ಗಂಡ-ಹೆಂಡತಿ ಜಗಳದಲ್ಲಿ ಬಡವಾದ ಕೂಸು: ತಂದೆ ಜೊತೆಗಿದ್ದ ಮಗ ತಾಯಿಯಿಂದಲೇ ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ 

ಪತ್ನಿಯೇ ಕಿಡ್ನ್ಯಾಪ್ ಮಾಡಿಸಿದ್ದು ಗೊತ್ತಾಗುತ್ತಿದ್ದಂತೆ, ಇತ್ತ ಶ್ರೀನಿವಾಸ್ ಕಿಡ್ನ್ಯಾಪ್ ಆಗಿರುವ ನನ್ನ ಮಗನನ್ನು ಹುಡುಕಿ ಕೊಡಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಹೀಗೆ ಮಗ ಬೇಕು ಅಂತಾ ನಾಟಕ ಶುರುಮಾಡಿರುವ ಈತನ ನಿಜ ಬಣ್ಣ ಏನು ಅಂತಾ ಶೋಭಾನ ಭಾವ ವೆಂಕಟೇಶ್ ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ.

ಕಿಡ್ನ್ಯಾಪ್​ ಆದ ಸ್ಥಳ

ಕಿಡ್ನ್ಯಾಪ್​ ಆದ ಸ್ಥಳ

  • Share this:
ಕೊಡಗು(ಜು.16): ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನೋ ಗಾದೆ ಮಾತು ಕೇಳಿದ್ದೇವೆ. ಆದರೆ ಇಲ್ಲಿನ ಕಥೆಯಲ್ಲಿ ಅದು ಅಕ್ಷರಶಃ ಸತ್ಯವಾಗಿದೆ. ಗಂಡ ಹೆಂಡತಿ ಜಗಳ ಮಾಡಿಕೊಂಡು ಆರು ವರ್ಷಗಳ ಹಿಂದೆಯೇ ದೂರವಾಗಿದ್ದಾರೆ.  ಆದರೆ ತನ್ನಿಂದ ದೂರವಿದ್ದ ಮಗನನ್ನು ತಾಯಿಯೇ ಕಿಡ್ನ್ಯಾಪ್ ಮಾಡಿಸಿದ್ದಾಳಂತೆ. ಏನಿದು ವಿಚಿತ್ರ ಘಟನೆ ಅಂತಿರಾ ಅದನ್ನು ನೀವು ನೋಡ್ಲೇ ಬೇಕು.

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎನ್ನೋ ಗಾದೆ ಮಾತನ್ನು ನೀವೆಲ್ಲರೂ ಕೇಳಿಯೇ ಇರುತ್ತೀರಿ. ಅದರಲ್ಲೂ ಪ್ರೀತಿಸಿ ಮದುವೆಯಾದವರ ಸಂಸಾರ ಎಂದ ಮೇಲೆ ಇನ್ನಷ್ಟು ಸಂತೋಷದಿಂದ ಇರುತ್ತೆ ಎನ್ನೋ ನಂಬಿಕೆಯೂ ಇದೆ. ಆದರೆ ಕೊಡಗು ಜಿಲ್ಲೆ ಕುಶಾಲನಗರದ ಕಾಳಮ್ಮ ಕಾಲೋನಿಯಲ್ಲಿರುವ ಶ್ರೀನಿವಾಸ್ ಮತ್ತು ಶೋಭಾ ದಂಪತಿ ಜಗಳ ಉಂಡು ಮಲಗುವಷ್ಟರಲ್ಲಿ ಮುಗಿಯುವ ಬದಲು ಕೋರ್ಟ್ ಮೆಟ್ಟಿಲೇರಿ ದೂರವಾಗಿದ್ದಾರೆ.

ಅದೊಂದು ಕಡೆ ಇರ್ಲಿ ಬಿಡಿ. ಆದರೆ ತಾನು ಹೊತ್ತು, ಹೆತ್ತು ಸಾಕಿದ್ದ ಮಗನನ್ನು ಈ ತಾಯಿಯೇ ಕಿಡ್ನ್ಯಾಪ್ ಮಾಡಿಸಿದ್ದಾಳಂತೆ. ಅದನ್ನು ನೀವೇ ಒಮ್ಮೆ ನೋಡಿ.
ನೋಡಿ ಇಲ್ಲೊಂದು ಕಾರು ಬರುತ್ತೆ. ಬಂದ ಕಾರಿನಿಂದ ಇಬ್ಬರು ಇಳಿಯುತ್ತಾರೆ. ಅದರಲ್ಲೊಬ್ಬ ವಂಚು ಹಾಕುತ್ತಿದ್ದರೆ, ಮತ್ತೊಬ್ಬ ಕಿಡಿಗೇಡಿ ಬಡಾವಣೆಯೊಳಕ್ಕೆ ನುಗ್ಗಿ ಬಾಲಕನೊಬ್ಬನ ಬಾಯಿ ಮುಚ್ಚಿ, ಆಡು, ಕುರಿಯನ್ನು ಎತ್ತಿಹಾಕಿಕೊಂಡು ಹೋಗುವಂತೆ ಕಿಡ್ನ್ಯಾಪ್ ಮಾಡಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ನೋಡಿ.

ಹೆಂಡತಿ ದೂರವಾಗಿದ್ದರೂ, ಜೊತೆಗಿದ್ದ ಮಗನನ್ನು ಪ್ರೀತಿಯಿಂದ ಸಾಕುತ್ತಿದ್ದೆ. ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸುತ್ತಿದ್ದೆ. ಆದರೆ ಹೆತ್ತ ತಾಯಿಯೇ ಬೇರೆ ಹುಡುಗರನ್ನು ಬಳಸಿಕೊಂಡು ಕಿಡ್ನ್ಯಾಪ್ ಮಾಡಿಸಿದ್ದಾರೆ. ನನ್ನ ಮಗನನ್ನು ಹುಡುಕಿಕೊಡಿ ಸ್ವಾಮಿ ಎಂದು ಮಗುವಿನ ತಂದೆ ಶ್ರೀನಿವಾಸ್ ಕಣ್ಣೀರಿಡುತ್ತಿದ್ದಾನೆ.
ಪಾಪ ಹೆಂಡತಿ ಹೋದರೂ ಹೋಗಲಿ ಇದ್ದ ಮಗನೂ ಮಿಸ್ ಆದನಲ್ಲಾ ಎಂದು ಗೋಳಾಡಿ ಕಣ್ಣೀರು ಸುರಿಸುತ್ತಿರುವ ಈತನ ಸ್ಥಿತಿಯನ್ನು ನೋಡಿದರೆ ಯಾರಿಗೆ ತಾನೆ ಕರುಳು ಹಿಂಡೋದಿಲ್ಲಾ ಹೇಳಿ. ಹೀಗೆ ಮುಗ್ಧ ಹಸುವಿನಂತೆ ಕಾಣುವ ಇವನ ನೈಜ ಮುಖವನ್ನು ನೋಡಿದ್ರೆ ನೀವು ಬೆಚ್ಚಿ  ಬೀಳ್ತೀರಾ. ಹಲವು ವರ್ಷಗಳ ಹಿಂದೆ  ಶ್ರೀನಿವಾಸ್ ಶೋಭಾ ಅವರನ್ನು ಪ್ರೀತಿಸಿ ಮದುವೆಯಾಗಿದ್ನಂತೆ.

ಮದುವೆಯಾದ್ಮೇಲೆ ಇಬ್ಬರು ಮಕ್ಕಳು ಇವರ ಬಾಳಿನಲ್ಲಿ ಬಂದಿದ್ದಾರೆ. ಹೀಗೆ ನಡೆಯುತ್ತಿದ್ದ ಸಂಸಾರದಲ್ಲಿ ಅದ್ಯಾಕೆ ಬಿರುಕು ಮೂಡಿತೋ ಏನೋ ಗೊತ್ತಿಲ್ಲ. ಉಂಡು ಮಲಗುವಷ್ಟರಲ್ಲಿ ಮುಗಿಯಬೇಕಾಗಿದ್ದ ಜಗಳ ಕೋರ್ಟ್ ಮೆಟ್ಟಿಲೇರಿದೆ. 2017 ರಲ್ಲಿ ಕೋರ್ಟ್ ಕೂಡ ಇನ್ಮುಂದೆಯಾದರೂ ಹೊಂದಾಗಿ ಹೋಗಿ ಎಂದು ತಿಳುವಳಿಕೆ ನೀಡಿದೆ.

ಆದರೆ ಇಲ್ಲಿಯೂ ಸರಿಯಾಗದ ಇವರು ಮತ್ತೆ ನಾನೊಂದು ತೀರಾ ನೀನೊಂದು ತೀರಾ ಎನ್ನುವಂತೆ ಆಗಿದ್ದಾರೆ. ಪತ್ನಿ ಶೋಭಾ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಮೊನ್ನೆ ತನ್ನ ಸಂಬಂಧಿಕರನ್ನು ಬಳಸಿಕೊಂಡು ಕುಶಾಲನಗರದ ಕಾಳಮ್ಮ ಕಾಲೋನಿಯಲ್ಲಿದ್ದ ಮಗನನ್ನು ಕಿಡ್ನ್ಯಾಪ್ ಮಾಡಿಸಿದ್ದಾರಂತೆ.

ಪತ್ನಿಯೇ ಕಿಡ್ನ್ಯಾಪ್ ಮಾಡಿಸಿದ್ದು ಗೊತ್ತಾಗುತ್ತಿದ್ದಂತೆ, ಇತ್ತ ಶ್ರೀನಿವಾಸ್ ಕಿಡ್ನ್ಯಾಪ್ ಆಗಿರುವ ನನ್ನ ಮಗನನ್ನು ಹುಡುಕಿ ಕೊಡಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಹೀಗೆ ಮಗ ಬೇಕು ಅಂತಾ ನಾಟಕ ಶುರುಮಾಡಿರುವ ಈತನ ನಿಜ ಬಣ್ಣ ಏನು ಅಂತಾ ಶೋಭಾನ ಭಾವ ವೆಂಕಟೇಶ್ ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಗುಡುಗು ಸಮೇತ ಧಾರಕಾರ ಮಳೆ

ಒಟ್ಟಿನಲ್ಲಿ ಆಟವಾಡಿಕೊಂಡು ಇರಬೇಕಾದ ಮುಗ್ಧ ಬಾಲಕನನ್ನು ಗಂಡ ಹೆಂಡತಿ ಜಗಳದ ಕಾರಣಕ್ಕೆ ಈ ರೀತಿ ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಮಾಡಿದ್ದು ಇಡೀ ಏರಿಯಾದ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
Published by:Ganesh Nachikethu
First published: