HOME » NEWS » District » MYSORE DASARA INAUGURATION NAME NOT YET DECIDED AMID ONLY 10 DAYS LEFT HK

ಡೋಲಾಯಮಾನ ಸ್ಥಿತಿಯಲ್ಲಿ ದಸರಾ ಸಿದ್ದತೆ : ಕೆಲವೇ ದಿನ ಬಾಕಿ ಇದ್ದರೂ ಇನ್ನು ನಿರ್ಧಾರವಾಗದ ಉದ್ಘಾಟಕರ ಹೆಸರು

ದಸರಾ ತಾಯಿ ಚಾಮುಂಡೇಶ್ವರಿಯ ಹಬ್ಬ ದಸರಾ ಅದ್ದೂರಿಯಾಗಿ ಆಗಬೇಕೆಂಬುದು ಸರಿ. ಆದರೆ, ಈ ವರ್ಷ ಜನ ಸೇರಿಸಿದರೆ ಸಮಸ್ಯೆ ಆಗುತ್ತೆ ಆದ್ದರಿಂದ ಅತ್ಯಂತ ಸರಳವಾಗಿ ಆಚರಣೆ ಮಾಡಬೇಕು ಎಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದ್ದಾರೆ. 

news18-kannada
Updated:October 7, 2020, 4:33 PM IST
ಡೋಲಾಯಮಾನ ಸ್ಥಿತಿಯಲ್ಲಿ ದಸರಾ ಸಿದ್ದತೆ : ಕೆಲವೇ ದಿನ ಬಾಕಿ ಇದ್ದರೂ ಇನ್ನು ನಿರ್ಧಾರವಾಗದ ಉದ್ಘಾಟಕರ ಹೆಸರು
ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ
  • Share this:
ಮೈಸೂರು(ಅಕ್ಟೋಬರ್​. 07): ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಈ ಬಾರಿ ಡೋಲಾಯಮಾನ ಸ್ಥಿತಿಯಲ್ಲಿದೆ. ದಸರಾ ಹೈಪರ್ ಕಮಿಟಿ ಮೀಟಿಂಗ್ ನಂತರವು ದಸರಾ ಆಚರಣೆಗೆ ಸ್ಪಷ್ಟನೆ ಸಿಗದೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ. ನಿತ್ಯ ಸಭೆ ಮೇಲೊಂದು ಸಭೆ ನಡೆದರೂ ದಸರಾ ಬಗ್ಗೆ ಚಿತ್ರಣ ಸಿಗದಿದ್ದಕ್ಕೆ ನಾಳೆ ಆರೋಗ್ಯ ಇಲಾಖೆಯಿಂದ ಟೆಕ್ನಿಕಲ್ ತಂಡದಿಂದಲೂ ದಸರಾ ಬಗ್ಗೆ ಸಭೆ ನಡೆಯಲಿದೆ.  ನಾಡಹಬ್ಬ ದಸರಾ ಪ್ರತಿ ವರ್ಷ ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಸಂಭ್ರಮದ ಹಬ್ಬದ ವಾತವರಣ ನಿರ್ಮಾಣವಾಗುತ್ತಿತ್ತು. ಆದರೆ, ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ದಸರಾ ಆಚರಣೆ ಮಾಡಬೇಕಾ ಬೇಡವಾ ಎನ್ನುವ ಚರ್ಚೆ ನಡುವೆಯೇ ಸರಳ ದಸರಾ ಆಚರಿಸಲು ತೀರ್ಮಾನ ಮಾಡಲಾಗಿತ್ತು. ಈ ತೀರ್ಮಾನ ಮಾಡಿ 15 ದಿನ ಕಳೆದರೂ ದಸರೆಗೆ ಅಂತಿಮ ಸ್ವರೂಪ ಸಿಕ್ಕಿಲ್ಲ. ದಸರಾ ಉದ್ಘಾಟನೆಗೆ 10 ದಿನ ಬಾಕಿ ಇದ್ದರೂ ದಸರಾ ಉದ್ಘಾಟಕರ ಹೆಸರು ಅಂತಿಮವಾಗಿಲ್ಲ.

ಚಾಮುಂಡಿಬೆಟ್ಟದಲ್ಲಿ ನಡೆಯುವ ಉದ್ಘಾಟನೆಗೆ ಎಷ್ಟು ಮಂದಿ ಭಾಗಿಯಾಗಬೇಕು ಎನ್ನುವುದು ಕೂಡ ತೀರ್ಮಾನ ಆಗಿಲ್ಲ. ಅಷ್ಟೆ ಯಾಕೇ ಜಂಬೂಸವಾರಿ ಹೇಗೆ ಮಾಡಬೇಕು ಎನ್ನುವ ಬಗ್ಗೆಯೂ ಅಂತಿಮ ರೂಪುರೇಷೆಗಳು ಸಿದ್ದವಾಗಿಲ್ಲ. ಈ ನಡುವೆ ಮೈಸೂರಿನ ಜನಪ್ರತಿನಿಧಿಗಳು ಸರಳ ದಸರಾಗು ವಿರೋಧ ವ್ಯಕ್ತಪಡಿಸಿದ್ದು, ದಸರಾ ಆಚರಿಸಿ ಕೊರೋನಾ ಹೆಚ್ಚಾದರೆ ಸರ್ಕಾರದ ವಿರುದ್ದ ಜನರೇ ಸರ್ಕಾರದ ವಿರುದ್ದ ಪ್ರಕರಣ ದಾಖಲಿಸಲಿದ್ದಾರೆ. ಯಾರ ಅನುಮತಿ ಪಡೆದು ಊರ ತುಂಬಾ ಲೈಟ್ ಹಾಕಿದ್ದೀರಾ ? ಆರೋಗ್ಯ ಇಲಾಖೆ ಅನುಮತಿ ಪಡೆದಿದ್ದೀರಾ ? ಏಕೆ ಈ ರೀತಿ ಹಠಕ್ಕೆ ಬಿದ್ದಿದ್ದೀರಾ ? ಕೊರೋನಾ ಮಹಾಸ್ಪೋಟವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ನಾಡಹಬ್ಬ ದಸರಾಕ್ಕೆ ಜನ ಸೇರಿಸುವ ವಿಚಾರ ಶಾಸಕ ತನ್ವೀರ್ ಸೇಠ್ ಸಹ ವಿರೋಧ ವ್ಯಕ್ತಪಡಿಸಿದ್ದು, ಚಾಮುಂಡಿ ಬೆಟ್ಟ, ಅರಮನೆಯಲ್ಲಿ ಮಾತ್ರ ಕಾರ್ಯಕ್ರಮ ಮಾಡಿ ಅಂತ ಸಲಹೆ ಕೊಟ್ಟಿದ್ದೆ ಹೈಪವರ್ ಕಮಿಟಿ ನನ್ನ ಸಲಹೆ ಒಪ್ಪಿದೆ. ಆದರೆ, ಊರು ತುಂಬೆಲ್ಲ ದೀಪಾಲಂಕಾರ ಮಾಡಿಕೊಂಡಿದ್ದಾರೆ. ಅದೆಲ್ಲವೂ ಬೇಕಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರು ಮಾಡಬೇಕಾದ ಕೆಲಸಗಳನ್ನು ಆರೋಗ್ಯ ಸಚಿವರು ಮಾಡುತ್ತಿದ್ದಾರೆ. ದಸರಾ ತಾಯಿ ಚಾಮುಂಡೇಶ್ವರಿಯ ಹಬ್ಬ ದಸರಾ ಅದ್ದೂರಿಯಾಗಿ ಆಗಬೇಕೆಂಬುದು ಸರಿ. ಆದರೆ, ಈ ವರ್ಷ ಜನ ಸೇರಿಸಿದರೆ ಸಮಸ್ಯೆ ಆಗುತ್ತೆ ಆದ್ದರಿಂದ ಅತ್ಯಂತ ಸರಳವಾಗಿ ಆಚರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇವೆಲ್ಲದರ ನಡುವೆ ಇಂದು ಮೈಸೂರಿಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲಾಡಳಿತದ ಜೊತೆ ಸಭೆ ನಡೆಸಿ ದಸರಾ ಆಚರಣೆಗಾಗಿ ಆಕ್ಷನ್ ಕಮಿಟಿ ವರದಿ ಬೇಕು ಎಂದು ಕೇಳಿದ್ದಾರೆ. 24 ಗಂಟೆ ಒಳಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ, ಅದಕ್ಕಾಗಿ ಟೆಕ್ನಿಕಲ್ ಕಮಿಟಿ ಬರಲಿದೆ. ಅದರ ಜೊತೆಗೆ ಜಿಲ್ಲಾಡಳಿತ ಸಭೆ ನಡೆಸಿ 24 ಗಂಟೆಯೋಳಗೆ ವರದಿ ಸಲ್ಲಿಸಲಿದೆ. ಈ ಬಗ್ಗೆ ನಾನು ಸಹ ಸಿಎಂ ಜೊತೆ ಸಮಾಲೋಚನೆ ಮಾಡುತ್ತೇನೆ ಜನರು ಸರ್ಕಾರದ ಮೇಲೆ ಜವಬ್ದಾರಿ ಹಾಕಿ‌ ಸುಮ್ಮನಿರಬೇಡಿ ಸರ್ಕಾರಕ್ಕೆ ಸಹಕಾರ ಕೊಡಿ. ಸುರಕ್ಷತೆಯಿಂದ ಸರಳ ದಸರಾ ಮಾಡಲು ಅವಕಾಶ ಕೊಡಿ, 2 ಸಾವಿರ ಮಂದಿಗೆ ಅವಕಾಶ ಕೊಡಬೇಕಾ ಬೇಡವಾ ಎನ್ನುವುದರ ಬಗ್ಗೆ ಟೆಕ್ನಿಕಲ್ ಕಮಿಟಿ ವರದಿ ನಂತರ ನಿರ್ಧಾರ ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ : ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಿಎಂ ಬಿ ಎಸ್ ಯಡಿಯೂರಪ್ಪ

ಇತ್ತ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಸಹ ಇಂದು ಮೈಸೂರಿಗೆ ಭೇಟಿ ನೀಡಿ ದಸರಾ ಬಗ್ಗೆ ಇನ್ನೆರಡು ದಿನದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲ ಆಯಾಮದಲ್ಲು ಚರ್ಚಿಸಿ ಕೊರೋನಾ ಸ್ಪೋಟವಾಗದಂತೆ ಕ್ರಮಗೋಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಮೈಸೂರಿನಲ್ಲಿ ದಸರಾ ಹತ್ತಿರವಾಗುತ್ತಿದ್ದಂತೆ ಸಂಭ್ರಮ ಹೆಚ್ಚಾಗಬೇಕಿತ್ತು, ಆದರೆ, ಕೊರೋನಾ ನಿಯಮಗಳಿಂದಾಗಿ ಗೊಂದಲ ಹೆಚ್ಚಾಗಿದ್ದು, ದಸರಾ ಆಚರಣೆಯಲ್ಲಿ ಕೊರೋನಾ ಸ್ಪೋಟದ ಮುನ್ಸೂಚನೆಯೂ ಸಿಕ್ಕಿದೆ. ಈ ನಡುವೆ ಜನರು ದಸರಾ ಸಂಭ್ರಮ ಹೇಗೆ ಪಾಲ್ಗೊಳ್ಳಬೇಕು ಎನ್ನುವುದನ್ನು ತಾವೇ ಸ್ವಯಂ ನಿರ್ಧಾರ ಮಾಡಿಕೊಳ್ಳಬೇಕಿದ್ದು. ಯಾಮಾರಿದರೆ ಎಡವಟ್ಟು ಆಗುವುದಂತು ಗ್ಯಾರೆಂಟಿ.
Published by: G Hareeshkumar
First published: October 7, 2020, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories