ಬುಡಕಟ್ಟು ಜನಾಂಗದ ಮಕ್ಕಳಿಗೆ ಆನ್​ಲೈನ್​ ಇಂಗ್ಲಿಷ್​ ಪಾಠ; ಮೈಸೂರಿನ ಶಿಕ್ಷಕಿಯ ಧ್ವನಿಗೆ ಕಿವಿಯಾಗುತ್ತಾರೆ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು

ಕೊರೋನಾ ಲಾಕ್‌ಡೌನ್‌ನ ಈ ದಿನಗಳಲ್ಲಿ ಎಲ್ಲೆಡೆ ಆನ್‌ಲೈನ್ ಶಿಕ್ಷಣದ್ದೇ ಚರ್ಚೆಯಾಗುತ್ತಿದೆ. ಆದರೆ, ಕಾಡಿನ ಮಧ್ಯೆ ಇರುವ ನಮ್ಮೂರಿನಲ್ಲಿ ಅದು ಕಷ್ಟ ಸಾಧ್ಯ. ಅದಕ್ಕೆ ಮೊಬೈಲ್ ಫೋನ್ ಮೂಲಕ ತರಗತಿ ಮುಂದುವರಿಸಲಾಗಿದೆ. ಪೂರ್ಣಿಮಾ ಅವರು ಕಳೆದ ವರ್ಷ ಜೊಯಿಡಾಕ್ಕೆ ಬಂದಿದ್ದಾಗ ಇಂಗ್ಲಿಷ್‌ನ ಮೂಲ ಪಾಠವನ್ನು ಮಕ್ಕಳಿಗೆ ಬೋಧಿಸಿದ್ದರು. ಅದರ ಮುಂದುವರಿದ ಭಾಗವನ್ನು ಈ ವರ್ಷ ಹೇಳಿಕೊಡುತ್ತಿದ್ದಾರೆ ಎಂದು ಜಯಾನಂದ ಡೇರೇಕರ್ ಸಂತಸ ವ್ಯಕ್ತಪಡಿಸುತ್ತಾರೆ.

news18-kannada
Updated:July 17, 2020, 5:21 PM IST
ಬುಡಕಟ್ಟು ಜನಾಂಗದ ಮಕ್ಕಳಿಗೆ ಆನ್​ಲೈನ್​ ಇಂಗ್ಲಿಷ್​ ಪಾಠ; ಮೈಸೂರಿನ ಶಿಕ್ಷಕಿಯ ಧ್ವನಿಗೆ ಕಿವಿಯಾಗುತ್ತಾರೆ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು
ಆನ್​​ಲೈನ್​ ತರಗತಿ ಕೇಳುತ್ತಿರುವ ವಿದ್ಯಾರ್ಥಿಗಳು
  • Share this:
ಕಾರವಾರ(ಜು.17): ದಟ್ಟಕಾಡಿನ ನಡುವಿನ ಈ ಊರಿನಲ್ಲಿ ನಿತ್ಯವೂ ‘ಮೊಬೈಲ್’ ಇಂಗ್ಲಿಷ್ ತರಗತಿ ನಡೆಯುತ್ತದೆ. 500 ಕಿಲೋಮೀಟರ್‌ಗೂ ಅಧಿಕ ದೂರದ ನಗರದಲ್ಲಿರುವ ಶಿಕ್ಷಕಿಯ ಧ್ವನಿಗೆ ಮಕ್ಕಳು ಶ್ರದ್ಧೆಯಿಂದ ಕಿವಿಯಾಗುತ್ತಾರೆ. ಸಂವಹನ ನಡೆಸುತ್ತಾರೆ. ಆದರೆ ಶಿಕ್ಷಕಿ ಮಾತ್ರ ‘ಅದೃಶ್ಯ’ವಾಗಿಯೇ ಇರುತ್ತಾರೆ.

ಈ ರೀತಿಯ ತರಗತಿ ನಡೆಯುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಡೇರಿಯಾ ಎಂಬ ಕುಗ್ರಾಮದಲ್ಲಿ. ಇಲ್ಲಿನ ಬುಡಕಟ್ಟು ಜನಾಂಗದ 10 ವಿದ್ಯಾರ್ಥಿಗಳಿಗೆ ಮೈಸೂರಿನ ಒಂಟಿಕೊಪ್ಪಲು ನಿವಾಸಿ ಆರ್.ಪೂರ್ಣಿಮಾ, ನಿತ್ಯವೂ ಮೊಬೈಲ್ ಫೋನ್ ಮೂಲಕ ಇಂಗ್ಲಿಷ್ ಭಾಷೆಯನ್ನು ಬೋಧಿಸುತ್ತಿದ್ದಾರೆ. ನಾಲ್ಕನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ 12 ಕಿಲೋಮೀಟರ್ ದೂರದ ಈ ಗ್ರಾಮದಲ್ಲಿ ಒಂದೆರಡು ಮನೆಗಳ ಬಳಿ ಮಾತ್ರ ಮೊಬೈಲ್ ಸಿಗ್ನಲ್  ಸಿಗುತ್ತದೆ. ಅದೂ ಒಂದೆರಡು ‘ಕಡ್ಡಿ’ಗಳಿಗೆ ಸೀಮಿತವಾಗಿರುತ್ತದೆ. ಇಲ್ಲಿ ಇಂಟರ್‌ನೆಟ್ ಸಂಪರ್ಕವಂತೂ ದೂರದ ಮಾತು. ಹಾಗಾಗಿ ಆನ್‌ಲೈನ್ ತರಗತಿ ಹಮ್ಮಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ಪೂರ್ಣಿಮಾ, ಮೊಬೈಲ್ ಫೋನ್ ಮೂಲಕವೇ ಜ್ಞಾನಧಾರೆ ಎರೆಯುತ್ತಿದ್ದಾರೆ.

Karnataka Rain Updates: ಮಲೆನಾಡು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದುವರೆದ ಮಳೆ; ಮುಳುಗುವ ಹಂತದಲ್ಲಿ ಹೆಬ್ಬಾಳೆ ಸೇತುವೆ

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿರುವ ಅವರ ಹುಮ್ಮಸ್ಸಿಗೆ, ಜೊಯಿಡಾದ ಕುಣಬಿ ಸಮಾಜದ ಅಧ್ಯಕ್ಷ ಡಾ.ಜಯಾನಂದ ಡೇರೇಕರ್ ಜೊತೆಯಾದರು. ಒಂದು ಮೊಬೈಲ್ ಫೋನ್ ಹಾಗೂ ಬ್ಲೂಟೂಥ್ ಸ್ಪೀಕರ್ ಖರೀದಿಸಿ ತಂದರು.  ಮೊಬೈಲ್‌ ಅನ್ನು ಸಿಗ್ನಲ್ ಸಿಗುವ ಮನೆಯೊಂದರ ಕಿಟಕಿಯಲ್ಲಿಟ್ಟರು. ಬಳಿಕ ಬ್ಲೂಟೂಥ್ ಮೂಲಕ ಸ್ಪೀಕರ್‌ಗೆ ಸಂಪರ್ಕ ನೀಡಿ ಧ್ವನಿವರ್ಧಿಸಿದರು. ಈ ರೀತಿ ಸುಮಾರು ಒಂದು ತಿಂಗಳಿನಿಂದ ನಿತ್ಯವೂ ಸಂಜೆ 4.30ರಿಂದ ಒಂದು ತಾಸು ತರಗತಿ ನಡೆಯುತ್ತಿದೆ.

ಕೊರೋನಾ ಲಾಕ್‌ಡೌನ್‌ನ ಈ ದಿನಗಳಲ್ಲಿ ಎಲ್ಲೆಡೆ ಆನ್‌ಲೈನ್ ಶಿಕ್ಷಣದ್ದೇ ಚರ್ಚೆಯಾಗುತ್ತಿದೆ. ಆದರೆ, ಕಾಡಿನ ಮಧ್ಯೆ ಇರುವ ನಮ್ಮೂರಿನಲ್ಲಿ ಅದು ಕಷ್ಟ ಸಾಧ್ಯ. ಅದಕ್ಕೆ ಮೊಬೈಲ್ ಫೋನ್ ಮೂಲಕ ತರಗತಿ ಮುಂದುವರಿಸಲಾಗಿದೆ. ಪೂರ್ಣಿಮಾ ಅವರು ಕಳೆದ ವರ್ಷ ಜೊಯಿಡಾಕ್ಕೆ ಬಂದಿದ್ದಾಗ ಇಂಗ್ಲಿಷ್‌ನ ಮೂಲ ಪಾಠವನ್ನು ಮಕ್ಕಳಿಗೆ ಬೋಧಿಸಿದ್ದರು. ಅದರ ಮುಂದುವರಿದ ಭಾಗವನ್ನು ಈ ವರ್ಷ ಹೇಳಿಕೊಡುತ್ತಿದ್ದಾರೆ ಎಂದು ಜಯಾನಂದ ಡೇರೇಕರ್ ಸಂತಸ ವ್ಯಕ್ತಪಡಿಸುತ್ತಾರೆ.

'ಅವರು ಇ–ಮೇಲ್ ಮಾಡಿದ್ದ ಪಠ್ಯದ ಒಂದು ಪ್ರತಿಯನ್ನು ಮುದ್ರಿಸಿ ಮಕ್ಕಳಿಗೆ ನೀಡಲಾಗಿದೆ. ತರಗತಿಯಲ್ಲಿ ಅದನ್ನು ನೋಡಿಕೊಂಡು ಮಕ್ಕಳು ಪುನರುಚ್ಚರಿಸುತ್ತಾರೆ. ಅನುಮಾನಗಳಿದ್ದರೆ ಕೇಳಿ ಬಗೆಹರಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಅವರು.

‘ಈ ವರ್ಷ ಜೊಯಿಡಾದಲ್ಲಿ ಒಂದು ತಿಂಗಳಿದ್ದು ತರಗತಿ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಲಾಕ್‌ಡೌನ್ ಕಾರಣದಿಂದ ಸಾಧ್ಯವಾಗಲಿಲ್ಲ. ಈಗ ಮಕ್ಕಳು ಮೊಬೈಲ್ ತರಗತಿಗೆ ಚೆನ್ನಾಗಿ ಸ್ಪಂದಿಸುತ್ತಿರುವುದು ಖುಷಿ ತಂದಿದೆ’ ಎಂದು ಆರ್.ಪೂರ್ಣಿಮಾ ಹೇಳುತ್ತಾರೆ.
Published by: Latha CG
First published: July 17, 2020, 5:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading