ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಪಾಲಿಕೆ ಮೇಯರ್ ತಸ್ನಿಂ ಗರಂ ಯಾಕೆ ಗೊತ್ತಾ?
ಉಸ್ತುವಾರಿ ಸಚಿವರು ಆ ನಿರ್ಬಂಧವನ್ನ ತೆರವು ಮಾಡಿದ್ದ ವಿಚಾರದಲ್ಲಿ ಸಾರ್ವಜನಿಕವಾಗಿ ಚರ್ಚೆಗೆ ಗುರಿಯಾಗಿದ್ದ ರೋಹಿಣಿ ಸಿಂಧೂರಿ ಇದೀಗ ಮೈಸೂರು ಮಹಾನಗರ ಪಾಲಿಕೆ ಮೇಯರ್ ಅವರ ಆರೋಪಕ್ಕು ಗುರಿಯಾಗಿದ್ದಾರೆ.
ಮೈಸೂರು(ಅಕ್ಟೋಬರ್. 21): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅದ್ಯಾಕೋ ಏನೋ ಪದೆ ಪದೆ ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೆ ವರ್ಗಾವಣೆ ವಿಚಾರದಲ್ಲಿ ಸುದ್ದಿಯಾಗಿದ್ದ ರೋಹಿಣಿ ಸಿಂಧೂರಿ, ಮತ್ತೆ ಕೋವಿಡ್ ನಿಯಂತ್ರಣ ಮಾಡಿದ್ದಕ್ಕೆ ಸುದ್ದಿಯಾಗದ್ದರು. ದಸರಾ ಉದ್ಘಾಟನೆ ದಿನ ತಮ್ಮ ಆದೇಶಕ್ಕೆ ಉಸ್ತುವಾರಿ ಸಚಿವರು ಉಲ್ವಾ ಹೊಡೆದಾಗಲು ಸುದ್ದಿಯಾಗಿದ್ದರು. ಇದೀಗ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಅವರು ಜಿಲ್ಲಾಧಿಕಾರಿ ವಿರುದ್ದ ಗರಂ ಆಗಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಶಿಷ್ಟಚಾರ ಪಾಲನೆ ಮಾಡುತ್ತಿಲ್ಲ ಎಂದು ಆರೋಪ ಮಾಡಿರುವ ಪಾಲಿಕೆ ಮೇಯರ್ ತಸ್ನೀಂ ಅವರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಡಿಸಿ ವಿರುದ್ದ ಮೈಸೂರು ಪಾಲಿಕೆ ಮೇಯರ್ ತಸ್ನಿಂ ಕೋಪಗೊಂಡಿದ್ದಾರೆ. ದಸರಾ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಸ್ವಾಗತ ಮಾಡುವಾಗ ಮೈಸೂರಿನ ಪ್ರಥಮ ಪ್ರಜೆಗೆ ಅವಕಾಶ ನೀಡಬೇಕು.
ಆದರೆ, ಪೋಲೀಸರಿಗೆ ಮೇಯರ್ ಅವರನ್ನು ಒಳಗೆ ಬಿಡದಂತೆ ಹೇಳುತ್ತಾರೆ, ಇದಲ್ಲದೆ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಮ್ಮ ಆಸನ ಇಡಬೇಕು. ಆದರೆ, ವೇದಿಕೆಯಲ್ಲಿ ಕೊನೆಯಲ್ಲಿ ನಮಗೆ ಆಸನ ನೀಡುತ್ತೀರಿ. ಶಿಷ್ಟಚಾರದ ಪ್ರಕಾರ ಮೈಸೂರಿನ ಮೇಯರ್ ಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಅದ್ಯಾವುದನ್ನ ನೀವು ಮಾಡಿಲ್ಲ.
ಇಷ್ಟೇ ಅಲ್ಲದೆ ದಸರಾ ವೇದಿಕೆಯಲ್ಲಿ ಸ್ವಾಗತ ಭಾಷಣ ಮಾಡಿದ ನೀವು ಉಪ ಮಹಾಪೌರರ ಹಾಗು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಿಗೆ ಸ್ವಾಗತವನ್ನೆ ಕೋರುವುದಿಲ್ಲ, ಇದೆಲ್ಲವನ್ನು ಯಾರ ಮನವೊಲಿಸಲು ಮಾಡುತ್ತಿದ್ದೀರಿ.? ನೀವು ಯಾಕೇ ಶಿಷ್ಟಚಾರ ಪಾಲನೆ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮೇಯರ್ ತಸ್ನಿಂ ಅವರು ಪ್ರಶ್ನೆ ಹಾಕಿದ್ದಾರೆ.
ಪಾಲಿಕೆ ಮೇಯರ್ ತಸ್ನೀಂ ಕೆಂಗಣ್ಣಿಗೆ ಗುರಿಯಾಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ ಶಿಷ್ಟಚಾರ ಉಲ್ಲಂಘನೆಯಾಗಿರುವ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ ಆದರೂ ಜಿಲ್ಲಾಧಿಕಾರಿ ನಡೆ ಬಗ್ಗೆ ಪಾಲಿಕೆ ಮೇಯರ್ ತಸ್ನೀಂ ಅವರು ಪ್ರಶ್ನೆ ಮಾಡಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ವರ್ಗಾವಣೆ ವಿಚಾರ ಹಾಗೂ ಪ್ರವಾಸಿ ತಾಣಗಳ ಬಂದ್ ಮಾಡಿ, ಉಸ್ತುವಾರಿ ಸಚಿವರು ಆ ನಿರ್ಬಂಧವನ್ನ ತೆರವು ಮಾಡಿದ್ದ ವಿಚಾರದಲ್ಲಿ ಸಾರ್ವಜನಿಕವಾಗಿ ಚರ್ಚೆಗೆ ಗುರಿಯಾಗಿದ್ದ ರೋಹಿಣಿ ಸಿಂಧೂರಿ ಇದೀಗ ಮೈಸೂರು ಮಹಾನಗರ ಪಾಲಿಕೆ ಮೇಯರ್ ಅವರ ಆರೋಪಕ್ಕು ಗುರಿಯಾಗಿದ್ದಾರೆ.
ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದ ಮೊದಲ ದಿನವೇ ಮಾಜಿ ಸಚಿವ ಸಾ.ರಾ.ಮಹೇಶ್ ಸಹ ರೋಹಿಣಿ ಸಿಂಧೂರಿ ವಿರುದ್ದ ಗುಡುಗಿದ್ದರು, ಇದಾದ ನಂತರ ಹಿಂದಿನ ಜಿಲ್ಲಾಧಿಕಾರಿ ಬಿ.ಶರತ್ ವರ್ಗಾವಣೆ ಪ್ರಶ್ನಿಸಿ ರೋಹಿಣಿ ಸಿಂಧೂರಿಯವರನ್ನ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಿಎಟಿಗೆ ಹೋಗಿರುವುದು ರೋಹಿಣಿ ಸಿಂಧೂರಿ ಪದೆ ಪದೆ ಸುದ್ದಿಯಾಗೋದಕ್ಕೆ ಮತ್ತೊಂದು ಕಾರಣವಾಗಿದೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ