HOME » NEWS » District » MURUGESH NIRANI CRITICIZES BASANAGOUDA PATIL YATNAL AT BELAGAVI CSB SNVS

ಯತ್ನಾಳ ನಾಲಾಯಕ್; ಸರ್ಕಾರ ಟೀಕಿಸಬೇಕೆಂದರೆ ರಾಜೀನಾಮೆ ಕೊಟ್ಟು ಹೋಗಲಿ: ಸಚಿವ ಮುರುಗೇಶ್ ನಿರಾಣಿ

ಪಕ್ಷದ ಚಿಹ್ನೆ, ನಾಯಕರ ಫೋಟೋ ಹಾಕಿಕೊಂಡು ಚುನಾವಣೆ ಗೆದ್ದು ನಂತರ ನಾಯಕರನ್ನ ಟೀಕಿಸುವುದು ಎಷ್ಟರ ಮಟ್ಟಿಗೆ ಸರಿ. ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದು ಏನು ಬೇಕಾದರೂ ಮಾಡಲಿ ಎಂದು ಯತ್ನಾಳರ ವಿರುದ್ಧ ಸಚಿವ ಮುರುಗೇಶ್ ನಿರಾಣಿ ಟೀಕಿಸಿದ್ದಾರೆ.

news18-kannada
Updated:April 4, 2021, 8:08 AM IST
ಯತ್ನಾಳ ನಾಲಾಯಕ್; ಸರ್ಕಾರ ಟೀಕಿಸಬೇಕೆಂದರೆ ರಾಜೀನಾಮೆ ಕೊಟ್ಟು ಹೋಗಲಿ: ಸಚಿವ ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ
  • Share this:
ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರಕ್ಕೆ ರಾಜ್ಯದ ಅನೇಕ ಸಚಿವರು, ಶಾಸಕರು ಆಗಮಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರವಾಗಿ ಸಚಿವ ಮರುಗೇಶ ನಿರಾಣಿ ನಿನ್ನೆ ಪ್ರಚಾರ ನಡೆಸಿದರು. ಪಕ್ಷದ ಕಚೇರಿಯಲ್ಲಿ ಸಚಿವ ಉಮೇಶ ಕತ್ತಿ ಜತೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ವಾಗ್ದಾಳಿಯನ್ನು ನಡೆಸಿದರು. ಅಷ್ಟೇ ಅಲ್ಲದೇ ನಾಲಾಯಕ್ ಎಂದು ಯತ್ನಾಳ ವಿರುದ್ಧ ತೀವ್ರವಾಗಿ ಆಕ್ರೋಶ ಹೊರ ಹಾಕಿದರು.

ಶಾಸಕ ಬಸನಗೌಡ ಪಾಟೀಲ್ ನಿರಂತರವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಸಚಿವ ಮುರುಗೇಶ ನಿರಾಣಿ, ಯತ್ನಾಳ ಹಿರಿಯರು, ಎಲ್ಲಾ ಮೂಲಗಳಿಂದ ಅವರಿಗೆ ಏನೇನೋ ಸಿಗುತ್ತಿದೆ. ಪಕ್ಷದಲ್ಲಿಯೇ ಇದ್ದುಕೊಂಡು ಟೀಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಟೀಕೆ ಮಾಡುವುದಿತ್ತು ಅಂದರೆ ಇವತ್ತು ರಾಜೀನಾಮೆ ಕೊಟ್ಟು ಹೊರಗಡೆ ಹೋಗಿ ಏನಾದರೂ ಮಾಡಲಿ. ನಮ್ಮ ಪಕ್ಷದ ಸಿಂಬಲ್, ನಮ್ಮ ನಾಯಕರ ಫೋಟೋ ಹಾಕಿಕೊಂಡು ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಪಕ್ಷದ ವಿರುದ್ಧ ಮಾತನಾಡುವುದು ಅಂದ್ರೆ ಊಂಡ ಮನೆಗೆ ದ್ರೋಹ ಮಾಡಿದಂತೆ ಆಗುತ್ತೆ ಎಂದು ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದರು.

ಇನ್ಮುಂದೆ ಯತ್ನಾಳ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು. ಮಾನವೀಯತೆ ಇದ್ರೆ ಅವನು ರಾಜೀನಾಮೆ ಕೊಡಬೇಕು. ಏನಂತಾ ತಿಳಿದುಕೊಂಡಿದ್ದಾನೆ ಅವನು ಅಂತ ಎಂದು ನಿರಾಣಿ ಏಕವಚನ ಪ್ರಯೋಗ ಮಾಡಿದರು. ನಮ್ಮ ಪಕ್ಷದಲ್ಲಿ ಇದ್ದು ನಮ್ಮನೆಯನ್ನ ಟೀಕೆ ಮಾಡಬಾರದು. ಯತ್ನಾಳ ವರ್ತನೆ ಸುಧಾರಣೆ ಆಗದಿದ್ದರೆ ಹೈಕಮಾಂಡ್ ಕಾದು ನೋಡಿ ಕ್ರಮ ಕೈಗೊಳ್ಳಲಿದೆ. ಯತ್ನಾಳ್ ಪ್ರಕರಣವನ್ನು ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಸಚಿವ ಮುರುಗೇಶ ನಿರಾಣಿ ಎಚ್ಚರಿಸಿದರು.

ವಿಜಯೇಂದ್ರ ಅವರ ಮುಂದೆ ಸಚಿವರು ಕೈ ಕಟ್ಟಿ ನಿಲ್ಲುತ್ತಾರೆ ಎಂಬ ಯತ್ನಾಳ್ ಹೇಳಿಕೆಗೆ ಮುರುಗೇಶ ನಿರಾಣಿ ಖಾರದ ಪ್ರತಿಕ್ರಿಯೆ ಕೊಟ್ಟರು. ನಾಲಾಯಕ್ ಅಂತ ಯಾರಾದರೂ ಇದ್ದರೆ ಅದು ವಿಜಯಪುರ ಶಾಸಕ ಎಂದು ಯತ್ನಾಳ ಹೆಸರು ಹೇಳದೆ ನಿರಾಣಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಚಿವ ಮುರುಗೇಶ್ ‌ನಿರಾಣಿ ದೊಡ್ಡ ನಾಲಾಯಕ್, ನಿರಾಣಿಗೆ ಹುಚ್ಚು ಹಿಡಿದಿದೆ: ಮಾಜಿ ಶಾಸಕ ಕಾಶಪ್ಪನವರ್ ವಾಗ್ದಾಳಿ

ಯಡಿಯೂರಪ್ಪ ಅವಧಿಯಲ್ಲಿ ನಾನು ಮಂತ್ರಿಯಾಗಲ್ಲ ಎಂಬ ಯತ್ನಾಳ ಹೇಳಿಕೆಗೆ, ದೇವರು ಅವರನ್ನು ಹಾಗೇ ಮುಂದುವರೆಸಲಿ ಎಂದು ನಿರಾಣಿ ತಿರುಗೇಟು ನೀಡಿದರು. ಯತ್ನಾಳ ವಿರುದ್ದ ಮುರುಗೇಶ ನಿರಾಣಿ ನಿರಂತರ ವಾಗ್ದಾಳಿ ಮಾಡುತ್ತಿರುವಂತೆಯೇ ಸಚಿವ ಉಮೇಶ್ ಕತ್ತಿ ಮಧ್ಯ ಪ್ರವೇಶ ಮಾಡಿ ತಡೆಯುವ ಯತ್ನ ಕೂಡ ಮಾಡಿದರು.

ಸಚಿವ ಮುರುಗೇಶ ನಿರಾಣಿ ಸುದ್ದಿಗೋಷ್ಠಿಯಲ್ಲಿ ಸಚಿವರಾದ ಉಮೇಶ ಕತ್ತಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ವಕ್ತಾರ ಎಂ ಬಿ ಜಿರಳಿ, ಶಾಸಕ ಅನಿಲ್ ಬೆನಕೆ ಸೇರಿ ಅನೇಕರು ಇದ್ದರು.ವರದಿ: ಚಂದ್ರಕಾಂತ ಸುಗಂಧಿ
Published by: Vijayasarthy SN
First published: April 4, 2021, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories