HOME » NEWS » District » MUGUGESH NIRANI IS NALAYAK HAS GONE CRAZY SAYS EX MLA KASHAPPANAVAR NMPG SKTV

ಸಚಿವ ಮುರುಗೇಶ್ ‌ನಿರಾಣಿ ದೊಡ್ಡ ನಾಲಾಯಕ್, ನಿರಾಣಿಗೆ ಹುಚ್ಚು ಹಿಡಿದಿದೆ: ಮಾಜಿ ಶಾಸಕ ಕಾಶಪ್ಪನವರ್ ವಾಗ್ದಾಳಿ

ವಿಜಯಪುರದ ಶಾಸಕ ಬಸವನಗೌಡ ಪಾಟೀಲ ಅವರಿಗೆ ನಾಲಾಯಕ್ ಎಂಬ ಪದ ಬಳಕೆ ಮಾಡಿ ಸಚಿವ ನಿರಾಣಿ ನಿಂದನೆ ಮಾಡಿದ್ದ ಕ್ರಮ ಸರಿಯಲ್ಲ. ನಿರಾಣಿ ಅವರಿಗೆ ಪಂಚಮಸಾಲಿ ಸಮಾಜದ ಬಗ್ಗೆ ಯಾವುದೇ ಕಳಕಳಿಯಿಲ್ಲ. ಸಮಾಜಕ್ಕೆ ಯಾವುದೇ ಉತ್ತಮ ಕೊಡುಗೆ ಅವರು ನೀಡಿಲ್ಲ. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿ ಹಾಗೂ ನನ್ನ ಬಗ್ಗೆ ನಿರಾಣಿ ಅತ್ಯಂತ ಕೀಳಾಗಿ ಮಾತನಾಡಿದ್ದು ನಾನು ಕಂಡಿದ್ದೇನೆ ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

news18-kannada
Updated:April 4, 2021, 7:34 AM IST
ಸಚಿವ ಮುರುಗೇಶ್ ‌ನಿರಾಣಿ ದೊಡ್ಡ ನಾಲಾಯಕ್, ನಿರಾಣಿಗೆ ಹುಚ್ಚು ಹಿಡಿದಿದೆ: ಮಾಜಿ ಶಾಸಕ ಕಾಶಪ್ಪನವರ್ ವಾಗ್ದಾಳಿ
ಕಾಶಪ್ಪನವರ್ - ಮುರುಗೇಶ್ ನಿರಾಣಿ
  • Share this:
ಯಾದಗಿರಿ(ಏಪ್ರಿಲ್ 04): ಸಚಿವ ಮುರುಗೇಶ್ ನಿರಾಣಿ ವಿರುದ್ಧ ಮಾಜಿ ಶಾಸಕ ಕಾಶಪ್ಪನವರ್ ಕಿಡಿಕಾರಿದ್ದಾರೆ. ನಿರಾಣಿ ಅವರು ದೊಡ್ಡ ನಾಲಾಯಕ್ ಆಗಿದ್ದು ಈಗ ಅಧಿಕಾರದಲ್ಲಿರೋದ್ರಿಂದ ಅಧಿಕಾರದ ಮದ ಏರಿ ಅವರಿಗೆ ಅಧಿಕಾರದ ಹುಚ್ಚು ಹಿಡಿದಿದೆ ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯಾದಗಿರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯಪುರದ ಶಾಸಕ ಬಸವನಗೌಡ ಪಾಟೀಲ ಅವರಿಗೆ ನಾಲಾಯಕ್ ಎಂಬ ಪದ ಬಳಕೆ ಮಾಡಿ ಸಚಿವ ನಿರಾಣಿ ನಿಂದನೆ ಮಾಡಿದ್ದ ಕ್ರಮ ಸರಿಯಲ್ಲ. ನಿರಾಣಿ ಅವರಿಗೆ ಪಂಚಮಸಾಲಿ ಸಮಾಜದ ಬಗ್ಗೆ ಯಾವುದೇ ಕಳಕಳಿಯಿಲ್ಲ. ಸಮಾಜಕ್ಕೆ ಯಾವುದೇ ಉತ್ತಮ ಕೊಡುಗೆ ಅವರು ನೀಡಿಲ್ಲ. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿ ಹಾಗೂ ನನ್ನ ಬಗ್ಗೆ ನಿರಾಣಿ ಅತ್ಯಂತ ಕೀಳಾಗಿ ಮಾತನಾಡಿದ್ದು ನಾನು ಕಂಡಿದ್ದೇನೆ.

ಸದನದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಆರು ತಿಂಗಳಲ್ಲಿ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದು ಈ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ. ಸಿಎಂ ಯಡಿಯೂರಪ್ಪ ಅವರು ನುಡಿದಂತೆ ನಡೆದು ಆರು ತಿಂಗಳ ಒಳಗಾಗಿ ಮೀಸಲಾತಿ ಕಲ್ಪಿಸುವ ಭರವಸೆ ಇದ್ದು ಒಂದು ವೇಳೆ ಮೀಸಲಾತಿ ಕಲ್ಪಿಸದಿದ್ದರೆ ಮತ್ತೆ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದಲ್ಲಿ ಮಂತ್ರಿ ದೊಡ್ಡವರಾ..? ಮುಖ್ಯಮಂತ್ರಿ ದೊಡ್ಡವರಾ..? ನಿರಾಣಿ ಅವರು ಯಾಕೆ ಹೀಯಾಳಿಸುವಂತ ಮಾತನಾಡುತ್ತಾರೆ? ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಮಾಜದ ಪರ ನಿಂತಿದಕ್ಕೆ ಹೀಗೆಲ್ಲಾ ಮಾತನಾಡುತ್ತಾರೆ. ಒಂದು ವೇಳೆ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸದಿದ್ದರೆ ಸಚಿವ ಮುರುಗೇಶ್ ನಿರಾಣಿ ನಿವಾಸದ ಮುಂದೆ ಧರಣಿ ಮಾಡಲಾಗುತ್ತದೆ.

ಸಮಾಜದ ವಿರುದ್ಧ ಹೇಳಿಕೆ ನೀಡಿದರೆ ಸಮಾಜವು ನಿಮಗೆ ತಕ್ಕ ಪಾಠ ಕಲಿಸುತ್ತದೆ. ಸ್ವಾಮಿ ಅವರ ಆಶೀರ್ವಾದದಿಂದ ಮಂತ್ರಿಯಾಗಿರೋದನ್ನು ಮರೆಯಬಾರದೆಂದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮುದಾಯದ ಬಹು ವರ್ಷದ ಮೀಸಲಾತಿ ಬೇಡಿಕೆ ಇಟ್ಟುಕೊಂಡು ಬೃಹತ್ ಪಾದಯಾತ್ರೆ ನಡೆಸಿ 23 ದಿನಗಳ ಕಾಲ ಹೋರಾಟ ಮಾಡಲಾಗಿದೆ. ಪಂಚಮಸಾಲಿ ಸಮುದಾಯದ ಪ್ರತಿಯೊಬ್ಬರೂ ‌ಹೋರಾಟಕ್ಕೆ ಕೈಜೊಡಿಸಿ ಹೋರಾಟಕ್ಕೆ ಶಕ್ತಿ ತುಂಬಿದರು. ನಮ್ಮ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಆರು ತಿಂಗಳ ಒಳಗಾಗಿ ಪಂಚಮಸಾಲಿ ಸಮುದಾಯಕ್ಕೆ ‌2 ಎ ಮೀಸಲಾತಿ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಸಿಎಂ ಭರವಸೆ ನೀಡಿದ ಹಿನ್ನೆಲೆ ಹೋರಾಟವನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ. ಕೂಡಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ತರಿಸಿಕೊಂಡು ಅದನ್ನು ಅನುಷ್ಠಾನಕ್ಕೆ ತರಬೇಕೆಂದರು. ಬೇಡಿಕೆಯನ್ನು ಈಡೇರಿಸದಿದ್ದರೆ ಮತ್ತೆ ಮೀಸಲಾತಿಗಾಗಿ ಹೋರಾಟ ಮಾಡಲಾಗುತ್ತದೆ ಎಂದರು.
Published by: Soumya KN
First published: April 4, 2021, 7:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories