ಸಾವಿಗೆ ಹೋಗಿ ಕೊರೋನಾ ಕರೆದುಕೊಂಡ ಬಂದ ಜನ; ತಿಮ್ಮನಕೊಪ್ಪಲಿನ 40ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢ!

ಗ್ರಾಮದಲ್ಲೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರತಿಯೊಬ್ಬರಿಗೂ ಆರ್‌ಟಿಪಿಸಿಆರ್ ಟೆಸ್ಟ್ ಮಾಡುತ್ತಿದ್ದು, ಮತ್ತಷ್ಟು ಪಾಸಿಟಿವ್ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಪಾಸಿಟಿವ್ ದೃಢವಾಗಿರುವ ಎಲ್ಲರನ್ನೂ ಪಾಂಡವಪುರ ಸೇರಿದಂತೆ ವಿವಿಧ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಿ್ಮ್ಮನ ಕೊಪ್ಪಲು ಗ್ರಾಮವನ್ನು ಸೀಲ್​ಡೌನ್ ಮಾಡಿರುವುದು.

ತಿ್ಮ್ಮನ ಕೊಪ್ಪಲು ಗ್ರಾಮವನ್ನು ಸೀಲ್​ಡೌನ್ ಮಾಡಿರುವುದು.

 • Share this:
  ಮಂಡ್ಯ: ಕೊರೋನಾದ ಮೊದಲನೇ ಹಾಗೂ ಎರಡನೇ ಅಲೆ ಭೀಕರತೆ ಮುಗಿತು ಎನ್ನುವಷ್ಟರಲ್ಲಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕೊರೋನಾದ ಮೂರನೇ ಅಲೆಯ ತೀವ್ರತೆ ಆರಂಭವಾದಂತೆ ಕಾಣುತ್ತಿದೆ. ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಅಂತ್ಯಕ್ರಿಯೆಗೆ ತೆರಳಿದ್ದ 40 ಕ್ಕೂ ಹೆಚ್ಚು ಮಂದಿಗೆ ಕೊರೋನಾ ವಕ್ಕರಿಸಿದ್ದು, ಇದರಿಂದ ಮಂಡ್ಯದಲ್ಲಿ ಮೂರನೇ ಅಲೆಯ ಆತಂಕ ಮನೆ ಮಾಡಿದೆ.

  ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದಲ್ಲಿ ಇದೀಗ ಕೊರೋನಾ ಸ್ಪೋಟಗೊಂಡಿದೆ. ಈ ಗ್ರಾಮದಲ್ಲಿ ಕಳೆದ ಹತ್ತು ದಿನದ ಹಿಂದೆ ವ್ಯಕ್ತಿಯೊಬ್ಬರು ಸಾವನಪ್ಪಿದ್ದರು. ಸರ್ಕಾರ ಶವಸಂಸ್ಕಾರದ ವೇಳೆ 30 ಮಂದಿ ಮಾತ್ರ ಪಾಲ್ಗೊಳ್ಳಬೇಕೆಂದು ಆದೇಶ ಹೊರಡಿಸಿದ್ದರೂ ಸಹ ಇಲ್ಲಿ ಆ ದಿನ ಎರಡು ಸಾವಿರ ಮಂದಿ ಪಾಲ್ಗೊಂಡಿದ್ದರು. ತಿಮ್ಮನಕೊಪ್ಪಲು ಸೇರಿದಂತೆ ಹಲವು ಭಾಗಗಳಿಂದ ಈ ಶವಸಂಸ್ಕಾರಕ್ಕೆ ನೂರಾರು ಜನರು ಆಗಮಿಸಿದ್ದರು. ಅದಾದ ಬಳಿಕ ಗ್ರಾಮದ ಕೆಲವು ಜನರಲ್ಲಿ ಕೊರೋನಾ ರೋಗ ಲಕ್ಷಣಗಳು ಕಂಡು ಬಂದಿದ್ದು ಆರೋಗ್ಯ ಇಲಾಖೆ ಗ್ರಾಮದ ಜನರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲು ಮುಂದಾಯಿತು. ಈ ವೇಳೆ ಒಂದೇ ದಿನ ಒಂಭತ್ತು ಮಂದಿಗೆ ಪಾಸಿಟಿವ್ ದೃಢಪಡುತ್ತದೆ. ಇದೀಗ 10 ದಿನಗಳ‌ ಅಂತರದಲ್ಲಿ 40ಕ್ಕೂ‌ಅಧಿಕ ಮಂದಿ ಕೊರೋನಾ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ತಿಮ್ಮನಕೊಪ್ಪಲು ಗ್ರಾಮದಲ್ಲಿ 160 ಮನೆಗಳಿದ್ದು, 600 ಕ್ಕೂ ಅಧಿಕ ಜನಸಂಖ್ಯೆ ಇದೆ. ಇದೀಗ ಗ್ರಾಮದ ಎಲ್ಲಾ ಜನರಿಗೆ ಕೊರೋನಾದ ಆತಂಕ ಮನೆ ಮಾಡಿದೆ.

  ಇದನ್ನು ಓದಿ: ಕೋಲಾರದಲ್ಲಿ ಟೊಮೆಟೊ ಬೆಲೆ ಏರಿಳಿತಕ್ಕೆ ರೈತರು ಕಂಗಾಲು; ಪ್ರತಿನಿತ್ಯ ಬೆಳೆ ಕಟಾವು ಮಾಡುವ ಬೆಳೆಗಾರರ ಸ್ಥಿತಿ ಅಯೋಮಯ!

  ಇನ್ನೂ ಗ್ರಾಮದಲ್ಲಿ ಕೊರೋನಾ ಸ್ಪೋಟಗೊಂಡಿರುವುದು ಜಿಲ್ಲಾಡಳಿತಕ್ಕೆ, ಆರೋಗ್ಯ ಇಲಾಖೆಗೆ ತಲೆನೋವು ತಂದಿದ್ದು, ಜಿಲ್ಲೆಗೆ ಮೂರನೇ ಅಲೆ ಎಂಟ್ರಿ ಕೊಟ್ಟೆಬಿಡ್ತಾ ಎಂಬ ಅನುಮಾನ ಮೂಡಿದೆ. ಹೀಗಾಗಿ ಸದ್ಯ ತಿಮ್ಮನಕೊಪ್ಪಲು ಗ್ರಾಮವನ್ನು ಸೀಲ್ ಡೌನ್ ಮಾಡಿದ್ದು, ಗ್ರಾಮಕ್ಕೆ ಹೊರಗಿನವರು ಬರದಂತೆ, ಗ್ರಾಮದಿಂದ ಯಾರು ಹೊರಹೋಗದಂತೆ ಕ್ರಮ ವಹಿಸಲಾಗಿದೆ. ಗ್ರಾಮದಲ್ಲೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರತಿಯೊಬ್ಬರಿಗೂ ಆರ್‌ಟಿಪಿಸಿಆರ್ ಟೆಸ್ಟ್ ಮಾಡುತ್ತಿದ್ದು, ಮತ್ತಷ್ಟು ಪಾಸಿಟಿವ್ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಪಾಸಿಟಿವ್ ದೃಢವಾಗಿರುವ ಎಲ್ಲರನ್ನೂ ಪಾಂಡವಪುರ ಸೇರಿದಂತೆ ವಿವಿಧ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  ಒಟ್ಟಾರೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕೊರೋನಾದ ಮೊದಲನೇ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಪಾಸಿಟಿವಿಟಿ ರೇಟ್ ಪೀಕ್ ಲೆವೆಲ್‌ಗೆ ತಲುಪಿದ್ದ ಕಾರಣ ಸಾಕಷ್ಟು ಆತಂಕ ಎದುರಾಗಿತ್ತು. ಇದೀಗ ಮೂರನೇ ಅಲೆಯ ಆರಂಭದ ಮೊದಲೇ ಈ ರೀತಿ ಘಟನೆ ಜರುಗಿದ್ದು ಜಿಲ್ಲಾಡಳಿತಕ್ಕೆ ಮತ್ತಷ್ಟು ತಲೆನೋವು ತಂದಿದೆ.

  ವರದಿ - ಸುನೀಲ್ ಗೌಡ
  Published by:HR Ramesh
  First published: