HOME » NEWS » District » MP DK SURESH WARNS THE GOVERNMENT OFFICIALS VTC MAK

ನಿಮಗೆ ನಾಚಿಕೆ ಅಗಲ್ವ? ಹೀಗೆ ಆದರೆ ಸಸ್ಪೆಂಡ್ ಆಗ್ತೀರ: ಅಧಿಕಾರಿಗೆ ಸಂಸದ ಡಿ.ಕೆ‌. ಸುರೇಶ್ ಎಚ್ಚರಿಕೆ!

ಓರ್ವ ರೋಗಿ ಮೈಮೇಲೆ ತುಂಡು ಬಟ್ಟೆಯಿಲ್ಲದೇ ಇದ್ದ ಫೋಟೋವನ್ನ ನಾನು ನೋಡಿದ್ದೇನೆ. ನಾನು ಕ್ರಮವಹಿಸಿದ್ದರೆ ನೀವು ಸಸ್ಪೆಂಡ್ ಆಗುತ್ತಿದ್ದಿರಿ, ಆದರೆ ಇದು ಕೊನೆಯ ಎಚ್ಚರಿಕೆ ಎಂದು ಸಂಸದ ಡಿ.ಕೆ. ಸುರೇಶ್ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

news18-kannada
Updated:May 17, 2021, 9:11 PM IST
ನಿಮಗೆ ನಾಚಿಕೆ ಅಗಲ್ವ? ಹೀಗೆ ಆದರೆ ಸಸ್ಪೆಂಡ್ ಆಗ್ತೀರ: ಅಧಿಕಾರಿಗೆ ಸಂಸದ ಡಿ.ಕೆ‌. ಸುರೇಶ್ ಎಚ್ಚರಿಕೆ!
ಡಿ.ಕೆ. ಸುರೇಶ್.
  • Share this:
ಚನ್ನಪಟ್ಟಣ: ಕೊರೋನಾ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಚನ್ನಪಟ್ಟಣ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಹಾಗೂ ವೈದ್ಯ ವಿಜಯ ನರಸಿಂಹ ವಿರುದ್ಧ ಡಿ.ಕೆ. ಸುರೇಶ್ ಕೆಂಡಾಮಂಡಲವಾದರು. ಕಳೆದ ಸುಮಾರು ದಿನಗಳಿಂದ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬಂದಿದ್ದವು. ಇದೆಲ್ಲವನ್ನೂ ಪ್ರಶ್ನೆ ಮಾಡಿದ ಡಿ.ಕೆ.ಸುರೇಶ್ ನಿಮಗೆ ನಾಚಿಕೆ ಆಗಲ್ವ, ಕೊರೋನಾ ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ನಿಮಗೆ ಯಾಕೆ ಬೇಕು ಆಸ್ಪತ್ರೆ? ಎಂದು ಪ್ರಶ್ನೆ ಮಾಡಿದರು.

ಕೆಲದಿನಗಳ ಹಿಂದಷ್ಟೇ ಕೊರೋನಾ ಸೋಂಕಿತರ ಬಗ್ಗೆ ಯಾವುದೇ ರೀತಿಯ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಮುಖ್ಯವಾಗಿ ಸ್ವಚ್ಛತೆ ಇಲ್ಲದೇ ಆಸ್ಪತ್ರೆಯನ್ನ ಅತ್ಯಂತ ‌ಕೆಟ್ಟ ಪರಿಸ್ಥಿತಿಯಲ್ಲಿ ಅಲ್ಲಿ ರೋಗಿಗಳು ಕಾಲಕಳೆಯುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಸಹ ನೀವು ಅಧಿಕಾರಿಗಳಾಗಿ ಯಾವುದೇ ಕ್ರಮವಹಿಸದೇ ಇದ್ದರೆ ಜನರೇ ನಿಮಗೆ ಪಾಠ ಕಲಿಸುತ್ತಾರೆ.

ಓರ್ವ ರೋಗಿ ಮೈಮೇಲೆ ತುಂಡು ಬಟ್ಟೆಯಿಲ್ಲದೇ ಇದ್ದ ಫೋಟೋವನ್ನ ನಾನು ನೋಡಿದ್ದೇನೆ. ನಾನು ಕ್ರಮವಹಿಸಿದ್ದರೆ ನೀವು ಸಸ್ಪೆಂಡ್ ಆಗುತ್ತಿದ್ದಿರಿ, ಆದರೆ ಇದು ಕೊನೆಯ ಎಚ್ಚರಿಕೆ ನಿಮಗೆ ಸರಿಯಾಗಿ ಕೆಲಸ ಮಾಡಿಕೊಂಡು ಹೋಗಿ ಎಂದು ವಿಜಯನರಸಿಂಹ ಗೆ ಸಂಸದ ಡಿ.ಕೆ.ಸುರೇಶ್ ಎಚ್ಚರಿಕೆ ನೀಡಿದರು.

ಇನ್ನು ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಾವಿಗೆ ರಾಜ್ಯ ಸರಕಾರವೇ ನೇರ  ಹೊಣೆ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು. ಚನ್ನಪಟ್ಟಣಕ್ಕೂ ಮುನ್ನ ರಾಮನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸುರೇಶ್ ಆಕ್ಸಿಜನ್ ಇಲ್ಲದ ಕಾರಣ ಸರಕಾರ ಕಣ್ಣುಮುಚ್ಚಾಲೆ ಆಟ ಆಡುತ್ತಿದೆ,

ಹೆಚ್ಚುವರಿ ಆಕ್ಸಿಜನ್ ಬೆಡ್ ಓಪನ್ ಮಾಡಬೇಡಿ ಎಂದು ಸರಕಾರ ಹೇಳುತ್ತಿದೆ. ಇದನ್ನು ನೋಡಿದ್ರೆ ಗೊತ್ತಾಗುತ್ತೆ ಆಕ್ಸಿಜನ್ ಕೊರತೆ ಇದೆ ಎಂದು ಹೇಳಿದರು. ಆಕ್ಸಿಜನ್ ಕೊರತೆಯಿಂದ ಜಿಲ್ಲೆಯಲ್ಲಿ ಹೆಚ್ಚುವರಿ ಬೆಡ್ ಗಳನ್ನ ಮಾಡಲು ಸಾಧ್ಯವಾಗುತ್ತಿಲ್ಲ, ಜಿಲ್ಲೆಗೆ ಮೂರು ವರೆ ಕೆ.ಎಲ್ ಆಕ್ಸಿಜನ್ ಬರುತ್ತಿದೆ ಇನ್ನೂ ಹೆಚ್ಚುವರಿಯಾಗಿ 7 ಕೆ.ಎಲ್ ಆಕ್ಸಿಜನ್ ಬೇಕು ಎಂದು ತಿಳಿಸಿದರು.

ಇನ್ನು ಜಿಲ್ಲೆಯಲ್ಲಿನ ಕೋವಿಡ್ ಆಸ್ಪತ್ರೆಗಳಲ್ಲಿನ ಎಲ್ಲಾ ಆಕ್ಸಿಜನ್ ಬೆಡ್ ಗಳನ್ನ  ರನ್ ಮಾಡಲು 12 ಕೆ.ಎಲ್ ಆಕ್ಸಿಜನ್ ಬೇಕು, ರಾಮನಗರ ಜಿಲ್ಲೆಯಿಂದ ಒಬ್ಬ ಸೋಂಕಿತ ವ್ಯಕ್ತಿಯನ್ನ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಲ್ಲ, ಸರಕಾರದ ಬಳಿ ಅಂತಹ ದಾಖಲೆ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದ್ರು. ಜಿಲ್ಲಾಧಿಕಾರಿಗಳು ಸರಕಾರದ ಪರವಾಗಿ ಮಾತನಾಡಬೇಕು ಮಾತನಾಡುತ್ತಾರೆ, ಆಕ್ಸಿಜನ್ ಕೊರತೆ ರಾಜ್ಯದಲ್ಲಿ ಯಾವ ರೀತಿ ಇದೆ ಅದೇ ರೀತಿ ರಾಮನಗರದಲ್ಲಿಯೂ ಇದೆ ಎಂದು ಆಕ್ಸಿಜನ್ ಕೊರತೆ ಬಗ್ಗೆ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡಿದರು.

ಭಾರತದಲ್ಲಿ ಕೊರೋನಾ ಅಬ್ಬರ:ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌, ಏಪ್ರಿಲ್ 21ರಿಂದ ದಿನ‌ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಾಗೂ ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರು ಲಕ್ಷಕ್ಕಿಂತಲೂ ಕಡಿಮೆ ಜನ ಸೋಂಕು ಪೀಡಿತರಾಗುತ್ತಿದ್ದಾರೆ.

ಇದನ್ನೂ ಓದಿ: Karnataka LockDown: ಕೊರೋನಾ ಅಬ್ಬರ; ರಾಜ್ಯದಲ್ಲಿ ಮೇ.24 ರಿಂದ ಮತ್ತೆ 14 ದಿನಗಳ ಲಾಕ್​ಡೌನ್ ಸಾಧ್ಯತೆ?

ಭಾನುವಾರ 2,81,386 ಪ್ರಕರಣಗಳು ಪತ್ತೆಯಾಗಿವೆ. ಡಿಸ್ಚಾರ್ಜ್ ಆದವರು 3,78,741 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,49,65,463ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. ಭಾನುವಾರ 4,106 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,74,390ಕ್ಕೆ ಏರಿಕೆ ಆಗಿದೆ.
Youtube Video

ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.
Published by: MAshok Kumar
First published: May 17, 2021, 9:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories