HOME » NEWS » District » MYSORE CORPORATION FIGHT WHOSE ALLIANCE WITH WHOM PMTV MAK

ಗೊಂದಲದಲ್ಲಿ ಸಿಲುಕಿದ ಮೈಸೂರು ಮಹಾನಗರ ಪಾಲಿಕೆ ಗದ್ದುಗೆ; ಯಾರ ಜೊತೆ ಯಾರ ಮೈತ್ರಿ?

ಮೇಯರ್ ಸ್ಥಾನ ನಮಗೆ ನೀಡಿದರೆ ನಿಮ್ಮ ಜೊತೆ ಮೈತ್ರಿ ಎನ್ನುತ್ತಿರುವ ಬಿಜೆಪಿ ನಾಯಕರು ರಾಜ್ಯ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಮೈಸೂರ ಪಾಲಿಕೆಯನ್ನು ಬಿಜೆಪಿ ಪಕ್ಷದ ಪಾಲಿಕೆ ಸದಸ್ಯರೇ ಮೇಯರ್ ಸ್ಥಾನ ಅಲಂಕರಿಸಬೇಕು ಎಂದು ಹಂಬಲಿಸುತ್ತಿದ್ದಾರೆ. 

news18-kannada
Updated:January 27, 2021, 2:15 PM IST
ಗೊಂದಲದಲ್ಲಿ ಸಿಲುಕಿದ ಮೈಸೂರು ಮಹಾನಗರ ಪಾಲಿಕೆ ಗದ್ದುಗೆ; ಯಾರ ಜೊತೆ ಯಾರ ಮೈತ್ರಿ?
ಮೈಸೂರು ಮಹಾನಗರ ಪಾಲಿಕೆ.
  • Share this:
ಮೈಸೂರು: ಅರಮನೆ ನಗರಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಯಾರು ಗದ್ದುಗೆ ಹಿಡಿಯಬೇಕು? ಎಂಬುವ ಗೊಂದಲದಲ್ಲೆ ಈ ಬಾರಿಯ ಮೇಯರ್ ಉಪಮೇಯರ್‌ ಸ್ಥಾನದ ಚುನಾವಣೆ ಮುಳುಗಿಹೋಗಿದೆ. ಮೂರು ರಾಜಕೀಯ ಪಕ್ಷಗಳ ಮೈತ್ರಿ ಗೊಂದಲ ಹೆಚ್ಚಾಗಿದ್ದು, ಇದು ಪಾಲಿಕೆ ಅಭಿವೃದ್ದಿಯನ್ನು ಕುಂಟು ಕಾಲಿನಲ್ಲಿ ನಡೆಯುವಂತೆ ಮಾಡಿದೆ, ಮೇಯರ್ ಉಪಮೇಯರ್ ಅವಧಿ ಮುಗಿದರೂ ಮೈತ್ರಿ ಬಗ್ಗೆ ಸ್ಪಷ್ಟತೆ ಇಲ್ಲದೆ ಜಾಣಕುರುಡುತನದ ಪ್ರದರ್ಶನ ಮಾಡುತ್ತಿರುವ ಮೈಸೂರಿನ ಪ್ರಮುಖ ಮೂರು ಪಕ್ಷದ ನಾಯಕರು ಮೇಯರ್ ಪಟ್ಟಕ್ಕೆ ಜೋತು ಬಿದಿದ್ದಾರೆ, ಕಳೆದೊಂದು ತಿಂಗಳಿನಿಂದ ಚರ್ಚೆ ಇದ್ದರೂ ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂಬ ಸ್ಪಷ್ಟತೆ ಇಲ್ಲದೆ ಸುಮ್ಮನೆ ಕುಳಿತಿ ಈ ರಾಜಕೀಯ ಪಕ್ಷದ ಮುಖಂಡರು, ನಗರದ ಅಭಿವೃದ್ದಿಯನ್ನ ತಮ್ಮ ಸ್ವಂತ ರಾಜಕೀಯ ಲಾಭಕ್ಕೆ ಬಲಿಕೊಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಗಳಲ್ಲಿ ಮೈತ್ರಿಯದ್ದೆ ಮಂಥನ ನಡೆಯುತ್ತಿದೆ. ಹಾಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯಲ್ಲಿರುವ ಪಾಲಿಕೆ ಆಡಳಿತ ಜನವರಿ 17ಕ್ಕೆ ಅಂತ್ಯವಾಗಿದೆ. ಅರ್ಥಾಥ್ ಮತ್ತೆ ಮೇಯರ್ ಸ್ಥಾನ ಬೇಕೆಂದರೆ ಮೈತ್ರಿ ಮಾಡಿಕೊಂಡೆ ಚುನಾವಣೆ ಎದುರಿಸಬೇಕಿದೆ. ಹಳೆ ಮೈತ್ರಿ ಮುಂದುವರೆಸಿ ನಮಗೆ ಮೇಯರ್‌ ಸ್ಥಾನ ನೀಡಿ ಎನ್ನುತ್ತಿರುವ ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯ ಕುಮಾರಸ್ವಾಮಿ ನಡುವೆ ಅಂದು ಆಗಿದ್ದ ಒಪ್ಪಂದವನ್ನ ಮುಂದುವರೆಸಿ ಅಂತ ಕೇಳುತ್ತಿದ್ದಾರೆ. ಮೇಯರ್ ಸ್ಥಾನ ನಮಗೆ ಬೇಕು ಹಾಗಾಗಿ ನಾವು ಮೈತ್ರಿ ಮುರಿದುಕೊಳ್ಳುತ್ತೇನೆ ಎನ್ನುತ್ತಿರುವ ಜೆಡಿಎಸ್‌ ನಾಯಕರು ಬಿಜೆಪಿ ಜೊತೆಗೆ ಹೋಗುವ ಆಲೋಚನೆಯನ್ನು ಹೊಂದದ್ದಾರೆ.

ಆದರೆ, ಮೇಯರ್ ಸ್ಥಾನ ನಮಗೆ ನೀಡಿದರೆ ನಿಮ್ಮ ಜೊತೆ ಮೈತ್ರಿ ಎನ್ನುತ್ತಿರುವ ಬಿಜೆಪಿ ನಾಯಕರು ರಾಜ್ಯ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಮೈಸೂರ ಪಾಲಿಕೆಯನ್ನು ಬಿಜೆಪಿ ಪಕ್ಷದ ಪಾಲಿಕೆ ಸದಸ್ಯರೇ ಮೇಯರ್ ಸ್ಥಾನ ಅಲಂಕರಿಸಬೇಕು ಎಂದು ಹಂಬಲಿಸುತ್ತಿದ್ದಾರೆ.

ಇನ್ನು ಮೇಯರ್, ಉಪಮೇಯರ್ ಸ್ಥಾನದ ಅವಧಿ ಮುಗಿದು 10 ದಿನ ಕಳೆದರೂ ಮುಂದಿನ ಮೇಯರ್, ಉಪಮೇಯರ್ ಸ್ಥಾನದ ಮೀಸಲಾತಿ ಪಟ್ಟಿ ಮಾತ್ರ ಇನ್ನು ಪ್ರಕಟವಾಗಿಲ್ಲ. ಮಿಸಲಾತಿ ಪ್ರಕಟವಾಗದೆ ಮೇಯರ್, ಉಪಮೇಯರ್ ಸ್ಥಾನದ ಚುನಾವಣೆ ದಿನಾಂಕವು ಪ್ರಕಟವಾಗಿಲ್ಲ. ಕಳೆದೊಂದು ವರ್ಷದಿಂದ ಕೋವಿಡ್‌ ಹಿನ್ನಲೆಯಲ್ಲಿ ಅಭಿವೃದ್ದಿಯಲ್ಲಿ ಕುಂಟಿತವಾದ ಮೈಸೂರು  ಮಹಾನಗರ ಪಾಲಿಕೆ, ಇದೀಗ ಮೈತ್ರಿ ವಿಚಾರವಾಗಿ ಮತ್ತೆ ಅಭಿವೃದ್ದಿಯಿಂದ ವಂಚಿತವಾಗುತ್ತಿದೆ ಅನ್ನೋ ಮಾತುಗಳು ಕೇಳಿ ಬಂದಿದೆ.

ಇದನ್ನೂ ಓದಿ: ವ್ಯಾಲಂಟೈನ್ಸ್​ ಡೇ ದಿನ ಡಿಕೆಶಿ ಮಗಳ ಮದುವೆಯಾಗಲಿ ಅಂತ ತಮಾಷೆ ಮಾಡಿದ್ದೆ; ಈಗ ಹಾಗೆಯೇ ಆಗುತ್ತಿದೆ; ವಿನಯ್ ಗುರೂಜಿ

ಈ ವರ್ಷದ ರಾಜ್ಯ ಬಜೆಟ್‌ನಲ್ಲಿ ಮೈಸೂರು ಪಾಲಿಕೆಗೆ  ವಿಶೇಷ ಅನುದಾನ ಕೇಳುವುದಕ್ಕು ಪಾಲಿಕೆಯ ಆಡಳಿತ ವ್ಯವಸ್ಥೆ ತುಕ್ಕು ಹಿಡಿದು ಕುಳಿತಂತೆ ಕಾಣಿತ್ತಿದೆ. ಈ ರಾಜಕೀಯ ಅಸ್ತಿರತೆಯಿಂದ ಸ್ವಚ್ಛನಗರಿ ಪಟ್ಟವು ಎಲ್ಲಿ ಕೈತಪ್ಪಿ ಹೋಗುವುದೋ ಅನ್ನೋ ಅನುಮಾನಗಳು ಮೂಡಿವೆ.
Youtube Video
ಇನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ 65 ಸದಸ್ಯರ ಸಂಖ್ಯಾಬಲ ಇದ್ದು, ಇದರಲ್ಲಿ 22 ಸ್ಥಾನ ಬಿಜೆಪಿ, 19 ಸ್ಥಾನ ಕಾಂಗ್ರೆಸ್‌, 18  ಸ್ಥಾನ ಜೆಡಿಎಸ್‌, 5 ಸ್ಥಾನ ಇತರೆ 1 ಸ್ಥಾನದಲ್ಲಿ ಬಿಎಸ್‌ಪಿ ಪಕ್ಷದ ಸದಸ್ಯರಿದ್ದಾರೆ.  ಯಾರೋಬ್ಬರಿಗು ಬಹುಮತವಿಲ್ಲದೆ ಇರೋದು ಪಾಲಿಕೆಯ ಸ್ಥಿತಿಗೆ ಕಾರಣವಾಗಿದ್ದು, ಇದೀಗ ಯಾರು ಯಾರೊಂದಿಗೆ ಮೈತ್ರಿ ಮಾಡಿಕೊಂಡು ಪಾಲಿಕೆಯಲ್ಲಿ ಮೇಯರ್ ಉಪಮೇಯರ್ ಸ್ಥಾನ ಹಿಡಿಯುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
Published by: MAshok Kumar
First published: January 27, 2021, 2:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories