• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮದುವೆಗೆ ಹೆಚ್ಚು ಜನ ಸೇರಿಸಿದ್ರೆ ಕಲ್ಯಾಣ ಮಂಟಪ ಮಾಲೀಕರ ಮೇಲೆಯೇ ಕ್ರಿಮಿನಲ್ ಕೇಸ್‌ : ಪೊಲೀಸರ ಕ್ರಮ

ಮದುವೆಗೆ ಹೆಚ್ಚು ಜನ ಸೇರಿಸಿದ್ರೆ ಕಲ್ಯಾಣ ಮಂಟಪ ಮಾಲೀಕರ ಮೇಲೆಯೇ ಕ್ರಿಮಿನಲ್ ಕೇಸ್‌ : ಪೊಲೀಸರ ಕ್ರಮ

ಮಾಹಿತಿ ನೀಡುತ್ತಿರುವ ಪೊಲೀಸ್​​ ಅಧಿಕಾರಿ

ಮಾಹಿತಿ ನೀಡುತ್ತಿರುವ ಪೊಲೀಸ್​​ ಅಧಿಕಾರಿ

ಹುಟ್ಟು ಹಬ್ಬ, ನಾಮಕರಣದಂತಹ ಸಮಾರಂಭಗಳಿಗೂ ನಿಗದಿಪಡಿಸಿದಷ್ಟು ಜನ ಮಾತ್ರ ಸೇರಬೇಕು. ಹೆಚ್ಚು ಜನರಿದ್ದು ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾದ್ರೆ, ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

  • Share this:

ಮೈಸೂರು(ನವೆಂಬರ್. 09): ಕೊರೋನಾ ಲಾಕ್ ​ಡೌನ್ ಶುರುವಾಗಿದ್ದೇ ಬಂತು. ಚಿತ್ರಮಂದಿರ, ಕಲ್ಯಾಣ ಮಂಟಪ, ಸಾರ್ವಜನಿಕ ಸಭೆ- ಸಮಾರಂಭಗಳಿಗೆಲ್ಲ ಆತಂಕ ಶುರುವಾಗಿದೆ. ಅದರಲ್ಲೂ ಮೈಸೂರಿನಲ್ಲಿ ಕಲ್ಯಾಣ ಮಂಟಪಗಳಿಗೆ ಹೊಸ ನಿಯಮ ಜಾರಿಯಾಗಿದೆ. ಹೆಚ್ಚು ಜನ ಸೇರಿದ್ರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಇತ್ತ ಕಲ್ಯಾಣ ಮಂಟಪದ ಮಾಲೀಕರು ಸಹ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೊರೋನಾ ಬಂದ ಮೇಲೆ ಜೀವನ ಶೈಲಿಯೇ ಬದಲಾಗುತ್ತಿದೆ. ಮೊದಲೆಲ್ಲ ಮದುವೆ, ಉಪನಯನ, ಹುಟ್ಟುಹಬ್ಬ, ಬೀಗರ ಊಟ ಹೀಗೆ ಶುಭ ಸಮಾರಂಭಗಳಿಗೆ ಬಂಧು- ಬಳಗದವರೆಲ್ಲ ಸೇರಿ ಸಂಭ್ರಮಿಸುತ್ತಿದ್ದರು. ಕೊರೋನಾ ಕಾಲಿಟ್ಟ ಬಳಿಕ ಶುಭ ಸಮಾರಂಭಗಳ ಚಿತ್ರಣವೇ ಬದಲಾಗಿ ಹೋಗಿದೆ. ಈ ನಡುವೆ ಮೈಸೂರು ಪೊಲೀಸರು ಕಲ್ಯಾಣ ಮಂಟಪಗಳಿಗೆ ಹೊಸ ಆದೇಶ ಜಾರಿ ಮಾಡಿದ್ದಾರೆ. ಮದುವೆಗಳಿಗೆ ಕೇವಲ 200 ಜನ ಮಾತ್ರ ಇರಬೇಕು. ಹುಟ್ಟು ಹಬ್ಬ, ನಾಮಕರಣದಂತಹ ಸಮಾರಂಭಗಳಿಗೂ ನಿಗದಿಪಡಿಸಿದಷ್ಟು ಜನ ಮಾತ್ರ ಸೇರಬೇಕು. ಹೆಚ್ಚು ಜನರಿದ್ದು ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾದ್ರೆ, ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದುಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ಇದರಿಂದಾಗಿ ಕಲ್ಯಾಣ ಮಂಟಪಗಳ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಡೀ ಮದುವೆ ಸೀಸನ್ ಕೊರೋನಾ ಲಾಕ್ ​ಡೌನ್​ನಲ್ಲೇ ಕಳೆದು ಹೋಯಿತು. ಈಗಷ್ಟೆ ಒಂದೋ ಎರಡೋ ದಿನ ಬುಕ್ಕಿಂಗ್ ಸಿಗುತ್ತಿದೆ. ಅದಕ್ಕೂ ನಿಯಮ, ನಿಬಂಧನೆ ವಿಧಿಸಿದ್ರೆ ಜನ ಕಲ್ಯಾಣ ಮಂಟಪಗಳನ್ನೇ ಮರೆತು ಬಿಡುತ್ತಾರೆ ಎನ್ನುವ ಆತಂಕ ಶುರುವಾಗಿದೆ.


ಕೆಲ ಕಲ್ಯಾಣ ಮಂಟಪಗಳ ಮಾಲೀಕರು ಪೊಲೀಸರ ಆದೇಶವನ್ನು ಸ್ವಾಗತಿಸಿದ್ದಾರೆ. ಆದರೆ, ಬಹುತೇಕರು ಕ್ರಿಮಿನಲ್ ಪ್ರಕರಣ ದಾಖಲಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಬಹುತೇಕ ಕಲ್ಯಾಣ ಮಂಟಪಗಳು ಖಾಲಿ ಹೊಡೆಯುತ್ತಿವೆ.


ಇದನ್ನೂ ಓದಿ : ನಾವೀಗ ಕೆಟ್ಟ ಕಾಲದಲ್ಲಿ ಇದ್ದೇವೆ - ನಮಗೂ ಒಳ್ಳೆಯ ಕಾಲ ಬರುತ್ತದೆ: ಮಾಜಿ ಸಚಿವ ಸಂತೋಷ ಲಾಡ್


ಶುಭ ಸಮಾರಂಭ ನಡೆಯಲೀ ಬಿಡಲಿ ಲೈಸೆನ್ಸ್, ಎನ್​ಒಸಿ, ಕರೆಂಟ್ ಬಿಲ್ಲು, ವಾಟರ್ ಬಿಲ್ಲು, ಸೆಕ್ಯೂರಿಟಿ ಹೀಗೆ ಹತ್ತಾರು ಮೇಂಟೆನೆನ್ಸ್​ ಖರ್ಚುಗಳು ಇದ್ದೇ ಇರುತ್ತವೆ. ಇದೆಲ್ಲವನ್ನೂ ನಿಭಾಯಿಸಿಕೊಂಡು, ಕೊರೋನಾ ನಿಯಮಗಳನ್ನೂ ಪಾಲಿಸುವುದು ಅಷ್ಟು ಸುಲಭವಲ್ಲ. ಆದರೆ, ಕೊರೋನಾ ಮಾಹಾಮಾರಿ ವಿರುದ್ಧ ಹೋರಾಡುವುದು ಸಾಮಾಜಿಕ ಜವಾಬ್ದಾರಿ ಎನ್ನುವುದನ್ನು ಕಲ್ಯಾಣ ಮಂಟಪದ ಮಾಲೀಕರು ಒಪ್ಪಿಕೊಳ್ಳುತ್ತಾರೆ.


ಒಟ್ಟಾರೆ ಮೈಸೂರಿನಲ್ಲಿ ಕೊರೋನಾ ಕಂಟ್ರೋಲ್​​​ಗೆ ಬರುತ್ತಿದ್ದು, ಅದನ್ನ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಿಮಿನಲ್​​​‌ ಪ್ರಕರಣ ಅಸ್ತ್ರ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಎನ್ನುವುದನ್ನ ಕಾದು ನೋಡಬೇಕಿದೆ.

Published by:G Hareeshkumar
First published: