿವಿ ಚೀನಾದ ಸರ್ಕಾರದ ತುರ್ತು ಕರೆಗೆ ಸ್ಪಂದನೆ ನೀಡಿದೆ. 10 ದಿನಗಳ ಮುಂಚಿತವಾಗೇ ಚೀನಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾದ ಮೈಸೂರು ವಿಶ್ವವಿದ್ಯಾನಿಲಯ  ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆಯನ್ನು 10 ದಿನಗಳ ಕಾಲ ಮುಂಚಿತವಾಗಿ ನಡೆಸಲು ಆದೇಶ ಮಾಡಿದೆ. ಮೈಸೂರು ವಿವಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 120 ಚೀನಾ ವಿದ್ಯಾರ್ಥಿಗಳಲ್ಲಿ 102 ಚೀನಾ ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆ ನಡೆಸಲಾಗುತ್ತಿದೆ.

ಜೂನ್ 15 ರಂದು ನಿಗಧಿಯಾಗಿದ್ದ ಪರೀಕ್ಷೆಯನ್ನ  ಚೀನಾದ ರಾಯಭಾರಿ ಕಚೇರಿ ಸೂಚನೆ ಮೇರೆಗೆ, 10 ದಿನಗಳ ಮೊದಲೇ ನಡೆಸಲು ತೀರ್ಮಾನ ಮಾಡಲಾಗಿದೆ ಈ ಬಗ್ಗೆ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಮಾಹಿತಿ  ನೀಡಿದ್ದು, ವಿದ್ಯಾರ್ಥಿಗಳನ್ನು ಮರಳಿ ಸ್ವದೇಶಕ್ಕೆ ಕಳುಹಿಸುವಂತೆ ಚೀನಾ ಸರ್ಕಾರ ಮನವಿ ಮಾಡಿತ್ತು, ಈ ನಿಟ್ಟಿನಲ್ಲಿ ಮುಂಚಿತಾಗಿ ಪರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜೂನ್ ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ; ಹೆಚ್ಚುವರಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?

ಈ ಹಿನ್ನಲೆಯಲ್ಲಿ ಜೂನ್ 1ರಿಂದ ಆರಂಭಗೊಂಡು ಜೂ. 6 ಕ್ಕೆ ಇನ್ಫಾರ್ಮೇಷನ್ ಟೆಕ್ನಾಲಜಿ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಪೂರ್ಣಗೊಳ್ಳಲಿವೆ. ಪರೀಕ್ಷೆ ನಂತರ ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ತೆರಳಲಿರುವ ಚೀನಾ ವಿದ್ಯಾರ್ಥಿಗಳಿಗೆ ಚೀನಾ ಸರ್ಕಾರದಿಂದಲೇ ವಿಮಾನ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ವಲಸೆ ಕಾರ್ಮಿಕರ ಸಂಕಷ್ಟಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳು ಜರುಗಿಸಿದ ಕ್ರಮವೇನು?; ಸುಪ್ರೀಂ ಪ್ರಶ್ನೆಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ 120 ಚೀನಾ ವಿದ್ಯಾರ್ಥಿಗಳಲ್ಲಿ, 18 ಮಂದಿ ವಿದ್ಯಾರ್ಥಿಗಳು ಜನವರಿ ತಿಂಗಳಿನಲ್ಲಿ ಚೀನಾ ತೆರಳಿದ್ದರು. ಕೋವಿಡ್‌-19 ಸಂದರ್ಭ ಉದ್ಭವವಾಗಿ ಎರಡು ದೇಶಗಳ ವಿಮಾನಯಾನ ಸಂಪರ್ಕ ಕಡಿತಗೊಂಡಾಗ ಆ 18 ವಿದ್ಯಾರ್ಥಿಗಳನ್ನ ಅಲ್ಲಿಯೇ ಉಳಿಸುವಂತೆ ಮೈಸೂರು ವಿವಿ ಮನವಿ ಮಾಡಿತ್ತು. ಈಗ ಆ 18 ವಿದ್ಯಾರ್ಥಿಗಳಿಗೆ ಚೀನಾದಲ್ಲೆ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿದ್ದು, ಮೈಸೂರು ವಿವಿ ಒಡಂಬಡಿಕೆ ಮಾಡಿಕೊಂಡಿರುವ ಚೀನಾದ ಹಾಂಗೋಯ್‌ ಯೂನಿರ್ವಸಿಟಿಯಲ್ಲಿ ವಿಶೇಷ ಪರೀಕ್ಷೆಗೆ ಅವಕಾಶ ನೀಡಲಾಗಿದೆ.

ಕೊರೊನಾದಿಂದಾಗಿ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಚೀನಾ ವಿದ್ಯಾರ್ಥಿಗಳು ಇದೀಗ ಮತ್ತೆ ತಮ್ಮ ದೇಶಕ್ಕೆ ವಾಪಸ್ ಆಗುತ್ತಿರೋದು ಅವರಿಗೆ ಸಂತಸದ ವಿಚಾರ. ಆದ್ರೆ ಚೀನಾ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ಪರೀಕ್ಷೆ ನಡೆಸಿ ತುರ್ತಾಗಿ ವ್ಯವಸ್ಥೆ ಮಾಡುತ್ತಿರೋದು ಮೈಸೂರು ವಿವಿಗೆ ಕೊಂಚ ತಲೆನೋವಿನ ವಿಷಯ. ಆದರೂ ಚೀನಾಗೆ ತೆರಳಿದ್ದ ವಿದ್ಯಾರ್ಥಿಗಳನ್ನ ವಾಪಸ್‌ ಕರೆಸಿಕೊಳ್ಳದೆ ಅಲ್ಲಿಯೇ ಪರೀಕ್ಷೆ ನಡೆಸಿ, ಇಲ್ಲಿದ್ದ ವಿದ್ಯಾರ್ಥಿಗಳಿಗೆ ತುರ್ತಾಗಿ ಪರೀಕ್ಷೆ ನಡೆಸಿ ವಾಪಸ್‌ ಕಳುಹಿಸುತ್ತಿರುವ ಮೈಸೂರು ವಿವಿಯ ಈ ಶ್ರಮ ಶ್ಲಾಘನೀಯವೇ ಸರಿ. ಇದೆ ರೀತಿ ಭಾರತದಿಂದ ವಿದೇಶಕ್ಕೆ ತೆರಳಿರುವ ವಿದ್ಯಾರ್ಥಿಗಳು ಸಹ ಕ್ಷೇಮವಾಗಿ ತಾಯ್ನಾಡಿಗೆ ವಾಪಸ್ಸಾಗಲಿ ಅನ್ನೋದೆ ಎಲ್ಲರ ಆಶಯ.
First published: May 29, 2020, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading