ಎಗ್ಗಿಲ್ಲದೆ ಸಾಗಿದ ಮಣ್ಣು ಅಗೆಯುವ ದಂಧೆ ; ಹಗಲಿರುಳು ಕೃಷ್ಣಾ ಒಡಲು ಅಗೆಯುತ್ತಿರುವ ಖದೀಮರು

ದಿನಕ್ಕೆ ಸುಮಾರು 50 ಟ್ರಾಕ್ಟರ್ ಗಳ ಮೂಲಕ ಮಣ್ಣು ತೆಗೆದು ಅಕ್ಕ ಪಕ್ಕದ ಹಳ್ಳಿಗಳಿಗೆ ಸಾಗಾಟ ಮಾಡುತ್ತಿದ್ದರೆ ನಿತ್ಯವೂ ಕನಿಷ್ಠ ಅಂದರೂ 500 ಟ್ರಿಪ್ ಮಣ್ಣು ತೆಗೆದು ಮಾರಾಟ ಮಾಡಿಕೊಳ್ಳುತ್ತಿದ್ದಾರೆ.

ಜೆಸಿಬಿ ಮೂಲಕ ಮಣ್ಣು ತೆಗೆಯುತ್ತಿರುವುದು

ಜೆಸಿಬಿ ಮೂಲಕ ಮಣ್ಣು ತೆಗೆಯುತ್ತಿರುವುದು

  • Share this:
ಚಿಕ್ಕೋಡಿ(ಜೂ.20): ಪ್ರವಾಹ ಬಂದು ಹೋಗಿ ಇನ್ನೂ ಸಹ ಒಂದು ವರ್ಷವಾಗಿಲ್ಲ. ಆದರೆ, ಅಷ್ಟರೊಳಗೆ ನದಿ ಪಾತ್ರದಲ್ಲಿ ಮಣ್ಣು ಅಗೆಯುವ ದಂಧೆ ಪ್ರಾರಂಭವಾಗಿದೆ. ಉತ್ತರ ಕರ್ನಾಟಕದ ಜೀವನದಿ ಅಂತ ಕರೆಸಿಕೊಳ್ಳುವ ಕೃಷ್ಣಾ ನದಿಯ ಒಡಲನ್ನೆ ಈಗ ಮಣ್ಣಿನ ಆಸೆಗಾಗಿ ಬಗೆಯಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಮತ್ತು ಸಪ್ತಸಾಗರ ಗ್ರಾಮಗಳಲ್ಲಿ ಈ ದಂಧೆ ನಡೆದಿದೆ. ಖದೀಮರು ಹಗಲು ರಾತ್ರಿ ದಂಧೆ ನಡೆಸುತ್ತಿದ್ದಾರೆ.

ಜೆಸಿಬಿ, ಟ್ರಾಕ್ಟರ್​ಗಳ ಬಳಕೆ

ಮಣ್ಣು ಅಗೆಯುವ ದಂಧೆಗಾಗಿ ಖದೀಮರು ದೊಡ್ಡ ದೊಡ್ಡ ಜೆಸಿಬಿಗಳನ್ನ ರಾಜಾರೋಷವಾಗಿ ಬಳಕೆ ಮಾಡುತ್ತಿದ್ದು, ದಿನಕ್ಕೆ ಸುಮಾರು 50 ಟ್ರಾಕ್ಟರ್ ಗಳ ಮೂಲಕ ಮಣ್ಣು ತೆಗೆದು ಅಕ್ಕ ಪಕ್ಕದ ಹಳ್ಳಿಗಳಿಗೆ ಸಾಗಾಟ ಮಾಡುತ್ತಿದ್ದರೆ ನಿತ್ಯವೂ ಕನಿಷ್ಠ ಅಂದರೂ 500 ಟ್ರಿಪ್ ಮಣ್ಣು ತೆಗೆದು ಮಾರಾಟ ಮಾಡಿಕೊಳ್ಳುತ್ತಿದ್ದಾರೆ.

ಇಟ್ಟಿಗೆ ಬಟ್ಟಿಗಳ ಮಾಲೀಕರಿಂದಲೇ ದಂಧೆ

ತೀರ್ಥ ಗ್ರಾಮ ಸೇರಿದಂತೆ ಅಕ್ಕಪಕ್ಕದಲ್ಲಿ ಇಟ್ಟಿಗೆ ಬಟ್ಟಿಗಳು ತಲೆ ಎತ್ತಿದ್ದು ನದಿ ನೀರಿನಿಂದ ನದಿಯ ಪಕ್ಕದಲ್ಲಿ ಬಂದು ಬಿದ್ದ ಮಣ್ಣನ್ನು ಲೂಟಿ ಮಾಡಲಾಗುತ್ತಿದೆ. ತೀರ್ಥ ಒಂದೇ ಗ್ರಾಮದಲ್ಲಿ ಸುಮಾರು 12 ಕ್ಕೂ ಹೆಚ್ಚು ಇಟ್ಟಿಗೆ ಬಟ್ಟಿಗಳಿದ್ದು ಮಾಲೀಕರಿಂದಲೇ ದಂಧೆ ನಡೆಯುತ್ತಿರುವುದು ವಿಪರ್ಯಾಸ.

ಇದನ್ನೂ ಓದಿ : ವಿಜಯಪುರ ಕಲಾವಿದರ ದೇಶಪ್ರೇಮ ; ತಮಗೆ ವೇದಿಕೆ ಒದಗಿಸಿದವರ ವಿರುದ್ಧವೇ ಜನಜಾಗೃತಿಗೆ ಮುಂದಾಗಿ ಮಾದರಿಯಾದ ಕಲಾವಿದರು

ಅಕ್ರಮ ಮಣ್ಣು ಮಾಫಿಯಾ ತಡೆಯಬೇಕಾದ ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದಂಧೆಕೋರರು ಲಂಚ ನೀಡಿ ಸುಮ್ಮನಿರಿಸಿದ್ದಾರೆ ಎನ್ನುವ ಆರೋಪವೂ ಸಹ ಕೇಳಿ ಬಂದಿದೆ. ಹೀಗಾಗಿ ಅಧಿಕಾರಿಗಳು ಮತ್ತು ಪೊಲೀಸರು ದಂಧೆ ನಡೆಯುತ್ತಿದ್ದರೂ ಸಹ ಸುಮ್ಮನಿದ್ದಾರೆ. ಇನ್ನು ಸ್ವತಃ ಡಿಸಿಎಂ ಲಕ್ಷ್ಮಣ ಸವದಿ ಅವರ ಕ್ಷೇತ್ರದಲ್ಲಿ ಇಂತಹ ಅಕ್ರಮ ನಡೆಯುತ್ತಿದ್ದರು ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ಹಾಗಾಗಿ ನಾವು ಎಷ್ಟು ದೂರು ನೀಡಿದರು ಯಾವುದೆ ಪ್ರಯೋಜನ ಮಾತ್ರ ಆಗಿಲ್ಲಾ ಅಂತಾರೆ ಸ್ಥಳೀಯರು.

ಒಟ್ಟಿನಲ್ಲಿ ಪ್ರವಾಹ ಬಂದು ಹೋಗಿ ವರ್ಷವೂ ಕಳೆದಿಲ್ಲ ಪ್ರವಾಹ ಕಲಿಸಿದ ಪಾಠವನ್ನೂ ಸಹ ಲೆಕ್ಕಕ್ಕೆ ತೆಗೆದುಕೊಳ್ಳದೆ ಜನ ಮತ್ತದೆ ದುರ್ಬುದ್ಧಿ ತೋರಿಸಿ ಮಣ್ಣು ತೆಗೆಯುವ ಸಾಹಸಕ್ಕೆ ಕೈ ಹಾಕಿದ್ದು ತೆಗೆದಿರುವ ಮಣ್ಣಿನಿಂದಲೇ ಮಣ್ಣಾಗುತ್ತೇವೆ ಎಂಬುದನ್ನ ಬಹುಶಃ ಜನ ಮರೆತಂತಿದ್ದಾರೆ‌.

 
First published: