• Home
  • »
  • News
  • »
  • district
  • »
  • ಅಂಬೇಡ್ಕರ್ ಧರ್ಮಾಂತರಗೊಂಡ ದಿನವೇ ಬೌದ್ಧ ಧರ್ಮ ಸ್ವೀಕರಿಸಿ ಬೌದ್ಧ ಬಿಕ್ಕುವಾದ ಮುಸ್ಲಿಂ ವ್ಯಕ್ತಿ

ಅಂಬೇಡ್ಕರ್ ಧರ್ಮಾಂತರಗೊಂಡ ದಿನವೇ ಬೌದ್ಧ ಧರ್ಮ ಸ್ವೀಕರಿಸಿ ಬೌದ್ಧ ಬಿಕ್ಕುವಾದ ಮುಸ್ಲಿಂ ವ್ಯಕ್ತಿ

ಬೌದ್ಧ ಧರ್ಮ ಸ್ವೀಕರಿಸಿದ  ಮುಸ್ಲಿಂ ವ್ಯಕ್ತಿ

ಬೌದ್ಧ ಧರ್ಮ ಸ್ವೀಕರಿಸಿದ ಮುಸ್ಲಿಂ ವ್ಯಕ್ತಿ

ಬೌದ್ಧ ಧರ್ಮದ ಪಂಚಶೀಲ ತತ್ವಗಳು ಹಾಗು ಅಂಬೇಡ್ಕರ್ ಅವರಿಂದ ಪ್ರಭಾವಿತರಾದ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬರು ಈ ದಿನದಂದೆ  ಚಾಮರಾಜನಗರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿ ಬೌದ್ಧ ಭಿಕ್ಕು ದೀಕ್ಷೆ ಪಡೆದುಕೊಂಡಿದ್ದಾರೆ.

  • Share this:

ಚಾಮರಾಜನಗರ(ಅಕ್ಟೋಬರ್. 14): ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಿನ. ಮಹಾರಾಷ್ಟ್ರದ ನಾಗಪುರದಲ್ಲಿ 1956ರ ಅಕ್ಟೋಬರ್ 14 ರಂದು ಅಂಬೇಡ್ಕರ್ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ್ದರು. ಬೌದ್ಧ ಧರ್ಮದ ಪಂಚಶೀಲ ತತ್ವಗಳು ಹಾಗು ಅಂಬೇಡ್ಕರ್ ಅವರಿಂದ ಪ್ರಭಾವಿತರಾದ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬರು ಈ ದಿನದಂದೆ ಚಾಮರಾಜನಗರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿ ಬೌದ್ಧ ಭಿಕ್ಕು ದೀಕ್ಷೆ ಪಡೆದುಕೊಂಡಿದ್ದಾರೆ. ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದ ಹೈದರಾಬಾದ್​ನ ಶಹವನಾಜ್ಆಲಿ ಎಂಬ 40 ವರ್ಷದ ವ್ಯಕ್ತಿ ಚಾಮರಾಜನಗರಕ್ಕೆ ಬಂದು ಇಲ್ಲಿನ ಸಾರಾನಾಥ ಬೌದ್ಧವಿಹಾರದಲ್ಲಿ ನಡೆದ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ದಿನಾಚರಣೆಯಲ್ಲಿ ಪಾಲ್ಗೊಂಡು ಬೌದ್ಧ ಭಿಕ್ಕು ದೀಕ್ಷೆ ಪಡೆದುಕೊಂಡು  “ಬಂತೇ ಧಮ್ಮ ಕ್ರಾಂತಿ” ಆದರು. ನಿಯೋಜಿತ ನಳಂದ ವಿಶ್ವವಿದ್ಯಾನಿಲಯದ ಮಹಾಭಿಕ್ಕು ಬೋಧಿದತ್ತ ಥೇರಾ ಅವರಿಂದ ಬಂತೇ ಧಮ್ಮ ಕ್ರಾಂತಿ ಅವರು ಬೌದ್ಧ ಬಿಕ್ಕು ದೀಕ್ಷೆ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ನೂರಾರು ಮಂದಿ ಸಾಕ್ಷಿಯಾದರು.


ಈ ವೇಳೆ ಮಾತನಾಡಿದ ಬಂತೇ ಧಮ್ಮ ಕ್ರಾಂತಿ, ಅಂಬೇಡ್ಕರ್ ಅವರಿಂದ  ಸ್ಪೂರ್ತಿಗೊಂಡು ಬೌದ್ಧಧರ್ಮ ಸ್ವೀಕರಿಸಿದ್ದೇನೆ.  ಬೌದ್ಧದರ್ಮದ ಪಂಚಶೀಲ ತತ್ವಗಳಿಂದ ಪ್ರಭಾವಿತಗೊಂಡಿದ್ದೇನೆ ಬುದ್ಧ ಈ ನೆಲದಲ್ಲಿ ಹುಟ್ಟಿದವರು. ಭಾರತದ ಮೂಲ ನಿವಾಸಿಗಳು ಬೌದ್ಧ ಧರ್ಮೀಯರೇ ಆಗಿದ್ದರು. ಆದರೆ, ಹಲವು ಸ್ಥಿತ್ಯಂತರಗಳಿಂದಾಗಿ ಭಾರತದಲ್ಲಿ ಬೌದ್ಧ ದರ್ಮ ನಶಿಸುತ್ತಾ ಬಂದಿತ್ತು. ಆದರೆ ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿ ಭಾರತದಲ್ಲಿ ಇದರ ಪುನರುಜ್ಜೀವನಕ್ಕೆ ಕಾರಣೀಭೂತರಾಗಿದ್ದಾರೆ ಎಂದರು.


ಎಲ್ಲ ಧರ್ಮಗಳ ಬಗ್ಗೆ ನನಗೆ ಗೌರವವಿದೆ. ಆದರೆ, ಬೌದ್ಧ ಧರ್ಮವನ್ನು ನಂಬುತ್ತೇನೆ. ನನ್ನ ನಿರ್ಧಾರವನ್ನು ಜನರು ವಿರೋಧ ಮಾಡಬಹುದು ಎಂಬ ಭಯವಿಲ್ಲ. ಅಚಲವಾಗಿದ್ದೇನೆ’ ಎಂದು ಅವರು ಹೇಳಿದರು


10 ವರ್ಷಗಳಿಂದ ಸಮಾಜಸೇವೆ ಮಾಡುತ್ತಾ ಬಂದಿದ್ದೇನೆ. ಅಂಬೇಡ್ಕರ್‌ ಅವರ ತತ್ವ ಆದರ್ಶಗಳಿಗೆ ಮಾರುಹೋದೆ. ಗೌತಮ ಬುದ್ಧ ಅವರ ಸಂದೇಶ ನನ್ನಲ್ಲಿ ಮನಃಪರಿವರ್ತನೆ ಮಾಡಿತು. 2015ರಿಂದ ನನ್ನಲ್ಲಿ ಏನೋ ಬದಲಾವಣೆಯಾಯಿತು. ಐದು ವರ್ಷಗಳಿಂದ ನಾನು ತಲೆ, ಗಡ್ಡ ಬೋಳಿಸಲು ಆರಂಭಿಸಿದೆ.


ಇದನ್ನೂ ಓದಿ : ಮಲೆನಾಡಿನಲ್ಲಿ ಈ ವರ್ಷ ಕುಸಿದ ಅಡಿಕೆ ಇಳುವರಿ ; ಅಡಿಕೆ ಬೆಳೆಗಾರಿಗೆ ಮತ್ತೆ ಸಂಕಷ್ಟ


ತ್ರಿಪುರಾದ ಬಂತೇಜಿಯೊಬ್ಬರು ಹೈದರಾಬಾದ್‌ಗೆ ಬಂದಿದ್ದಾಗ, ‘ಬುದ್ಧ ನನ್ನ ಕನಸಲ್ಲಿನಲ್ಲಿ ಬಂದಿದ್ದರು. ನನ್ನಲ್ಲಿ ಬದಲಾವಣೆಗಳಾಗುತ್ತಿದೆ. ಏನು ಮಾಡಬೇಕು’ ಎಂದು ಕೇಳಿದೆ. ಅವರು ಏನೂ ಹೇಳಲಿಲ್ಲ. ನಂತರ ನಾನು ದೆಹಲಿ, ಬೋಧಿ ಗಯಾಕ್ಕೂ ಭೇಟಿ ನೀಡಿದೆ’ ಎಂದು ಅವರು ಹೇಳಿದರು.


‘ಪಂಚಶೀಲ ತತ್ವದಲ್ಲಿ ಜಗತ್ತು ನಿಂತಿದೆ. ಬೌದ್ಧ ಧರ್ಮ ಪಾಲಿಸುವ  ನೆರೆ ಹೊರೆ‌ಯ ದೇಶಗಳೆಲ್ಲ ಅಭಿವೃದ್ಧಿ ಹೊಂದಿವೆ. ಆದರೆ, ಭಾರತ ಇನ್ನೂ ಅಭಿವೃದ್ಧಿಯಾಗಿಲ್ಲ. ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಗೌತಮ ಬುದ್ಧರ ತತ್ವ ಆದರ್ಶನಗಳನ್ನು ಪ್ರಚಾರ ಮಾಡಲು ಜೀವನ ಮುಡಿಪಾಗಿಡುತ್ತೇನೆ’ ಎಂದ ಅವರು ಚಾಮರಾಜನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನಳಂದ ವಿಶ್ವವಿದ್ಯಾನಿಲಯಕ್ಕೆ ತಮ್ಮ ತನು ಮನ ಧನ ಅರ್ಪಿಸಲು ಸಿದ್ದನಾಗಿರುವುದಾಗಿ ತಿಳಿಸಿದರು.

Published by:G Hareeshkumar
First published: