ಬೈಕ್‌ ವೀಲ್ಹಿಂಗ್ ವಿಚಾರದಲ್ಲಿ ಕೊಲೆ : ವಾರದ ಬಳಿಕ ಗೊತ್ತಾಯ್ತು ಅಸಲಿ ಸಂಗತಿ

ಒಂದು ವಾರದಲ್ಲಿ ಆರೋಪಿಗಳನ್ನ ವಶಕ್ಕೆ ತೆಗದುಕೊಂಡು ವಿಚಾರಣೆ ನಡೆಸಿದಾಗ, ಆರೋಪಿಗಳು ಪೊಲೀಸರ ಮುಂದೆ ಕೊಲೆಯ ಅಸಲಿ ಕಾರಣ ಬಿಚ್ವಿಟ್ಟಿದ್ದಾರೆ

news18-kannada
Updated:September 21, 2020, 9:35 PM IST
ಬೈಕ್‌ ವೀಲ್ಹಿಂಗ್ ವಿಚಾರದಲ್ಲಿ ಕೊಲೆ : ವಾರದ ಬಳಿಕ ಗೊತ್ತಾಯ್ತು ಅಸಲಿ ಸಂಗತಿ
ಸಾಂದರ್ಭಿಕ ಚಿತ್ರ
  • Share this:
ಮೈಸೂರು(ಸೆಪ್ಟೆಂಬರ್​.21): ವಾರದೆ ಹಿಂದೆ ಬೈಕ್ ವೀಲ್ಹಿಂಗ್​ ವಿಚಾರವಾಗಿ ನಡೆದ ಜಗಳ, ಕೊಲೆಯಲ್ಲಿ ಅಂತ್ಯವಾಗಿತ್ತು. ಆದರೆ, ಕೊಲೆಗಾರನ ಬಂಧನದ ನಂತರ ಕೊಲೆಯ ಅಸಲಿಯತ್ತು ಬಯಲಾಗಿದ್ದು. ಕೊಲೆಗೆ ಬೈಕ್‌ ವೀಲ್ಹಿಂಗ್​ ಜಗಳ ಕಾರಣ ಅಲ್ಲ. ಅಕ್ರಮ ಸಂಬಂಧ ಎನ್ನುವುದು ಗೊತ್ತಾಗಿದೆ. ಕೊಲೆಗಾರರು ಪೊಲೀಸರ ಮುಂದೆ ಸತ್ಯ ಬಾಯಿ ಬಿಟ್ಟಿದ್ದು, ಮೈಸೂರಿನ ಬನ್ನೂರಿನಲ್ಲಿ ನಡೆದಿದ್ದ ಕೊಲೆಗೆ ಟ್ವಿಸ್ಟ್‌ ಸಿಕ್ಕಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮದಲ್ಲಿ ಸೆಪ್ಟೆಂಬರ್​ 12 ರ ರಾತ್ರಿ 9.30 ರ ಸಮಯದಲ್ಲಿ ಗ್ರಾಮದ ನಡು ಬೀದಿಯಲ್ಲಿ ನಡೆದ ಕೊಲೆ ಇಡೀ ಗ್ರಾಮವನ್ನೆ ಬೆಚ್ಚಿ ಬೀಳಿಸಿತ್ತು. ಗ್ರಾಮದ ಸಿದ್ದರಾಜು ಎಂಬಾತ ಕೊಲೆಯಾಗಿ ಹೋಗಿದ್ದ. ಸಿದ್ದರಾಜು ಹಾಗೂ ಆತನ ಕುಟುಂಬಸ್ಥರು ಮನೆಯಲ್ಲಿ ಊಟ ಮಾಡಿಕೊಂಡು ನಿದ್ರೆಗೆ ಜಾರಬೇಕಿತ್ತು. ಆ ಹೊತ್ತಿಗೆ ಮನೆಯ ಬಾಗಿಲನ್ನು ಯಾರೋ ಬಡಿದ್ದಾರೆ. ಯಾರೋ ಬಾಗಿಲು ಬಡಿದಿದ್ದರಿಂದ‌ ಮನೆ ಬಾಗಿಲನ್ನು ತೆರೆದು ನೋಡಿದ್ದಾರೆ.

ಯಾರು ಅಂತ ನೋಡುವಷ್ಟರಲ್ಲಿ ಸಿದ್ದರಾಜು ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ವಿಚಾರವಾಗಿ ಬನ್ನೂರು ಪೊಲೀಸರಿಗೆ ಸಿದ್ದರಾಜು ಕುಟುಂಬಸ್ಥರು ದೂರು ನೀಡಿದ್ದರು. ಮನೆಯ ಮುಂಭಾಗದ ರಸ್ತೆಯಲ್ಲಿ ಬೈಕ್‌ ವೀಲ್ಹಿಂಗ್ ಮಾಡುತ್ತಿದ್ದರು. ಇದು ಸಣ್ಣ ರಸ್ತೆ ಮಕ್ಕಳು ಓಡಾಡುತ್ತಿರುತ್ತಾರೆ ವೀಲ್ಹಿಂಗ್ ಮಾಡಬೇಡಿ ಅಂತ ಹೇಳಿದ್ವಿ. ಆದರೆ, ಇದೇ ವಿಚಾರವನ್ನು ದೊಡ್ಡದು ಮಾಡಿ  ಚಂದನ್, ಸಂಜಯ್, ಪುನೀತ್, ದಿಲೀಪ್, ವಿನಯ್ , ಸುಭಾಷ್, ರವಿ, ವಸಂತ್, ಮಹೇಂದ್ರ, ಚಂದ್ರು ಎಂಬ ಹತ್ತು ಜನರು ಸೇರಿ ಕೊಲೆ ಮಾಡಿದ್ದಾರೆ ಅಂತ ದೂರನ್ನು ನೀಡಿದ್ದರು.

ಸದ್ಯ ಕೊಲೆ ವಿಚಾರವಾಗಿ ದೂರನ್ನು ದಾಖಲಿಸಿಕೊಂಡ ಬನ್ನೂರು ಪೊಲೀಸರು ಆರೋಪಿಗಳ ಬಲೆ ಬೀಸಿದ್ದಾರೆ. ಒಂದು ವಾರದಲ್ಲಿ ಆರೋಪಿಗಳನ್ನ ವಶಕ್ಕೆ ತೆಗದುಕೊಂಡು ವಿಚಾರಣೆ ನಡೆಸಿದಾಗ, ಆರೋಪಿಗಳು ಪೊಲೀಸರ ಮುಂದೆ ಕೊಲೆಯ ಅಸಲಿ ಕಾರಣ ಬಿಚ್ವಿಟ್ಟಿದ್ದಾರೆ.

ಕೊಲೆಯಾದ ಸಿದ್ದರಾಜುವಿನ‌ ಹೆಂಡತಿಗು ಸಂಜಯ್ ಎಂಬಾತನಿಗು ಅಕ್ರಮ ಸಂಬಂಧ ಇತ್ತು.‌ ಇದಕ್ಕಾಗಿ ಸಿದ್ದರಾಜುವಿನ ಮನೆ ಮುಂದೆ ಬೈಕ್ ವೀಲ್ಹಿಂಗ್ ಮಾಡಿಕೊಂಡು ಸುತ್ತಾಡುತ್ತಿದ್ದೇವೆ, ಇದೇ ವಿಚಾರವಾಗಿ ಅವರಿಗೂ ನಮಗು ಗಲಾಟೆಯಾಗುತ್ತಿತ್ತು. ಸಿದ್ದರಾಜು ನಮ್ಮ ಮೇಲೆ ಹೊಡೆಯಲು ಪ್ಲಾನ್ ಮಾಡಿದ್ದರು. ಅದಕ್ಕೆ ನಾವೇ ಅವನನ್ನ ಹೊಡೆದು ಹೆದರಿಸಲು ಹೋಗಿದ್ದೀವಿ. ಆದರೆ, ಹೊಡೆದಾಗ ಸಿದ್ದರಾಜು ಗಾಯಗೊಂಡು ಸತ್ತುಹೋಗಿದ್ದಾನೆ ಅಂತ‌ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ಸಮನ್ಸ್​ ಜಾರಿಗಾಗಿ ವಿಧಾನಸೌಧದಲ್ಲಿ ಕಾಂಗ್ರೆಸ್​ ನಾಯಕ ಕೆ.ಜೆ ಜಾರ್ಜ್​ಗಾಗಿ ಹುಡುಕಾಡಿದ ಸಿಬಿಐ ಅಧಿಕಾರಿಗಳು

ಆತನಿಗೆ ಹೊಡೆಯಲು ಬಳಸಿದ್ದ‌ ಮಾರಕಾಸ್ತ್ರಗಳನ್ನ ಬನ್ನೂರು ಬಳಿಯ ಸೇತುವೆಗೆ ಬಿಸಾಡಿದ್ದೇವೆ ಎಂದು ಬಾಯ್ಬಿಟ್ಟಿರುವ ಆರೋಪಿಗಳು, ಕೊಲೆಗೆ ಬೈಕ್‌ ವೀಲ್ಹಿಂಗ್ ಕಾರಣವಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಕೇತುಪುರ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಕೊಲೆಯೊಂದು ನಡೆದು ಹೋಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಈಗಲೂ ಬೂದಿ ಮುಚ್ಚಿದ ಕೆಂಡದಂತಾ ವಾತವಾರಣ ಇದೆ. ಪೊಲೀಸರು ಆರೋಪಿಗಳ ಬಂಧನದ ನಂತರ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್‌ ಮಾಡಿದ್ದು. ಕೊಲೆ ಅಸಲಿ ಕಾರಣ ಇಡೀ ಊರಿಗೆ ತಿಳಿಯುವಂತೆ ಮಾಡಿದ್ದಾರೆ.
Published by: G Hareeshkumar
First published: September 21, 2020, 8:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading