• Home
 • »
 • News
 • »
 • district
 • »
 • Helpline - ಸಂಸದ ತೇಜಸ್ವಿ ಸೂರ್ಯರಿಂದ ಬೆಂಗಳೂರಿಗರಿಗೆ ಕೊರೋನಾ ಸಹಾಯವಾಣಿ; ಇಲ್ಲಿವೆ ನಂಬರ್ಸ್

Helpline - ಸಂಸದ ತೇಜಸ್ವಿ ಸೂರ್ಯರಿಂದ ಬೆಂಗಳೂರಿಗರಿಗೆ ಕೊರೋನಾ ಸಹಾಯವಾಣಿ; ಇಲ್ಲಿವೆ ನಂಬರ್ಸ್

ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ

ಕೊರೋನಾದಿಂದ ತತ್ತರಿಸಿರುವ ಬೆಂಗಳೂರು ನಗರದ ಜನರಿಗೆ ಸಹಾಯವಾಗಿ ಸಂಸದ ತೇಜಸ್ವಿ ಸೂರ್ಯ ಹೆಲ್ಪ್​ಲೈನ್ ಪ್ರಾರಂಭಿಸಿದ್ದಾರೆ. ಇದರಲ್ಲಿ 26 ವೈದ್ಯರ ಮೊಬೈಲ್ ನಂಬರ್​ಗಳಿದ್ದು, ದಿನದ ನಾಲ್ಕು ಪಾಳಿಗಳಾಗಿ ಇವರು ಸೇವೆ ನೀಡಲಿದ್ದಾರೆ.

 • Share this:

  ಬೆಂಗಳೂರು(ಏ. 19): ದೇಶದಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತ ನಗರಗಳಲ್ಲಿ ಬೆಂಗಳೂರೂ ಸೇರಿದೆ. ಇಲ್ಲಿ ದಿನಕ್ಕೆ 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಅದಕ್ಕಿಂತ ಮುಖ್ಯವಾಗಿ ಇಲ್ಲಿ ಆಕ್ಸಿಜನ್, ಇಂಜೆಕ್ಷನ್ ಸೌಲಭ್ಯದ ಕೊರತೆ ಎದುರಾಗುತ್ತಿರುವುದು ಒಂದೆಡೆಯಾದರೆ, ರೋಗಿಗಳನ್ನ ಅಡ್ಮಿಟ್ ಮಾಡಿಕೊಳ್ಳಲು ಆಸ್ಪತ್ರೆಗಳಲ್ಲಿ ಬೆಡ್​ಗಳೇ ಇಲ್ಲವೆಂಬ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಕೋವಿಡ್ ಸೋಂಕಿತರು ದಿಕ್ಕು ತೋಚದೆ ಹತಾಶೆಗೊಳ್ಳುವ ಪರಿಸ್ಥಿತಿ ಇದೆ. ಈ ಹೊತ್ತಿನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಕೊರೋನಾ ಸಹಾಯವಾಣಿ ಆರಂಭಿಸಿದ್ದಾರೆ.


  ಬೆಳಗ್ಗೆ 8ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ, ಅಂದರೆ ದಿನದ 15 ಗಂಟೆ ಕಾಲ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ಅವರು ತೆರೆದಿದ್ದಾರೆ. ಬೆಂಗಳೂರಿನ ವಿವಿಧ ವೈದ್ಯರು ಈ ಸಹಾಯವಾಣಿಯನ್ನ ನಿರ್ವಹಿಸಲಿದ್ಧಾರೆ. ನಾಲ್ಕು ಪಾಳಿಗಳಲ್ಲಿ ವೈದ್ಯರು ಸಹಾಯವಾಣಿ ನಂಬರ್​ಗಳಲ್ಲಿ ಲಭ್ಯ ಇರಲಿದ್ದಾರೆ. ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಒಂದು ಪಾಳಿ; ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಎರಡನೇ ಪಾಳಿ; ಸಂಜೆ 4ರಿಂದ ರಾತ್ರಿ 8ರವರೆಗೆ ಮೂರನೇ ಪಾಳಿ; ಹಾಗೂ ರಾತ್ರಿ 8ರಿಂದ 11ಗಂಟೆಯವರೆಗೆ ನಾಲ್ಕನೇ ಪಾಳಿ ಮಾಡಲಾಗಿದೆ. ಇದರಲ್ಲಿ ಮಧ್ಯಾಹ್ನ 12ರಿಂದ ಸಂಜೆ 4ರವರೆಗಿನ ಪಾಳಿಯಲ್ಲಿ 8 ವೈದ್ಯರ ನಂಬರ್​ಗಳಿವೆ. ಉಳಿದ ಪಾಳಿಗಳಲ್ಲಿ ತಲಾ ಆರು ವೈದ್ಯರ ನಂಬರ್​ಗಳನ್ನ ಸಾರ್ವಜನಿಕರ ಸೇವೆಗೆ ಕೊಡಲಾಗಿದೆ.


  ಕೋವಿಡ್ ಸೋಂಕು ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನಾದರೂ ಈ ಸಹಾಯವಾಣಿ ಮೂಲಕ ತಿಳಿದುಕೊಳ್ಳಬಹುದು. ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ ಕೂಡ ಎರಡು ಸಹಾಯವಾಣಿಗಳನ್ನ ನೀಡಿದೆ. ಅದರಲ್ಲಿ ಎರಡು ನಂಬರ್​ಗಳಿದ್ದು, ದಿನಕ್ಕೆ 24 ಗಂಟೆಯೂ ಸೇವೆ ಲಭ್ಯ ಇರುತ್ತದೆ.


  ಇದನ್ನೂ ಓದಿ: ಮದುವೆ ಮಂಟಪಗಳಲ್ಲಿ ಕೊರೋನಾ ಮಾರ್ಗಸೂಚಿ ಅನುಸರಿಸದಿದ್ದರೆ ಕಠಿಣ ಕ್ರಮ: ಸುರೇಶ್ ಕುಮಾರ್


  ಐಎಂಎ ಸಹಾಯವಾಣಿ ನಂಬರ್​ಗಳು (24X7):
  9999672238
  9999672239


  ಸಂಸದ ತೇಜಸ್ವಿ ಸೂರ್ಯ ಪ್ರಾರಂಭಿಸಿರುವ ಸಹಾಯವಾಣಿ ಹಾಗೂ ವೈದ್ಯರ ವಿವರ (ಬೆಳಗ್ಗೆ 8ರಿಂದ ರಾತ್ರಿ 11ರವರೆಗೆ)


  ಬೆಳಗ್ಗೆ 8ರಿಂದ 12ರವರೆಗೆ
  1) ಡಾ. ತುಷಾರ್ ಷಾ 9321469911
  2) ಡಾ. ಎಂ ಭಟ್ 9320407074
  3) ಡಾ. ಡಿ ದೋಷಿ 9820237951
  4) ಡಾ. ಡಿ ರಾಥೋಡ್ 8879148679
  5) ಡಾ. ಆರ್ ಗ್ವಲಾನಿ 8779835257
  6) ಡಾ. ಡಿ ಕನ್ಸಾರ 8369846412


  ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ
  1) ಡಾ. ಜಿ ಕಾಮತ್ 9136575405
  2) ಡಾ. ಎಸ್ ಮಂಗಲೀಕ್ 9820222384
  3) ಡಾ. ಜೆ ಜೈನ್ 7021092685
  4) ಡಾ. ಎ ಥಕ್ಕರ್ 9321470745
  5) ಡಾ. ಎಲ್ ಭಗತ್ 9820732570
  6) ಡಾ. ಎನ್ ಷಾ 9821140656
  7) ಡಾ. ಎಸ್ ಫಣ್ಸೆ 8779328220
  8) ಡಾ. ಜೆ ಷಾ 9869031354


  ಸಂಜೆ 4ರಿಂದ ರಾತ್ರಿ 8ರವರೆಗೆ
  1) ಡಾ. ಎನ್ ಝವೇರಿ 9321489748
  2) ಡಾ. ಎಸ್ ಅನ್ಸಾರಿ 7045720278
  3) ಡಾ. ಎಲ್ ಕೇದಿಯ 9231470560
  4) ಡಾ. ಬಿ ಶುಕ್ಲಾ 9321489060
  5) ಡಾ. ಎಸ್ ಹಲ್ವಾಯಿ 9867379346
  6) ಡಾ. ಎಂ ಕೋಟ್ಯಾನ್ 8928650290


  ರಾತ್ರಿ 8ರಿಂದ 11ಗಂಟೆ
  1) ಡಾ. ಎನ್ ಕುಮಾರ್ 8104605550
  2) ಡಾ. ಪಿ ಭಾರ್ಗವ್ 9833887603
  3) ಡಾ. ಆರ್ ಚೌಹಾಣ್ 9892135010
  4) ಡಾ. ಬಿ ಖರತ್ 9969471816
  5) ಡಾ. ಎಸ್ ಧುಲೇಕರ್ 9892139027
  6) ಡಾ. ಎಸ್ ಪಂಡಿತ್ 9422473277


  ಇದನ್ನೂ ಓದಿ: Bangalore Coronavirus: ಬೆಂಗಳೂರಲ್ಲಿ ಐಸಿಯು ಬೆಡ್​ಗಳೇ ಸಿಗ್ತಿಲ್ಲ; ಚಿತಾಗಾರದಲ್ಲಿ ಶವ ಸುಡಲೂ ದಿನವಿಡೀ ಕಾಯಬೇಕು!


  ನಿನ್ನೆ ಒಂದೇ ದಿನ ರಾಜ್ಯದ್ಲಲಿ 19 ಸಾವಿರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬಹುಪಾಲು ಬೆಂಗಳೂರಿನಲ್ಲೇ ವರದಿಯಾಗಿವೆ. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 12 ಸಾವಿರಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಈಗ ಉದ್ಯಾನ ನಗರಿಯಲ್ಲಿ ಸಕ್ರಿಯ ಪ್ರಕರಣಗಳು ಒಂದು ಲಕ್ಷದಷ್ಟಿವೆ. ಹೀಗಾಗಿ, ಈಗಿರುವ ವೈದ್ಯಕೀಯ ವ್ಯವಸ್ಥೆಯಲ್ಲಿ ಇಷ್ಟು ಪ್ರಮಾಣದ ರೋಗಿಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಪ್ರಕರಣಗಳು ಇನ್ನೂ ಮಿತಿಮೀರಿ ಹೋಗುವ ಸಾಧ್ಯತೆಯೇ ಹೆಚ್ಚಿರುವುದರಿಂದ ಬೆಂಗಳೂರಿಗರಿಗೆ ನಿಜಕ್ಕೂ ಆತಂಕದ ಸ್ಥಿತಿಯೇ ಇದೆ.

  Published by:Vijayasarthy SN
  First published: