• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ವಿದ್ಯಾರ್ಥಿಗಳ ತಲೆಗೆ ಬಿದ್ದ ಕಟ್ಟಡದ ಮೆಲ್ಚಾವಣಿ; ಮೈಸೂರು ಮಹಾರಾಜ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ಗಾಯ

ವಿದ್ಯಾರ್ಥಿಗಳ ತಲೆಗೆ ಬಿದ್ದ ಕಟ್ಟಡದ ಮೆಲ್ಚಾವಣಿ; ಮೈಸೂರು ಮಹಾರಾಜ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ಗಾಯ

ಗಾಯಗೊಂಡಿರುವ ವಿದ್ಯಾರ್ಥಿ.

ಗಾಯಗೊಂಡಿರುವ ವಿದ್ಯಾರ್ಥಿ.

ಘಟನೆಯಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಸ್ಥಳದಿಂದ ಓಡಿಬಂದು ಕಾಲೇಜಿನ ಕಟ್ಟಡದ ಆಚೆ ನಿಂತಿದ್ದಾರೆ. ಕೆಲವರಂತು ಜೀವನ ಉಳಿದಿದೆಯಲ್ಲಪ್ಪ ಅಂತ ನಿಟ್ಟುಸಿರು ಬಿಟ್ಟಿದ್ದಾರೆ.

  • Share this:

ಮೈಸೂರು (ಫೆಬ್ರವರಿ 10); ಇಲ್ಲಿನ ಮಹಾರಾಜ ಕಾಲೇಜಿನಲ್ಲಿ ಇಂದು ತರಗತಿಯಲ್ಲಿ ಕುಳಿತಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ಕಟ್ಟಡದ ಮೆಲ್ಚಾವಣಿ ಬಿದ್ದು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಜರುಗಿದೆ. ಇಂದು ಕಾಲೇಜಿಗೆ ಬಂದು ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಇಂಟರ್ನಲ್ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಇದಕ್ಕಿದ್ದಂತೆ ಕಾಲೇಜಿನ ಮೇಲ್ಛಾವಣಿ ಕುಸಿದಿದೆ. ಇದ್ರಿಂದ ಮೂವರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದು, ಇತರೆ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಮೈಸೂರು ಮಹರಾಜ ಕಾಲೇಜು.. ತನ್ನ ಹೆಸರು ಇರುವಂತೆಯೆ ಈ ಕಾಲೇಜಿಗೆ ನೂರಾರು ವರ್ಷಗಳ ಇತಿಹಾಸವಿದೆ. ಈ‌ ಕಾಲೇಜಿನ ಕಟ್ಟಡಗಳು ನೂರು ವರ್ಷಗಳು ಪೂರೈಸಿ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿದೆ. ಇವತ್ತು ಈ ಕಾಲೇಜಿನ ಕಟ್ಟಡವೊಂದರ ಮೇಲ್ಚಾವಣಿ ಇದಕ್ಕಿದ್ದಂತೆ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯವಾಗಿದೆ.


ಹೌದು, ಇವತ್ತು ಮೈಸೂರಿನ ಮಹರಾಜ ಕಾಲೇಜಿನ MSc ಕ್ರಿಮಿನಾಲಜಿ ವಿದ್ಯಾರ್ಥಿಗಳಿಗೆ ಇಂಟರ್ನಲ್ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಗೆ ಅಂತ ಕಾಲೇಜಿಗೆ ಎಲ್ಲಾ ವಿದ್ಯಾರ್ಥಿಗಳೆಲ್ಲ ಬಂದಿದ್ರು. ಆದರೆ ಬೆಳಿಗ್ಗೆ 11 ಗಂಟೆ ಸಂಧರ್ಭದಲ್ಲಿ ಕಾಲೇಜಿನ‌ ಮೇಲ್ಛಾವಣಿ ಇದಕ್ಕಿದ್ದಂತೆ ಕುಸಿದಿದೆ. ಇದ್ರಿಂದ ಕಾಲೇಜಿನ ವಿಶಾಲ್, ಯಶ್ವಂತ್, ಸಲೀಂ ಎಂಬ ವಿದ್ಯಾರ್ಥಿಗಳಿಗೆ ಗಾಯಗಳಾಗಿದೆ. ಅದರಲ್ಲಿ ಓರ್ವ ವಿದ್ಯಾರ್ಥಿ ತಲೆಗೆ ಪೆಟ್ಟು ಗಂಭೀರ ಗಾಯವಾಗಿದೆ.


ಘಟನೆಯಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಸ್ಥಳದಿಂದ ಓಡಿಬಂದು ಕಾಲೇಜಿನ ಕಟ್ಟಡದ ಆಚೆ ನಿಂತಿದ್ದಾರೆ. ಕೆಲವರಂತು ಜೀವನ ಉಳಿದಿದೆಯಲ್ಲಪ್ಪ ಅಂತ ನಿಟ್ಟುಸಿರು ಬಿಟ್ಟಿದ್ದಾರೆ. ಇದು ಅಂತಿಮ ವರ್ಷದ Msc ವಿದ್ಯಾರ್ಥಿಗಳ ಕ್ಲಾಸ್‌ರೂಂನಲ್ಲಿ ನಡೆದಿರುವ ಘಟನೆಯಿಂದಾಗಿ ಪ್ರಥಮ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಮತ್ತಷ್ಟು ಆತಂಕ್ಕಿಡಾಗಿದ್ದಾರೆ.


ಘಟನೆಯಿಂದ  ವಿದ್ಯಾರ್ಥಿಗಳು ನಾವು ಯಾವ ಕಾರಣಕ್ಕು ಮತ್ತೆ ಆ ಕಟ್ಟಡಕ್ಕೆ ಬರುವುದಿಲ್ಲ ಅಂತ ಪಟ್ಟು ಹಿಡಿದು ಸ್ಥಳದಲ್ಲೆ ಪ್ರತಿಭಟನೆ ನಡೆಸಿದ್ರು. ಕಾಲೇಜಿನ ವಿರುದ್ದ ಯಾವುದೇ ಘೋಷಣೆ ಕೂಗದೆ ಮೌನವಾಗಿಯೇ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಕಟ್ಟಡವನ್ನ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು.


ಇದನ್ನೂ ಓದಿ: ಗುಜರಾತ್​ನ ಜುನಾಘಡದಲ್ಲಿ ಹೋಟೆಲ್​ಗೆ ನುಗ್ಗಿದ ಸಿಂಹ; ಸಿಸಿಟಿವಿ ವಿಡಿಯೋ ವೈರಲ್​!


ಇನ್ನು ಯಾವಾಗ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದ್ರು. ಆಗ ಘಟನೆ ಸ್ಥಳಕ್ಕೆ ಕಾಲೇಜಿನ‌ ಪ್ರಾಂಶುಪಾಲೆ, ವಿವಿ ರಿಜಿಸ್ಟ್ರಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸದ್ಯ ಈ ಕಟ್ಟಡವನ್ನು ಸರಿ ಪಡಿಸಿದ ನಂತರವಷ್ಟೆ  ಮತ್ತೆ ಉಪಯೋಗಿಸುತ್ತೇವೆ. ಅಲ್ಲಿವರೆಗು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರ್ಯಾಯ ಕಟ್ಟಡವನ್ನು ಗುರುತು ಮಾಡಿ ಅಲ್ಲಿ ಪಾಠ ಪ್ರವಚನ ಮುಂದುವರೆಸುವ ಭರವಸೆ ನೀಡಿದ್ದಾರೆ. ಅಲ್ಲದೆ ಘಟನೆಗೆ ವಿಷಾದ ವ್ಯಕ್ತಪಡಿಸಿ, ಸಣ್ಣದರಲ್ಲೆ ಎಲ್ಲವು ಮುಗಿದಿದೆ, ನೂರು ವರ್ಷಗಳ ಇತಿಹಾಸವಿರುವ ಈ ಕಾಲೇಜಿನಲ್ಲಿ ಇಂತಹ ಘಟನೆ ನಡೆದಿದ್ದು ಇದೆ ಮೊದಲು ಅಮತ ಬೇಸರ ವ್ಯಕ್ತ ಪಡಿಸಿದರು.


ಸದ್ಯ ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಾಪಯಾವಾಗಿಲ್ಲ ಅಂತ ವೈದ್ಯರು ತಿಳಿದಿದ್ದಾರೆ.  ಶಿಥಿಲವಸ್ಥೆಯಲ್ಲಿರುವ ಕಟ್ಟಡಗಳನ್ನು ಗುರುತು ಮಾಡಿ ಅದನ್ನ ಸರಿಪಡಿಸುವ ಕೆಲಸವನ್ನ ಕಾಲೇಜು ಆಡಳಿತ ಮಂಡಳಿ ಮಾಡಬೇಕಿದ್ದು, ಈ ಮೂಲಕ ಮುಂದೆ ಈ ರೀತಿ ಘಟನೆ ಮರುಕಳುಹಿದಂತೆ ಎಚ್ಚರಿಕೆ ವಹಿಸಬೇಕಿದೆ. ಆದ್ರೆ ನೂರು ವರ್ಷಗಳ ಇತಿಹಾಸ ಇರುವ ಈ ಕಟ್ಟಡಗಳನ್ನ ಯಾವ ರೀತಿ ನಿರ್ವಹಣೆ ಮಾಡುತ್ತಿದ್ದಾರೆ ಅನ್ನೋದು ಈ ಘಟನೆಯಿಂದ ತೆರೆದೆ ಬಾಗಿಲಿನಂತಾಗಿರೋದಂತು ಸುಳ್ಳಲ್ಲ.

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು