ದಸರಾಗೆ ಕೊರೋನಾ ವಾರಿಯರ್ಸ್ ಪಟ್ಟಿ ಸಿದ್ಧ; ಎಷ್ಟು ಜನ ಸೇರಬೇಕೆಂಬುದು ನಾಳೆ ನಿರ್ಧಾರ: ಎಸ್.ಟಿ. ಸೋಮಶೇಖರ್

ಕೋವಿಡ್ ನಡುವೆ ನಡೆಯುತ್ತಿರುವ ಮೈಸೂರು ದಸರಾ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಎಷ್ಟು ಮಂದಿ ಸೇರಲು ಅವಕಾಶ ನೀಡಬೇಕೆಂಬುದನ್ನು ಟೆಕ್ನಿಕಲ್ ಕಮಿಟಿ ನೀಡುವ ವರದಿ ಮೇಲೆ ನಿರ್ಧರಿಸುತ್ತೇವೆ ಎಂದು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ಧಾರೆ.

ಎಸ್.ಟಿ. ಸೋಮಶೇಖರ್

ಎಸ್.ಟಿ. ಸೋಮಶೇಖರ್

  • Share this:
ಮೈಸೂರು(ಅ. 08): ದಸರಾ ಕಾರ್ಯಕ್ರಮಗಳ ಬಗ್ಗೆ ನಾಳೆ ಸಂಜೆ ಟೆಕ್ನಿಕಲ್ ಕಮಿಟಿ ನೀಡುವ ವರದಿ ನಂತರ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಅಂತ ಮೈಸೂರು ಉಸ್ತವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಸಿದ್ದತೆ ಫೈನಲ್ ಆಗಿದೆ. ಆದ್ರೆ ಎಷ್ಟು ಜನ ಸೇರಬೇಕು ಅನ್ನೋದನ್ನ ಟೆಕ್ನಿಕಲ್ ಕಮಿಟಿ ತೀರ್ಮಾನ ಮಾಡಲಿದೆ. ಜನಸಂದಣಿ ಆಗದಂತೆ ಕಾರ್ಯಕ್ರಮ ರೂಪಿಸುತ್ತೇವೆ. ಕೇಂದ್ರ ಸರ್ಕಾರ ನೀಡಿರುವ ಎಲ್ಲ ಮಾರ್ಗಸೂಚಿ  ಪಾಲನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸಚಿವರು ಕೊರೊನಾ ನಡುವೆ ದಸರಾಗೆ ಸಿದ್ದತೆ ನಡೆದಿದೆ ಎಂದು ತಿಳಿಸಿದರು. 

ಮೈಸೂರು ದಸರಾ ದೀಪಾಲಂಕಾರದ ಬಗ್ಗೆ ಆಕ್ಷೇಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಎಸ್.ಟಿ. ಸೋಮಶೇಖರ್, ಕಳೆದ ಬಾರಿ ಯಾವ ರೀತಿ ದೀಪಾಲಂಕಾರ ಇತ್ತೋ ಅದೇ ರೀತಿ ಇರಬೇಕು. ಇದು ನನ್ನ ತೀರ್ಮಾನವಲ್ಲ. ಹೈಪವರ್ ಕಮಿಟಿಯಲ್ಲಿನ ಸಿಎಂ ನಿರ್ಧಾರ ಮಾಡಿದ್ದು. ಅಲ್ಲಿ ಏನು ಡಿಸೈಡ್ ಆಗಿದೆ ಅದನ್ನ ನಾನು ಮಾಡ್ತಿದ್ದೀನಿ ಎಂದು ಹೇಳಿದರು.

ಕಳೆದ ಬಾರಿ 106 ಕಿಲೋಮೀಟರ್ ಇತ್ತು. ಈ ಬಾರಿ 50 ಕಿಲೋಮೀಟರ್ ಗೆ ಇದೆ. ಸಾಂಸ್ಕೃತಿಕ ಕಾರ್ಯಕ್ರಮ ಲೈವ್ ಮಾಡುವ ಚಿಂತನೆ ಮಾಡ್ತಿದ್ದೇವೆ. ಜಂಬೂಸವಾರಿಗೆ ಅಧಿಕಾರಿಗಳು ಮಾಧ್ಯಮ ಗಜಪಡೆ ಸಿಬ್ಬಂದಿಗೆ ಮಾತ್ರ ಅನುಮತಿ ಕೇಳಿದ್ದೇವೆ. ನಾಳೆ ಕಮಿಟಿ ಬರಲಿದ್ದು, ಅದರ ವರದಿ ಆಧಾರದ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ. ವಿಶ್ವವಿಖ್ಯಾತ ಮೈಸೂರು ದಸರಾ 2020ರ ಉದ್ಘಾಟನೆಗೆ ವಾರಿಯರ್ಸ್‌ ಲಿಸ್ಟ್ ರೆಡಿ ಆಗಿದೆ. ಯಾರು ಉದ್ಘಾಟಕರು ಅಂತ ಸಿಎಂ ಘೋಷಣೆ ಮಾಡ್ತಾರೆ.  ಒಬ್ಬರು ಉದ್ಘಾಟನೆ ಮಾಡಿ ನಾಲ್ವರಿಗೆ ಸನ್ಮಾನ ಕಾರ್ಯಕ್ರಮ ಮಾಡುವ ಚಿಂತನೆ ಇದೆ. ಈ ಬಗ್ಗೆ ಸಿಎಂ ಅವರೇ ಅಧಿಕೃತ ಘೋಷಣೆ ಮಾಡ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಸದ್ಯ ಶಾಲೆ ತೆರೆಯಲ್ಲ; ಕೋವಿಡ್​ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಸಿಎಂ ಬಿಎಸ್​ ಯಡಿಯೂರಪ್ಪ

ದಸರಾಗೆ 15 ಕೋಟಿ ಅನುದಾನದ ಬಗ್ಗೆ ಆಕ್ಷೇಪ ಬಂದಿರುವ ವಿಚಾರವಾಗಿ ಮಾತನಾಡಿದ ಅವರು, ದಸರಾಗೆ  ಸಿಎಂ 10 ಕೋಟಿ ಹಾಗೂ ಮುಡಾದಿಂದ 5 ಕೋಟಿ ಕೊಟ್ಟಿದ್ದಾರೆ. ದಸರಾ ಒಂದಕ್ಕೆ ಮಾತ್ರ ಹಣ ಕೊಟ್ಟಿಲ್ಲ ದಸರಾಗೆ ಸಂಬಂಧಿಸಿದ ಕೆಲಸಕ್ಕೂ ಬಳಸಬಹುದು. ನಾವೇನು 15 ಕೋಟಿಯನ್ನ ಈಗಾಗಲೇ ಖರ್ಚು ಮಾಡಿಲ್ಲವಲ್ಲ. ಯಾವುದಕ್ಕೆ ಎಷ್ಟು ಹಣ ಅಂತ ತೀರ್ಮಾನವೇ ಆಗಿಲ್ಲ. ತೀರ್ಮಾನ ಆದ ನಂತರ ಯಾವುದಕ್ಕೆ ಎಷ್ಟು ಹಣ ಅಂತ ನಿಗದಿ ಮಾಡುತ್ತೇವೆ. ದಸರಾ ದೀಪಾಲಂಕಾರಕ್ಕೂ ಜನರು ಸೇರೋದಕ್ಕೂ ಸಂಬಂಧ ಇಲ್ಲ. ದೀಪಾಲಂಕಾರಕ್ಕೆ ಜನ ಸೇರೋದಿಲ್ಲ ಎಂದು ಸಮರ್ಥಿಸಿಕೊಂಡರು.

ದೀಪಾಲಂಕಾರಕ್ಕೆ ಜನ ಸೇರದಂತೆ ಪೊಲೀಸರು ನೋಡಿಕೊಳ್ಳುತ್ತಾರೆ. ವಾಹನ ಸಂಚಾರ, ಜನ ಸಂಚಾರದ ಬಗ್ಗೆ ಅವರೇ ಮಾರ್ಗಗಳನ್ನ ರೂಪಿಸುತ್ತಾರೆ. 2 ಗಂಟೆ ಮಾತ್ರ ದೀಪಾಲಂಕಾರ ಇರುತ್ತೆ. ಹೀಗಾಗಿ ದೀಪಾಲಂಕಾರದಿಂದ ಸಮಸ್ಯೆ ಆಗಲು ಬಿಡಲ್ಲ ಎಂದು ಎಸ್.ಟಿ. ಸೋಮಶೇಖರ್ ಭರವಸೆ ನೀಡಿದರು.

ಇದನ್ನೂ ಓದಿ: ಕೊರೋನಾ ನಿಯಂತ್ರಿಸಲಾಗದ ಯಡಿಯೂರಪ್ಪ ಸಿಎಂ ಕುರ್ಚಿ ಖಾಲಿ ಮಾಡಲಿ: ವಾಟಾಳ್ ನಾಗರಾಜ್​​ ಆಗ್ರಹ

ಇದರ ಜೊತೆಗೆ ದಸರಾ ಬಗ್ಗೆ ಎಂಎಲ್‌ಸಿ ಹೆಚ್.ವಿಶ್ವನಾಥ್ ಆಕ್ಷೇಪ ಮಾಡಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಎಸ್‌., ಹೈಪವರ್ ಕಮಿಟಿಯಲ್ಲಿ ಮಾತನಾಡದೆ ಹೊರಗೆ ಬಂದು ಮಾತನಾಡಿ ಪ್ರಯೋಜನ ಏನು ಅಂತ ಪ್ರಶ್ನಿಸಿದರು. ಹೆಚ್‌. ವಿಶ್ವನಾಥ್‌ ಹೈಪವರ್ ಕಮಿಟಿ ಸದಸ್ಯರಾಗಿದ್ದಾರೆ. ಅಲ್ಲಿ ತೀರ್ಮಾನ ಆಗಿದ್ದನ್ನೇ ನಾನು ದಸರಾದಲ್ಲಿ ಜಾರಿ ಮಾಡುತ್ತಿದ್ದೇನೆ. ಮಾತನಾಡಲು ವಿಶ್ವನಾಥ್ ಸ್ವತಂತ್ರರು. ದಸರಾ ಬಗ್ಗೆ ಯಾರು ಬೇಕಾದರೂ ಸಲಹೆ ಕೊಡಬಹುದು. ಸಲಹೆ ಒಳ್ಳೆಯದಾಗಿದ್ದರೆ ನಾನು ಖಂಡಿತ ಸ್ವೀಕರಿಸುತ್ತೇನೆ. ಅವರ ಸಲಹೆ ಪ್ರತ್ಯಕ್ಷವಾಗಿದ್ದರೂ ಸರಿ ಪರೋಕ್ಷವಾಗಿದ್ದರೂ ಸರಿ ಕಲೆಕ್ಟಿವ್ ಡಿಶಿಷನ್‌ಗೆ ಗೌರವ ಕೊಟ್ಟು ಕೆಲಸ ಮಾಡುತ್ತೇನೆ ಎಂದು ಪರೋಕ್ಷವಾಗಿ ಹೆಚ್‌. ವಿಶ್ವನಾಥ್‌ಗೆ ತಿರುಗೇಟು ನೀಡಿದರು.

ವರದಿ: ಪುಟ್ಟಪ್ಪ
Published by:Vijayasarthy SN
First published: