• Home
 • »
 • News
 • »
 • district
 • »
 • ಈ ಜಿಲ್ಲೆಯ ಜನರು ಸೋಂಬೇರಿಗಳು; ಹೊಳೆ ತುಂಬಿದ್ದರೂ ನೀರಾವರಿ ಮಾಡಲ್ಲ: ಮುರಗೇಶ್ ನಿರಾಣಿ

ಈ ಜಿಲ್ಲೆಯ ಜನರು ಸೋಂಬೇರಿಗಳು; ಹೊಳೆ ತುಂಬಿದ್ದರೂ ನೀರಾವರಿ ಮಾಡಲ್ಲ: ಮುರಗೇಶ್ ನಿರಾಣಿ

ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ

ಕಲಬುರ್ಗಿ ಜಿಲ್ಲೆ ಬಹಳ ಹಿಂದುಳಿದ ಭಾಗ. ನನಗೆ ಅದರ ಉಸ್ತುವಾರಿ ಕೊಟ್ಟರೆ ಅಭಿವೃದ್ಧಿ ಮಾಡುವ ಸವಾಲನ್ನು ಸ್ವೀಕರಿಸಿ ಕೆಲಸ ಮಾಡುತ್ತೇನೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

 • Share this:

  ಬಾಗಲಕೋಟೆ: ದಶಕದ ಹಿಂದೆ ಆಗಿದ್ದ ಗ್ಲೋಬಲ್ ಇನ್ವೆಸ್ಟರ್ ಮೀಟ್ (ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ) ಮೀರಿಸುವಂತೆ ಮುಂಬರುವ 2022ರ ನವೆಂಬರ್ ನಲ್ಲಿ ಕರ್ನಾಟಕದಲ್ಲಿ ಗ್ಲೋಬಲ್  ಇನ್ವೆಸ್ಟರ್ ಮೀಟ್ ನಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಬಾಗಲಕೋಟೆಯ ಪ್ರವಾಸಿ ಮಂದಿರದಲ್ಲಿ ಇಲಾಖೆ ಅಧಿಕಾರಿಗಳ ಜೊತೆ ನಡೆದ ಸಭೆ ಬಳಿಕ ಮಾಧ್ಯಮ ಪ್ರತಿನಿಗಳ ಜೊತೆ ಮಾತನಾಡಿದ ಅವರು, ಇನ್ವೆಸ್ಟ್ ಕರ್ನಾಟಕ ಗ್ಲೋಬಲ್ ಮೀಟ್ ಬಗ್ಗೆ ಅಸೋಸಿಯೇಷನ್ ನವರ ಜೊತೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನವೆಂಬರ್ ನಲ್ಲಿ ದಿನಾಂಕ ನಿಗದಿ ಮಾಡುತ್ತೇವೆ. ಪೂರ್ವಭಾವಿಯಾಗಿ ಇಡೀ ಕರ್ನಾಟಕದಾದ್ಯಂತ ಲ್ಯಾಂಡ್ ಬ್ಯಾಂಕ್ ಪ್ರಾರಂಭ ಮಾಡ್ತಿದ್ದೇವೆ ಎಂದು ತಿಳಿಸಿದರು.


  ಬಂಡವಾಳ ಹೂಡಿಕೆದಾರರು ಬಂದಾಗ 24 ಗಂಟೆಯಲ್ಲಿ ಲ್ಯಾಂಡ್ ಸಿಗುವಂತೆ ಆಗಬೇಕು. ಯಶಸ್ವಿ ಉದ್ಯಮಿಗಳಿಗೆ ನೀರು, ಕರೆಂಟ್ ಸೇರಿದಂತೆ ಮೂಲಭೂತ ಸೌಕರ್ಯ ಎಲ್ಲ ಜಿಲ್ಲೆಗಳಲ್ಲಿ ಸಿಗುವಂತೆ ಮಾಡಲಿದ್ದೇವೆ. ಅನೇಕ ಕಡೆ ನಿವೇಶನಗಳು ಸಿಗುತ್ತಿಲ್ಲ. ಅಂತಹ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಕ್ಕೆ ಕನಿಷ್ಠ 500 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದೇವೆ. ಬಾಗಲಕೋಟೆಯಲ್ಲೂ 500 ಎಕರೆ ಒಳಭೂಮಿ ಪ್ರದೇಶವನ್ನು ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದೇವೆ ಎಂದು ಮುರುಗೇಶ್ ನಿರಾಳಿ ಹೇಳಿದರು.


  ಬಾಗಲಕೋಟೆಯಲ್ಲಿ ಏರ್ಪೋರ್ಟ್ ಅವಶ್ಯಕತೆ ಇದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದ ಏರ್​ಪೋರ್ಟ್ ವಿಚಾರವನ್ನ ಜಿಲ್ಲೆಯ ಎಲ್ಲ ಶಾಸಕರು, ಸಂಸದರ ಜೊತೆ ಚರ್ಚಿಸಿ ಯಾವ ಸ್ಥಳದಲ್ಲಿ ಮಾಡಿದರೆ ಸೂಕ್ತ ಎನ್ನುವುದನ್ನು ನಿರ್ಧಾರ ಮಾಡ್ತೇವೆ ಎಂದರು.


  ಇದನ್ನೂ ಓದಿ: HD Devegowda: ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಜೆಡಿಎಸ್​​ ಪಾದಯಾತ್ರೆ; ದೇವೇಗೌಡ


  ಇನ್ನು ಕೈಗಾರಿಕಾ ನಿವೇಶನಗಳು ಸದ್ಬಳಕೆ ಆಗದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಾದ್ಯಂತ ಲ್ಯಾಂಡ್ ಕೊಟ್ಟಿದ್ದೇವೆ. ಘಟಕ ಸ್ಥಾಪನೆಗೆ ಕಾಲಾವಕಾಶ ನೀಡಿರುತ್ತೇವೆ. ಕಾಲಮಿತಿಯಲ್ಲಿ ಘಟಕ ಸ್ಥಾಪನೆ ಮಾಡದಿರಲು ಸೂಕ್ತ ಕಾರಣ ಇದ್ದರೆ ಹೆಚ್ಚುವರಿ ಕಾಲಮಿತಿ ನೀಡಲಾಗುತ್ತದೆ.  ಅವಕಾಶ ನೀಡಿದರೂ ಘಟಕ ಸ್ಥಾಪನೆ ಮಾಡದವರಿಗೆ ನೋಟಿಸ್ ನೀಡಿ ನಿವೇಶನ ವಶಪಡಿಸಿಕೊಂಡು ಬೇರೆ ಬಂಡವಾಳ ಹೂಡಿಕೆದಾರರಿಗೆ ನೀಡಲಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ನಿರಾಣಿ ತಿಳಿಸಿದರು.


  ಕಲಬುರಗಿ ಜಿಲ್ಲೆಯಲ್ಲಿ ಹೊಳೆ ತುಂಬಿರುತ್ತವೆ, ಆದ್ರೆ ನೀರಾವರಿ ಮಾಡುವ ಹವ್ಯಾಸ ಅವರಿಗಿಲ್ಲ, ಅವರು ಭಾರಿ ಲೇಜಿ..!


  ನಾನೇನು ಉಸ್ತುವಾರಿ ಬದಲಾವಣೆ ಬಗ್ಗೆ ಮತನಾಡಿಲ್ಲ. ನಾನು ಕಲಬುರಗಿಯನ್ನೇ ಬೇಡಿದ್ದೇನೆ. ಮುಂದೆಯೂ ಕಲಬುರಗಿಯಲ್ಲೇ ಇರ್ತಿನಿ. ಕಲಬುರಗಿ ಬಹಳ ಹಿಂದುಳಿದ ಭಾಗ. ಅದನ್ನ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಸಚಿವರು ಹೇಳಿದರು.


  ಇಡೀ 70 ವರ್ಷದಲ್ಲಿ ಶಿಕ್ಷಣದಲ್ಲಿ ಒಮ್ಮೆಯೂ ಕಲಬುರಗಿ 10 ರ್ಯಾಂಕಿಂಗ್ ಒಳಗೆ ಬಂದಿಲ್ಲ. ಮುಂದಿನ ವರ್ಷಗಳಲ್ಲಿ 10ಕ್ಕಿಂತ ಕಡಿಮೆ ರ‌್ಯಾಂಕ್ ನಲ್ಲಿ ಕಲಬುರಗಿಯನ್ನು ತರುವ ಚಾಲೆಂಜ್ ಮಾಡಿದ್ದೀನಿ ಎಂದು ಹೇಳಿದ ಅವರು ಕಲಬುರ್ಗಿ ಜನ ನೀರಾವರಿ ವಿಚಾರದಲ್ಲಿ ಸೋಂಬೇರಿಗಳೆಂದು ಬಣ್ಣಿಸಿದರು.


  ಇದನ್ನೂ ಓದಿ: ಸಿಎಂ ಬೊಮ್ಮಾಯಿ ಅವರಿಂದಲೇ ನೈಟ್ ಕರ್ಫ್ಯೂ ಉಲ್ಲಂಘನೆ; ರಾತ್ರಿ 9ರ ಬಳಿಕವೂ ಜನರಿಂದ ಅಹವಾಲು ಸ್ವೀಕಾರ...!


  ಕಲಬುರಗಿ ಜಿಲ್ಲೆಯಲ್ಲಿ ಹೊಳೆ ತುಂಬಿರುತ್ತವೆ, ಆದ್ರೆ ನೀರಾವರಿ ಮಾಡುವ ಹವ್ಯಾಸ ಅವರಿಗಿಲ್ಲ. ಭಾರಿ ಲೇಜಿ ಅವರು. ಹೀಗಾಗಿ ಕಲಬುರಗಿ ತಾಲ್ಲೂಕಿಗೆ ಒಂದೊಂದು ಬಸ್ ಬಿಟ್ಟು ನೀರಾವರಿ ಪ್ರದೇಶಗಳಿಗೆ ಪಿಕ್‌ನಿಕ್ ವ್ಯವಸ್ಥೆ ಮಾಡ್ತೀದಿನಿ. ಕೊಲ್ಹಾಪುರ, ಸಾಂಗ್ಲಿ, ಮುಧೋಳ, ಬದಾಮಿ ಕಡೆ ಟೂರ್ ಮಾಡಿಸ್ತೀನಿ. ಈ ಭಾಗದಲ್ಲಿ ಹೊಳೆಯಲ್ಲಿ ಹೇಗೆ ನೀರಾವರಿ ಮಾಡ್ತಿದಾರೆ ಎಂಬುದನ್ನ ತೋರಿಸುತ್ತಿದ್ದೇನೆ. 100 ಎಕರೆ ಭೂಮಿಯಲ್ಲಿ ಇಸ್ರೇಲ್ ಮಾದರಿಯಲ್ಲಿ ನೀರಾವರಿ ಮಾಡ್ತಿದೀವಿ ಎಂದು ಅವರು ಹೇಳಿದರು.


  ಸರ್ಕಾರ ಅನುಮತಿ ನೀಡಿದರೆ 24 ಗಂಟೆಯಲ್ಲಿ ರನ್ನ ಕಾರ್ಖಾನೆ ಆರಂಭ..!


  ಮುಧೋಳ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಲೀಸ್ ವಿಚಾರ ಕುರಿತು ಮಾತನಾಡಿದ ಸಚಿವ ನಿರಾಣಿ, ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಲೀಜ್​ನಲ್ಲಿ ಹೆಚ್ಚಿನ ಬಿಡ್ ಮಾಡಿದ್ದೇನೆ. ಇಲ್ಲಿಯವರೆಗೆ ಕೋ ಆಪರೇಟಿವ್ ನಲ್ಲಿ 160 ಕೋಟಿ ರೂ ಬಿಡ್ ಆಗಿತ್ತು. ಈಗ ನಾನು ರನ್ನ ಸಕ್ಕರೆ ಕಾರ್ಖಾನೆಗೆ 345 ಕೋಟಿ ರೂ ಬಿಡ್ ಮಾಡಿ ತಗೊಂಡಿದ್ದೆನೆ. ಸರ್ಕಾರ ಒಂದು ಅನುಮತಿ ಪತ್ರ ನೀಡಿದರೆ 24 ಗಂಟೆಯಲ್ಲಿ ಕಾರ್ಖಾನೆ ಆರಂಭಿಸುತ್ತೇನೆ. ನನಗೆ ಸರ್ಕಾರ ಯಾವಾಗ ಕಾರ್ಖಾನೆ ಆರಂಭಿಸಲು ಅನುಮತಿ ನೀಡುತ್ತದೆ ಆವಾಗ ನಾನು ಕೆಲಸ ಆರಂಭಿಸುತ್ತೇನೆ. ಜಂಗ್ ತಿಂದ (ರಸ್ಟ್ ಹಿಡಿದ) ಪಾಂಡವಪೂರ ಫ್ಯಾಕ್ಟರಿಯನ್ನು ಕೇವಲ 60 ದಿನದಲ್ಲಿ ಆರಂಭ ಮಾಡಿದ್ದೇನೆ. ನನ್ನ ತವರು ಮನೆಯಲ್ಲಿರೋ ಕಾರ್ಖಾನೆಯನ್ನ ಸರ್ಕಾರದಿಂದ ಪತ್ರ ಬಂದ್ರೆ, ನೀ ನಡಿಸಪ್ಪ ಅಗ್ರಿಮೆಂಟ್ ಪ್ರಕಾರ ಅಂತಾ ನನಗೆ ಆದೇಶ ನೀಡಿದ್ರೆ ನಾಳೆಯಿಂದಲೇ ಕಾರ್ಖಾನೆಯ ರಿಪೇರಿ ಕಾರ್ಯ ಆರಂಭಿಸುತ್ತೇನೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.


  ವರದಿ: ಮಂಜುನಾಥ್ ತಳವಾರ

  Published by:Vijayasarthy SN
  First published: