HOME » NEWS » District » MORE DEVOTES WILL CAME TO SAVADATTI YALLAMMA TEMPLE ON TUESDAY AND FRIDAY RHHSN CSB

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರ 1 ಲಕ್ಷ ಭಕ್ತರು; ದೇವಸ್ಥಾನಕ್ಕೆ ಮೂರ್ನಾಲ್ಕು ಕೋಟಿ ಆದಾಯದ ನಿರೀಕ್ಷೆ

11 ತಿಂಗಳಿಂದ ದೇವಸ್ಥಾನ ಬಂದ್ ಹಿನ್ನೆಲೆಯಲ್ಲಿ ಆದಾಯದಲ್ಲಿ ನಷ್ಟ ಆಗಿತ್ತು.‌ ದೇವಸ್ಥಾನಕ್ಕೆ 15 ಕೋಟಿ ರೂಪಾಯಿ ಆದಾಯದಲ್ಲಿ ನಷ್ಟ ಆಗಿದ್ದು, ಮುಂದಿನ ಎರಡು ತಿಂಗಳಲ್ಲಿ 3ರಿಂದ 4  ಕೋಟಿ ರೂಪಾಯಿ ಆದಾಯ ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ. ದೇವಸ್ಥಾನದಲ್ಲಿ150ಕ್ಕೂ ಹೆಚ್ಚು ಸಿಬ್ಬಂದಿಗೆ ಸಂಬಳ ವಿತರಣೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ ಎಂದು ರವಿ‌ ಕೊಟಾರಗಸ್ತಿ ಹೇಳಿದ್ದಾರೆ.

news18-kannada
Updated:February 9, 2021, 8:18 PM IST
ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರ 1 ಲಕ್ಷ ಭಕ್ತರು; ದೇವಸ್ಥಾನಕ್ಕೆ ಮೂರ್ನಾಲ್ಕು ಕೋಟಿ ಆದಾಯದ ನಿರೀಕ್ಷೆ
ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ
  • Share this:
ಬೆಳಗಾವಿ (ಫೆ. 9); ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ. 11 ತಿಂಗಳ ಬಳಿಕ ದೇವಾಲಯ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಭಕ್ತ ಸಾಗರ ಹರಿದು ಬರುತ್ತಿದೆ. ಪ್ರತಿ ಮಂಗಳವಾರ, ಶುಕ್ರವಾರ ಒಂದು ಲಕ್ಷ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದಾರೆ‌. ಪ್ರತಿ ದಿನ ದೇವಿಯ ದರ್ಶನ ಪಡೆಯಲು 20 ಸಾವಿರ ಜನ ಬರುತ್ತಿದ್ದಾರೆ. ಭಕ್ತರನ್ನು ನಿಯಂತ್ರಿಸಲು ಆಡಳಿತ ಮಂಡಳಿ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಇರುವ ಅಧಿದೇವತೆ ಯಲ್ಲಮ್ಮ, ಈ ದೇವಿಗೆ ರಾಜ್ಯ ಸೇರಿ ಗೋವಾ, ಮಹಾರಾಷ್ಟ್ರ ‌ಹಾಗೂ ಆಂಧ್ರ ಪ್ರದೇಶ, ತೆಲಂಗಾಣ ಸೇರಿ ದೇಶದ ವಿವಿಧ ಭಾಗದಲ್ಲಿ ಭಕ್ತರು ಇದ್ದಾರೆ. ಕೋವಿಡ್ ಸೋಂಕಿನ ಕಾರಣದಿಂದ ಹನ್ನೊಂದು ತಿಂಗಳು ದೇವಾಲಯ ಭಕ್ತರ ಪ್ರವೇಶ ನಿಷೇಧ ಮಾಡಲಾಗಿತ್ತು. ಫೆ .1 ರಿಂದ ದೇವಾಲಯದ ಬಾಗಿಲು ತೆರೆದಿದ್ದು ಭಕ್ತರ ದಂಡು ಬರುತ್ತಿದೆ. ಇಲ್ಲಿಗೆ ಬರುವ ಭಕ್ತರು ದೇವಿಯ ದರ್ಶನ ಪಡೆದು ಖುಷಿಯಾಗಿ ತಮ್ಮ ಬೇಡಿಕೆ, ಹರಕೆಯನ್ನು ಅರ್ಪಣೆ ಮಾಡುತ್ತಿದ್ದಾರೆ.

ಪ್ರತಿ ಮಂಗಳವಾರ, ‌ಶುಕ್ರವಾರ ಒಂದು ಲಕ್ಷ ಜನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ದೇವಾಲಯ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಜನ ಸಾಗರ. ಭಕ್ತರು ಧರ್ಮ ದರ್ಶನ, ವಿಶೇಷ ‌ದರ್ಶನ ಪಡೆಯುತ್ತಿದ್ದಾರೆ. ಟ್ರ್ಯಾಕ್ಟರ್, ಎತ್ತಿನ ಗಾಡಿ ಹಾಗೂ ಬಸ್ ಮೂಲಕ ಬರುವ ಭಕ್ತರು ಯಲ್ಲಮ್ಮನ ಗುಡ್ಡದಲ್ಲಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಸ್ವಚ್ಛತೆಯ ದೃಷ್ಟಿಯಿಂದ ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನ ಸುತ್ತಮುತ್ತಲಿನ ಅಂಗಡಿ ತೆರವು ಮಾಡಿದೆ. ಜತೆಗೆ ಆವರಣದಲ್ಲಿ ಪಡ್ಲಿಗಿ ತುಂಬುವುದು ಸೇರಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ. ದೇವಸ್ಥಾನದಲ್ಲಿ ಹೂ, ಭಂಡಾರ ಚೆಲ್ಲುವುದಕ್ಕೂ ಸಹ ನಿರ್ಬಂಧ ಹೇರಲಾಗಿದೆ. ಸ್ವಚ್ಛತೆ ಬಗ್ಗೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದ್ದು ಭಕ್ತರು ಸಹಕಾರ ನೀಡಬೇಕು ಎಂದು ಆಡಳಿತ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ಹೇಳಿದ್ದಾರೆ.

ಇದನ್ನು ಓದಿ: CoronaVirus: ಕಳೆದ 24 ಗಂಟೆಗಳಲ್ಲಿ 15 ರಾಜ್ಯಗಳಿಂದ ಯಾವುದೇ ಕೊರೋನಾ ವೈರಸ್​ ಸಾವು ವರದಿಯಾಗಿಲ್ಲ: ಕೇಂದ್ರ ಸರ್ಕಾರ

11 ತಿಂಗಳಿಂದ ದೇವಸ್ಥಾನ ಬಂದ್ ಹಿನ್ನೆಲೆಯಲ್ಲಿ ಆದಾಯದಲ್ಲಿ ನಷ್ಟ ಆಗಿತ್ತು.‌ ದೇವಸ್ಥಾನಕ್ಕೆ 15 ಕೋಟಿ ರೂಪಾಯಿ ಆದಾಯದಲ್ಲಿ ನಷ್ಟ ಆಗಿದ್ದು, ಮುಂದಿನ ಎರಡು ತಿಂಗಳಲ್ಲಿ 3ರಿಂದ 4  ಕೋಟಿ ರೂಪಾಯಿ ಆದಾಯ ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ. ದೇವಸ್ಥಾನದಲ್ಲಿ150ಕ್ಕೂ ಹೆಚ್ಚು ಸಿಬ್ಬಂದಿಗೆ ಸಂಬಳ ವಿತರಣೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ ಎಂದು ರವಿ‌ ಕೊಟಾರಗಸ್ತಿ ಹೇಳಿದ್ದಾರೆ.
Youtube Video
ಉತ್ತರ ಕರ್ನಾಟಕದಲ್ಲಿ ಶುಭ ಕಾರ್ಯದ ಸಂದರ್ಭದಲ್ಲಿ ದೇವರಿಗೆ ಹೋಗುವುದು ಸಂಪ್ರದಾಯ. ಸವದತ್ತಿ ಯಲ್ಲಮ್ಮ ದೇವರ ದರ್ಶನಕ್ಕೆ ಅನೇಕ ತಿಂಗಳಿಂದ ಭಕ್ತರು ‌ಕಾಯುತ್ತಿದ್ದರು. ಇದೀಗ ದೇವಾಲಯ ಬಾಗಿಲು ಓಪನ್ ಆಗಿದ್ದು, ಭಕ್ತರು ಸಂತಸ ವ್ಯಕ್ತಪಡಿಸುತ್ತಾರೆ.
Published by: HR Ramesh
First published: February 9, 2021, 8:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories