HOME » NEWS » District » MURDER CASE OF IMMORAL RELATIONSHIP DEAD BODY OF A MAN FOUND IN THE FOREST MAK

Crime News: ಅನೈತಿಕ ಸಂಬಂಧ ಹಿನ್ನೆಲೆ ಹತ್ಯೆ ಪ್ರಕರಣ; ಕಾಡಿನಲ್ಲಿ ವ್ಯಕ್ತಿಯ ಶವ ಪತ್ತೆ, ಮೂವರ ಬಂಧನ!

ಸ್ನೇಹಿತರ ಭೇಟಿಗೆ ಹೋಗಿದ್ದ ಸಾಗರ ಸ್ನೇಹಿತರ ಜತೆಗೆ ಮಾತಿಗೆ ಇಳಿದಿದ್ದನು. ಮನೆಯಲ್ಲಿ ಆಗುತ್ತಿದ್ದ ಗಲಾಟೆ, ಜಗಳ ಬಗ್ಗೆ ಸ್ನೇಹಿತ ಹಾಗೂ ಸಂಬಂಧಿಯ ಜೊತೆಗೆ ಮುಕ್ತವಾಗಿ ಹಂಚಿ ಕೊಂಡಿದ್ದನು. ಆಗಲೇ ಸಂಬಂಧಿಯೊಬ್ಬ ಪತಿ, ಪತ್ನಿ ಜಗಳ ಬಿಡಿಸಲು ಉಳವಿಯಲ್ಲಿ ಜನರಿದ್ದಾರೆ ನಡಿ ಹೋಗೊಣ ಎಂದು ಪುಸಲಾಯಿಸಿದ್ದನು.

news18-kannada
Updated:February 26, 2021, 7:35 AM IST
Crime News: ಅನೈತಿಕ ಸಂಬಂಧ ಹಿನ್ನೆಲೆ ಹತ್ಯೆ ಪ್ರಕರಣ; ಕಾಡಿನಲ್ಲಿ ವ್ಯಕ್ತಿಯ ಶವ ಪತ್ತೆ, ಮೂವರ ಬಂಧನ!
ಬಂಧಿತ ಆರೋಪಿಗಳು.
  • Share this:
ಬೆಳಗಾವಿ; ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಯುವಕನೊಬ್ಬನ ಭೀಕರ ಕೊಲೆಯಾಗಿದೆ. ಸಂಬಂಧಿಯೇ ಈ ಕೊಲೆ ಮುಖ್ಯ ಆರೋಪಿಯಾಗಿದ್ದಾನೆ. ಉಳವಿಯಲ್ಲಿ ಪತಿ, ಪತ್ನಿ ಜಗಳ ಬಿಡಿಸುವರಿದ್ದಾರೆ ಎಂದು ಕರೆದುಕೊಂಡು ಹೋಗಿ ಹತ್ಯೆ ಮಾಡಿ ಕಾಡಿನಲ್ಲಿ ಶವ ಬಿಸಾಡಿದ್ದಾನೆ. ಪ್ರಕರಣ ಸಂಬಂಧ ಮೂರು ಜನ ಆರೋಪಿಗಳನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದು, ಇನ್ನುವಳಿದ ಆರೋಪಿಗಳಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಗ್ರಾಮದ ಸಾಗರ ಗಂಗಪ್ಪ ಪೂಜಾರಿ (23) ಕೊಲೆಯಾದ ಯುವಕ.

ಈ ಯುವಕ ಬೆಳಗಾವಿಯ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು.  ಫೆ.11ರಂದು ಎಂದಿನಂತೆ ಬೆಳಗಾವಿಗೆ ಕೆಲಸಕ್ಕೆ ಬಂದಿದ್ದನು. ನಂತರ ಆತನ ಸ್ನೇಹಿತರೇ ಫೋನ್ ಮಾಡಿ ಮಹಾಂತೇಶ ನಗರ ಬ್ರೀಡ್ಜ್ ಬಳಿ ಬರುವಂತೆ ಕರೆದಿದ್ದರು. ಸ್ನೇಹಿತರ ಭೇಟಿಗೆ ಹೋಗಿದ್ದ ಸಾಗರ ಸ್ನೇಹಿತರ ಜತೆಗೆ ಮಾತಿಗೆ ಇಳಿದಿದ್ದನು. ಮನೆಯಲ್ಲಿ ಆಗುತ್ತಿದ್ದ ಗಲಾಟೆ, ಜಗಳ ಬಗ್ಗೆ ಸ್ನೇಹಿತ ಹಾಗೂ ಸಂಬಂಧಿಯ ಜೊತೆಗೆ ಮುಕ್ತವಾಗಿ ಹಂಚಿ ಕೊಂಡಿದ್ದನು. ಆಗಲೇ ಸಂಬಂಧಿಯೊಬ್ಬ ಪತಿ, ಪತ್ನಿ ಜಗಳ ಬಿಡಿಸಲು ಉಳವಿಯಲ್ಲಿ ಜನರಿದ್ದಾರೆ ನಡಿ ಹೋಗೊಣ ಎಂದು ಪುಸಲಾಯಿಸಿದ್ದನು.

ಕೌಟಂಬಿಕ ಜಗಳ ಮುಗಿದರೆ ಸಾಕು ಎಂದಿದ್ದ ಸಾಗರ, ಉಳವಿಗೆ ಹೋಗಲು ಸಿದ್ದವಾಗಿದ್ದನು. ಹೀಗೆ ಸಾಗರನನ್ನು ಕರೆದುಕೊಂಡು ಹೋಗಿದ್ದು, ಬಾಳಪ್ಪ ದಿನ್ನಿ ಹಾಗೂ ಬಸವರಾಜ್ ಉಪ್ಪಾರ. ಈ ಬಾಳಪ್ಪ ದಿನ್ನಿ  ಹಾಗೂ ಸಾಗರ ಇಬ್ಬರು ಅಕ್ಕ ತಂಗಿಯರನ್ನು ಮದುವೆಯಾಗಿದ್ದು ತೀರಾ ಹತ್ತಿದ ಸಂಬಂಧಿಗಳಗಾಗಿದ್ದಾರೆ.  ಕಾರಿನಲ್ಲಿ ಹೋರಟ ಮೂರು ಜನ ಖಾನಾಪುರದಲ್ಲಿ ಪಾರ್ಟಿ ಮಾಡಿದ್ದಾರೆ ನಂತರ ಮತ್ತೊಬ್ಬ ಸ್ನೇಹಿತ  ಮಂಜುನಾಥ ಬಿಡಿ ಸಹ ಸೇರಿಕೊಂಡಿದ್ದನೆ. ಉಳವಿಗೆ ಹೋಗುವ ಬದಲು ಆಗಿದ್ದೇ ದೊಡ್ಡ ಅನಾಹುತ. ಮತ್ತೆ ಸಾಗರ ಮನೆಗೆ ವಾಪಸ್ ಬರಲೇ ಇಲ್ಲ.

ಇದನ್ನೂ ಓದಿ: ಸಲಿಂಗ ವಿವಾಹ ಮೂಲಭೂತ ಹಕ್ಕಲ್ಲ, ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ; ಕೇಂದ್ರ ಸರ್ಕಾರ

ಸಾಗರ ನನ್ನು ಕಾರಿನಲ್ಲಿ ಮದ್ಯವನ್ನು ಕುಡಿಸಿದ ಮೂರು ಜನ ಆರೋಪಿಗಳು ನಂತರ ಜೋಯಿಡಾ ಬಳಿ ಕೊಲೆ ಮಾಡಿ ಶವನ್ನು ಬಿಸಾಡಿ ವಾಪಸ್ ಬಂದಿದ್ದಾರೆ. ಸಾಗರ ತಂದೆ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಮಗನ ನಾಪತ್ತೆ ಬಗ್ಗೆ ದೂರು ನೀಡಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಬಾಳಪ್ಪ ದಿನ್ನಿ, ಬಸವರಾಜ್ ಉಪ್ಪಾರ, ಮಂಜುನಾಥ ಬಿಡಿ ಬಂಧಿಸಿದ್ದಾರೆ.  ಪ್ರಮುಖವಾಗಿ ಈ ಕೊಲೆಗೆ ಕಾರಣವಾಗಿದ್ದ ಸಾಗರ ಪತ್ನಿಯ ಅನೈತಿಕ ಸಂಬಂಧ. ಸಾಗರ ಪತ್ನಿ ಹಾಗೂ ಬಾಳಪ್ಪ ಜತೆಗೆ ಕೆಲ ತಿಂಗಳುಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಅನೈತಿಕ ಸಂಬಂಧ ಅಡ್ಡಿಯಾಗಿದ್ದ ಸಾಗರ ನನ್ನು ಮುಗಿಸಿದ್ದಾರೆ.

ಮಾರ್ಕೆಟ್ ಪೊಲೀಸ್ ಇನ್ಸಪೆಕ್ಟರ್ ಸಂಗಮೇ ಶಿವಯೋಗಿ ನೇತೃತ್ವದಲ್ಲಿ ಕೊಲೆ ಪ್ರಕಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಪ್ರಕರಣದಲ್ಲಿ ಅನೇಕ ಆರೋಪಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ  ಸಹಕಾರ ನೀಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈ ನಿಟ್ಟಿನಲ್ಲಿ ಇನ್ನೂ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಸಂಬಂಧಿಯನ್ನೇ ಕೊಲೆ ಮಾಡಿದ್ದು, ಇದೀಗ ಕುಟುಂಬಸ್ಥರಿಗೆ ಆಘಾತವನ್ನು ಉಂಟು ಮಾಡಿದೆ.
Published by: MAshok Kumar
First published: February 26, 2021, 7:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories