ಗೋಹತ್ಯೆ ನಿಷೇಧ ಕುರಿತು ಇನ್ನಷ್ಟು ಚರ್ಚೆ ಅಗತ್ಯ : ಸಚಿವ ಡಾ.ಕೆ.ಸುಧಾಕರ್
ಗೋವನ್ನ ತಾಯಿಗೆ ಹೊಲಿಕೆ ಮಾಡಲಾಗುತ್ತದೆ, ಹಾಲು ಕುಡಿದ ಬೆಳೆಯುತ್ತೇವೆ, ನಮ್ಮ ಆರೋಗ್ಯ, ದೈಹಿಕ ಸದೃಡತೆಗೆ ಗೋವಿನ ತಾಯಿ ಎದೆ ಹಾಲು ಎಷ್ಟು ಶ್ರೇಷ್ಠವೊ ಅಷ್ಟೇ ಶ್ರೇಷ್ಠ ಗೋವಿನ ಹಾಲು ಎಂದು ಪರಿಗಣಿಸಲಾಗಿದೆ
ಬೆಂಗಳೂರು(ನವೆಂಬರ್. 08): ದೇಶದಲ್ಲಿ ಗೋವು ಪವಿತ್ರ ಎಂದು ಪರಿಗಣನೆಯಾಗಿದ್ದು, ಗೋಹತ್ಯೆಯಿಂದ ಪಾರಂಪರಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವ ಅಗತ್ಯವಿದ್ದು, ಈ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ. ಗೋವು ಒಂದು ಪವಿತ್ರವಾದ ಪ್ರಾಣಿ ಎಂದು ನಂಬುವ ದೇಶ ನಮ್ಮದು. ಗೋವನ್ನು ಕುಟುಂಬದ ಸದಸ್ಯರಂತೆ ನಾವು ಗೌರವಿಸುತ್ತೇವೆ. ಗೋಹತ್ಯೆ ಹಿಂದೂಗಳ ಸಂಪ್ರದಾಯಕ್ಕೆ ವಿರುದ್ಧವಾದ ಕ್ರಮವಾಗಿದೆ. ಆದ್ದರಿಂದ ಗೋಹತ್ಯೆಗೆ ಅವಕಾಶ ನೀಡುವುದು ಸರಿಯಲ್ಲ. ದೇಶದಲ್ಲಿ ಗೋಹತ್ಯೆ ನಿಷೇಧ ಕ್ರಮ ಜಾರಿಯಾಗುವ ಅಗತ್ಯವಿದ್ದು, ಈ ಬಗ್ಗೆ ಇನ್ನಷ್ಟು ಚರ್ಚೆಯಾಗುವ ಅಗತ್ಯವಿದೆ ಎಂದರು. ಗೋವನ್ನ ತಾಯಿಗೆ ಹೊಲಿಕೆ ಮಾಡಲಾಗುತ್ತದೆ, ಹಾಲು ಕುಡಿದ ಬೆಳೆಯುತ್ತೇವೆ, ನಮ್ಮ ಆರೋಗ್ಯ, ದೈಹಿಕ ಸದೃಡತೆಗೆ ಗೋವಿನ ತಾಯಿ ಎದೆ ಹಾಲು ಎಷ್ಟು ಶ್ರೇಷ್ಠವೊ ಅಷ್ಟೇ ಶ್ರೇಷ್ಠ ಗೋವಿನ ಹಾಲು ಎಂದು ಪರಿಗಣಿಸಲಾಗಿದೆ. ಆದ್ದರಿಂದ ತಾಯಿಗೆ ಕೊಟ್ಟಷ್ಟೆ ಗೌರವ ಹಸುವಿಗೂ ಕೊಡಲಾಗುತ್ತದೆ ಎಂದರು.
ಧಾರ್ಮಿಕ ಭಾವನೆಗಳ ಜೊತೆ ಆಟ ಬಾರದು. ಭಾವನೆಗಳು ಅವರವರ ಆಲೋಚನೆಗೆ ಅನುಗುಣವಾಗಿ ಇರುತ್ವ ಆದರೆ ಹೆಚ್ಚಿನ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕಾಗುತ್ತೆ, ಅದಕ್ಕಾಗೆ ಆರೋಗ್ಯಕರ ಚರ್ಚೆ ಮಾಡಿ ಭಾವನೆಗಳಿಗೆ ತಕ್ಕ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯಡಿ ತಾಂತ್ರಿಕ ಸಲಹಾ ಸಮಿತಿಯ ವರದಿಯ ಶಿಫಾರಸಿನಂತೆ, ಮುಖ್ಯಮಂತ್ರಿ ಬಿ ಎಸ್ .ಯಡಿಯೂರಪ್ಪ ಅವರು ಪಟಾಕಿ ಸಿಡಿತ ನಿಷೇಧ ಕ್ರಮ ಕೈಗೊಂಡಿದ್ದಾರೆ. ಈ ಕ್ರಮವನ್ನು ಪಾಲಿಸುವ ಮೂಲಕ ಸರಳವಾಗಿ ಹಬ್ಬ ಆಚರಿಸಿ, ಹಸಿರು ಪಟಾಕಿಗೆ ಮಾತ್ರ ಅವಕಾಶ ನಿಡಲಾಗಿದೆ ಎಂದು ಸಚಿವರು ಮನವಿ ಮಾಡಿದರು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ, ಇಂದ್ರಧನುಷ್ ಲಸಿಕೆ ಅಭಿಯಾನ ಮೊದಲಾದ ಯೋಜನೆಗಳ ಕುರಿತು ಚರ್ಚಿಸಲು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರೊಂದಿಗೆ ಸಭೆ ನಡೆಸಿದ ಸಚಿವ ಸುಧಾಕರ್, ನಂತರ ಆ್ಯಂಬ್ಯುಲೆನ್ಸ್ ಸೇವೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ