HOME » NEWS » District » MYSORE DASARA 2020 JAMBOO SAVARI ENDS IN 40 MINUTES SESR

ಮೈಸೂರು ದಸರಾ: ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿಗಳಿಂದ ಪೂಜೆ; 40 ನಿಮಿಷದಲ್ಲಿ ಮುಗಿಯಲಿದೆ ಜಂಬೂಸವಾರಿ

ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಸಿಎಂ ಬಿಎಸ್​ ಯಡಿಯೂರಪ್ಪ ಬಳಿಕ ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡುವರು

news18-kannada
Updated:October 26, 2020, 7:17 AM IST
ಮೈಸೂರು ದಸರಾ: ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿಗಳಿಂದ ಪೂಜೆ; 40 ನಿಮಿಷದಲ್ಲಿ ಮುಗಿಯಲಿದೆ ಜಂಬೂಸವಾರಿ
ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ
  • Share this:
ಮೈಸೂರು (ಅಕ್ಟೋಬರ್​. 26): ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ ಕೊರೋನಾ ಹಿನ್ನಲೆ ಸರಳವಾಗಿ ಆಚರಣೆಯಾಗುತ್ತಿದೆ. ಸಂಪ್ರದಾಯಿಕವಾಗಿ ಆಚರಣೆಗೊಳ್ಳುತ್ತಿರುವ ಈ ಬಾರಿಯ ನಾಡಹಬ್ಬ ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಂಡಿದೆ. ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಕೂಡ ಅರಮನೆಯೊಳಗೆ ನಡೆಯಲಿದೆ. ಇಂದು ಮಧ್ಯಾಹ್ನ 2.59ರಿಂದ 3.20ಗರ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ನಂದಿ ಧ್ವಜ ಪೂಜೆ ನಡೆಸಲಿದ್ದಾರೆ. ಇದಾದ ಬಳಿಕ 3.40ರಿಂದ 4.15ರವರೆಗಿನ ಕುಂಭ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತ ಗಜಪಡೆ ಮೆರವಣಿಗೆ ನಡೆಸಲಿದೆ. ಈ ಬಾರಿ ಕೇವಲ 300 ಜನರು ಮಾತ್ರ ಈ ವಿಜಯದಶಮಿ ಸಂಭ್ರಮದಲ್ಲಿ ಭಾಗಿಯಾಗಲಿದ್ದು, ನಾಡಿನ ಜನತೆ ವರ್ಚುಯಲ್​ ಮೂಲಕವಾಗಿ ದಸರಾ ಸಂಭ್ರಮ ಕಣ್ತುಂಬಿಕೊಳ್ಳಬಹುದು. ದೂರದರ್ಶನ ಮತ್ತು ವಾರ್ತಾ ಇಲಾಖೆಯ ಫೇಸ್​ಬುಕ್​, ದೂರದರ್ಶನ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇದರ ವೀಕ್ಷಣೆ ನಡೆಸಬಹುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಸಿಎಂ ಬಿಎಸ್​ ಯಡಿಯೂರಪ್ಪ ಬಳಿಕ ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡುವರು. ಈ ಬಾರಿ ಪುಷ್ಪಾರ್ಚನೆಗೆ ಮುಖ್ಯಮಂತ್ರಿ ಸೇರಿ ಕೇವಲ ಆರು ಜನರಿಗೆ ಅವಕಾಶ ನೀಡಲಾಗಿದೆ. 40 ನಿಮಿಷದಲ್ಲಿ ಅರಮನೆ ಆವರಣದಲ್ಲಿ ಮುಗಿಯಲಿರುವ ಜಂಬೂ ಸವಾರಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೇ ಅರಮನೆ ಸುತ್ತಮುತ್ತ ರಸ್ತೆಗಳಲ್ಲೀ ಸಂಚಾರಕ್ಕೆ ಅವಕಾಶ ನೀಡಲಾಗಿಲ್ಲ.

ಈ ಬಾರಿ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಕೇವಲ 300 ಮೀಟರ್​ ಮೆರವಣಿಗೆ ಸಾಗಲಿದ್ದಾನೆ. ಈತನ ಜೊತೆಯಾಗಿ ವಿಕ್ರಮ, ಗೋಪಿ, ವಿಜಯಾ, ಕಾವೇರಿ ಜೊತೆಯಾಗಲಿದ್ದಾರೆ. ಇದರ ಜೊತೆಗೆ 4 ಕಲಾತಂಡ, ಅಶ್ವಾರೋಹಿ ದಳದ 2 ತುಕಡು, 1 ಸ್ತಬ್ಧ ಚಿತ್ರ, ಕರ್ನಾಟಕದ ಪೊಲೀಸ್​ ವಾದನದ ಆನೆಗಾಡಿ ಸಾಗಲಿದೆ.
Published by: Seema R
First published: October 26, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories