ಕೊಪ್ಪಳ ಮುಸ್ಲಿಂ ಯುವಕರ ತಂಡದಿಂದ ಮೃತವ್ಯಕ್ತಿ ಅಂತ್ಯಸಂಸ್ಕಾರ; ಮದುಮಗಳಿಗೆ ಕೊರೊನಾ ಪಾಸಿಟಿವ್

ಒಂದೇ ಮನೆಯಲ್ಲಿ ನಾಲ್ವರಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಸುತ್ತಮುತ್ತಲಿನ ಜನರು ಹಾಗೂ ಮದುವೆಯಲ್ಲಿ ಭಾಗಿಯಾದವರಿಗೂ ಕೊರೊನಾ ಭೀತಿ‌ ಆವರಿಸಿದ. ಕಳೆದ ನಾಲ್ಕು ದಿನಗಳ ಹಿಂದೆ ಕೊರೋನಾ ಟೆಸ್ಟ್ ಮಾಡಿಸಿದ್ದ ಮದುಮಗಳು, ಸದ್ಯ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು.

ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು.

  • Share this:
ಕೊಪ್ಪಳ: ಇಂದಿನ‌ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಗೆ ಬರುವುದು ಕಡಿಮೆಯಾಗಿದೆ. ಬಹುತೇಕರು ಉಸಿರಾಟದ ತೊಂದರೆಯಿಂದ ಬಳಲಿ ಸತ್ತರಂತೂ ಅತ್ತಕಡೆ ಜನರು ಸುಳಿಯುವುದಿರಲಿ, ತಲೆ ಕೂಡ ಹಾಕುವುದಿಲ್ಲ. ಕೊರೋನಾ ಆತಂಕ ಅಷ್ಟೊಂದು ತೀವ್ರತರವಾದ ಸಂದಿಗ್ದತೆ ಉಂಟು ಮಾಡಿದೆ. ಇಂಥ ಸಂದರ್ಭದಲ್ಲಿ ಕೊಪ್ಪಳದ ಮುಸ್ಲಿ ಯುವಕರ ತಂಡವೊಂದು ತೀವ್ರ ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿ ಮಾನವಿಯತೆ ಮೆರೆದಿದೆ.

ಕೊಪ್ಪಳದ ನಗರದಲ್ಲಿ ನಿನ್ನೆ ಉಸಿರಾಟದ ತೊಂದರೆಯಿಂದ ವಿಠ್ಠಲರಾವ್ ಮಹೇಂದ್ರಕರ್ (84) ಎಂಬುವವರು ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಹ್ಯುಮ್ಯಾನಿಟಿಯನ್ ರಿಲೀಫ್ ಸೊಸೈಟಿ ಸದಸ್ಯರು ನೆರವೇರಿಸಿದರು. ಜಮಾತ್ ಇಸ್ಲಾಂ ನ ಅಧ್ಯಕ್ಷ ಸಯ್ಯದ್ ಹಿದಾಯತ್ ಅಲಿ, ಸೊಸೈಟಿಯ ಗ್ರೂಪ್ ಲೀಡರ್ ಮಹಮ್ಮದ್ ಖಲೀಲ್, ಅಸ್ಗರ್ ಖಾನ್, ಗೌಸ್ ಪಟೇಲ್, ಸಾಜಿದ್ ಹುಸೇನ್, ರಹಮತ್ ಹುಸೈನ್, ಮಹಮ್ಮದ್ ಅಖೀಲ್ ರಿಂದ ಅಂತ್ಯಕ್ರಿಯೆ ನಡೆಸಲಾಯಿತು. ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದರಿಂದ ಅಂತ್ಯ ಸಂಸ್ಕಾರಕ್ಕೆ ಯಾರೂ ಮುಂದೆ ಬಾರದೆ ಇದ್ದಾಗ HRS ಸೊಸೈಟಿ ಸದಸ್ಯರು ಅಂತ್ಯಕ್ರಿಯೆ  ಮಾಡಿದರು.

ಹೆಚ್ ಆರ್ ಎಸ್ ಸದಸ್ಯರು ಕಳೆದ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿ 20 ಜನರನ್ನು ಹೊಂದಿರುವ ಈ ತಂಡವು ಈಗಾಗಲೇ ಹಸಿದವರಿಗೆ ಅನ್ನ ನೀಡಿದ್ದರು. ಕೋವಿಡ್​ನಿಂದ ಬಳಲುತ್ತಿರುವವರಿಗೆ ಆರೋಗ್ಯ ಸೇವೆ, ಅವರಿಗೆ ಮೆಡಿಕಲ್ ಮಾಹಿತಿಯನ್ನು ಸಹ ನೀಡಿದ್ದರು.ಅವರು ಆ ಸಂದರ್ಭದಲ್ಲಿ ಹೆಲ್ಪ್​ಲೈನ್ ಮಾಡಿಕೊಂಡು ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದರು. ಇಂಥ ಸಂಸ್ಥೆಯವರು ಮತ್ತೆ ಜಾತಿ ಧರ್ಮವನ್ನು ನೋಡದೆ ಎಲ್ಲರು ಒಂದೇ ಎಂಬ ಭಾವನೆಯಿಂದ ಜನರಿಗೆ ಅವಶ್ಯ ಕೆಲಸ ಮಾಡಿದ್ದು, ಈಗ ಹಿಂದು‌ಸಮಾಜದವರೊಬ್ಬರ ಅಂತ್ಯಕ್ರಿಯೆ ಮಾಡಿ ಮತ್ತೆ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ‌.

ಇದನ್ನು ಓದಿ:Corona Vaccine | 18ರಿಂದ 45 ವರ್ಷದವರಿಗೆ ಕೊರೋನಾ ಲಸಿಕೆ ಉಚಿತ; ಸಿಎಂ ಬಿಎಸ್​ವೈ ಘೋಷಣೆ

ಮದುಮಗಳಿಗೆ ಕೊರೊನಾ

ಕೊರೋನಾ ಎಂಬ‌ ಮಹಾಮಾರಿ ಈಗ ಅಬ್ಬರದಿಂದ ವಕ್ಕರಿಸುತ್ತಿದೆ. ಸಂಭ್ರಮದಿಂದ ಮದುವೆಯಾಗಿ ಖುಷಿಯಿಂದ ಗಂಡನ‌ ಮನೆಗೆ ಹೋಗಬೇಕಾದ ಮದುಮಗಳಿಗೆ ಕೊರೋನಾ ವಕ್ಕರಿಸಿದೆ. ಅದು ಮದುವೆಯ ದಿನವೇ ದೃಢಪಟ್ಟಿದ್ದು ಹಲವರಿಗೆ ಆತಂಕ ಸೃಷ್ಟಿಸಿದೆ. ಕೊಪ್ಪಳ ತಾಲೂಕಿನ  ಕಿನ್ನಾಳ ಗ್ರಾಮದಲ್ಲಿ ಮದುಮಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಸಂದರ್ಭದಲ್ಲಿ ಮದುಮಗಳ ತಾಯಿ ಹಾಗೂ ಇಬ್ಬರೂ ಸಹೋದರಿಯರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಿನ್ನೆ ಮದುವೆಯಾದ ಕೆಲವೇ ಘಂಟೆಗಳಲ್ಲಿ ಯುವತಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ 24 ವರ್ಷದ ಯುವತಿಗೆ ಕೊರೋನಾ ಪಾಸಿಟಿವ್ ಆಗಿತ್ತು. ನಿನ್ನೆ ವಿಜಯಪುರ ಜಿಲ್ಲೆಯಲ್ಲಿ ಮದುವೆ ನಡೆದಿದೆ. ತಾಳಿಯನ್ನು ಕಟ್ಟಲಾಗಿದೆ. ಆನಂತರ ಮದುಮಗಳಿಗೆ ಕೊರೋನಾ ದೃಢಪಟ್ಟಿದ್ದು ಮದುವೆಯಲ್ಲಿ ಭಾಗಿಯಾದ ಎಲ್ಲರಿಗೂ ಈಗ ಆತಂಕ ಸೃಷ್ಟಿಯಾಗಿದೆ. ಒಂದೇ ಮನೆಯಲ್ಲಿ ಮಧುಮಗಳು ಸೇರಿ ನಾಲ್ವರಿಗೆ ಕೊರೋನಾ ದೃಢಪಟ್ಟಿದ್ದು, ಪಾಸಿಟಿವ್ ಬಂದಿರುವ ಕುಟುಂಬದ ಮನೆಯು ಕಿನ್ನಾಳ ಗ್ರಾಮದ 4 ನೆಯ ವಾರ್ಡಿನಲ್ಲಿದ್ದು ಸುತ್ತಮುತ್ತ ಪ್ರದೇಶವನ್ನು ಸ್ಯಾನಿಟೈಸರ್ ಮಾಡಲಾಗಿದೆ. ಒಂದೇ ಮನೆಯಲ್ಲಿ ನಾಲ್ವರಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಸುತ್ತಮುತ್ತಲಿನ ಜನರು ಹಾಗೂ ಮದುವೆಯಲ್ಲಿ ಭಾಗಿಯಾದವರಿಗೂ ಕೊರೊನಾ ಭೀತಿ‌ ಆವರಿಸಿದ. ಕಳೆದ ನಾಲ್ಕು ದಿನಗಳ ಹಿಂದೆ ಕೊರೋನಾ ಟೆಸ್ಟ್ ಮಾಡಿಸಿದ್ದ ಮದುಮಗಳು, ಸದ್ಯ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Published by:HR Ramesh
First published: