ಕೊರೋನಾ ಅಟ್ಟಹಾಸಕ್ಕೆ ನಲುಗಿದ ಬಸವ ಕಲ್ಯಾಣ: ಮಹಾರಾಷ್ಟ್ರ ಲಿಂಕ್​ನಿಂದಲೇ ಹಲವರಿಗೆ ಸೋಂಕು

ಇದೀಗ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅತೀ ಹೆಚ್ಚಾಗಿದೆ. ಹೀಗಾಗಿ ಅಲ್ಲಿಗೆ ವಲಸೆ ಹೋಗಿದ್ದ ತಾಲೂಕಿನ ಸಾವಿರಾರು ಜನ ತಮ್ಮ ತಮ್ಮ ಗ್ರಾಮಗಳಿಗೆ ವಾಪಸಾಗಿದ್ದಾರೆ. ವಾಪಸಾದ ಕೂಡಲೇ ಇವರನ್ನು ಕ್ವಾರಂಟೈನ್ ನಲ್ಲಿಟ್ಟಿದ್ದರೂ ಹಲವು ಗ್ರಾಮಗಳಿಗೆ ವಾಪಸಾದ ಕಾರ್ಮಿಕರಲ್ಲಿ ಈಗಾಗಲೇ ಸೋಂಕು ಕಾಣಿಸಿಕೊಂಡಿದೆ.

news18-kannada
Updated:May 27, 2020, 7:33 PM IST
ಕೊರೋನಾ ಅಟ್ಟಹಾಸಕ್ಕೆ ನಲುಗಿದ ಬಸವ ಕಲ್ಯಾಣ: ಮಹಾರಾಷ್ಟ್ರ ಲಿಂಕ್​ನಿಂದಲೇ ಹಲವರಿಗೆ ಸೋಂಕು
ಕೊರೋನಾ ವೈರಸ್ ಸ್ಯಾಂಪಲ್
  • Share this:
ಬೀದರ್(ಮೇ 27): ಬಸವಣ್ಣನ ಕರ್ಮಭೂಮಿ ಬಸವ ಕಲ್ಯಾಣ ಇದೀಗ ಕೊರೊನಾ ಅಟ್ಟಹಾಸಕ್ಕೆ ನಲುಗುತ್ತಿದೆ. ತಾಲೂಕಿನ ಬಹುತೇಕ ಗ್ರಾಮಗಳಿಗೆ ಕಾಲಿಟ್ಟಿರುವ ಕೊರೋನಾ ಸೋಂಕು ಅಲ್ಲಿನ ಜನರನ್ನು ಆತಂಕಕ್ಕೆ ದೂಡಿದೆ.

ಬಸವ ಕಲ್ಯಾಣ ತಾಲೂಕಿನ ಸಾವಿರಾರು ಜನ ಉದ್ಯೋಗಕ್ಕಾಗಿ ನೆರೆಯ ಮಹಾರಾಷ್ಟ್ರ ರಾಜ್ಯದ ಮುಂಬೈ, ಪೂನಾ, ಸೋಲಾಪುರದಂತಹ ವಿವಿಧ ನಗರಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಇದೀಗ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅತೀ ಹೆಚ್ಚಾಗಿದೆ. ಹೀಗಾಗಿ ಅಲ್ಲಿಗೆ ವಲಸೆ ಹೋಗಿದ್ದ ತಾಲೂಕಿನ ಸಾವಿರಾರು ಜನ ತಮ್ಮ ತಮ್ಮ ಗ್ರಾಮಗಳಿಗೆ ವಾಪಸಾಗಿದ್ದಾರೆ. ವಾಪಸಾದ ಕೂಡಲೇ ಇವರನ್ನು ಕ್ವಾರಂಟೈನ್ ನಲ್ಲಿಟ್ಟಿದ್ದರೂ ಹಲವು ಗ್ರಾಮಗಳಿಗೆ ವಾಪಸಾದ ಕಾರ್ಮಿಕರಲ್ಲಿ ಈಗಾಗಲೇ ಸೋಂಕು ಕಾಣಿಸಿಕೊಂಡಿದೆ. ಎರಡೇ ದಿನದಲ್ಲಿ ಕೊಹಿನೂರ್ ಗ್ರಾಮದಲ್ಲಿ ಒಟ್ಟು 14 ಸೋಂಕಿತರು ಪತ್ತೆಯಾಗಿದ್ದಾರೆ.

ಸಿಪಿ ಯೋಗೇಶ್ವರ್​​ಗೆ ಅಧಿಕಾರ ಕೈ ತಪ್ಪಿಸಿದರೆ ಮಾತ್ರ ಜಿಲ್ಲೆಯಲ್ಲಿ ಡಿಕೆಶಿಗೆ ನೋ ಟೆನ್ಷನ್?

ಸಿರಗೂರು, ಗದಲೇಗಾಂವ, ಚಿಟಗೇರಾ, ಲಾಡವಂತಿ, ಅಟ್ಟೂರು, ಧನ್ನೂರು ಕೆ ವಾಡಿ ಗ್ರಾಮಗಳಿಗೂ ಈಗಾಗಲೇ ಕೊರೊನಾ ಕಾಲಿಟ್ಟಿದ್ದು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕ್ವಾರಂಟೈನ್ ನಲ್ಲಿರುವವರ ಮೂರು ಸಾವಿರಕ್ಕೂ ಅಧಿಕ ಜನರ ರಕ್ತ ಮತ್ತು ಗಂಟಲು ದ್ರವದ ಪರೀಕ್ಷಾ ಮಾದರಿಯ ವರದಿ ಇನ್ನಷ್ಟೇ ಬರಬೇಕಿದೆ. ಇದು ಕಳವಳಕಾರಿ ಸಂಗತಿಯಾಗಿದ್ದು, ಹೀಗೆ ಬಾಕಿಯಿರುವ ವರದಿಯಲ್ಲಿ ಬಸವಕಲ್ಯಾಣ ತಾಲೂಕಿನ ಸುಮಾರು 90% ಗ್ರಾಮಗಳ ನಿವಾಸಿಗಳು ಸೇರಿದ್ದಾರೆ.

ವಾರದ ಮೊದಲು ಕೇವಲ ಒಬ್ಬ ಸೋಂಕಿತನಷ್ಟೇ ಬಸವಕಲ್ಯಾಣದಲ್ಲಿದ್ದ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆಯ ಕಾರ್ಮಿಕರಿಂದಾಗಿ ಈ ಸಂಖ್ಯೆ ಇದೀಗ ಎರಡೇ ದಿನದಲ್ಲಿ ಮೂವತ್ತರ ಸಮೀಪ ಬಂದು ನಿಂತಿದೆ. ಇನ್ನು ಸಾವಿರಾರು ಜನರ ಗಂಟಲು ದ್ರವದ ತಪಾಸಣಾ ವರದಿ ಬರಬೇಕಿದೆ. ಹೀಗಾಗಿ ಬಸವ ಕಲ್ಯಾಣ ತಾಲೂಕಿನ ತುಂಬ ಸೋಂಕಿನ ಭೀತಿ ಹೆಚ್ಚಾಗಿದ್ದು, ಜನ ಆತಂಕಿತರಾಗಿದ್ದಾರೆ.
First published: May 27, 2020, 7:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading