HOME » NEWS » District » MURDER BY CLOSE RELATIVE AT KACHAHALLI IN HULIYURUDURGA TUMKUR VKTMK SNVS

ತುಂಡು ಜಮೀನಿಗೆ ಹರಿಯಿತು ನೆತ್ತರು; ಸಿನಿಮಾ ಸ್ಟೈಲ್​ನಲ್ಲಿ ಪ್ಲಾನ್ ಮಾಡಿ ಬಲಿಹಾಕಿದ

ತುಮಕೂರಿನ ಹುಲಿಯೂರುದುರ್ಗ ಸಮೀಪದ ಕಾಚಹಳ್ಳಿ ಗ್ರಾಮದಲ್ಲಿ 14 ಗುಂಟೆ ಜಮೀನು ವಿಚಾರವಾಗಿ ದಾಯಾದಿಗಳ ಮಧ್ಯೆ ಕಲಹ ತೀವ್ರಗೊಂಡು ಮೊನ್ನೆ ಒಬ್ಬ ವ್ಯಕ್ತಿಯ ಕಗ್ಗೊಲೆಗೆ ಕಾರಣವಾಗಿದೆ.

news18-kannada
Updated:April 14, 2021, 3:47 PM IST
ತುಂಡು ಜಮೀನಿಗೆ ಹರಿಯಿತು ನೆತ್ತರು; ಸಿನಿಮಾ ಸ್ಟೈಲ್​ನಲ್ಲಿ ಪ್ಲಾನ್ ಮಾಡಿ ಬಲಿಹಾಕಿದ
ಸಾಂದರ್ಭಿಕ ಚಿತ್ರ
  • Share this:
ತುಮಕೂರು: ಕೇವಲ 14 ಗುಂಟೆ ಜಮೀನಿಗಾಗಿ ಒಬ್ಬ ವ್ಯಕ್ತಿಯನ್ನ ಭೀಕರವಾಗಿ ಕೊಲೆ ಮಾಡಲಾಗಿದೆ‌‌. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಬಳಿಯ ಕಾಚಹಳ್ಳಿ ಗ್ರಾಮದಲ್ಲಿ ಮನೆಯೊಳಗೇ ಕಂಬೇಗೌಡ ಎಂಬ ವ್ಯಕ್ತಿಯನ್ನ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಹರೀಶ್ ಎಂಬ ವ್ಯಕ್ತಿಯೇ ಕೊಲೆ ಆರೋಪಿ. ಹರೀಶ ಮತ್ತು ಮೃತ ಕಂಬೇಗೌಡ ತೀರ ಅಪರಿಚಿತರೇನಲ್ಲ. ವರಸೆಯಲ್ಲಿ ಇಬ್ಬರೂ ಕೂಡಾ ಅಣ್ಣತಮ್ಮಂದಿರೇ. ಹರೀಶನ ತಂದೆ ಹಾಗೂ ಕಂಬೇಗೌಡನ ತಂದೆ ಒಂದೇ ತಾಯಿಯ ಮಕ್ಕಳು. ಕಂಬೇಗೌಡ ಬೆಂಗಳೂರಿನಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಎರಡು ಮನೆ ಮಾಡಿಕೊಂಡು ಹೇಗೋ ಸುಖೀ ಜೀವನ ನಡೆಸ್ತಿದ್ದ. ಇತ್ತ ಹರೀಶ ಕೂಡಾ ಲಾಕ್ ಡೌನ್ ಬಳಿಕ ಬೆಂಗಳೂರು ತೊರೆದು ಹುಟ್ಟೂರು ಕಾಚಳ್ಳಿಯಲ್ಲೇ ಎರಡು ಸೀಮೆಹಸು ಕಟ್ಟಿಕೊಂಡು ಜೀವನ ನಡೆಸ್ತಿದ್ದ.

ಹೀಗಿದ್ದವರ ಮಧ್ಯೆ ಮೊದಲಿನಿಂದಲೂ ಊರ ಹೊರಗಿರೋ 14 ಗುಂಟೆ ಜಮೀನು ಅಡ್ಡಗಾಲಾಗಿತ್ತು. ಹರೀಶನ ತಂದೆ ಹಾಗೂ ಮೃತ ಕಂಬೇಗೌಡನ ತಂದೆ ಈ 14 ಗುಂಟೆ ಜಮೀನಿಗಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಕೆಲವೊಮ್ಮೆ ಜಗಳವಾಡಿಕೊಂಡು ಇದೇ ಹುಲಿಯೂರುದುರ್ಗದ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದರು.  ಅಣ್ಣ ತಮ್ಮಂದಿರಲ್ವಾ ಬಿಡು, ಸರಿಹೋಗ್ತಾರೆ ಅಂತ ಪೊಲೀಸರೂ ಆಗಾಗ ರಾಜೀ ಪಂಚಾಯ್ತಿ ಮಾಡಿ ಕಳುಸುತ್ತಿದ್ದರು. ಅದರೆ, ಇತ್ತೇಚೆಗೆ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು.

ಮೊನ್ನೆ ಮೊನ್ನೆಯಷ್ಟೇ ಮತ್ತೆ ಜಗಳ ಮಾಡಿಕೊಂಡಿದ್ದರು. ಆಗ ಊರಿನವರೆಲ್ಲಾ ಬಂದು ಇಬ್ಬರನ್ನೂ ಬಿಡಿಸಿದ್ದರು. ಆದ್ರೆ ಇದನ್ನೇ ಮನಸಲ್ಲಿಟ್ಟುಕೊಂಡಿದ್ದ ಹರೀಶ ಆವತ್ತೇ ಬೆಂಗಳೂರಿನಿಂದ ಲಾಂಗ್ ಒಂದನ್ನ ತರಿಸಿ ಇಟ್ಟುಕೊಂಡಿದ್ದ. ಸಾಲದ್ದಕ್ಕೆ ನಮ್ಮ ದೊಡ್ಡಪ್ಪನ ಮನೆಯಲ್ಲಿ ಯಾರನ್ನಾದರೂ ಒಬ್ಬರನ್ನ ಸದ್ಯದಲ್ಲೇ ಮುಗಿಸುತ್ತೇನೆ ಅಂತ ಊರುತುಂಬಾ ಹೇಳಿಕೊಂಡು ಓಡಾಡುತ್ತಿದ್ದ.

ಇದನ್ನು ಓದಿ: Bangalore Crime: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು; ಪುಟ್ಟೇನಹಳ್ಳಿ ಡಬಲ್ ಮರ್ಡರ್ ಆರೋಪಿ ಕಾಲಿಗೆ ಗುಂಡು

ಕೊಲೆ ಮಾಡಿಯೇ ತೀರಬೇಕು ಎಂದು ನಿರ್ಧಾರ ಮಾಡಿದ್ದ ಹರೀಶ ಮೊನ್ನೆ (ಭಾನುವಾರ) ಬೆಳ್ಳಂಬೆಳಗ್ಗೆ ಇದೇ ವಿವಾದಿತ 14 ಗುಂಟೆ ಜಮೀನಿನಲ್ಲಿ ತನ್ನ ಎರಡೂ ಹಸುಗಳನ್ನ ಕಟ್ಟಿ ಮೇಯಿಸುತ್ತಿದ್ದ. ಅಷ್ಟರಲ್ಲಿ ಸ್ಥಳಕ್ಕೆ ಬಂದಿದ್ದ ಕಂಬೇಗೌಡನ ತಾಯಿ ಪಾರ್ವತಮ್ಮ, ಯಾಕೋ ನಮ್ಮ ಹೊಲದಲ್ಲಿ ಹಸುಗಳನ್ನ ಬಿಟ್ಟು ಮೇಯುಸುತ್ತಿದ್ದೀಯ ಅಂತ ಕೇಳಿದರು. ಇಂಥದ್ದೇ ಸಮಯಕ್ಕೆ ಕಾಯುತ್ತಿದ್ದ ಹರೀಶ ಏಕಾಏಕಿ ಪಾರ್ವತಮ್ಮನ ಮೇಲೆ ಹಲ್ಲೆ ಮಾಡಿ ಹಿಗ್ಗಾಮುಗ್ಗಾ ಥಳಿಸಿಬಿಟ್ಟಿದ್ದ, ಜೊತೆಗೆ ಮೂಗಿಗೆ ಪಂಚ್ ಕೊಟ್ಟಿದ್ದರಿಂದ ಪಾರ್ವತಮ್ಮನ ಮೂಗು ಬಾಯಿಯಲ್ಲಿ ರಕ್ತ ಬರುತ್ತಿತ್ತು.

ಯಾವಾಗ ಇಂಥದ್ದೊಂದು ಗಲಾಟೆ ಆಯಿತೋ, ಅದೇ ಊರಿನ ಒಬ್ಬ ಯುವಕ ಹೀಗಾಗಿದೆ, ಹರೀಶ ನಿಮ್ಮಮ್ಮನಿಗೆ ತುಂಬಾ ಹೊಡೆದಿದ್ದಾನೆ. ಬೇಗ ಬಾ ಅಂತ ಬೆಂಗಳೂರಿನಲ್ಲಿದ್ದ ಕಂಬೇಗೌಡನಿಗೆ ಮಾಹಿತಿ ಕೊಟ್ಟಿದ್ದ. ಕಂಬೇಗೌಡ ಬೆಂಗಳೂರಿನಿಂದ ಕೇವಲ ಅರ್ಧಗಂಟೆಯಲ್ಲೇ ಕಾಚಳ್ಳಿಯಲ್ಲಿ ಬಂದುಬಿಟ್ಟಿದ್ದ. ಅಲ್ಲಿಗೆ ಹರೀಶನ ಪ್ಲಾನ್​ನಂತೆಯೇ ಕಂಬೇಗೌಡ ಊರಿಗೆ ಬಂದಿದ್ದ.

ಮೊದಲು ಇವರಮ್ಮನಿಗೆ ಹೊಡೆದ್ರೆ ಕಂಬೇಗೌಡ ಬರುತ್ತಾನೆ. ಆಗ ಈಸಿಯಾಗಿ ಅವನನ್ನ ಮುಗಿಸಬಹುದು ಎಂಬುದು ಹರೀಶನ ಪ್ಲಾನ್ ಆಗಿತ್ತು. ಇತ್ತ ಊರಿಗೆ ಬಂದ ಕಂಬೇಗೌಡ ಪಕ್ಕದ ಮನೆಯಲ್ಲೇ ಇದ್ದ ಹರೀಶನನ್ನ ಕೇಳಲು ತೆರಳಿದ್ದ. ಆದ್ರೆ ಅಲ್ಲಿ ಮಾತಿಗೆ ಮಾತು ಬೆಳೆದು ಅಲ್ಲೇ ಇದ್ದ ಒಂದು ದೊಣ್ಣೆಯಿಂದ ಹರೀಶನ ತಾಯಿ ನಾಗಮ್ಮನ ತಲೆಗೆ ಕಂಬೇಗೌಡ ಹೊಡೆದೇ ಬಿಟ್ಟಿದ್ದ. ಇದೇ ಸಮಯಕ್ಕಾಗಿ ಕಾಯುತ್ತಾ ಪಕ್ಕದ ರೂಮಿನಲ್ಲಿ ಲಾಂಗ್ ಹಿಡಿದು ಕಾದು ಕುಳಿತಿದ್ದ ಹರೀಶ ಏಕಾಏಕಿ ಕಂಬೇಗೌಡನ ಮೇಲೆ ಮನಸೋ ಇಚ್ಚೆ ಮಚ್ಚು ಬೀಸಿದ್ದ.ಇದನ್ನೂ ಓದಿ: ಸಂಪಿಗೆ ಬಿದ್ದು, 1 ನಿಮಿಷ 10 ಸೆಕೆಂಡ್ ನೀರಿನಲ್ಲಿ ಮುಳುಗಿದರೂ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಮಗು!

ಯಾವಾಗ ಮಚ್ಚಿನೇಟು ಜಾಸ್ತಿ ಆಯ್ತೋ ತಕ್ಷಣ ಈಚೆ ಓಡಿ ಬಂದಿದ್ದ ಕಂಬೇಗೌಡ. ಆದ್ರೆ ಅಷ್ಟೊತ್ತಿಗಾಗಲೇ ತಲೆ ಕುತ್ತಿಗೆಗೆ ಏಟು ಬಿದ್ದಿದ್ರಿಂದ.. ತನ್ನ ಮನೆ ಬಳಿಯೇ ಬಂದು ಕುಸಿದು ಕೂತಿದ್ದ. ಇನ್ನೇನು ನೀರು ಕುಡಿಸಬೇಕು ಅನ್ನುವಷ್ಟರಲ್ಲಿ ಪ್ರಾಣವನ್ನೇ ಬಿಟ್ಟಿದ್ದ ಕಂಬೇಗೌಡ.

ಈ ಘಟನೆ ಇಡೀ ಕುಣಿಗಲ್ ತಾಲೂಕನ್ನೇ ಅಳ್ಳಾಡಿಸಿದೆ.. ಎಲ್ಲರ ಬಾಯಲ್ಲೂ ಇದೇ ಮಾತು.. ಒಂದೇ ತಟ್ಟೆಯಲ್ಲಿ ತಿಂದವರು, ಒಂದೇ ಮನೆಯಲ್ಲಿ ಇದ್ದವರು ಕೇವಲ 14 ಗುಂಟೆ ಜಮೀನಿಗೆ ಹೀಗೆ ಮಾಡ್ಕೊಂಡ್ರಲ್ಲಾ ಅಂತ ಜನ ಮಾತನಾಡಿಕೊಳ್ತಿದ್ದಾರೆ.

ಇನ್ನು ಕಂಬೇಗೌಡನ ಅಂತಿಮ ಸಂಸ್ಕಾರದ ಆ ಗಳಿಗೆಯಲ್ಲಂತೂ ಎಲ್ಲರ ಕಣ್ಣು ಒದ್ದೆಯಾಗಿದ್ದವು. ಮೃತ ಕಂಬೇಗೌಡನಿಗೆ ಎರಡೂ ಚಿಕ್ಕ ಚಿಕ್ಕ ಹೆಣ್ಣುಮಕ್ಕಳಿದ್ದಾರೆ. ಅದ್ರಲ್ಲಿ ಒಂದು ಚಿಕ್ಕ ಮಗುವಿನ ಕೈಲಿ ತಂದೆಯ ಚಿತೆಗೆ ಬೆಂಕಿ ಇಡಿಸಬೇಕಾದಾಗಲಂತೂ ಪ್ರತಿಯೊಬ್ಬರೂ ಎದೆಯೊಡೆದು ರೋಧಿಸುತ್ತಿದ್ದ ದೃಶ್ಯ ಕಂಡುಬಂತು. ಇತ್ತ ಹುಲಿಯೂರು ದುರ್ಗ ಪೋಲಿಸರು ಹರೀಶ ಮತ್ತೆ ಅವನ ಕುಟುಂಬದವರನ್ನ ರಾತ್ರಿಯೇ ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು.

ವರದಿ: ವಿಠಲ್ ಕುಮಾರ್
Published by: Vijayasarthy SN
First published: April 14, 2021, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories