HOME » NEWS » District » MP SHOBHA KARANDLAJE SAYS YESTERDAYS INCIDENT WAS A TESTAMENT TO THE FACT THAT THE FARMERS DID NOT LEAD THE PROTEST VCTC MAK

ಪ್ರತಿಭಟನೆಯ ನೇತೃತ್ವವನ್ನು ರೈತರು ವಹಿಸಿಲ್ಲ ಎಂಬುದಕ್ಕೆ ನಿನ್ನೆಯ ಘಟನೆಯೇ ಸಾಕ್ಷಿ; ಶೋಭಾ ಕರಂದ್ಲಾಜೆ

ನಿಜವಾದ ದೇಶಭಕ್ತರಾಗಿದ್ರೆ ದೆಹಲಿಯಲ್ಲಿ ಈ ರೀತಿ ಘಟನೆ ನಡೆಯುತ್ತಿರಲಿಲ್ಲ. ನಿಜವಾದ ರೈತರು ಕೂಡ ಈ ತರ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ರೈತರ ಹೆಸರಲ್ಲಿ ಈ ಚಳುವಳಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

news18-kannada
Updated:January 27, 2021, 5:18 PM IST
ಪ್ರತಿಭಟನೆಯ ನೇತೃತ್ವವನ್ನು ರೈತರು ವಹಿಸಿಲ್ಲ ಎಂಬುದಕ್ಕೆ ನಿನ್ನೆಯ ಘಟನೆಯೇ ಸಾಕ್ಷಿ; ಶೋಭಾ ಕರಂದ್ಲಾಜೆ
ಸಂಸದೆ ಶೋಭಾ ಕರಂದ್ಲಾಜೆ
  • Share this:
ಚಿಕ್ಕಮಗಳೂರು: ನಿನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನ ರೈತರು ವಹಿಸಿಲ್ಲ, ಕೆಂಪು ಕೋಟೆ ಹತ್ತಿದವರು ಯಾರೂ ಕೂಡ ರೈತರಲ್ಲ, ಹೋರಾಟದ ನೇತೃತ್ವವನ್ನ ಉಮ್ಮರ್ ಖಾಲಿದ್ ಬಿಡುಗಡೆ ಮಾಡಿ ಅನ್ನುವಂತಹ ವಿಚಾರವಾದಿಗಳು ಹಾಗೂ ದೇಶದ್ರೋಹಿ ಶಕ್ತಿ ವಹಿಸಿವೆ ಎಂದು ಈ ಹಿಂದೆ ಕೂಡ ಹೇಳಿದ್ವಿ, ಅದು ನಿನ್ನೆ ನಿಜವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಚಿಕ್ಕಮಗಳೂರಲ್ಲಿ ಸಂಸದರ ಕಚೇರಿ ಭೇಟಿ ನೀಡಿದ ವೇಳೆ ಮಾತಾನಾಡಿದ ಅವರು, "ಗಣರಾಜ್ಯದ ದಿನ ತ್ರಿವರ್ಣ ಧ್ವಜ ಹಾರಿಸಿ ದೇಶದ ಜನರು ಸಂಭ್ರಮಪಡುವ ದಿನ, ಆ ದಿನ ಅತ್ಯಂತ ಅಮಾನವೀಯ ಕೆಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಕೆಂಪು ಕೋಟೆಗೆ ನುಗ್ಗಿ ರೈತರು ಕೆಟ್ಟ ಪದ್ಧತಿಯನ್ನ ದೇಶದಲ್ಲಿ ಹಾಕಿಕೊಟ್ಟಿದ್ದಾರೆ. ನನಗೆ ಅನ್ನಿಸಿರೋ ಪ್ರಕಾರ ಕೆಂಪು ಕೋಟೆ ಹತ್ತಿದವರು ಯಾರೂ ಕೂಡ ರೈತರಲ್ಲ" ಎಂದು ತಿಳಿಸಿದ್ದಾರೆ.

ಇನ್ನು ಕೆನಡಾದ ಖಲಿಸ್ತಾನ್ ಮೂವ್‍ಮೆಂಟ್‍ನವರು ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಖಲಿಸ್ತಾನ್ ಮೂವ್‍ಮೆಂಟ್‍ನಲ್ಲಿ ಸಕ್ರೀಯವಾಗಿದ್ದವರು ಕೆನಾಡದಲ್ಲಿ ಅವಿತುಕೊಂಡಿದ್ದಾರೆ. ಉಮ್ಮರ್ ಖಾಲಿದ್‍ಗೆ ಬೆಂಬಲ ಕೊಟ್ಟಿದ್ದವರು ಈ ಹೋರಾಟಕ್ಕೂ ಬೆಂಬಲ ಕೊಟ್ಟಿದ್ದಾರೆ. ಅಲ್ಲದೆ, ಈಶಾನ್ಯ ರಾಜ್ಯಗಳಲ್ಲಿ ಭಾರತ ವಿರೋಧಿ ಚಟುವಟಿಕೆ ಮಾಡ್ತಿದ್ದವರು ಪ್ರತಿಭಟನೆಯಲ್ಲಿ ಕೈಜೋಡಿಸಿಕೊಂಡಿದ್ದಾರೆ. ಜೆಎನ್‍ಯುನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರು ಇದರಲ್ಲಿ ಜೋಡಣೆಯಾಗಿದ್ದಾರೆ.ನಾವು ಆರಂಭದಿಂದಲೂ ಹೇಳಿಕೊಂಡು ಬಂದಿದ್ದು ಇವತ್ತು ಸಾಭೀತಾಗಿದೆ" ಎಂದಿದ್ದಾರೆ.

ಇದನ್ನೂ ಓದಿ: Sourav Ganguly: ಎದೆನೋವಿನಿಂದ ಮತ್ತೆ ಕೊಲ್ಕತ್ತದ ಅಪೋಲೋ ಆಸ್ಪತ್ರೆಗೆ ದಾಖಲಾದ ಸೌರವ್ ಗಂಗೂಲಿ

ನಿಜವಾದ ದೇಶಭಕ್ತರಾಗಿದ್ರೆ ದೆಹಲಿಯಲ್ಲಿ ಈ ರೀತಿ ಘಟನೆ ನಡೆಯುತ್ತಿರಲಿಲ್ಲ. ನಿಜವಾದ ರೈತರು ಕೂಡ ಈ ತರ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ರೈತರ ಹೆಸರಲ್ಲಿ ಈ ಚಳುವಳಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಕೃಷಿ ಮಸೂದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಸಿದ್ದವಿದೆ. ನಾವು ಕೂಡ ಅದಕ್ಕೆ ಬದ್ಧರಿದ್ದೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅದಕ್ಕಾಗಿ ರೈತರಲ್ಲಿ ನಾನು ಮನವಿ ಮಾಡ್ತೇನೆ, ದಿಕ್ಕು ತಪ್ಪಿಸುವ ಜನರು ದೇಶದಲ್ಲಿದ್ದಾರೆ ಅದಕ್ಕೆ ನೀವು ಬಲಿಯಾಗಬೇಡಿ. ಮಾತುಕತೆಗೆ ರೈತರು ಬನ್ನಿ ಎಂದು ಸಂಸದೆ ರೈತರಲ್ಲಿ ಮನವಿ ಮಾಡಿದರು.

ಇನ್ನು ಇದೇ ಜನವರಿ 29 ರಂದು ಲೋಕಸಭಾ ಅಧಿವೇಶನ ಆರಂಭವಾಗುತ್ತಿದೆ. ಈ ಕಾನೂನಿನ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಬಹುದು. ಹಾಗಾಗಿ ರೈತರು ಮಾತುಕತೆಗೆ ಬಂದರೆ ಲೋಪಗಳನ್ನ ಸರಿಪಡಿಸಿಕೊಳ್ಳುವುದಕ್ಕೆ ಅವಕಾಶ ಸಿಕ್ಕಂತೆ ಆಗುತ್ತದೆ. ಮಾತುಕತೆಗೆ ಬಂದ್ರೆ ರೈತರಿಗೆ ಅನುಕೂಲವಾಗುವಂತೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂಬುಂದು ನಮ್ಮ ಉದ್ದೇಶ. ಮಾತುಕತೆಗೆ ಬರಬೇಕೆಂದು ಕರ್ನಾಟಕದ ರೈತರಲ್ಲಿ ಮನವಿ ಮಾಡ್ತೇನೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
Published by: MAshok Kumar
First published: January 27, 2021, 5:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories