ಟೋಲ್ ಗೇಟ್ ಸಿಬ್ಬಂದಿ ದಾದಾಗಿರಿ ; ಮುಂಡರಗಿ ತಾಲೂಕಿನ ರೈತರು ಹೈರಾಣ

ಟೋಲ್ ಗೇಟ್ ಸಿಬ್ಬಂದಿಗಳ ಮೇಲೆ ಎರಡು ಪ್ರತ್ಯೇಕ ದೂರು ದಾಖಲಾಗಿವೆ. ಮುಂಡರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ.

news18-kannada
Updated:June 30, 2020, 4:52 PM IST
ಟೋಲ್ ಗೇಟ್ ಸಿಬ್ಬಂದಿ ದಾದಾಗಿರಿ ; ಮುಂಡರಗಿ ತಾಲೂಕಿನ ರೈತರು ಹೈರಾಣ
ಟೋಲ್ ಗೇಟ್
  • Share this:
ಗದಗ(ಜೂ.30): ವಾಹನ ಸವಾರರಿಗೆ ಟೋಲ್ ಗೇಟ್ ಸಿಬ್ಬಂದಿಗಳು ಮಾರಾಕಾಸ್ತ್ರ ಗಳಿ ನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿರುವಂತ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ  ಕೊರ್ಲಹಳ್ಳಿ ಬಳಿರುವ ಟೋಲ್ ಗೇಟ್ ನಲ್ಲಿ ನಡೆದಿದೆ.

ತಾಲೂಕಿನ ಕೊರ್ಲಹಳ್ಳಿ, ಸಿಂಗಟಾಲೂರು ಸೇರಿದಂತೆ ಅನೇಕ ಗ್ರಾಮದ ಜನರು ನಿತ್ಯ ಇದೇ ಟೋಲ್ ಗೇಟ್ ನಿಂದ ಮುಂಡರಗಿಗೆ ಹಾಗೂ ಸುತ್ತಮುತ್ತಲಿನ ಜಮೀನುಗಳಿಗೆ ಹೋಗುತ್ತಾರೆ. ಆದರೆ, ಊರು ದಾಟಿ ಮುಂದೆ ಹೋಗಬೇಕು ಅಂದ್ರೆ ಈ ಕೊರ್ಲಹಳ್ಳಿ ಟೋಲ್ ಗೇಟ್ ಇದೆ. ಪ್ರತಿ ಭಾರಿ ಹಣ ನೀಡಲು ಆಗುವುದಿಲ್ಲ. ನಮಗೆ ಪಾಸ್ ನೀಡಿ ಎಂದು ಕೊರ್ಲಹಳ್ಳಿ ಗ್ರಾಮದವರು ಸೇರಿದಂತೆ ಹಲವು ಗ್ರಾಮಸ್ಥರ ಬೇಡಿಕೆಯಾಗಿದೆ.

ಟೋಲ್ ಗೇಟ್ ಸಿಬ್ಬಂದಿಗಳು ಮಾತ್ರ ವಾಹನಗಳಿಗೆ ಪಾಸ್ ನೀಡದೆ ಹಣ ಕೊಟ್ಟ ನಂತರ ಮಾತ್ರ ಬಿಡುತ್ತಿದ್ದಾರೆ. ಇದು ಹಲವು ದಿನಗಳಿಂದ ಗ್ರಾಮಸ್ಥರು ಹಾಗೂ ಟೋಲ್ ಗೇಟ್ ಸಿಬ್ಬಂದಿಗಳ ನಡುವೆ ಮುಸುಕಿನ ಗುದ್ದಾಟ ಇದ್ದೆಇತ್ತು. ಆದರೆ, ಮೊನ್ನೆ ಮಾಬೂಸಾಬ ಹವಾಲ್ದಾರ, ಶಿಂಗಟಾಲೂರಿನಿಂದ ಮುಂಡರಗಿಗೆ ಬರುವಾಗ ಕೊರ್ಲಹಳ್ಳಿಯ ಟೋಲ್‌ಗೇಟ್ ಸಿಬ್ಬಂದಿಗೆ ತಾನು ದಿನಕ್ಕೆ ನಾಲ್ಕೈದು ಬಾರಿ ಈ ರಸ್ತೆಯಲ್ಲಿ ಓಡಾಡುತ್ತಿದ್ದು, ನನಗೆ ತಿಂಗಳ ಪಾಸ್ ನೀಡಿ ಎಂದು ಕೇಳಿದ್ದಾರೆ.

ಇಷ್ಟಕ್ಕೆ ಸಿಟ್ಟೆಗೆದ್ದ ಟೋಲ್‌ಗೇಟ್ ಉಸ್ತುವಾರಿ ಮದರಸಾಬ ಸಿಂಗನಮಲ್ಲಿ ಹಾಗೂ ಆತನ ಸಹಚರ ಸಿಬ್ಬಂದಿ ಚೇತನ್ ಇಬ್ಬರೂ ಸೇರಿ ಮಾಬೂಸಾಬನನ್ನು ಕಾರಿನಿಂದ ಹೊರಗೆ ಎಳೆದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೇ, ದೈಹಿಕ ಹಲ್ಲೆ ಮಾಡಿರುವ ಆರೋಪ ಸಹ ಇದೆ.

ಇನ್ನು ಶಿವಕುಮಾರ ಡೊಳ್ಳಿನ, ಮಾರುತಿ ಪಲ್ಲೇದ ಹಾಗೂ ನಿಂಗಪ್ಪ ಪಲ್ಲೇದ ಎಂಬುವವರು ಕೊರ್ಲಹಳ್ಳಿಯಿಂದ ಮುಂಡರಗಿಗೆ ಕಾರಿನಲ್ಲಿ ಬರುವಾಗ ಟೋಲ್‌ಗೇಟ್ ಸಿಬ್ಬಂದಿ ಇವರನ್ನು ಅಡ್ಡಹಾಕಿ ಶುಲ್ಕ ನೀಡುವಂತೆ ಕೇಳಿದ್ದು, ದೂರುದಾರರು ತಮ್ಮ ಕಾರಿನ ಮೇಲೆ ಫಾಸ್ಟ್ ಟ್ಯಾಗ್ ಇದೆ ಎಂದು ಹೇಳಿದ್ದಾರೆ, ಇದರಿಂದ ಸಿಟ್ಟಾದ ಸಿಬ್ಬಂದಿ ಚೇತನ, ವಿನಾಯಕ, ಶಬ್ಬೀರ ಹಾಗೂ ಉಸ್ತುವಾರಿ ಮದರಸಾಬ್ ಸಿಂಗನಮಲ್ಲಿ ನಾಲ್ವರೂ ಕೂಡಿಕೊಂಡು ದೂರುದಾರರನ್ನು ಕಾರಿನಿಂದ ಎಳೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಟೋಲ್ ಗೇಟ್ ಉಸ್ತುವಾರಿ ಮದರಸಾಬ್ ಸಿಂಗನಮಲ್ಲಿ ಹಾಗೂ ಚೇತನ, ವಿನಾಯಕ, ಶಬ್ಬೀರ ಸೇರಿದಂತೆ ಟೋಲ್ ಗೆಟ್ ಸಿಬ್ಬಂದಿಗಳು ಹಲ್ಲೆ ಗಲಾಟೆ ಮಾಡಿದ್ದಾರೆ. ಟೋಲ್ ಹಣ ಕೈಯಲ್ಲಿ ಹಿಡಿದರು, ಮದರಸಾಬ್ ಆ್ಯಂಡ್ ಟೀಮ್ ಗಲಾಟೆ ಮಾಡಿದೆ. ವಾಹನ ಸವಾರರು ಪಾಸ್ ನೀಡುವಂತೆ ಕೇಳಿದ್ರು ತನ್ನ ಬಟಾಲಿಯನ್ ಸಮೇತವಾಗಿ ಹಲ್ಲೆ‌ ಮಾಡ್ತಾಯಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಜನರ ಸಮಸ್ಯೆ ಕೇಳಲು ಬಂದು ಬೆಂಬಲಿಗರ ಮನೆಯಲ್ಲಿ ಕುಳಿತ ಶಾಸಕ ; ಶಾಸಕರನ್ನ ತರಾಟೆಗೆ ತೆಗೆದುಕೊಂಡ ಜನಟೋಲ್ ಗೇಟ್ ಸಿಬ್ಬಂದಿಗಳ ಮೇಲೆ ಎರಡು ಪ್ರತ್ಯೇಕ ದೂರು ದಾಖಲಾಗಿವೆ. ಮುಂಡರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ.
ಕೊರ್ಲಹಳ್ಳಿ ಟೋಲ್ ಗೇಟ್ ಈ ಭಾಗದ ಜನರಿಗೆ ಹೊರೆ ಆಗುತ್ತದೆ ಬೇರೆ ಕಡೇ ಟೋಲ್ ಗೇಟ್ ಮಾಡುವಂತೆ ಮೊದಲೇ ಈ ಭಾಗದ ಜನರು ಒತ್ತಾಯ ಮಾಡಿದರು. ಆದರೂ ಸಹ ಜನರ ವಿರೋಧದ ನಡುವೆ ಟೋಲ್ ಗೇಟ್ ಆರಂಭವಾಗಿದೆ.

ಆದರೆ ವಾಹನ ಸವಾರರಿಗೆ ಅನುಕೂಲ ಮಾಡಬೇಕಾದ ಟೋಲ್ ಗೇಟ್ ಸಿಬ್ಬಂದಿಗಳು ರೌಡಿಗಳ ಹಾಗೇ ವರ್ತನೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯೇ ಸರಿ. ಇನಾದರೂ ಪೊಲೀಸರು ದಾದಾಗಿರಿ ಮಾಡುತ್ತಿರುವರು ಟೋಲ್ ಗೇಟ್ ಸಿಬ್ಬಂದಿಗಳಿಗೆ ಬುದ್ದಿ ಕಲಿಸಬೇಕಾಗಿದೆ.
First published: June 30, 2020, 4:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading