ನಂದಿನಿ ಲೇಔಟ್​ನ ಕೊಲೆ ಪ್ರಕರಣದ ಆರೋಪಿಗಳಿಂದ ಕೋಲಾರದಲ್ಲಿ ಪೊಲೀಸರ ಮೇಲೆ ದಾಳಿ

ಬೆಂಗಳೂರಿನ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳು ಕೋಲಾರದ ಹೊರವಲಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಪೊಲೀಸರು ಬೆನ್ನತ್ತಿದ್ದಾರೆ. ಈ ವೇಳೆ ಆರೋಪಿಗಳು ಕಾರು ನಿಲ್ಲಿಸಿ ಮಫ್ತಿಯಲ್ಲಿದ್ದ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದಾಗ ಪರಾರಿಯಾಗಿದ್ದಾರೆ.

news18-kannada
Updated:August 1, 2020, 1:56 PM IST
ನಂದಿನಿ ಲೇಔಟ್​ನ ಕೊಲೆ ಪ್ರಕರಣದ ಆರೋಪಿಗಳಿಂದ ಕೋಲಾರದಲ್ಲಿ ಪೊಲೀಸರ ಮೇಲೆ ದಾಳಿ
ಕೋಲಾರದ ಪೊಲೀಸರು
  • Share this:
ಕೋಲಾರ: ನಗರ ಹೊರವಲಯದ ಅರಹಳ್ಳಿ ಬಳಿ ಶುಕ್ರವಾರ ರಾತ್ರಿ‌ ಗುಂಡಿನ ಸದ್ದು ಕೇಳಿಬಂದಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಮೇಲೆಯೆ ಆರೋಪಿಗಳು ಹಲ್ಲೆ ಮಾಡಲು ಮುಂದಾದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳು ಹೋಗುತ್ತಿದ್ದ ಕಾರನ್ನ ಪೊಲೀಸರು ಬೆನ್ನುಹತ್ತಿ ಹೋಗುವಾಗ ಈ ಘಟನೆ ನಡೆದಿದೆ. ತಮ್ಮನ್ನು ಫಾಲೋ ಮಾಡುತ್ತಿದ್ದ ಪೊಲೀಸರ ವಾಹನದ ಮೇಲೆಯೇ ಆರೋಪಿಗಳು ಕಲ್ಲು ತೂರಿದ್ದಾರೆ. ಅಷ್ಟೇ ಅಲ್ಲದೆ ಮಫ್ತಿಯಲ್ಲಿದ  ಪೊಲೀಸರ ಮೇಲೆ ಲಾಂಗ್​ನಿಂದ ಹಲ್ಲೆ ನಡೆಸಲು ಮುಂದಾದ ಪರಿಣಾಮ ಪೊಲೀಸರು ಗಾಳಿಯಲ್ಲಿ  ಗುಂಡು ಹಾರಿಸಬೇಕಾಯಿತು. ಈ ಘಟನೆ ಕೋಲಾರ ನಗರ ಹೊರವಲಯದ ಅರಹಳ್ಳಿ ಬಳಿ ನಡೆದಿದೆ.

ಇದನ್ನೂ ಓದಿ: ಕಮಲ್ ಪಂತ್ ಬೆಂಗಳೂರು ಕಮಿಷನರ್ ಆಗಿ ಅಧಿಕಾರ; ಭಾವುಕರಾಗಿ ಬ್ಯಾಟನ್ ಕೊಟ್ಟು ನಿರ್ಗಮಿಸಿದ ಭಾಸ್ಕರ್ ರಾವ್

ಮಫ್ತಿಯಲ್ಲಿದ್ದ ಪೊಲೀಸರು ಖಾಸಗಿ ಕಾರಲ್ಲಿ ಆರೋಪಿಗಳನ್ನ ಹಿಂಬಾಲಿಸುವಾಗ, ಇದನ್ನು ಗಮನಿಸಿದ ಇಬ್ಬರು ಆರೋಪಿಗಳು ಕಾರು ನಿಲ್ಲಿಸಿದ್ದಾರೆ. ಬಳಿಕ, ಪೊಲೀಸರಿದ್ದ ಇನ್ನೋವಾ ಕಾರಿನ ಮೇಲೆ ಕಲ್ಲು  ತೂರಾಟ ನಡೆಸಿದ್ದಾರೆ. ನಂತರ, ತಮ್ಮ ಬಳಿ ಇದ್ದ ಲಾಂಗ್ ನಿಂದ ಹಲ್ಲೆಗೆ ಯತ್ನ ನಡೆಸಿದ್ದಾರೆ. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ಕೂಡಲೇ‌ ಕ್ಷಣ ಮಾತ್ರದಲ್ಲಿ ಕಾರು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಇನ್ನು, ಆರೋಪಿಗಳು ಕಲ್ಲುಗಳಿಂದ ದಾಳಿ ನಡೆಸಿದ ಪರಿಣಾಮ ಪೊಲೀಸರ ಖಾಸಗಿ ಕಾರಿನ ಗ್ಲಾಸ್ ಪುಡಿ ಪುಡಿಯಾಗಿದೆ. ಘಟನೆ ಸಂಬಂಧ ಕೋಲಾರ ಎಸ್​ಪಿ ಕಾರ್ತಿಕ್ ರೆಡ್ಡಿ ಹಾಗು ಗಲ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾ ವಿರುದ್ಧದ ಹೋರಾಟ ಹೇಗೆ? ಬಿಬಿಎಂಪಿ ಆಯುಕ್ತರಿಂದ ಸಲಹೆ-ಸೂಚನೆ

ಇನ್ನು, ಪೊಲೀಸರ ಮೇಲೆ ದಾಳಿಗೆ ಯತ್ನಿಸಿ ಹಲ್ಲೆ ಮಾಡಲು ಯತ್ನಿಸಿದ್ದಕ್ಕೆ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಮಾತನಾಡಿದ ಎಸ್ಪಿ ಕಾರ್ತಿಕ್ ರೆಡ್ಡಿ ಅವರು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published by: Vijayasarthy SN
First published: August 1, 2020, 1:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading