ಯಡಿಯೂರಪ್ಪ- ಹೈಕಮಾಂಡ್ ನಡುವೆ 2 ವರ್ಷದ ಹಿಂದೆಯೇ ಒಪ್ಪಂದ: ಶ್ರೀನಿವಾಸ ಪ್ರಸಾದ್​ರಿಂದ ಸ್ಫೋಟಕ ಮಾಹಿತಿ

MP Srinivas Prasad Revealed: ನಿಮಗೆ ವಯಸ್ಸಾಗಿದ್ದರೂ ಅವಕಾಶ ಕೊಡುತ್ತೇವೆ ಎಂದು ಹೇಳಿಯೇ ಯಡಿಯೂರಪ್ಪನ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿತ್ತು. ಬಿಎಸ್ ವೈ ಹಾಗೂ ಹೈಕಮಾಂಡ್ ನಡುವೆ ನಡೆದಿದ್ದ ಮಾತುಕತೆ ಪ್ರಕಾರ ಈಗ ಅವರು ರಾಜೀನಾಮೆಗೆ ಮುಂದಾಗಿದ್ದಾರೆ.

ಸಂಸದ ಶ್ರೀನಿವಾಸ ಪ್ರಸಾದ್​

ಸಂಸದ ಶ್ರೀನಿವಾಸ ಪ್ರಸಾದ್​

  • Share this:
ಚಾಮರಾಜಗರ: ಎರಡು ವರ್ಷ ಆದ ನಂತರ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಹೈಕಮಾಂಡ್ ಮತ್ತು ಯಡಿಯೂರಪ್ಪ ನಡುವೆ ಮೊದಲೇ ಒಪ್ಪಂದ ಆಗಿತ್ತು ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಚಾಮರಾಜ‌ಗರದಲ್ಲಿ ಮಾತನಾಡಿದ ಅವರು ಸಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಒಪ್ಪಂದ ಆಗಿತ್ತು. ನಿಮಗೆ ವಯಸ್ಸಾಗಿದ್ದರೂ ಅವಕಾಶ ಕೊಡುತ್ತೇವೆ ಎಂದು ಹೇಳಿಯೇ ಯಡಿಯೂರಪ್ಪನ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿತ್ತು. ಬಿಎಸ್ ವೈ ಹಾಗೂ ಹೈಕಮಾಂಡ್ ನಡುವೆ ನಡೆದಿದ್ದ ಮಾತುಕತೆ ಪ್ರಕಾರ ಈಗ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂದರು.

ಬಿಜೆಪಿ ಪ್ರಮುಖ ಹುದ್ದೆಗಳಲ್ಲಿ 75 ವರ್ಷ ಮೇಲ್ಪಟ್ಟವರು ಇರಬಾರದೆಂಬುದು ಪಕ್ಷದ ನಿಲುವಾಗಿದೆ. ಆದರೆ ವಿಶೇಷ ಸಂದರ್ಭದಲ್ಲಿ ಇದನ್ನು ಸಡಿಲಿಸಿ ಯಡಿಯೂರಪ್ಪ ಅವರಿಗೆ ವಿನಾಯಿತಿ ನೀಡಲಾಗಿತ್ತು ಎಂದು ಅವರು ತಿಳಿಸಿದರು. ಹೈ ಕಮಾಂಡ್ ಜೊತೆ ಆಗಿದ್ದ ಮಾತುಕತೆಯಂತೆ ಯಡಿಯೂರಪ್ಪ ಈಗ ನಡೆದುಕೊಳ್ಳುತ್ತಿದ್ದಾರೆ. ಇದುವರೆಗಿದ್ದ ಉಹಾಪೋಹಕ್ಕೆ ತೆರೆಬೀಳುತ್ತಿದ್ದು ಎಲ್ಲವು ಈಗ ಒಂದು ಹಂತಕ್ಕೆ ಬಂದಿದೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.

ಬಿಎಸ್ವೈ ಮುಂದುವರಿಕೆಗೆ ಸ್ವಾಮೀಜಿಗಳ ಒತ್ತಾಯ ವಿಚಾರದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರಸಾದ್ ಸ್ವಾಮೀಜಿಗಳು ಸೂಪರ್ ಹೈಕಮಾಂಡ್ ಅಲ್ಲ, ಪಕ್ಷಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು. ಹೇಳಿಕೆ ನೀಡಬಾರದು ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಮುಂದಿನ ಸಿಎಂ ಯಾರೆಂದು ಇನ್ನೆರಡು ದಿನದಲ್ಲಿ ಗೊತ್ತಾಗಲಿದೆ. ಯಾರು ಎಂದು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ. ಪಕ್ಷ ಸಂಘಟಿಸಿದ ಯಡಿಯೂರಪ್ಪನವರನ್ನು ಹೈಕಮಾಂಡ್ ಗೌರವಯುತವಾಗಿ ನಡೆಸಿಕೊಂಡಿದೆ ಎಂದರು.

ಎಚ್ ವಿಶ್ವನಾಥ್ ಮಾತಿಗೆ ಬೆಲೆ ಇಲ್ಲ
ಬಾಂಬೆ ಫ್ರೆಂಡ್ಸ್ ಗೆ ಮಂತ್ರಿ ಸ್ಥಾನ ಕೊಡಬಾರದು ಎಂಬ ವಿಶ್ವನಾಥ್ ಹೇಳಿಕೆಗೆ ಶ್ರೀನಿವಾಸ್ ಪ್ರಸಾದ್ =ಆಕ್ರೋಶ ವ್ಯಕ್ತಪಡಿಸಿದರು. ವಿಶ್ವನಾಥ್ ಹೇಳಿಕೆಗೆ ಬೆಲೆ ಇಲ್ಲ. ವಿಶ್ವನಾಥ್ ಹತಾಶೆಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ವಿಶ್ವನಾಥ್ ಏನ್ ಹೈಕಮಾಂಡಾ? ಎಂದು ಕಿಡಿಕಾರಿದ ಅವರು ನಮ್ಮ ಬಾಯಿಚಪಲಕ್ಕೆ ಈ ರೀತಿಯ ಹೇಳಿಕೆ ಕೊಡಬಾರದು ಎಂದರು. ನಾನಾಗಲಿ, ವಿಶ್ವನಾಥ್ ಅಗಲಿ ಬಿಜೆಪಿ‌ ಪಕ್ಷ ಕಟ್ಟಿದವರಲ್ಲ. ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದೇವೆ,. ನಮ್ಮ ಕರ್ತವ್ಯವನ್ನ ನಿಷ್ಠೆಯಿಂದ ನಿರ್ವಹಿಸಬೇಕೆ ಹೊರತು ಈ ರೀತಿ ಮಾತನಾಡಬಾರದು ಎಂದು ಅವರು ವಿಶ್ವನಾಥ್ ವಿರುದ್ದ ವಾಗ್ಧಾಳಿ ನಡೆಸಿದರು.

ಇದನ್ನೂ ಓದಿ: ಸಿಎಂ ಭೇಟಿ ವೇಳೆ ಸ್ವಾಮೀಜಿಗಳಿಗೆ ನೀಡಿದ ಕವರ್​​ನಲ್ಲಿ ಏನಿತ್ತು ಎಂದು ತಿಳಿಸಿದ ದಿಂಗಾಲೇಶ್ವರ ಸ್ವಾಮೀಜಿ

ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲಿ ವಾಗ್ದಾಳಿ
ಬಿಜೆಪಿಯವರು ದಲಿತರನ್ನ ಸಿಎಂ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಕಿಡಿಕಾರಿದ ಶ್ರೀನಿವಾಸಪ್ರಸಾದ್ ದಲಿತರನ್ನು ಸಿಎಂ ಮಾಡಿ ಎಂದು ಅವನ್ಯಾರು ಹೇಳೋಕೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ವಿರೋದ ಪಕ್ಷದಲ್ಲಿರುವವರು ಈ ರೀತಿ ಹೇಳಿಕೆ ಕೊಡೋದು ಸರೀನಾ ಎಂದ ಅವರು ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮುಂದಿನ ಬಾರಿಗೆ ದಲಿತರನ್ನ ಸಿಎಂ ಮಾಡುತ್ತೇನೆಂದು ಹೇಳುತ್ತಿದ್ದರು .ಎಲ್ಲಿಗೋಯಿತು ಅವರ ಮಾತು? ತಮ್ಮ ಮಾತನ್ನೇ ಬದಲಾಯಿಸಿಕೊಂಡು ಮುಂದಿನ ಮುಖ್ಯಮಂತ್ರಿ ನಾನೇ ಎಂದು ಅಂಬಾರಿ ಮೇಲೆ ಕುಳಿತುಕೊಂಡು ಬಂದ್ರು. ಈಗ ಚುನಾವಣೆಗೆ ನಿಲ್ಲಲು ಮೈಸೂರು ಬಿಟ್ಟು ಕ್ಷೇತ್ರ ಹುಡುಕುವಂತಹ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಶ್ರೀನಿವಾಸಪ್ರಸಾದ್ ಕುಹಕವಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ 5 ವರ್ಷ ನೀವೇ ಸಿಎಂ ಆಗಿ ಸಂಪೂರ್ಣ ಬೆಂಬಲ ‌ಕೊಡುತ್ತೇವೆ. ನಂತರ ದಲಿತರನ್ನು ಸಿಎಂ ಮಾಡೋಣ ಎಂದು ಸಿದ್ದರಾಮಯ್ಯ ಬಳಿ ಹೇಳಿದ್ದೆ, ದಲಿತರಲ್ಲಿ ಯಾರು ಸಿಎಂ ಆಗಬೇಕು ಎಂಬುದನ್ನ ಕೂತು ಮಾತನಾಡೋಣ ಎಂದಿದ್ದೆ. ಆದರೆ ಬರುಬರುತ್ತಾ ಸಿದ್ದರಾಮಯ್ಯ ಅವರ ದಾಟಿಯೇ ಬದಲಾಯಿತು. ಅವನ ಹಿಂದೆ ಕುಳಿತುಕೊಳ್ಳುತ್ತಿದ್ದ ಮಹದೇವಪ್ಪ ನಾನೇ ಸಿಎಂ ಅನ್ನೋಕೆ ಶುರು ಮಾಡಿದ. ಆದ್ರೆ ಈಗ ಎಲ್ಲರೂ ಸೋತು ಮನೆಗೆ ಹೊರಟು ಹೋದ್ರು ಎಂದು ವ್ಯಂಗ್ಯವಾಡಿದರು.
Published by:Kavya V
First published: