• Home
  • »
  • News
  • »
  • district
  • »
  • ಮಡಿಕೇರಿಯ ಒಂದೇ ಬಡಾವಣೆಯಲ್ಲಿ 12ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ದೃಢ!

ಮಡಿಕೇರಿಯ ಒಂದೇ ಬಡಾವಣೆಯಲ್ಲಿ 12ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ದೃಢ!

ಸೀಲ್ ಡೌನ್ ಮಾಡಲಾದ ಬಡಾವಣೆ.

ಸೀಲ್ ಡೌನ್ ಮಾಡಲಾದ ಬಡಾವಣೆ.

ಸಾಕಷ್ಟು ಕಿಷ್ಕಿಂಧೆಯಾಗಿ ಮನೆಗಳು ಇರುವುದರಿಂದ ಸೋಂಕು ಮತ್ತಷ್ಟು ಜನರಿಗೆ ಹರಡುವ ಅಪಾಯವಿದೆ ಎಂದು ಅಷ್ಟು ಸೋಂಕಿತರನ್ನು ಅಂಬ್ಯುಲೆನ್ಸ್ ಮೂಲಕ ಮುಲಾಜಿಲ್ಲದೆ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರ ಮಾಡಿದ್ದಾರೆ. ಸದ್ಯ ಏರಿಯಾವನ್ನು ಸೀಲ್ಡ್ ಡೌನ್ ಮಾಡಲಾಗಿದ್ದು ಏರಿಯಾದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಮುಂದೆ ಓದಿ ...
  • Share this:

ಕೊಡಗು: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ದಾಖಲಾಗುತ್ತಿರುವ ಸೋಂಕಿನ ಪ್ರಮಾಣದಲ್ಲಿ ತುಸು ಮಾತ್ರವೇ ಕಡಿಮೆಯಾಗಿ ಒಂದಿಷ್ಟು ಜನರು ಸಮಾಧಾನ ಪಟ್ಟುಕೊಳ್ಳುವ ಸ್ಥಿತಿ ನಿರ್ಮಾಣ ಆಗುತ್ತಿತ್ತು. ಆದರೆ ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರ ಬಡಾವಣೆಯ ಒಂದೇ ಏರಿಯಾದಲ್ಲಿ 12 ಕ್ಕೂ ಹೆಚ್ಚು ಜನರಿಗೆ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದು ಇಡೀ ಬಡಾವಣೆ ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಅಷ್ಟೇ ಏಕೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿದಲ್ಲಿ ಇಡೀ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿಢೀರನೇ ಜಾಸ್ತಿಯಾಗಬಹುದೇ ಎನ್ನೋದಕ್ಕೆ ಮಲ್ಲಿಕಾರ್ಜುನ ನಗರದ ಪ್ರಕರಣ ಇಂಬು ಕೊಡುತ್ತಿದೆ.


ಹೌದು, ಮಲ್ಲಿಕಾರ್ಜುನ ನಗರ ಬಡಾವಣೆಯಲ್ಲಿ ಮೇ 25 ರಂದು 60 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಿದ್ದ ಆರೋಗ್ಯ ಇಲಾಖೆ ಆರ್ ಟಿಪಿಸಿಆರ್ ಟೆಸ್ಟ್ ಗೆ ಕಳುಹಿಸಿತ್ತು. ಅಚ್ಚರಿ ಎನ್ನುವಂತೆ 12 ಜನರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದ 60 ಜನರ ಪೈಕಿ 45 ಜನರ ಟೆಸ್ಟ್ ವರದಿ ಮಾತ್ರವೇ ಬಂದಿದೆ. ಈ 45 ಜನರಲ್ಲೇ 12 ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಇರೋದು ಅಚ್ಚರಿ ಮೂಡಿಸಿದೆ. ಇನ್ನೂ 15 ಜನರ ಕೋವಿಡ್ ಪರೀಕ್ಷಾ ವರದಿ ಬರಬೇಕಾಗಿದ್ದು, ಅವರಲ್ಲಿ ಇನ್ನೆಷ್ಟು ಜನರಿಗೆ ಸೋಂಕು ಇದೆಯೋ ಗೊತ್ತಿಲ್ಲ. ಇನ್ನು ಮಲ್ಲಿಕಾರ್ಜುನ ನಗರದಲ್ಲಿ ಸಾಕಷ್ಟು ಗುಂಪು ಗುಂಪಾಗಿ ಮನೆಗಳಿದ್ದು ಮತ್ತಷ್ಟು ಜನರಿಗೆ ಸೋಂಕು ಇರುವ ಸಾಧ್ಯತೆ ಇದೆ. ಇನ್ನು 12 ಜನರಿಗೆ ಸೋಂಕು ಇರುವುದು 26 ರಾತ್ರಿಯೇ ದೃಢಪಟ್ಟಿದ್ದರೂ, 27 ನೇ ತಾರೀಖಿನ ಬೆಳಿಗ್ಗೆಯೂ ಕೆಲವು ಸೋಂಕಿತರು ತಮ್ಮ ಏರಿಯಾದಲ್ಲಿ ತಮಗೆ ಏನೋ ಆಗಿಲ್ಲವೇನೋ  ಎನ್ನುವಂತೆ ಎಂದಿನಂತೆ ಆರಾಮವಾಗಿ ಬೀದಿಯ ತುಂಬೆಲ್ಲಾ ಓಡಾಡಿಕೊಂಡಿದ್ದಾರೆ.


ಇದು ಆ ಏರಿಯಾದ ನಗರಸಭೆ ಸದಸ್ಯೆ ಕಲಾವತಿ ಅವರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಬಂದ ಅವರು ಹೀಗೆಲ್ಲಾ ಓಡಾಡಬಾರದು ಎಂದು ಹೇಳಿದ್ದರೂ ಸೋಂಕಿತರು ಮಾತು ಕೇಳಿಲ್ಲ. ಜೊತೆಗೆ ಮನೆಗಳೆಲ್ಲವೂ ಒತ್ತೊತ್ತಿಗೆ ಇರುವುದರಿಂದ ಸೋಂಕಿತರನ್ನು ಹೋಂ ಕ್ವಾರಂಟೈನ್ ಮಾಡಿದರೆ ಇಲ್ಲಿ ಮತ್ತಷ್ಟು ಜನರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ನೀವೆಲ್ಲರೂ ಕೊವಿಡ್ ಕೇರ್ ಸೆಂಟರ್ ಗಳಿಗೆ ಹೋಗುವಂತೆ ಟಿಎಚ್‍ಓ ಮತ್ತಿತರೆ ಅಧಿಕಾರಿಗಳು ಹೇಳಿದರೂ ಸೋಂಕಿತರು ಒಪ್ಪಿಲ್ಲ. ಹೀಗಾಗಿ ಕೊಡಗು ಡಿಎಚ್‍ಓ ಮೋಹನ್ ಕುಮಾರ್ ಪೊಲೀಸರೊಂದಿಗೆ ಖುದ್ದು ಸ್ಥಳಕ್ಕೆ ಹೋಗಿದ್ದಾರೆ.


ಇದನ್ನು ಓದಿ: Black Fungus: ರಾಜ್ಯಕ್ಕೆ ಇಂದು ಮತ್ತೆ 5190 ವಯಲ್ಸ್ ಎಂಫೊಟೆರಿಸಿನ್ ಚುಚ್ಚುಮದ್ದು; ಕೇಂದ್ರ ಸಚಿವ ಸದಾನಂದ ಗೌಡ


ಏರಿಯಾದಲ್ಲಿ ಸಾಕಷ್ಟು ಕಿಷ್ಕಿಂಧೆಯಾಗಿ ಮನೆಗಳು ಇರುವುದರಿಂದ ಸೋಂಕು ಮತ್ತಷ್ಟು ಜನರಿಗೆ ಹರಡುವ ಅಪಾಯವಿದೆ ಎಂದು ಅಷ್ಟು ಸೋಂಕಿತರನ್ನು ಅಂಬ್ಯುಲೆನ್ಸ್ ಮೂಲಕ ಮುಲಾಜಿಲ್ಲದೆ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರ ಮಾಡಿದ್ದಾರೆ. ಸದ್ಯ ಏರಿಯಾವನ್ನು ಸೀಲ್ಡ್ ಡೌನ್ ಮಾಡಲಾಗಿದ್ದು ಏರಿಯಾದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಸಮುದಾಯವಾಗಿ ಎಲ್ಲರನ್ನು ಪರೀಕ್ಷೆ ನಡೆಸಿದರೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಕಂಡು ಬರಬಹುದು ಎಂಬ ಆತಂಕ ಕೂಡ ಈಗ ಕೊಡಗು ಜನರಿಗೆ ಎದುರಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:HR Ramesh
First published: