HOME » NEWS » District » MYSORE DC ROHINI SINDHURI TAKEN BACK HER ORDER ON COVID19 GUIDELINES IN MYSURU SCT PMTV

Mysore: ಮೈಸೂರಿನಲ್ಲಿ ಕೊರೋನಾ ಕಠಿಣ ನಿಯಮ ಆದೇಶ ಹಿಂಪಡೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು ಜಿಲ್ಲಾಡಳಿತದಿಂದ ಹೊರಡಿಸಲಾಗಿರುವ ಸಲಹಾ ಸೂಚನಾ ಆದೇಶವನ್ನ ತಕ್ಷಣದಿಂದ ಹಿಂಪಡೆಯಲಾಗಿದೆ. ಅಲ್ಲದೆ ಸಲಹಾ ಸೂಚನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕೋರಿ ಪತ್ರ ಬರೆಯಲಾಗಿರುತ್ತದೆ ಎಂದು ಸರ್ಕಾರಕ್ಕೆ ಪತ್ರ ಬರೆದ ಮಾಹಿತಿಯನ್ನು ಮೈಸೂರು ಡಿಸಿ ರೋಹಿಣಿ ಸಿಂಧೂರಿ ನೀಡಿದ್ದಾರೆ.

news18-kannada
Updated:April 9, 2021, 3:13 PM IST
Mysore: ಮೈಸೂರಿನಲ್ಲಿ ಕೊರೋನಾ ಕಠಿಣ ನಿಯಮ ಆದೇಶ ಹಿಂಪಡೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
  • Share this:
ಮೈಸೂರು (ಏ. 9): ಮೈಸೂರು ಜಿಲ್ಲೆಯಲ್ಲಿ ಕೊರೋನಾ ಕಠಿಣ ನಿಯಮಗಳ ಜಾರಿ ವಿಚಾರವಾಗಿ, ಸರ್ಕಾರದ ಸುತ್ತೋಲೆ ಬೆನ್ನಲ್ಲೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ನಿನ್ನೆ ಹೊರಡಿಸಿದ್ದ ತಮ್ಮ ಆದೇಶವನ್ನು ಹಿಂದಕ್ಕೆ ಪಡೆದು ಅದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಬೆಂಗಳೂರು ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಭೇಟಿ ನೀಡುವ ವ್ಯಕ್ತಿಗಳು ಕೋವಿಡ್-19 ನೆಗೆಟಿವ್ ರಿಪೋರ್ಟ್ ಹೊಂದಿರಲು ಸಲಹಾ ಸೂಚನೆ ನೀಡಲಾಗಿತ್ತು, ಆದರೆ ಸಾರ್ವಜನಿಕರಲ್ಲಿ ಈ ಸಲಹಾ ಸೂಚನೆ ಬಗ್ಗೆ ಗೊಂದಲ ಉಂಟಾಗಿದೆ. ಅಲ್ಲದೆ, ಸರ್ಕಾರದ ಸುತ್ತೋಲೆಯಲ್ಲಿ ಕೋವಿಡ್‌-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಆದೇಶಗಳನ್ನು ಹೊರಡಿಸದಂತೆ ಹೇಳಲಾಗಿದೆ. ಈಗಾಗಲೇ ಇಂತಹ ಆದೇಶ, ಸೂಚನೆ ಹೊರಡಿಸಿದ್ದಲ್ಲಿ ತಕ್ಷಣವೇ ಹಿಂಪಡೆಯಲು ನಿರ್ದೇಶಿಸಿದೆ. ಆದ್ದರಿಂದ ಮೈಸೂರು ಜಿಲ್ಲಾಡಳಿತದಿಂದ ಹೊರಡಿಸಲಾಗಿರುವ ಸಲಹಾ ಸೂಚನಾ ಆದೇಶವನ್ನ ತಕ್ಷಣದಿಂದ ಹಿಂಪಡೆಯಲಾಗಿದೆ. ಅಲ್ಲದೆ ಸಲಹಾ ಸೂಚನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕೋರಿ ಪತ್ರ ಬರೆಯಲಾಗಿರುತ್ತದೆ ಎಂದು ಸರ್ಕಾರಕ್ಕೆ ಪತ್ರ ಬರೆದ ಮಾಹಿತಿಯನ್ನು ಮೈಸೂರು ಡಿಸಿ ರೋಹಿಣಿ ಸಿಂಧೂರಿ ನೀಡಿದ್ದಾರೆ.

ಮೈಸೂರಿನಲ್ಲಿ 10 ದಿನಗಳ ಕೊರೊನಾ ಟಫ್‌ ರೂಲ್ಸ್ ವಿಚಾರವಾಗಿ ನಿನ್ನೆ ಸಂಜೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶವನ್ನು ರದ್ದು ಮಾಡಿದ್ದ ರಾಜ್ಯ ಸರ್ಕಾರ,  ಕೋವಿಡ್‌-19 ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮಾತ್ರ ಆದೇಶ ಹೊರಡಿಸಬೇಕು. ಯಾವುದೇ ಜಿಲ್ಲಾಡಳಿತ ಅಥವಾ ಸ್ಥಳೀಯ ಆಡಳಿತದಿಂದ ಪ್ರತ್ಯೇಕ ಆದೇಶ ಹೊರಡಿಸುವಂತಿಲ್ಲ. ಯಾವುದೇ ರೀತಿಯ ಸಲಹೆ ಸೂಚನೆಗಳನ್ನು ನೀಡುವಂತಿಲ್ಲ. ಅಂತಹ ಪ್ರಸ್ತಾವನೆ ಇದ್ದರೆ ಸರ್ಕಾರದ ಮುಖ್ಯಕಾರ್ಯದರ್ಶಿಯೊಂದಿಗೆ ಚರ್ಚಿಸಬೇಕು. ಈ ಬಗ್ಗೆ ಮಾರ್ಚ್‌ 29ರಂದು ಸಿಎಂ ಬಿಎಸ್‌ವೈ ಅವರು ನಿರ್ದೇಶನ ನೀಡಿರುತ್ತಾರೆ. ಯಾವುದೇ ಜಿಲ್ಲಾಡಳಿತ ಪ್ರತ್ಯೇಕ ಆದೇಶ ನೀಡಿದರೆ ಅದು ಸಿಎಂ ನಿರ್ದೇಶನದ ಉಲ್ಲಂಘನೆ ಆಗಲಿದೆ. ಯಾವುದೇ ಜಿಲ್ಲಾಡಳಿತ ಪ್ರತ್ಯೇಕ ಆದೇಶ ಹೊರಡಿಸಿದ್ದರೆ ಅದನ್ನ ವಾಪಾಸ್‌ ಪಡೆಯತಕ್ಕದ್ದು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಅವರಿಂದ ಸುತ್ತೋಲೆ ಬಿಡುಗಡೆ ಮೂಲಕ ಮೈಸೂರು ಜಿಲ್ಲಾಡಳಿತ ಪ್ರತ್ಯೇಕ ಆದೇಶ ರದ್ದು ಮಾಡಿದ್ದರು.

ಸುತ್ತೋಲೆ ಬರುವ 5 ಗಂಟೆ ಮುಂಚಿತವಾಗಿ ಸುದ್ದಿಗೋಷ್ಠಿ ನಡೆಸಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ನಗರ ಪೊಲೀಸ್ ಆಯುಕ್ತ ಡಾ. ಚಂದ್ರ ಗುಪ್ತ. ಏ. 10ರಿಂದ ಏ. 20ರವರೆಗೆ ಕೋವಿಡ್ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಮೈಸೂರಿನಲ್ಲಿ ಯಾವುದೇ ಜನಸಂದಣಿ ಜಾಗಕ್ಕೆ ಹೋಗೋಕೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಇರಬೇಕು ದಿನೇದಿನೆ ಹೆಚ್ಚುತ್ತಿರುವ ಕೊರೊನಾ ಪ್ರರಕರಣಗಳ ನಿಯಂತ್ರಣಕ್ಕೆ ನಾವು ಈ ಕ್ರಮ ಕೈಗೊಳ್ಳಲಾಗಿದೆ.

ಇದು ಲಾಕ್‌ಡೌನ್‌ ಅಲ್ಲ, ನಾವು ಯಾವುದೇ ಪ್ರವಾಸಿ ತಾಣವನ್ನು ಮುಚ್ಚೋದಿಲ್ಲ. ಆದರೆ, ಎಲ್ಲಿಗೆ ಹೋಗಬೇಕು ಅಂದರೂ ನೀವು ಕೊರೊನಾ ನೆಗೆಟಿವ್‌ ರಿಪೋರ್ಟ್ ಇಟ್ಕೊಂಡು ಓಡಾಡಬೇಕು ಎಂದ ಖಡಕ್ ಸೂಚನೆ ನೀಡಿದ್ದರು. ಲಿಖಿತ ರೂಪದಲ್ಲೂ ಆದೇಶ ನೀಡಿದ್ದರು. ಇದೀಗ ಸರ್ಕಾರದ ಸುತ್ತೋಲೆ ನಂತರ ಲಿಖಿತ ರೂಪದಲ್ಲೆ ತನ್ನ ಆದೇಶ ಹಿಂಪಡೆದ ಡಿಸಿ ರೋಹಿಣಿ ಸಿಂಧೂರಿ, ಸರ್ಕಾರಕ್ಕೆ ಪ್ರಸ್ತಾವನೆ ಮೂಲಕ ಪತ್ರ ಬರೆದಿದ್ದಾರೆ.
Published by: Sushma Chakre
First published: April 9, 2021, 3:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories