BS Yediyurappa: ನಮ್ಮ ತಾತ ತರಕಾರಿ ಮಾರುತ್ತಿದ್ದರು, ನಾನು ಮಂಡ್ಯದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದೆ; ಬಿಎಸ್ ಯಡಿಯೂರಪ್ಪ!

ಈ ಉಪಚುನಾವಣೆಯಲ್ಲಿ ಶಿವರಾಜ ಸಜ್ಜನರ ಅವರನ್ನ ಗೆಲ್ಲಿಸಿ. ಮುಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನವರು ಚುನಾವಣೆಗೆ ನಿಲ್ತೇವೆ ಅನ್ನಬಾರದು. ಮೂವತ್ತನೆ ತಾರೀಕಿಗೆ ನೀವು ಗುದ್ದಬೇಕು. ಕೌಂಟಿಂಗ್ ಆರಂಭ ಆಗ್ತಿದ್ದಂತೆ ಕಾಂಗ್ರೆಸ್ ನವರು ಜಾಗ ಖಾಲಿ ಮಾಡಬೇಕು ಎಂದರು.

 ಬಿ.ಎಸ್​.ಯಡಿಯೂರಪ್ಪ

ಬಿ.ಎಸ್​.ಯಡಿಯೂರಪ್ಪ

 • Share this:
  ಹಾವೇರಿ: ಹಾನಗಲ್ ತಾಲೂಕಿನ (Hangal By Election2021) ಬೆಳಗಾಲಪೆಟೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ (BJP Candidate Shivaraj Sajjanara) ಪರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಅವರು, ಕಾಂಗ್ರೆಸ್ ಗೆ ಡಿಪಾಸಿಟ್ ಹೋಗಬೇಕು. ಆ ಕೆಲಸವನ್ನು ನೀವು ಮಾಡಿ. ಬಹುತೇಕ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಒಂದು ಕಾಲದಲ್ಲಿ ದೆಹಲಿಗೆ ಹೋಗಿ ಟಿಕೆಟ್ ತಂದ್ರೆ ಗೆಲ್ಲೋದು ನೂರಕ್ಕೆ‌ ನೂರು ನಿಶ್ಚಿತ ಅನ್ನೋ ಕಾಲವಿತ್ತು. ಅವರ ದುರಾಡಳಿತದಿಂದ ಬೇಸತ್ತು ಈಗ ಕೇವಲ 44 ಸಂಸದರಿದ್ದಾರೆ ಎಂದು ಟೀಕಿಸಿದರು.

  ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಈಡಿ ಪ್ರಪಂಚ ಅಚ್ಚರಿಯಿಂದ‌ ನೋಡ್ತಿದೆ. ನಮ್ಮ‌ ಕಾಂಗ್ರೆಸ್ ನ ಸ್ನೇಹಿತರು ಹಣ, ಹೆಂಡ, ಅಧಿಕಾರದ ಬಲದಿಂದ ಚುನಾವಣೆ ಗೆಲ್ತಿದ್ರು. ಪ್ರಧಾನಿ ಮೋದಿ ಅವರ ಆಡಳಿತದ ಪರಿಣಾಮ‌ ಈಗ ಎಲ್ಲಿದೆ ಕಾಂಗ್ರೆಸ್, ಎಲ್ಲಿದ್ದಾರೆ ನಿಮ್ಮ‌ ನಾಯಕರು ಎಂಬಂತಾಗಿದೆ. ಎಲ್ಲೋ ಸ್ವಲ್ಪ ಕರ್ನಾಟಕದಲ್ಲಿ ಉಸಿರಾಡ್ತಿದೆ. ಅದಕ್ಕೆ ಧಿಮಾಕಿನಿಂದ ಮಾತಾಡ್ತಿದ್ದಾರೆ. ಒಂದು ಕಾಲದಲ್ಲಿ ಜನರು ಕಣ್ಣು ಮುಚ್ಕೊಂಡು ವೋಟು ಹಾಕುತ್ತಿದ್ದರು. ಎಲ್ಲರಿಗೂ ಒಂದೇ ವೋಟು ಅನ್ನೋದು ಅಂಬೇಡ್ಕರ್ ಕೊಟ್ಟರು. ಇಲ್ಲಿರೋ ಬಹುತೇಕರು ಬಿಜೆಪಿಯ ಹಿತೈಷಿಗಳು, ಕಾರ್ಯಕರ್ತರೆ ಬಂದಿದ್ದೀರಿ. ಒಂದು ವಾರ ಪ್ರಧಾನಿ‌ ಮೋದಿ ಅವರ ಕಾಣಿಕೆ, ಬೊಮ್ಮಾಯಿ ಸರಕಾರದ ಕಾಣಿಕೆ ಏನು, ಯಡಿಯೂರಪ್ಪ ಕೊಟ್ಟ ಕಾಣಿಕೆ ಏನು ಅನ್ನೋದನ್ನ ಜನರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಯಡಿಯೂರಪ್ಪ ಅವರು ಕರೆ ನೀಡಿದರು.

  ನಾವು ಬಡತನದಿಂದ ಬಂದವರು

  ನಾವು ಬಡತನದಿಂದ ಬಂದವರು. ನಮ್ಮ ತಾತ ತರಕಾರಿ ಮಾರಾಟ ಮಾಡ್ತಿದ್ದರು. ನಾನು ಮಂಡ್ಯದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದೆ. ನಿಮ್ಮ ಆಶೀರ್ವಾದದಿಂದ ನಾಲ್ಕು ಬಾರಿ ಸಿಎಂ ಆದೆ. ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಬೇಕು ಅಂದೆ. ನಾನು ಈಗ ಮುಖ್ಯಮಂತ್ರಿ ಅಲ್ಲ, ಮಾಜಿ ಮುಖ್ಯಮಂತ್ರಿ. ಹಾಗಂತ ನಾನು ಮನೆಯಲ್ಲಿ ಕೂತಿಲ್ಲ. ಎಲ್ಲಿಯವರೆಗೂ ನಿಮ್ಮ ಪ್ರೀತಿ ವಿಶ್ವಾಸ ಇರುತ್ತೋ ಅಲ್ಲಿಯವರೆಗೆ ಸ್ಥಾನಮಾನ ಬೇಡ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು. ಚುನಾವಣೆ ಬಳಿಕ ಪ್ರತೀ ಜಿಲ್ಲೆಗೂ ಭೇಟಿ ನೀಡ್ತಿನಿ. 2023 ಚುನಾವಣೆಯಲ್ಲಿ 140 ಸೀಟು ಗೆಲ್ತಿವಿ. ಈ ಚುನಾವಣೆ ಬಳಿಕ, ಪ್ರತಿ‌ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಮುಖಂಡರ ಜೊತೆ ಚರ್ಚೆ ಮಾಡುತ್ತೇನೆ ಎಂದರು.

  ಈ ಉಪಚುನಾವಣೆಯಲ್ಲಿ ಶಿವರಾಜ ಸಜ್ಜನರ ಅವರನ್ನ ಗೆಲ್ಲಿಸಿ. ಮುಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನವರು ಚುನಾವಣೆಗೆ ನಿಲ್ತೇವೆ ಅನ್ನಬಾರದು. ಮೂವತ್ತನೆ ತಾರೀಕಿಗೆ ನೀವು ಗುದ್ದಬೇಕು. ಕೌಂಟಿಂಗ್ ಆರಂಭ ಆಗ್ತಿದ್ದಂತೆ ಕಾಂಗ್ರೆಸ್ ನವರು ಜಾಗ ಖಾಲಿ ಮಾಡಬೇಕು.  ಪ್ರಧಾನಿ ನರೇಂದ್ರ ಮೋದಿ ಅವರಂಥ ನಾಯಕತ್ವ ಸಿಕ್ಕಿರೋದು ನಮ್ಮ ಪುಣ್ಯ ಎಂದರು.

  ಇದನ್ನು ಓದಿ: BS Yediyurappa: ಕಾಂಗ್ರೆಸ್​ನಲ್ಲಿ ಭವಿಷ್ಯವಿಲ್ಲ, ಆ ಪಕ್ಷ ಬಿಟ್ಟು ಬಿಜೆಪಿ ಸೇರಿಕೊಳ್ಳಿ; ಬಿಎಸ್ ಯಡಿಯೂರಪ್ಪ

  ಇನ್ನು 50 ವರ್ಷ ಕಾಂಗ್ರೆಸ್ ಅಡ್ರೆಸ್​ ಇರಲ್ಲ

  ಇದಕ್ಕೂ ಮುನ್ನ  ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಬಿಎಸ್​ವೈ, ಇನ್ನು ಐವತ್ತು ವರ್ಷ ನಿಮ್ಮ (ಕಾಂಗ್ರೆಸ್) ಅಡ್ರೆಸ್ ಇರೋದಿಲ್ಲ. ಬರೆದಿಟ್ಟುಕೊಳ್ಳಿ. ಇದನ್ನ ನಿಮ್ಮ ಮೊಮ್ಮಕ್ಕಳಿಗೂ ಹೇಳ್ರಿ. ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಳ್ಳುವಂತೆ ಹೇಳ್ರಿ. ಟೀಕೆಗಾಗಿ ಟೀಕೆ ಮಾಡಬೇಡಿ. ಗೋಣಿ ಚೀಲದಲ್ಲಿ ದುಡ್ಡು ತುಂಬಿಕೊಂಡು ಹೋಗಿದ್ದೇವಂತೆ. ನಾಚಿಕೆ ಆಗಬೇಕು ನಿಮಗೆ. ಮತದಾರರಿಗೆ ಅಪಮಾನ ಮಾಡ್ತಿದ್ದೀರಿ. ನನಗೆ ತುಂಬಾ ಆನಂದ ಆಗಿದೆ. ಸಂಸದ ಉದಾಸಿಯವರು ಪ್ರತ್ಯಕ್ಷ ಜನ ಬೆಂಬಲ‌ ನೋಡುವಂತೆ ಹೇಳಿದ್ದರು. ಬಿಸಿಲಿನಲ್ಲೂ ನಿಂತು ಸಭೆ ಯಶಸ್ವಿ ಮಾಡಿದ್ದೀರಿ. ಕೈ ಜೋಡಿಸಿ ಪ್ರಾರ್ಥನೆ ಮಾಡುವೆ, ಎಲ್ಲ ಕೆಲಸಗಳನ್ನ ಬದಿಗಿಟ್ಟು ಮತದಾನ ಕೇಂದ್ರಕ್ಕೆ ಬಂದು ಶಿವರಾಜ ಸಜ್ಜನರ ಚಿಹ್ನೆಗೆ ಮತ ಕೊಟ್ಟು ಗೆಲ್ಲಿಸುವಂತೆ ಮನವಿ ಮಾಡಿದರು.
  Published by:HR Ramesh
  First published: