HOME » NEWS » District » MYSORE DISTRICT ADMINISTRATON PREPARE FOR CORONA VACCINE DISTRIBUTION PMTV MAK

ಕೊರೋನಾ ಲಸಿಕೆ ಹಂಚಿಕೆಗೆ ಸಕಲ ಸಿದ್ದತೆ: ಮೈಸೂರಿನಲ್ಲಿದೆ 40 ಲಕ್ಷ ಡೋಸ್‌ ಸಂಗ್ರಹಣೆ ಸಾಮಾರ್ಥ್ಯ

ಲಸಿಕೆ ಪಡೆಯುವವರ ವಿವರ ಕೋವಿನ್ ಆ್ಯಪ್‌ನಲ್ಲಿ ಅಪ್ಲೋಡ್ ಆಗಿದೆ ಯಾರು ರಿಜಿಸ್ಟರ್ ಮಾಡಿಸಿರುತ್ತಾರೋ ಅವರಿಗೆ ಮಾತ್ರ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ.

news18-kannada
Updated:January 6, 2021, 3:56 PM IST
ಕೊರೋನಾ ಲಸಿಕೆ ಹಂಚಿಕೆಗೆ ಸಕಲ ಸಿದ್ದತೆ: ಮೈಸೂರಿನಲ್ಲಿದೆ 40 ಲಕ್ಷ ಡೋಸ್‌ ಸಂಗ್ರಹಣೆ ಸಾಮಾರ್ಥ್ಯ
ಕೋವಿಡ್ ಲಸಿಕೆ.
  • Share this:
ಮೈಸೂರು: ದೇಶಾದ್ಯಾಂತ ಕೊರೋನಾ ಲಸಿಕೆ ವಿತರಣೆಗೆ ಸರ್ಕಾರ ಸಿದ್ದತೆ ನಡೆಸಿದ್ದು, ಕರ್ನಾಟಕದಲ್ಲು ಮೊದಲ ಹಂತದ ಕೊರೊನಾ ಲಸಿಕೆ ಸಾರ್ವಜನಿಕರಿಗಿಂತ ಮೊದಲು ಕೊರೋನಾ ವಾರಿಯರ್ಸ್‌ಗೆ ಸಿಗಲಿದೆ. ಇದಕ್ಕಾಗಿ ಅರಮನೆ ನಗರಿ ಮೈಸೂರಿನಲ್ಲಿ ಲಸಿಕೆ ಹಂಚಿಕೆಯ ಅಭಿಯಾನಕ್ಕೆ ಸರ್ವ ಸನ್ನದ್ದವಾಗಿರುವ ಜಿಲ್ಲಾಡಳಿತ, ಲಸಿಕೆ ಬಂದ ಕೂಡಲೆ ಅದನ್ನ ಕೊರೊನಾ ವಾರಿಯರ್ಸ್‌ಗೆ ನೀಡಲು ಸಜ್ಜಾಗಿದೆ.  ಜಿಲ್ಲಾಧ್ಯಂತ ಕೋಲ್ಡ್ ಸ್ಟೋರೆಜ್‌ ಘಟಕ ಸೇರಿದಂತೆ ಸಕಲ ಸಿದ್ದತೆ ಮಾಡಿಕೊಂಡಿರುವ ಜಿಲ್ಲಾಡಳಿತ 40 ಲಕ್ಷ ಡೋಸ್‌ ಸಂಗ್ರಹಣೆಗೆ ಸಿದ್ದತೆ ಮಾಡಿಕೊಂಡಿದೆ. ಮೈಸೂರಿನಲ್ಲಿ‌‌ ಕೊರೋನಾ ಲಸಿಕೆ ಹಂಚಿಕೆಗೆ ಸಿದ್ದತೆ ಜೋರಾಗಿದ್ದು, ಈ ಕ್ಷಣದಲ್ಲೇ ಲಸಿಕೆ ಬಂದರೂ ನಿಬಾಯಿಸಲು ಮೈಸೂರು ಜಿಲ್ಲಾಡಳಿತ ಸನ್ನದ್ದವಾಗಿದೆ.

ಸದ್ಯಕ್ಕೆ ಮೈಸೂರಿನಲ್ಲಿ ಹೊಸದಾದ ಬೃಹತ್‌ ಉಗ್ರಾಣ ಕೇಂದ್ರ ಸ್ಥಾಪನೆಯಾಗಿದ್ದು, ಎರಡು ವಾಕ್ ಇನ್ ಕೂಲರ್‌ಗಳನ್ನು ಸಿದ್ದ ಪಡಿಸಿಕೊಂಡಿರುವ ಆರೋಗ್ಯ ಇಲಾಖೆ  15 ಲಕ್ಷದಿಂದ 16 ಲಕ್ಷ ಡೋಸೆಜ್‌ಗಳನ್ನ ಏಕಕಾಲಕ್ಕೆ ಶೇಖರಣೆ ಮಾಡಲು ಸಿದ್ದವಾಗಿದೆ. ಮೈಸೂರು ಜಿಲ್ಲಾ ವೈದ್ಯಾಧಿಕಾರಿಗಳ ಕಟ್ಟಡದಲ್ಲಿ ಈ ಸಿದ್ದತೆಯಾಗಿದ್ದು, ಪ್ರಾದೇಶಿಕ ಹಾಗೂ ಜಿಲ್ಲಾ ಲಸಿಕಾ ಉಗ್ರಾಣದಲ್ಲಿರುವ ಎರಡು ವಾಕ್ ಇನ್ ಕೂಲರ್‌ಗಳು, 2 ರಿಂದ 8 ಡಿಗ್ರಿ ಉಷ್ಣಾಂಶ ಕಾಪಾಡಿಕೊಳ್ಳಲಿದ್ದು,  ಪ್ರತಿ ಕೂಲರ್‌ನಲ್ಲಿ 8 ಲಕ್ಷ ಡೋಸೇಜ್ ಸಂಗ್ರಹ ಸಾಮರ್ಥ್ಯ ಇದೆ.

ಎರಡು ಕೂಲರ್‌ನಿಂದ 16 ಲಕ್ಷ ಡೋಸೇಜ್ ಸಂಗ್ರಹ ಸಾಧ್ಯವಾಗಲಿದ್ದು,  ಒಬ್ಬ ವ್ಯಕ್ತಿ ಓಡಾಡಿಕೊಂಡು ವಾಕ್ಸಿನ್‌ಗಳನ್ನ ಸ್ಟೋರೆಜ್ ಮಾಡುವ ಸಾಮಾರ್ಥ್ಯವುಳ್ಳ ಈ ಕೂಲರ್‌ಗಳನ್ನ ಸದ್ಯಕ್ಕೆ ದಡಾರ, ಪೋಲೀಯೋ,ಹಾಗೂ ಮತ್ತಿತ್ತರ ವ್ಯಾಕ್ಸಿನ್‌ ಸಂಗ್ರಹಣೆಗೆ ಬಳಸಲಾಗುತ್ತಿದೆ. ಇಷ್ಟೇ ಅಲ್ಲದೆ ಪಶು ಇಲಾಖೆಯ 6  ವಾಕ್ ಇನ್ ಕೂಲರ್ ಹಾಗೂ ತಾಲೂಕು ಕೇಂದ್ರಗಳ ಕೂಲರ್ ಸೇರಿ ಒಟ್ಟು ಮೈಸೂರು ಜಿಲ್ಲೆಯಾಧ್ಯಂತ  40 ಲಕ್ಷ ಡೋಸೇಜ್ ಸಂಗ್ರಹ ಮಾಡಬಹುದು ಅಂತ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮೈಸೂರಿನಲ್ಲಿ 32,800 ಮಂದಿಗೆ ಮೊದಲ ಹಂತದ ವ್ಯಾಕ್ಸಿನ್ ಸಿಗಲಿದೆ, ವೈದ್ಯರು,ನರ್ಸ್‌ಗಳು,ಆರೋಗ್ಯ ಇಲಾಖೆ ಸಿಬ್ಬಂದಿ,  ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಚರಣೆ,ನರ್ಸಿಂಗ್ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.  ಎರಡು ವಾಕ್ ಇನ್ ಕೂಲರ್‌ನಲ್ಲಿ 16 ಲಕ್ಷ ಡೋಸ್ ಸಂಗ್ರಹಣೆ ಸಾಮಾರ್ಥ್ಯ ಇದೆ,  ಪಶು ಇಲಾಖೆಯ 6 ವಾಕ್ ಇನ್ ಕೂಲರ್‌ನಲ್ಲಿ ಲಸಿಕೆ ಸಂಗ್ರಹಣೆ ಮಾಡಲು ನಿರ್ಧಾರ ಮಾಡಿರುವುದರಿಂದ, ಪಶು ಇಲಾಖೆಯ 6 ವಾಕ್ ಇನ್ ಕೂಲರ್‌ನಲ್ಲಿ 24 ಲಕ್ಷ ಡೋಸ್ ಸಂಗ್ರಹಣೆ ಸಾಮಾರ್ಥ್ಯ ಇದ್ದು,  ಮೈಸೂರಿನಲ್ಲಿ ಏಕಕಾಲಕ್ಕೆ 40 ಲಕ್ಷ ಡೋಸ್ ಸಂಗ್ರಹಣೆ ಮಾಡುವ ಸಾಮಾರ್ಥ್ಯ ಇದೆ.

ಲಸಿಕೆ ಪಡೆಯುವವರ ವಿವರ ಕೋವಿನ್ ಆ್ಯಪ್‌ನಲ್ಲಿ ಅಪ್ಲೋಡ್ ಆಗಿದೆ ಯಾರು ರಿಜಿಸ್ಟರ್ ಮಾಡಿಸಿರುತ್ತಾರೋ ಅವರಿಗೆ ಮಾತ್ರ ಲಸಿಕೆ ವಿತರಣೆ ಮಾಡಲಾಗುತ್ತದೆ. ಸಾಮಾನ್ಯ ಜನರಿಗೆ ಮೊದಲು ಲಸಿಕೆ ನೀಡಲು ಸಾಧ್ಯವಿಲ್ಲ, ಸರ್ಕಾರದ ಸೂಚನೆ ನಂತರವೇ ಸಾಮಾನ್ಯ‌ ಜನರಿಗೆ ಲಸಿಕೆ ನೀಡಲು ಸಾಧ್ಯ ಹೊರೆತು ಸದ್ಯಕ್ಕೆ ಯಾವುದೇ ಸೂಚನೆ ಬಂದಿಲ್ಲ. ಪ್ರತಿ ದಿನ 100 ಜನರಿಗೆ ಒಂದು ಲಸಿಕಾ ಕೇಂದ್ರದಲ್ಲಿ ಡೋಸ್ ನೀಡುವ ಚಿಂತನೆ ಮಾಡಿದ್ದು ಮುಂದಿನ ಹಂತದ ಬದಲಾವಣೆಗಳು ಸರ್ಕಾರದ ಮಾರ್ಗಸೂಚಿ ನಂತರ ಆಗಲಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ.  ಕೊರೊನಾ ಲಸಿಕೆ ಹಂಚಿಕೆ ಸಿದ್ಧತೆ ಆಗಿದೆ, ಪ್ರಾರಂಭಿಕ ಹಂತದಲ್ಲಿ ಮೈಸೂರಿನ 32 ಸಾವಿರ ಕೊರೊನಾ ವಾರಿಯರ್‌ಗಳಿಗೆ ಲಸಿಕೆ ಹಾಕುತ್ತೇವೆ. ಕೋವಿಡ್ ಲಸಿಕೆ ಅಭಿಯಾನ ಸಂಬಂಧ ಮುಖ್ಯ ಕಾರ್ಯದರ್ಶಿ ಅವರು ವಿಡಿಯೋ ಕಾನ್ಫಿರೆನ್ಸ್ ನಡೆಸಿದ್ದಾರೆ‌.  ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಯಾವ ಲಸಿಕೆ ಕೊಡುತ್ತಾರೆ ಎಂಬುದು ಗೊತ್ತಿಲ್ಲ, ಇನ್ನೆರಡು ಮೂರು ದಿನದಲ್ಲಿ ಲಸಿಕೆ ಬರಲಿದೆ ಅಂತಷ್ಟೆ ಹೇಳಿದ್ದಾರೆ.

ಇದನ್ನೂ ಓದಿ: ಪಕ್ಷದ ಶಿಸ್ತುಕ್ರಮ ಉಲ್ಲಂಘಿಸಿ ಮಾತನಾಡುವವರ ವಿರುದ್ಧ ಕಠಿಣ ಕ್ರಮ; ಸಚಿವ ಆರ್​. ಅಶೋಕ್​ ಎಚ್ಚರಿಕೆಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ 162 ಪಾಯಿಂಟ್ ಮಾಡಿಕೊಂಡಿದ್ದೇವೆ‌ ಪ್ರತಿ ಕೇಂದ್ರದಲ್ಲಿ 5 ವ್ಯಾಕ್ಸಿನೇಟರ್, ಸ್ಟೋರೇಜ್, ಅಗತ್ಯ ಸೌಕರ್ಯ ಮಾಡಿಕೊಂಡಿದ್ದೇವೆ. ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡಿದ 15 ಸಾವಿರ ಸರ್ಕಾರಿ ಹಾಗೂ 17 ಸಾವಿರ ಖಾಸಗಿ ಸಿಬ್ಬಂದಿ ಇದ್ದಾರೆ‌, ಮೊದಲ ಹಂತದಲ್ಲಿ ಇರುವರಿಗೆ ಮಾತ್ರ ವ್ಯಾಕ್ಸಿನೇಷನ್ ಮಾಡುತ್ತೇವೆ. 100ಕ್ಕಿಂತ ಹೆಚ್ಚು ಜನ ಇರುವ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದ ವತಿಯಿಂದಲೇ ಲಸಿಕೆ ಸರಬರಾಜು ಮಾಡುತ್ತೇವೆ ಆದ್ರೆ ಸಾರ್ವಜನಿಕರಿಗೆ ಸದ್ಯ ಲಸಿಕೆ ಹಾಕುವುದಿಲ್ಲ ಅಂತ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆ ಮೈಸೂರಿನಲ್ಲಿ ಕೊರೊನಾ ವಾಕ್ಸಿನ್‌ ಬಂದರೆ ಅದರ ಹಂಚಿಕೆಗೆ ಸಲಕ ಸಿದ್ದತೆ ನಡೆದಿದ್ದು, ಲಸಿಕೆ ವಿತರಣೆ ಕಾರ್ಯ ಆರಂಭವಾದ ತಕ್ಷಣವೇ ಮೈಸೂರಿನಲ್ಲು ಲಸಿಕೆಗಳು ಕೊರೊನಾ ವಾರಿಯರ್ಸ್‌ಗೆ ಲಭ್ಯವಾಗಲಿದೆ. ಆದ್ರೆ ಸಾರ್ವಜನಿಕರಿಗೆ ಕೊರೊನಾ ಲಸಿಕೆ ಯಾವಾಗಾ ಸಿಗುತ್ತೆ ಅನ್ನೋದೆ ಸದ್ಯಕ್ಕೆ ಮೈಸೂರಿಗರಿಗಿರುವ ಪ್ರಶ್ನೆಯಾಗಿದೆ.
Published by: MAshok Kumar
First published: January 6, 2021, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories