HOME » NEWS » District » MORE THAN TEN OFFICERS QUARANTINE INCLUDE DC ADC AND AC RH

ಸಚಿವ ಸಿ.ಟಿ.ರವಿಯಿಂದ ಜಿಲ್ಲಾಧಿಕಾರಿ, ಎಡಿಸಿ, ಎಸಿ ಸೇರಿದಂತೆ ಹತ್ತಾರು ಅಧಿಕಾರಿಗಳು ಕ್ವಾರಂಟೈನ್

ಜಿಲ್ಲೆಯ ಇಬ್ಬರು ಎಂಎಲ್ಸಿಗಳು, ಶೃಂಗೇರಿಯ ಶಾಸಕರಿಗೂ ಕೊರೋನಾ ಪಾಸಿಟಿವ್ ಬಂದಿರುವುದರಿಂದ ತಾಲೂಕು ಕೇಂದ್ರಗಳಲ್ಲೂ ಬಹುತೇಕ ಅಧಿಕಾರಿಗಳು ಕ್ವಾರಂಟೈನ್ ಆಗಿದ್ದಾರೆ. ಪ್ರವಾಸೋದ್ಯಮ ಸಚಿವರು ಕಳೆದ ವಾರ ಮೂಡಿಗೆರೆ-ತರೀಕೆರೆಗೂ ಪಯಣ ಬೆಳೆಸಿದ್ದರಿಂದ ಎರಡು ತಾಲೂಕಿನ ಅಧಿಕಾರಿ ವರ್ಗವೂ ಕ್ವಾರಂಟೈನ್​ನಲ್ಲಿದೆ.

news18-kannada
Updated:July 15, 2020, 7:26 PM IST
ಸಚಿವ ಸಿ.ಟಿ.ರವಿಯಿಂದ ಜಿಲ್ಲಾಧಿಕಾರಿ, ಎಡಿಸಿ, ಎಸಿ ಸೇರಿದಂತೆ ಹತ್ತಾರು ಅಧಿಕಾರಿಗಳು ಕ್ವಾರಂಟೈನ್
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಮಗಳೂರು: ಜನರು ಯಾರೂ ಕೂಡ ಮನೆ ಬಿಟ್ಟು ಹೊರಗೆ ಬಾರದ ಹಾಗೆ ಕೊರೋನಾ ಬ್ರೇಕ್ ಹಾಕಿದೆ. ಹಾಗಂತ ಅಧಿಕಾರಿಗಳು ಮಾತ್ರ ಮನೆಯಲ್ಲಿ ಕೂರುವ ಹಾಗಿಲ್ಲ. ಅನಿವಾರ್ಯವಾಗಿ ಕಚೇರಿಗೆ ಹೋಗಿ ಕೆಲಸ ಮಾಡಲೇಬೇಕಾಗಿದೆ. ಅದರಲ್ಲೂ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳಂತೂ ಫೀಲ್ಡ್​ಲ್ಲಿ ಇರಲೇಬೇಕು. ಆದರೆ ಕಾಫಿನಾಡಿನಲ್ಲಿ ಮಾತ್ರ ಈ ಪರಿಸ್ಥಿತಿ ಇಲ್ಲ. ಜನರ ಸಮಸ್ಯೆಗೆ ದನಿಯಾಗಬೇಕಿದ್ದ ಇಡೀ ಆಡಳಿತ ವರ್ಗವೇ ಇದೀಗ ಕ್ವಾರಂಟೈನ್ ಆಗಿದೆ.

ಹೌದು, ನಾಲ್ಕು ದಿನಗಳ ಹಿಂದೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅನ್ಯ ಮಾರ್ಗವಿಲ್ಲದೇ ಡಿಸಿ, ಎಡಿಸಿ, ಎಸಿ ಸೇರಿದಂತೆ ಬಹುತೇಕ ಅಧಿಕಾರಿಗಳು ಹೋಮ್ ಕ್ವಾರಂಟೈನ್ ಆಗಿದ್ದಾರೆ. ಸಚಿವ ಸಿ.ಟಿ ರವಿಯವರು ಕಳೆದ ಒಂದು ವಾರದಲ್ಲಿ ಮೂರು ಬಾರಿ ಟೆಸ್ಟ್ ಮಾಡಿಸಿಕೊಂಡಿದ್ದು, ಮೊದಲ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿತ್ತು. ಆದರೆ ಆ ಬಳಿಕ ನಡೆಸಿದ ಸತತ ಎರಡು ಪರೀಕ್ಷೆಯಲ್ಲೂ ಕೂಡ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವರೊಂದಿಗೆ ವಾರದ ಹಿಂದೆ ಸಭೆ ನಡೆಸಿದ್ದ ಡಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಹೋಂ ಕ್ವಾರಂಟೈನ್ ಆಗಿದ್ದಾರೆ. ಇನ್ನೂ ಮನೆಯಿಂದಲೇ ಸೆಲ್ಪಿ ವಿಡಿಯೋ ಮಾಡಿ ಮಾತನಾಡಿರುವ ಡಿಸಿ, ಜನರು ಕೊರೋನಾ ವಿಚಾರದಲ್ಲಿ ಅಸಡ್ಡೆ ವಹಿಸದೇ ಎಚ್ಚರಿಕೆಯಿಂದ ಇರಬೇಕು ಅಂತಾ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು ಹೋಂ ಕ್ವಾರಂಟೈನ್ ಆಗಿರುವುದರಿಂದ ಒಂದಲ್ಲೊಂದು ಸಮಸ್ಯೆಯನ್ನಿಟ್ಟುಕೊಂಡು ಡಿಸಿ ಕಚೇರಿಗೆ ಬರುತ್ತಿದ್ದ ಜನಸಾಮಾನ್ಯರು ಇದೀಗ ಬರದಂತೆ ಆಗಿದೆ. ಪ್ರತಿನಿತ್ಯ ನೂರಾರು ಜನರ ಓಡಾಟಕ್ಕೆ ಸಾಕ್ಷಿಯಾಗುತ್ತಿದ್ದ ಡಿಸಿ ಕಚೇರಿ ಇದೀಗ ಜನರಿಲ್ಲದೇ ಬಣಗುಡುತ್ತಿದೆ. ಡಿಸಿ, ಎಡಿಸಿ, ಎಸಿ ಎಲ್ಲರೂ ಕೂಡ ಕ್ವಾರಂಟೈನ್​ಗೆ ಒಳಪಟ್ಟಿದ್ದರೆ, ಡಿಹೆಚ್ಒ ಕಚೇರಿಯ ಒಬ್ಬ ಸಿಬ್ಬಂದಿಗೂ ಕೂಡ ನಿನ್ನೆ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಡಿಹೆಚ್ಒ ಕೂಡ ಕ್ವಾರಂಟೈನ್ ಗೆ ಒಳಗಾಗುವ ಸನ್ನಿವೇಶ ನಿರ್ಮಾಣವಾಗಿದೆ.

ಈಗಾಗಲೇ ಜಿಲ್ಲೆಯ ಇಬ್ಬರು ಎಂಎಲ್ಸಿಗಳು, ಶೃಂಗೇರಿಯ ಶಾಸಕರಿಗೂ ಕೊರೋನಾ ಪಾಸಿಟಿವ್ ಬಂದಿರುವುದರಿಂದ ತಾಲೂಕು ಕೇಂದ್ರಗಳಲ್ಲೂ ಬಹುತೇಕ ಅಧಿಕಾರಿಗಳು ಕ್ವಾರಂಟೈನ್ ಆಗಿದ್ದಾರೆ. ಪ್ರವಾಸೋದ್ಯಮ ಸಚಿವರು ಕಳೆದ ವಾರ ಮೂಡಿಗೆರೆ-ತರೀಕೆರೆಗೂ ಪಯಣ ಬೆಳೆಸಿದ್ದರಿಂದ ಎರಡು ತಾಲೂಕಿನ ಅಧಿಕಾರಿ ವರ್ಗವೂ ಕ್ವಾರಂಟೈನ್​ನಲ್ಲಿದೆ.

ಇದನ್ನು ಓದಿ: ಸಿದ್ದರಾಮಯ್ಯರ ಲೆಕ್ಕ ಕೊಡಿ ಅಭಿಯಾನಕ್ಕೆ ಡಿಸಿಎಂ ಗೋವಿಂದ ಕಾರಜೋಳ ಲೇವಡಿ

ಹೀಗೆ ಜಿಲ್ಲಾ ಮಟ್ಟ ಸೇರಿದಂತೆ ತಾಲೂಕು ಮಟ್ಟದಲ್ಲೂ ಅಧಿಕಾರಿ ವರ್ಗ ಕ್ವಾರಂಟೈನ್ ಮೊರೆ ಹೋಗಿದೆ. ಒಂದು ಕಡೆ ಕೊರೋನಾ ಪ್ರಕರಣಗಳು ಜಿಲ್ಲೆಯಲ್ಲಿ ಜಾಸ್ತಿಯಾಗಿರುವುದರಿಂದ ಹೆಚ್ಚಾಗಿ ಓಡಾಟ ನಡೆಸಬೇಕಾದ ಇಡೀ ಆಡಳಿತ ವರ್ಗವೆ ಇದೀಗ ಮನೆಯಲ್ಲೇ ಕೂರುವಂತಾಗಿದೆ.
Published by: HR Ramesh
First published: July 15, 2020, 7:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories