HOME » NEWS » District » MYSORE JDS LEADERS URGE THE PARTY TO EXPEL GT DEVE GOWDA AND SANDESH NAGARAJ KMTV SNVS

ಜಿಟಿಡಿ, ಸಂದೇಶ ನಾಗರಾಜ್​ರನ್ನ ಜೆಡಿಎಸ್​ನಿಂದ ಉಚ್ಛಾಟನೆ ಮಾಡುವಂತೆ ಸ್ಥಳೀಯ ಮುಖಂಡರ ಆಗ್ರಹ

ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಜೆ.ಡಿ.ಎಸ್ ಮೈತ್ರಿ ರಾಜಕೀಯವಾಗಿ ಸಾಕಷ್ಟು ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಮೊನ್ನೆಯಷ್ಟೆ ಕಾಂಗ್ರೆಸ್ ಮುಖಂಡರುಗಳು ಮೈತ್ರಿ ವಿಚಾರವಾಗಿ ತಮ್ಮ ಪಕ್ಷದ ಶಾಸಕ ತನ್ವೀರ್ ಸೇಠ್ ವಿರುದ್ಧ ಧ್ವನಿ ಎತ್ತಿದ್ರು. ಇದೀಗ ಆ ಸರದಿ ಜೆ.ಡಿ.ಎಸ್​ನವರದ್ದಾಗಿದೆ.

news18-kannada
Updated:February 28, 2021, 1:09 PM IST
ಜಿಟಿಡಿ, ಸಂದೇಶ ನಾಗರಾಜ್​ರನ್ನ ಜೆಡಿಎಸ್​ನಿಂದ ಉಚ್ಛಾಟನೆ ಮಾಡುವಂತೆ ಸ್ಥಳೀಯ ಮುಖಂಡರ ಆಗ್ರಹ
ಮೈಸೂರು ಜೆಡಿಎಸ್ ಮುಖಂಡರ ಸುದ್ದಿಗೋಷ್ಠಿ
  • Share this:
ಮೈಸೂರು: ಮಳೆ ‌ನಿಂತರೂ ಮರದ ಹನಿ ‌‌ನಿಲ್ಲಲ್ಲ ಎಂಬ ಮಾತಿದೆ. ಅದೇ ರೀತಿ‌ ಮೈಸೂರು ಪಾಲಿಕೆ ಮೇಯರ್​ಗಾಗಿ ಮೈತ್ರಿಯಾಗಿದ್ದ ಕಾಂಗ್ರೆಸ್ - ಜೆ.ಡಿ.ಎಸ್‌ ದೋಸ್ತಿಗಳೇ ಕೆಸರೆರಚಾಟ ಶುರುಮಾಡಿದ್ದಾರೆ. ಕಾಂಗ್ರಸ್ ಮುಖಂಡರು ಜೆ.ಡಿ.ಎಸ್ ಸದಸ್ಯರನ್ನು‌ ಹಣಕೊಟ್ಟು ಕೊಳ್ಳಲು ಆಮಿಷ ತೋರಿದರು ಅಂತ ಜೆಡಿಎಸ್ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ. ಇನ್ನೊಂದೆಡೆ ಜಿ.ಟಿ. ದೇವೇಗೌಡರ ವಿರುದ್ಧವೂ ಸ್ವಪಕ್ಷಿಯರು ಗುಡುಗಿದ್ದು, ಪಾಲಿಕೆ ಚುನಾವಣೆಗೆ ಉದ್ದೇಶಪೂರಕವಾಗಿ ಗೈರಾಗಿರುವ ಜಿ.ಟಿ. ದೇವೇಗೌಡ ಹಾಗೂ ಸಂದೇಶ್‌ ನಾಗರಾಜ್‌ರನ್ನ ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿ ಅಂತ ಆಗ್ರಹಿಸಿದ್ದಾರೆ. ದಿನಂಪ್ರತಿ ನಡೆಯುತ್ತಿರುವ ಈ ರಾಜಕೀಯ ಪಕ್ಷಗಳ ಕೆಸರೆರಚಾಟದಿಂದ ಮೈಸೂರು ಪಾಲಿಕೆಯಲ್ಲಿ, ಅಭಿವೃದ್ದಿಗಿಂತ ರಾಜಕೀಯ ಮೇಲಾಟವೇ ಹೆಚ್ಚಾಗಿ ಹೋಗಿದೆ. 

ಮೈಸೂರು ಪಾಲಿಕೆ‌ಯಲ್ಲಿ ಕಾಂಗ್ರೆಸ್ ಜೆ.ಡಿ.ಎಸ್ ಮೈತ್ರಿ ರಾಜಕೀಯವಾಗಿ ಸಾಕಷ್ಟು ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಮೊನ್ನೆಯಷ್ಟೆ ಕಾಂಗ್ರೆಸ್ ಮುಖಂಡರುಗಳು‌ ಮೈತ್ರಿ ವಿಚಾರವಾಗಿ ತಮ್ಮ ಪಕ್ಷದ ಶಾಸಕ ತನ್ವೀರ್ ಸೇಠ್ ವಿರುದ್ಧ ಧ್ವನಿ ಎತ್ತಿದ್ರು. ‌ಇದೀಗ ಆ‌ ಸರದಿ ಜೆ.ಡಿ.ಎಸ್​ನವರದ್ದಾಗಿದೆ. ಮೇಯರ್ ಚುನಾವಣೆಗೆ ಶಾಸಕ‌‌ ಜಿ.ಟಿ.ದೇವೆಗೌಡ ಗೈರಾಗಿದ್ದಕ್ಕೆ ಇಂದು ಜೆ.ಡಿ.ಎಸ್ ನಗರಾಧ್ಯಕ್ಷರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಜಿ.ಟಿ. ದೇವೆಗೌಡರ ವಿರುದ್ಧ ಗುಡುಗಿದರು. ಅದರಲ್ಲೂ ಜಿ.ಟಿ. ದೇವೆಗೌಡರ ಬೆಂಬಲಿಗರು ಸಹ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದು, ಅಚ್ವರಿಗೆ ಕಾರಣವಾಗಿತ್ತು.‌ ಜಿ.ಟಿ.ದೇವೇಗೌಡ ಬಿಜೆಪಿ ಜೊತೆ ಒಪ್ಪಂದ‌ ಮಾಡಿಕೊಂಡು ಅವರಿಗೆ ಅನುಕೂಲ‌‌ ಮಾಡುವ ಸಲುವಾಗಿ ಚುನಾವಣೆಗೆ ಗೈರಾಗಿದ್ರು ಅಂತ ಆರೋಪ ಮಾಡಿದರು.‌ ಅದಷ್ಟೆ ಅಲ್ಲದೆ ಪದೇ ಪದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಜಿ.ಟಿ.ಡಿ ಭಾಗಿಯಾಗಿದ್ದಾರೆ. ಇವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಈ ಜೊತೆಯಲ್ಲಿ ತನ್ನ ತಮ್ಮನ ಮಗನಿಗೆ ಅನುಕೂಲ ಮಾಡಿಕೊಡಲು ಸಂದೇಶ್‌ ನಾಗರಾಜ್‌ ಸಹ ಪಾಲಿಕೆ ಚುನಾವಣೆಗೆ ಗೈರಾಗಿದ್ದು, ಅವರನ್ನು ಜೆಡಿಎಸ್‌ನಿಂದ ಉಚ್ಛಾಟಿಸಬೇಕು ಅಂತ ಆಗ್ರಹಿಸಿದರು.

ಇದನ್ನೂ ಓದಿ: ಮೈಸೂರು ಮೇಯರ್ ಚುನಾವಣೆಯಲ್ಲಿ ನಡೆದಿದ್ದೇನು? ಸೋಮವಾರ ಸಮಗ್ರ ವರದಿ ಸಲ್ಲಿಕೆ: ಧ್ರುವನಾರಾಯಣ

ಇನ್ನು ಕುಮಾರಸ್ವಾಮಿ ಡೀಲ್ ಮಾಡಲು ರೆಸಾರ್ಟ್ ನಲ್ಲಿ‌ ಉಳಿದಿದ್ರು ಎಂಬ ಆರೋಪಕ್ಕೆ ಜೆ.ಡಿ.ಎಸ್ ನವರು ತಿರುಗೇಟು ನೀಡಿದ್ದಲ್ಲದೆ ಕಾಂಗ್ರೆಸ್ ವಿರುದ್ಧವೂ ಗಂಭೀರ ಆರೋಪ ಮಾಡಿದ್ರು. ಮೇಯರ್ ಚುನಾವಣೆಗೂ‌ ಮುನ್ನ ಜೆ.ಡಿ.ಎಸ್ ಸದಸ್ಯರನ್ನ ಸೆಳೆಯಲು ಕಾಂಗ್ರೆಸ್ ಮುಖಂಡರು 15 ಲಕ್ಷ ರೂ ಆಫರ್ ಕೊಟ್ಟಿದ್ರು. ಐವರು ಸದಸ್ಯರಿಗೆ ತಲಾ 15 ಲಕ್ಷ ಕೊಡುವುದಾಗಿ ಹೇಳಿದ್ರು ಅಂತ ಆರೋಪ ಮಾಡಿದ್ರು. ಇದರ ಉಸ್ತುವಾರಿಯನ್ನು ಮಾಜಿ‌ ಮೇಯರ್ ಆಯೂಬ್ ಖಾನ್ ಮತ್ತು‌ ಪಾಲಿಕೆ ಸದಸ್ಯ ಆರೀಫ್ ಉಸೇನ್ ವಹಿಸಿಕೊಂಡಿದ್ದರು. ಅದಷ್ಟೇ ಅಲ್ಲದೆ ಜೆ.ಡಿ.ಎಸ್​ನ ಇಬ್ಬರು ಮುಸ್ಲಿಂ ಕಾರ್ಪೋರೇಟರ್​ಗಳನ್ನು ಕೂಡಿ‌ಹಾಕಿದ್ರು. ಉಳಿದ 12 ಕಾರ್ಪೋರೆಟರ್ ಕರೆದುಕೊಂಡು ಬರಲು ನನಗೆ‌ ಹೇಳಿದ್ರು ಅಂತ ಜೆ.ಡಿ.ಎಸ್ ಮುಖಂಡ ಅಬ್ದುಲ್ ಅಜೀಜ್ ಆರೋಪ‌‌ ಮಾಡಿದರು. ಇದೀಗಾ ಸಿದ್ದರಾಮಯ್ಯ ಓಲೈಸಿಕೊಳ್ಳುವ ಸಲುವಾಗಿ ಡೀಲ್ ಅಂತ ಮಾತನಾಡುತ್ತಿದ್ದಾರೆ. ಮೊದಲು ಡೀಲ್ ಮಾಡಲು ಹೊರಟವರು ನೀವು, ನಾವಲ್ಲ ಅಂತ ಹೇಳಿದ್ರು.‌ ಈ ನನ್ನ ಆರೋಪಗಳಿಗೆ ನಾನು ಪ್ರತ್ಯಕ್ಷ ಸಾಕ್ಷಿ, ಇದಕ್ಕೆಲ್ಲ ನನ್ನ ಬಳಿ ದಾಖಲೆ ಇದೆ ಅಂತಲೂ ಅವರು ತಿಳಿಸಿದರು.

ಒಟ್ಟಾರೆ, ಹಳೆ ದೋಸ್ತಿಗಳು ಮತ್ತೆ ಮೈತ್ರಿ‌ ಮಾಡಿಕೊಂಡು ಇದೀಗ ಒಬ್ಬರ ಮೇಲೊಬ್ಬರು‌ ಕೆಸರೆರಚಾಟ ಪ್ರಾರಂಭ ಮಾಡಿದ್ದಾರೆ. ಈ‌ ನಡುವೆ ಜಿ.ಟಿ. ದೇವೇಗೌಡ ಮತ್ತು ಸಂದೇಶ್‌ ನಾಗರಾಜ್‌ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎನ್ನುವ ಮಾತುಗಳು ಕೇಳಿಬಂದಿದ್ದು, ಈ ಎಲ್ಲಾ ಬೆಳವಣಿಗೆಗಳು ಯಾವ ಹಂತಕ್ಕೆ ತಲುಪುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.

ವರದಿ: ಪುಟ್ಟಪ್ಪ
Published by: Vijayasarthy SN
First published: February 28, 2021, 1:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories