ಬೆಂಗಳೂರು ಪಕ್ಕದಲ್ಲೇ ಮೈದುಂಬಿ ಧುಮ್ಮಿಕ್ಕುತ್ತಿದೆ ಮುತ್ಯಾಲ ಮಡು ಜಲಪಾತ

ಬೆಂಗಳೂರಿನಿಂದ 35 ಕಿಮೀ ದೂರದಲ್ಲಿರುವ, ಬನ್ನೇರುಘಟ್ಟ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಮುತ್ಯಾಲಮಡು ಜಲಪಾತ ಈಗ ಮಳೆಯಿಂದ ಮೈದುಂಬಿ ನೀರು ಧುಮ್ಮಿಕ್ಕುತ್ತಿದೆ. ಬೆಂಗಳೂರಿಗರ ಪಾಲಿಗೆ ಇದು ನೆಚ್ಚಿನ ವೀಕೆಂಡ್ ಟೂರಿಸ್ಟ್ ಸ್ಪಾಟ್​ಗಳಲ್ಲೊಂದೆನಿಸಿದೆ.

ಮುತ್ಯಾಲ ಮಡು ಜಲಪಾತ

ಮುತ್ಯಾಲ ಮಡು ಜಲಪಾತ

  • Share this:
ಆನೇಕಲ್: ಬೆಂಗಳೂರು ನಗರಕ್ಕೆ ಆಣತಿ ದೂರದಲ್ಲಿರುವ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಗ್ಗುಲಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಮುತ್ಯಾಲ ಮಡು. ಬೆಟ್ಟ ಗುಡ್ಡಗಳ ನಡುವೆ ಸೀಳಿ ಮುತ್ತಿನ ಹನಿಗಳಂತೆ ನೀರು ಪ್ರಪಾತಕ್ಕೆ ದುಮ್ಮಿಕ್ಕುವುದು ಇಲ್ಲಿನ ಆಕರ್ಷಣೆ. ಮಳೆಗಾಲದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ಯಾಲ ಮಡು ಜಲಪಾತ ಗಿರಿ ಕಾನನದ ಮುಗಿಲಿಂದ ಪ್ರಪಾತಕ್ಕೆ ಧುಮ್ಮಿಕ್ಕುತ್ತಿರುವ ಜಲಧಾರೆ.

ಬೆಂಗಳೂರು ನಗರದಿಂದ ಕೇವಲ 35 ಕಿ.ಮಿ. ಹಾಗೂ ಆನೇಕಲ್ ಪಟ್ಟಣಕ್ಕೆ ಕೇವಲ 8 ಕಿ. ಮಿ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಪ್ರಸಿದ್ಧ ಪ್ರವಾಸಿ ತಾಣ ಮುತ್ಯಾಲಮಡು ಜಲಪಾತ ಕಾಡಿನ ನಡುವೆ ಕಂಗೊಳಿಸುತ್ತಿರುವ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಮುತ್ತಿನ ಹನಿಗಳಂತೆ ನೀರು ಬೆಟ್ಟಗುಡ್ಡಗಳನ್ನು ಸೀಳಿ ಪ್ರಪಾತದಲ್ಲಿ ದುಮ್ಮಿಕ್ಕುವುದು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಅದ್ರಲ್ಲು‌ ಮಳೆಗಾಲದಲ್ಲಿ ತನ್ನ ವೈಭವನ್ನು ಮತ್ತಷು ಹೆಚ್ಚಿಸಿಕೊಳ್ಳುವ ಇಲ್ಲಿನ ಜಲಪಾತವನ್ನು ನೋಡುವುದೇ ಒಂದು ಸೋಜಿಗ. ಕೊರೋನಾ ಬಳಿಕ ಪ್ರವಾಸಿಗರ ದಂಡು ಕಡಿಮೆಯಾಗಿದ್ದರು. ಜಲಪಾತ ಸೌಂದರ್ಯಕ್ಕೆ ಪ್ರವಾಸಿಗರು ಮಾರುಹೋಗಿದ್ದಾರೆ.

ಇದನ್ನೂ ಓದಿ: Karnataka Weather: ಅ. 27ರವರೆಗೆ ಕರ್ನಾಟಕದ ಹಲವೆಡೆ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಎಚ್ಚರಿಕೆ

ಮುತ್ಯಾಲಮಡು ಜಲಪಾತ ಬೆಂಗಳೂರು ನಗರಕ್ಕೆ ತೀರ ಹತ್ತಿರದಲ್ಲಿದೆ. ಜಲಪಾತದ ಸೌಂದರ್ಯವನ್ನು ಸವಿಯಲು ಒಂದು ದಿನದ ಪಿಕ್​ನಿಕ್​ಗೆ ಹೇಳಿ ಮಾಡಿಸಿದಂತಿದೆ. ಪ್ರಕೃತಿ ನಡುವೆ ಸ್ವಚ್ಚಂದವಾಗಿ ವಿರಮಿಸಲು ಪ್ರೇಮಿಗಳು, ಸ್ನೇಹಿತರೊಂದಿಗೆ ಕಾಡು, ಬೆಟ್ಟಗುಡ್ಡಗಳಲ್ಲಿ ಅಡ್ಡಾಡಿ ಎಂಜಾಯ್ ಮಾಡಲು ಪಡ್ಡೆ ಹೈಕಳು, ದಿನನಿತ್ಯದ ಜಂಜಾಟದಿಂದ ವಿಶ್ರಾಂತಿಗಾಗಿ ಕುಟುಂಬ ಸಮೇತರಾಗಿ ಬರುವ ಪ್ರವಾಸಿಗರು ಧುಮ್ಮಿಕ್ಕಿ ಭೋರ್ಗರೆಯುತ್ತಿರುವ ಜಲಪಾತ ಮತ್ತು ಸುತ್ತಮುತ್ತಲಿನ ಪರಿಸರದ ಐಸಿರಿಯನ್ನು ಕಂಡು ಖುಷಿಪಡಬಹುದಾಗಿದೆ ಎಂದು ಪ್ರವಾಸಿಗರಾದ ರಂಜಿತ್ ಮತ್ತು ತೇಜಸ್ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆನೆ ಮೇಲೆ ಕುಳಿತ ವಿಡಿಯೋ ಪೋಸ್ಟ್​ ಮಾಡಿದ್ದ ನಟ ಧನ್ವೀರ್​ ವಿರುದ್ಧ ಎಫ್‌ಐಆರ್

ಒಟ್ಟಿನಲ್ಲಿ ಗಿರಿ ಕಾನನದ ನಡುವೆ ಕಂಗೊಳಿಸುತ್ತಿರುವ ಪ್ರಸಿದ್ದ ಪ್ರವಾಸಿ ತಾಣ ಮುತ್ಯಾಲಮಡು ಬೇಸಿಗೆಯಲ್ಲಿ ಝರಿಯಂತೆ ಮಳೆಗಾಲದಲ್ಲಿ ತೊರೆಯಂತೆ ಭೋರ್ಗರೆಯುವುದನ್ನು ಕಂಡು ಕಣ್ತುಂಬಿಕೊಳ್ಳಲು ಇಚ್ಚೆಯುಳ್ಳ ಪ್ರವಾಸಿಗರು ಮುತ್ಯಾಲಮಡುವಿಗೆ ಭೇಟಿ ನೀಡಿ ಎಂಜಾಯ್ ಮಾಡಬಹುದಾಗಿದೆ.

ವರದಿ: ಆದೂರು ಚಂದ್ರು
Published by:Vijayasarthy SN
First published: