ಸಂಡೇ ಲಾಕ್‌ ಡೌನ್ ಸದ್ಬಳಕೆ ಮಾಡಿದ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ : ಪಾಲಿಕೆ ಮಾಡಿದ್ದೇನು ಗೊತ್ತಾ?

ಸಯ್ಯಾಜಿರಾವ್ ರಸ್ತೆಯ ಅರ್ಧ ಕಿ.ಮೀ ವರೆಗಿನ ರಸ್ತೆಯಲ್ಲಿರುವ ಹಲವಾರು ಬೃಹತ್ ಮರಗಳಿದ್ದು, ನೆಲಕ್ಕಪ್ಪಳಿಸುವ ಮರಗಳನ್ನ ಗುರುತಿಸಿ ಪಾಲಿಕೆಯೇ ಕೆಡವಿದೆ

news18-kannada
Updated:July 5, 2020, 7:49 PM IST
ಸಂಡೇ ಲಾಕ್‌ ಡೌನ್ ಸದ್ಬಳಕೆ ಮಾಡಿದ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ : ಪಾಲಿಕೆ ಮಾಡಿದ್ದೇನು ಗೊತ್ತಾ?
ಮರಗಳ ರೆಂಬೆ ಕಡಿಯುತ್ತಿರುವ ಪಾಲಿಕೆ ಸಿಬ್ಬಂದಿಗಳು
  • Share this:
ಮೈಸೂರು(ಜುಲೈ.05): ಸಂಡೇ ಲಾಕ್‌ಡೌನ್‌ ಅನ್ನ ಯಾರು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೋ ಇಲ್ಲೋ ಗೊತ್ತಿಲ್ಲ. ಆದರೆ, ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರ ಈ ದಿನವನ್ನ ಅದ್ಭುತವಾಗಿ ಸದ್ಬಳಕೆ ಮಾಡಿಕೊಂಡಿದ್ದಾರೆ. ಇಷ್ಟೆ ಅಲ್ಲದೆದೆ ನಿತ್ಯ ಸಂಜೆ 6 ಗಂಟೆಗೆ ಮೇಲೆ ಇರುವ ಮೈಸೂರು ಪೊಲೀಸ್‌ ಆದೇಶದ ಲಾಕ್‌ಡೌನ್‌ ಅನ್ನು ಸಹ ಪಾಲಿಕೆ ಉಪಯೋಗ ಮಾಡಿಕೊಂಡಿದೆ.

ಮೈಸೂರು ಪಾರಂಪರಿಕ ನಗರಿ. ನಗರದ ತುಂಬೇಲ್ಲ ನೂರಾರು ಪಾರಂಪರಿಕ ಕಟ್ಟಡಗಳಿವೆ. ಅದಂತೆ ಮೈಸೂರಿನ ಬಹುತೇಕ ರಸ್ತೆಗಳು ಸಾಲು ಮರಗಳಿಂದ ಕೂಡಿದೆ. ವಾಣಿಜ್ಯ ರಸ್ತೆಗಳಲ್ಲು ಸಾಲು ಮರ ಜನರಿಗೆ ನೆರಳಿನ ಆಶ್ರಯವಾಗಿದೆ. ನಗರದ ಹೃದಯದ ಭಾಗದಲ್ಲಿರುವ ದೇವರಾಜ ಮಾರುಕಟ್ಟೆ ಅಂದ್ರೆ ಕೇಳಬೇಕಾ ? ಜನರಿಂದ ತುಂಬಿ ತುಳುಕುತ್ತೆ.‌ ಆದರೆ, ಇಲ್ಲಿರುವ ಮರಗಳು ಈ ಸಯ್ಯಾಜಿರಾವ್ ರಸ್ತೆಯ ಅಂದವನ್ನು ಹೆಚ್ಚಿಸಿದೆ.

ಆದರೆ, ಇದೇ ಮರದ ಕೊಂಬೆಗಳು ಪಾರಂಪರಿಕ ಕಟ್ಟಡದ ಮೇಲೆ‌ ಚಾಚೀ ಕಟ್ಟಡದ ಶಿಥಿಲಾವಸ್ಥೆಗೆ ಕಾರಣವಾಗಿದೆ. ಜೊತೆಯಲ್ಲಿ ಇಲ್ಲಿ ತಿರುಗಾಡುವ ಸಾವಿರಾರು ಸಂಖ್ಯೆಯ ಜನರಿಗು ಈ ಕೊಂಬೆಗಳು ಆತಂಕ ತಂದಿದ್ದು, ಯಾವ ವೇಳೆ ಮರಗಳು ಬಿಳುತ್ತವೆ. ಜನರಿಗೆ ತೊಂದರೆ ಆಗುತ್ತಿದ್ದವು ಎಂಬ ಆತಂಕವಿತ್ತು. ಆದರೆ, ಮರ ಕತ್ತರಿಸಲು ಪಾಲಿಕೆ ಎಷ್ಟೋ ಸಮಯ ಪ್ರಯತ್ನ ಮಾಡಿದರು ಜನಜಂಗುಳಿ ಮಾತ್ರ ಇದಕ್ಕೆ ಅಡ್ಡಿ ಮಾಡುತ್ತ ಸಮಯವೇ ಸಿಕ್ಕಿರಲಿಲ್ಲ. ಆಗೊಮ್ಮೆ ಅನುವು ಸಿಕ್ಕಿದ್ದರು ಟ್ರಾಫಿಕ್ ಕಿರಿಕಿರಿ. ಅಷ್ಟರ ಮಟ್ಟಿಗೆ ಜನಜಂಗುಳಿಯಿಂದ ಕೂಡಿರುತ್ತೆ ಈ ದೇವರಾಜ ಮಾರುಕಟ್ಟೆ. ಆದರೆ, ಇವತ್ತು ಸರ್ಕಾರ ಆದೇಶ ಮಾಡಿ ಸಿಕ್ಕಿದ್ದ ಸಂಡೇ ಕರ್ಫ್ಯೂ ಮೈಸೂರು ಪಾಲಿಕೆಗೆ ವರದಾನವಾಗಿದೆ.

ಇಂದು ಇಡೀ ದಿನ ಸಯ್ಯಾಜಿರಾವ್ ರಸ್ತೆಯ ಅರ್ಧ ಕಿ.ಮೀ ವರೆಗಿನ ರಸ್ತೆಯಲ್ಲಿರುವ ಹಲವಾರು ಬೃಹತ್ ಮರಗಳಿದ್ದು, ನೆಲಕ್ಕಪ್ಪಳಿಸುವ ಮರಗಳನ್ನ ಗುರುತಿಸಿ ಪಾಲಿಕೆಯೇ ಕೆಡವಿದೆ. ಅನವಶ್ಯಕ ರೆಂಬೆಗಳನ್ನ ತೆಗೆದು ಹಾಕಲಾಗಿದೆ.  ಇಂದು ಇಡೀ ದಿನ ಕಾರ್ಯಚರಣೆ ಕೈಗೊಂಡು ಮೈಸೂರು ಮಹಾನಗರ ಪಾಲಿಕೆ ಮರಗಳ ತೆರವು ಕಾರ್ಯ ಮಾಡಿದೆ.

ಇನ್ನು ಪಾಲಿಕೆ ಅಧಿಕಾರಿಗಳು ಸಹ ಈ ಸಮಯಕ್ಕಾಗಿ ಕಾಯುತ್ತಿದ್ದರು. ಹಲವು ಮರಗಳು ದೇವರಾಜ ಮಾರುಕಟ್ಟೆಯ ಮೇಲ್ಭಾಗದ ಚಾವಣಿಗೆ ಚಾಚಿದೆ. ಇದು ಮಳೆ ಬಂದಾಗ ಮೇಲ್ಚಾವಣಿ ಕುಸಿದು ಬೀಳುವ ಸಾಧ್ಯತೆಗಳು ಹೆಚ್ಚಾಗಿ, ಶೀಥಿಲಾವಸ್ಥೆ ಕೂಡ ತಲುಪಿದೆ. ಆದರೆ, ಮರಕ್ಕೆ ಯಾವುದೇ ತೊಂದರೆ ಆಗದಂತೆ ಕೇವಲ ಸತ್ವ ಇಲ್ಲದ ರೆಂಬೆ ಹಾಗೂ ಅನವಶ್ಯಕವಾದ ರೆಂಬೆ ಮಾತ್ರ ಕತ್ತರಿಸಲಾಯಿತು.

ಇದನ್ನೂ ಓದಿ :  ಬಂದೇ ನವಾಜ್ ಉರುಸ್ ಮೇಲೆ ಕೊರೋನಾ ಕರಿನೆರಳು ; ದರ್ಗಾದ ಆವರಣದಲ್ಲಿ ಸರಳವಾಗಿ ಆಚರಿಸಲು ತೀರ್ಮಾನ

ಗುಲ್‌ ಮೋಹರ್ ಮರಗಳು ಮಳೆ ಬಂದಾಗ ಕೇಳಗೆ ಬಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಮಾಡುತ್ತಿದ್ದವು. ಅಂತಹ ಮರಗಳನ್ನ ಗುರುತಿಸಿದ್ದ ಪಾಲಿಕೆ. ಇಂದು ಜನರು ಹಾಗೂ ವಾಹನ ಸಂಚಾರ ಇಲ್ಲದ ಸಮಯದಲ್ಲಿ ಮರಗಳನ್ನ ಕತ್ತರಿಸಿ ಮುಂದೇ ಆಗುವ ಅನಾಹುತ ತಪ್ಪಿಸಿದ್ದಾರೆ.  ಮುಂಬರುವ ಮಳೆಗಾಲಕ್ಕೆ ಲಾಕ್‌ಡೌನ್ ಸಮಯವನ್ನ ಸದ್ಬಳಕೆ ಮಾಡಿಕೊಂಡಿದೆ.

ಒಟ್ಟಾರೆ, ಸಂಡೇ ಲಾಕ್ ಲಾಕ್‌ಡೌನ್ ಎಲ್ಲರು ಮನೆಯಲ್ಲಿದ್ದು ಸುರಕ್ಷಿತವಾಗಿದ್ದರೇ, ಮೈಸೂರು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೈಲೆಂಟ್ ಆಗಿ ಸಂಡೇ ಕರ್ಫ್ಯೂ ಸದ್ಭಳಕೆ ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಜನರನ್ನ ಟೋಳ್ಳು ಮರಗಳಿಂದ ರಕ್ಷಣೆ ಮಾಡಿದ್ದಾರೆ.  ಈ ಮೂಲಕ ಮರ ಬಿದ್ದು ಸಮಸ್ಯೆ ಆಗುವ ಮುನ್ನ ಎಚ್ಚೆತ್ತು ಕರ್ತವ್ಯ ಪ್ರಜ್ಞೆ ಮೆರೆದಿರುವ  ನಿಜಕ್ಕು ಶ್ಲಾಘನೀಯವೇ ಸರಿ.
Published by: G Hareeshkumar
First published: July 5, 2020, 7:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading