Sanchari Vijay RIP| ಸಂಚಾರಿ ವಿಜಯ್ ಹುಟ್ಟೂರಲ್ಲಿ ನೀರವ ಮೌನ; ನಟನನ್ನು ನೆನೆದು ಕಣ್ಣೀರಿಟ್ಟ ಗೆಳೆಯ, ಸಾಕಿ ಬೆಳೆಸಿದ ತಾಯಿ!

ಸಂಚಾರಿ ವಿಜಯ್ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದವರು. ಬಸವರಾಜಪ್ಪ ಮತ್ತು ಗೌರಮ್ಮ ದಂಪತಿಯ ದ್ವಿತೀಯ ಪುತ್ರ ಸಂಚಾರಿ ವಿಜಯ್ ಚಿಕ್ಕನಿಂದಲೂ ರಂಗಭೂಮಿಯತ್ತ ಒಲವು ಬೆಳೆಸಿಕೊಂಡಿದ್ದರು.

ನಟ ಸಂಚಾರಿ ವಿಜಯ್​

ನಟ ಸಂಚಾರಿ ವಿಜಯ್​

  • Share this:
ಚಿಕ್ಕಮಗಳೂರು : ರಾಷ್ಟ್ರ ಪ್ರಶಸ್ತಿ ವಿಜೇತ, ಬೆಸ್ಟ್ ಆ್ಯಕ್ಟರ್, ನಾನು ಅವಳಲ್ಲ ಅವನು ಖ್ಯಾತಿಯ ಸಂಚಾರಿ ವಿಜಯ್ ಬದುಕಿನ ಪಯಣ ಮುಗಿಸಿದ್ದಾರೆ. ಎಂತಹ ರೋಲ್ ಕೊಟ್ರು ಸೈ ಎನ್ನುವ ಹಾಗೇ ಪಾತ್ರ ಮಾಡ್ತಿದ್ದ ನಟ ವಿಜಯ್, ಮೊನ್ನೆ ರಾತ್ರಿ ಬೈಕ್ ಅಪಘಾತದಲ್ಲಿ ತೀವ್ರ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಕೊನೆಗೂ ಸಾವು ಬದುಕಿನ ಹೋರಾಟದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಬೆಸ್ಟ್ ಆ್ಯಕ್ಟರ್ ಗೆ ಹುಟ್ಟು ಬೆಳೆದಿದ್ದ ಗ್ರಾಮದಲ್ಲೂ ಗೆಳೆಯರು, ಗ್ರಾಮಸ್ಥರು ಕಂಬಿನಿ ಮಿಡಿದಿದ್ದಾರೆ.

ಸಂಚಾರಿ ವಿಜಯ್, ಕನ್ನಡ ಚಿತ್ರ ರಂಗದ ಬಹುಮುಖ ಪ್ರತಿಭೆ.. ರಾಷ್ಟ್ರಮಟ್ಟದಲ್ಲೂ ತಮ್ಮ ನಟನೆ ಮೂಲಕ ಖ್ಯಾತಿ ಗಳಿಸಿದ್ದ ಅಪರೂಪದ ನಟ. ನಾನು ಅವಳಲ್ಲ ಅವನು ಸಿನಿಮಾ ಮೂಲಕ ಇಡೀ ದೇಶವೇ ತನ್ನ ನಟನೆ ನೋಡುವ ಹಾಗೆ ಮಾಡಿದ್ದ ಕಲಾವಿದ. ಸಂಚಾರಿ ವಿಜಯ್ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದವರು. ಬಸವರಾಜಪ್ಪ ಮತ್ತು ಗೌರಮ್ಮ ದಂಪತಿಯ ದ್ವಿತೀಯ ಪುತ್ರ ಸಂಚಾರಿ ವಿಜಯ್ ಚಿಕ್ಕನಿಂದಲೂ ರಂಗಭೂಮಿಯತ್ತ ಒಲವು ಬೆಳೆಸಿಕೊಂಡಿದ್ದರು.

ಹುಟ್ಟೂರು ಪಂಚನಹಳ್ಳಿಯಲ್ಲಿ ಪ್ರಾಥಮಿಕ-ಪ್ರೌಢ ಶಿಕ್ಷಣ ಮುಗಿಸಿದ ವಿಜಯ್, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರ್ ಪದವಿ ಮುಗಿಸಿ, ನಂತರ ರಂಗಭೂಮಿ, ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ರು. ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ರಾಷ್ಟಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದ ಪ್ರತಿಭಾನ್ವಿತ ನಟ. ಇದೀಗ ಬದುಕಿನ ಯಾತ್ರೆ ಮುಗಿಸಿದ ವಿಜಯ್ ನೆನೆದು ಇಡೀ ಊರಿಗೆ ಊರೇ ಕಂಬಿನಿ ಮಿಡಿದಿದೆ.

ಸ್ನೇಹಜೀವಿಯಾಗಿದ್ದ ವಿಜಯ್ ತನ್ನ ಹುಟ್ಟೂರಿನಲ್ಲಿ ನೂರಾರು ಸ್ನೇಹಿತರನ್ನ ಹೊಂದಿದ್ರು. ಸಂಚಾರಿ ವಿಜಯ್ ಅಗಲಿಕೆಯಿಂದ ಪಂಚನಹಳ್ಳಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದ್ದು ಗೆಳೆಯನನ್ನು ನೆನೆದು ಸ್ನೇಹಿತರು ಕಣ್ಣೀರಿಡುತ್ತಿದ್ದಾರೆ. ಸಂಚಾರಿ ವಿಜಯ್ ಅಪಘಾತದ ಸುದ್ದಿ ಕೇಳಿ ವಿಜಯ್ ರನ್ನ ಸಾಕಿ ಸಲುಹಿದ ಪಂಚನಹಳ್ಳಿ ಗ್ರಾಮದ ಇಂದಿರಮ್ಮ ಕಣ್ಣಿರಿಟ್ಟಿದ್ದಾರೆ. ಮಗನಂತಿದ್ದ ಮಗನನ್ನು ನೆನೆದು, ಅವನು ಬದುಕಿ ಬರಲಿ‌ ಹಿಂದಿನ ಹಾಗೇ ಆಗಲಿ ಅಂತಾ ಮರುಗಿದ್ದಾರೆ.

ಇದನ್ನೂ ಓದಿ: TamilNadu Politics| ತಮಿಳುನಾಡು ರಾಜಕಾರಣಕ್ಕೆ ಚಿನ್ನಮ್ಮ ಎಂಟ್ರಿ; ಚುನಾವಣೆ ಬೆನ್ನಿಗೆ AIADMK ಯಲ್ಲಿ ಬಂಡಾಯದ ಬಿರುಗಾಳಿ

ವಿಜಯ್ ನನ್ನ ಕೈ ತುತ್ತು ತಿಂದು ಬೆಳೆದವ, ಅವನು ರಾಷ್ಟಪ್ರಶಸ್ತಿ ಪಡೆದಾಗ ಖುಷಿಯಾಗಿತ್ತು, ಅವನು ಇನ್ನಷ್ಟು ಹೆಸರು ಮಾಡ್ತಾನೆ ಅಂತಾ ಅಂದುಕೊಂಡಿದ್ವಿ, ಆದ್ರೆ ಈ‌ ವಿಚಾರ ನನೆಗೆ ತುಂಬಾ ನೋವಾಗಿದೆ, ನನ್ನ ಮಗನ ರೀತಿಯೇ ನಮ್ಮ ಮನೆಯಲ್ಲಿ ಬೆಳೆದಿದ್ದ, ಹಬ್ಬ ಹುಣ್ಣಿಮೆಗೆ ನಮ್ಮ ಮನೆಗೆ ಬಂದು ಹೋಗುತ್ತಿದ್ದ, ಈಗಲೂ ಕೂಡ ವಿಜಯ ಬದುಕಿ ಬರುತ್ತಾನೆ ಎಂಬ ಆಸೆ ಇದೆ ಎಂದು ವಿಜಯ್ ನೆನೆದು ಇಂದಿರಮ್ಮ ಕಣ್ಣಿರಿಟ್ಟಿದ್ದಾರೆ.

ಇದನ್ನೂ ಓದಿ: Sanchari Vijay RIP: ಅಣ್ಣನ ಸಾವಿಗೆ ಆತನೇ ಕಾರಣ: ದೂರು ದಾಖಲಿಸಿದ ನಟ ಸಂಚಾರಿ ವಿಜಯ್ ಸಹೋದರ!

ಒಟ್ಟಾರೆ, ತಮ್ಮ ನಟನೆ ಮೂಲಕವೇ ಚಿತ್ರ ರಂಗದಲ್ಲಿ ಗಮನ ಸೆಳೆದಿದ್ದ ಸಂಚಾರಿ ವಿಜಯ್ ಅನಿರೀಕ್ಷಿತವಾಗಿ ಬದುಕಿನ ಪಯಣವನ್ನ ಅರ್ಧಕ್ಕೆ  ನಿಲ್ಲಿಸಿದ್ದಾರೆ. ಸ್ಯಾಂಡಲ್ವುಡ್ನ ಬೆಸ್ಟ್ ಆ್ಯಕ್ಟರ್ ಗೆ ಇಡೀ ಚಿತ್ರ ರಂಗವೇ ಕಂಬಿನಿ ಮಿಡಿದಿದೆ. ಒಟ್ಟಿನಲ್ಲಿ ಸರಳ ಸ್ನೇಹ ಜೀವಿಯಾಗಿದ್ದ ಸಂಚಾರಿ ವಿಜಯ್ ಅಪಘಾತದಲ್ಲಿ ಕೊನೆಯುಸಿರೆಳೆದಿರುವುದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಆದ ದೊಡ್ಡ ನಷ್ಟವೇ ಸರಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: